ಯಾರು ಆ್ಯಕ್ಟಿವ್‌ ಮೂರರೊಳಗೆ?

By | 15/10/2010

ಹೆಚ್ಚಿನವರಿಗೆ ಹೋಂಡಾ ಕಂಪನಿಯ ಸ್ಕೂಟರ್‌ಗಳೆಂದರೆ ಅಚ್ಚುಮೆಚ್ಚು. ಆದರೆ ಅವರಿಗೆ ಕಂಪನಿಯ ಆ್ಯಕ್ಟಿವಾ, ಡಿಯೊ ಮತ್ತು ಏವಿಯೇಟರ್‌ ಸ್ಕೂಟರ್‌ಗಳಲ್ಲಿ ಯಾವುದು ಬೆಟರ್‌ ಎಂಬ ಸಂದಿಗ್ಧತೆ. ಈ ಮೂರರಮೇಲೊಂದು ಸ್ಮೂತ್‌ ರೈಡ್‌ ಇಲ್ಲಿದೆ

ನೀವು ನಗರಗಳಲ್ಲಿ ಸಂಚಾರಿಸುವಾಗ ಒಮ್ಮೆ ರಸ್ತೆಯನ್ನು ಗಮನವಿಟ್ಟು ನೋಡಿ. ಹೋಂಡಾ ಕಂಪನಿಯ ಆ್ಯಕ್ಟಿವಾ, ಡಿಯೊ ಮತ್ತು ಏವಿಯೇಟರ್‌ ಸ್ಕೂಟರ್‌ಗಳು ಕಣ್ಣಿಗೆ ಬೀಳುತ್ತವೆ. ಸರಿಯಾಗಿ ನೋಡಿದಾಗ ಆ್ಯಕ್ಟಿವಾ ಸ್ಕೂಟರ್‌ರೇಟ್‌ಗಳದ್ದೇ ಕಾರುಬಾರು. ಒಂದಿಷ್ಟು ಡಿಯೊ ಮತ್ತು ಏವಿಯೇಟರ್‌ ಸಹ ಸಂಚರಿಸುತ್ತಿರುತ್ತವೆ. ಒಂದೇ ಕಂಪನಿಯ ಮೂರು ಉತ್ಪನ್ನಗಳಲ್ಲಿ ಅಂತಹ ಮಹತ್ವದ ಏನು ವ್ಯತ್ಯಾಸವಿದೆ ಎಂಬ ಡೌಟ್‌ ನಿಮಗೆ ಬರಬಹುದು.ಮಾರಾಟದಲ್ಲಿ ಮುಂದಿದ್ದರೂ ಮೈಲೇಜ್‌ ವಿಷಯದಲ್ಲಿ ಆ್ಯಕ್ಟಿವಾ ಹಿಂದಿದೆ. ಇದರ ಮೈಲೇಜ್‌ ಪ್ರತಿಲೀಟರ್‌ಗೆ ಸರಾಸರಿ 40ರಿಂದ 45 ಕಿ.ಮೀ. ಆಗಿದೆ.

ಏವಿಯೇಟರ್‌ ಮೈಲೇಜ್‌ ಆ್ಯಕ್ಟಿವಾಕ್ಕಿಂತ ಸುಮಾರು ಶೇ. 15ರಷ್ಟು ಹೆಚ್ಚಿದೆ. ಡಿಯೋ ಮೈಲೇಜ್‌ ಪ್ರತಿಲೀಟರ್‌ ಪೆಟ್ರೋಲ್‌ಗೆ ಸುಮಾರು 50 ಕಿ.ಮೀ.ಆದರೂ ಆ್ಯಕ್ಟಿವಾ ರಸ್ತೆಯಲ್ಲಿ ಹೆಚ್ಚು ಆ್ಯಕ್ಟಿವ್‌ ಆಗಿದೆ. ಈ ಬ್ರಾಂಡ್‌ ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರಿಗೂ ಅಚ್ಚುಮೆಚ್ಚು. ಇದು ಡಿಲಕ್ಸ್‌ ಆವೃತ್ತಿಯಲ್ಲೂ ದೊರಕುತ್ತದೆ. ಹಳೆಯ ಆ್ಯಕ್ಟಿವಾ ಆವೃತಿಯ ಎದುರಿನ ಮತ್ತು ಹಿಂಬದಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಿ ನ್ಯೂ ಹೋಂಡಾ ಆ್ಯಕ್ಟಿವಾ ಹೊರತರಲಾಗಿದೆ. ಆ್ಯಕ್ಟಿವಾದಲ್ಲಿರುವ ಕಂಫರ್ಟ್‌ ಗುಣಮಟ್ಟ ಹೆಚ್ಚಿನ ಜನರಿಗೆ ಇಷ್ಟ.. ಏವಿಯೇಟರ್‌ ತೂಕ 102 ಕೆಜಿ ಇದ್ದರೆ ಡಿಯೊ 99 ಕೆಜಿ ಇದೆ. ಹಾಗಾಗಿ 3 ಕಿಲೋಗ್ರಾಂ ದೊಡ್ಡ ಸಮಸ್ಯೆಯಲ್ಲ. ಆದರೂ ಈ ತೂಕ 100ಸಿಸಿ ಮತ್ತು 125 ಸಿಸಿಯ ಬೈಕ್‌ಗಳಿಗಿಂತ ಒಂದಿಷ್ಟು ಕಡಿಮೆಯಿದೆಯಷ್ಟೇ. ನ್ಯೂ ಹೋಂಡಾ ಆ್ಯಕ್ಟಿವಾ 129 ಕೆ.ಜಿ ಇದೆ. ಆ್ಯಕ್ಟಿವಾ ಹೆಚ್ಚು ತೂಕವಿದ್ದರೂ ಕಂಫರ್ಟ್‌ ದೃಷ್ಟಿಯಿಂದ ಹೆಚ್ಚಿನವರ ಆಯ್ಕೆ. ಯಾಕೆಂದರೆ ಹೆಚ್ಚು ತೂಕವಿದ್ದರೆ ಸ್ಥಿರತೆ ಜಾಸ್ತಿ. ಆದರೆ ಇದು ಹೆಚ್ಚು ಭಾರವನ್ನು ಹ್ಯಾಂಡಲ್‌ ಮಾಡದವರಿಗೆ ಅನ್ವಯಿಸುವುದಿಲ್ಲ. ಕೆಲವರಿಗೆ ಭಾರವೆಂದರೆ ಅಲರ್ಜಿ. ಅಂತವರು ಡಿಯೊ ಅಥವಾ ಏವಿಯೇಟರ್‌ ಖರೀದಿಸಬಹುದು.
ಡಿಯೋಗಿಂತ ಏವಿಯೇಟರ್‌ ಹೇಗೆ ಬೆಟರ್‌?

ಏವಿಯೇಟರ್‌ನಲ್ಲಿ ಎದುರುಗಡೆ ಟೆಲಿಸ್ಕೋಪಿಕ್‌ ಸಸ್ಪನ್ಷನ್‌ ಇದ್ದು ಇದರಿಂದ ಅತ್ಯುತ್ತಮ ಗುಣಮಟ್ಟದ ರೈಡಿಂಗ್‌ ಮತ್ತು ಹ್ಯಾಂಡ್ಲಿಂಗ್‌ ಸಾಧ್ಯವಿದೆ. ಡಿಯೊಗೆ ಹೋಲಿಸಿದರೆ ಏವಿಯೇಟರ್‌ನ ಸೀಟ್‌ನಡಿ ಸ್ಟೋರೆಜ್‌ ಸ್ಥಳಾವಕಾಶ ಜಾಸ್ತಿಯಿದೆ. ಏವಿಯೇಟರ್‌ 110 ಸಿಸಿ ಎಂಜಿನ್‌ ಹೊಂದಿರುವುದರಿಂದ ಶೇ. 15ರಷ್ಟು ಹೆಚ್ಚು ಮೈಲೇಜ್‌ ನೀಡುತ್ತದೆ. ಡಿಯೊದಲ್ಲಿರುವ 102 ಸಿಸಿ ಎಂಜಿನ್‌ ಕಡಿಮೆ ಪವರ್‌ ಹೊಂದಿದೆ. ಫ್ಲೋರ್‌ ಬೋರ್ಡ್‌ ಕೂಡ ಡಿಯೊಗಿಂತ ವಿಶಾಲವಾಗಿದೆ. ರೈಡಿಂಗ್‌ ಅನುಭವ, ನಿರ್ಮಾಣ ಗುಣಮಟ್ಟದಲ್ಲೂ ಡಿಯೊಗಿಂತ ಏವಿಯೇಟರ್‌ ಹೆಚ್ಚು ಬಲಿಷ್ಠವಾಗಿದೆ. ಡಿಯೊ ಹೆಡ್‌ಲೈಟ್‌ ನಾರ್ಮಲ್‌ ಬಲ್ಬ್‌ ಹೊಂದಿದ್ದರೆ ಏವಿಯೇಟರ್‌ ಗುಣಮಟ್ಟದ ಹ್ಯಾಲೋಜನ್‌ ಬಲ್ಬ್‌ ಹೊಂದಿದೆ. ತೂಕದ ದೃಷ್ಟಿಯಲ್ಲಿ ಹೇಳಬೇಕಾದರೆ 3-4 ಕೆಜಿ ವ್ಯತ್ಯಾಸ ದೊಡ್ಡ ಸಮಸ್ಯೆಯಲ್ಲ. ತೂಕ ಹೆಚ್ಚಿದ್ದರೂ ಡಿಯೊಗಿಂತ ಹೆಚ್ಚು ಕಂಫರ್ಟೆಬಲ್‌ ಆದ ರೈಡಿಂಗ್‌ ಅನುಭವ ನೀಡುತ್ತದೆ.
ಏವಿಯೇಟರ್‌ ಮತ್ತು ಆ್ಯಕ್ಟಿವಾ

ಇವೆರಡು ಹೋಂಡಾ ಕಂಪನಿಯ ಅತ್ಯುತ್ತಮ ದ್ವಿಚಕ್ರವಾಹನಗಳು. ಹಿಂದಿನ ಏವಿಯೇಟರ್‌ನ್ನು ಹೊರತುಪಡಿಸಿದರೆ ನ್ಯೂ ಆ್ಯಕ್ಟಿವಾ ಮತ್ತು ಏವಿಯೇಟರ್‌ ಸರಾಸರಿ ಒಂದೇ ರೀತಿ ಇವೆ. ಲುಕ್‌ ವಿಷಯದಲ್ಲಿ  ಆ್ಯಕ್ಟಿವಾ ಸರಳವಾದ ಸ್ಕೂಟರ್‌ ಮುಖ ಹೊಂದಿದ್ದರೆ ಏವಿಯೇಟರ್‌ ಹೆಚ್ಚು ಸ್ಟೈಲಿಶ್‌ ಲುಕ್‌ ಹೊಂದಿದೆ. ಇವೆರಡು ಬೈಕ್‌ಗಳು ಒಂದೇ ಮಾದರಿಯ ಎಂಜಿನ್‌ ಹೊಂದಿದ್ದರೂ ಆ್ಯಕ್ಟಿವಾ ಹೆಚ್ಚು ಸಿಸಿ ಮತ್ತು ಹಾರ್ಸ್‌ಪವರ್‌ ಹೊಂದಿದೆ. ಆ್ಯಕ್ಟಿವಾದ ಟಾರ್ಕ್‌ ಪವರ್‌ ಕೂಡ ಜಾಸ್ತಿ ಇದೆ. ಆ್ಯಕ್ಟಿವಾದ ಹೈಡ್ರಾಲಿಕ್‌ ಸಸ್ಪೆನ್ಷನ್‌ಗೆ ಹೋಲಿಸಿದರೆ  ಏವಿಯೇಟರ್‌ ಅತ್ಯುತ್ತಮವಾದ ಟೆಲಿಸ್ಕೋಪಿಕ್‌ ಸಸ್ಪೆನ್ಷನ್‌ ಹೊಂದಿದೆ. ಆ್ಯಕ್ಟಿವಾದ 5.3 ಲೀಟರ್‌ನ ಇಂಧನ ಟ್ಯಾಂಕ್‌ಗೆ ಹೋಲಿಸಿದರೆ ಏವಿಯೇಟರ್‌ನ ಇಂಧನ ಟ್ಯಾಂಕ್‌ 0.7 ಇಂಚು ದೊಡ್ಡದಿದೆ. ಏವಿಯೇಟರ್‌ನಲ್ಲಿ ಮಲ್ಟಿಫೋಕಸ್‌ ಹೆಡ್‌ಲ್ಯಾಂಪ್‌ ಹೊಂದಿದ್ದು ಆ್ಯಕ್ಟಿವಾ ಹೊಂದಿಲ್ಲ. ಒಟ್ಟಾರೆ ಹೇಳುವುದಾದರೆ ಕಾರ್ಯಕ್ಷಮತೆ ಮತ್ತು ಲುಕ್‌ನಲ್ಲಿ ಇವೆರಡರ ನಡುವೆ ಅಂತಹ ದೊಡ್ಡ ವ್ಯತ್ಯಾಸಗಳಿಲ್ಲ.
ಆದರೂ ಆ್ಯಕ್ಟಿವಾ ಆ್ಯಕ್ಟಿವ್‌ ಆಗಿದೆ

ಯಸ್‌. ಹೆಚ್ಚಿನವರಿಗೆ ಆ್ಯಕ್ಟಿವಾ ಹೆಚ್ಚು ಇಷ್ಟವಾಗಿದೆ. ಹೆಚ್ಚು ಭಾರವಿದ್ದರೂ ಕಂಫರ್ಟ್‌, ಡೀಸಂಟ್‌ ಲುಕ್‌, ಕಡಿಮೆ ಸದ್ದು ಮಾಡುವ 4-ಸೈಕಲ್‌ ಸಿಲಿಂಡರ್‌, ದರ(ಬೆಂಗಳೂರು ಎಕ್ಸ್‌ ಶೋರೂಂ ದರ: ` 44,627 ರೂ.) ಇತ್ಯಾದಿ ಫೀಚರ್‌ಗಳು ಆ್ಯಕ್ಟಿವಾದ ಮಾರಾಟ ಹೆಚ್ಚಿಸಿವೆ. ಮೈಲೇಜ್‌ಗಿಂತ ಸ್ಥಿರತೆ ಮುಖ್ಯ ಎಂಬ ತೀರ್ಮಾನಕ್ಕೆ ಗ್ರಾಹಕರು ಅಘೋಷಿತವಾಗಿ ಬಂದಿರುವಂತೆ ಕಾಣುತ್ತದೆ. ಆದರೆ ಸ್ಟೈಲಿಶ್‌ , ಮೈಲೇಜ್‌ಗೆ ಹೆಚ್ಚು ಪ್ರಾಮುಖ್ಯತೆ ಕೊಡುವವರು ಏವಿಯೇಟರ್‌, ಡಿಯೋ ರೈಡ್‌ ಮಾಡುತ್ತಿದ್ದಾರೆ.ಅಂದಹಾಗೇ ನಿಮಗ್ಯಾವುದು ಇಷ್ಟವಾಯಿತು?

ಬ್ಯೂಟಿ ಸ್ಕೂಟಿ
ಸ್ಕೂಟಿ ಬ್ರಾಂಡ್‌ ಅಂದಾಕ್ಷಣ ನೆನಪಾಗುವುದು  ಟಿವಿಎಸ್‌. ಸದ್ಯ ಮಾರುಕಟ್ಟೆಯಲ್ಲಿ ಕಂಪನಿಯ ವೆಗೊ, ಸ್ಕೂಟಿ ಪೆಪ್ಟ್‌ ಮತ್ತು ಪೆಪ್ಟ್‌ ಪ್ಲಸ್‌, ಸ್ಕೂಟಿ ಸ್ಟ್ರೀಕ್‌ ಮತ್ತು ಸ್ಟ್ರೀಂಜ್‌ ಹೆಚ್ಚು ಬೇಡಿಕೆಯಲ್ಲಿವೆ. ಟಿವಿಎಸ್‌ ಎಕ್ಸ್‌ಎಲ್‌ ಕಂಪನಿಯ ಮೊಪೆಡ್‌ ಬ್ರಾಂಡ್‌ ಆಗಿದೆ.
ಸ್ಕೂಟಿ ಪೆಪ್‌+

ಇದು ಟಿವಿಎಸ್‌ನ ಸ್ಟೈಲಿಶ್‌ ಮತ್ತು ಹಗುರವಾದ ಸ್ಕೂಟಿ.  ಆಟೋ ಚೋಕ್‌, ಪವರ್‌ ಎಕಾನಮಿ ಬಾಡಿ, ಮೊಬೈಲ್‌ ಚಾರ್ಜರ್‌ ಸಾಕೇಟ್‌ ಇತ್ಯಾದಿ ಫೀಚರ್‌ಗಳಿಂದ ಆಕರ್ಷಕವಾಗಿದೆ. ಇದು ಎಲೆಕ್ಟ್ರಿಕ್‌ ರೆಡ್‌, ನೈಟ್‌ ಬ್ಲಾಕ್‌ ಸೇರಿದಂತೆ 5 ಬಣ್ಣಗಳಲ್ಲಿ ದೊರಕುತ್ತದೆ. ಇದು ಪ್ರತಿಲೀಟರ್‌ ಪೆಟ್ರೋಲ್‌ಗೆ 60 ಕಿ.ಮೀ. ಮೈಲೇಜ್‌ ನೀಡುತ್ತದೆ. ಬೆಂಗಳೂರು ಶೋರೂಂ ದರ: ` 32,480
ಟಿವಿಎಸ್‌ ವೆಗೊ

ಟಿವಿಎಸ್‌ ವೆಗೊ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಸೂಕ್ತವಾಗಿರುವ ಬ್ಯೂಟಿಫುಲ್‌ ದ್ವಿಚಕ್ರ ವಾಹನ. ಇದು 110 ಸಿಸಿ ಎಂಜಿನ್‌ ಹೊಂದಿದ್ದು 7,500 ಆರ್‌ಪಿಎಂಗೆ 8 ಹಾರ್ಸ್‌ಪವರ್‌ ನೀಡುತ್ತದೆ. ಆಟೋಮ್ಯಾಟಿಕ್‌  ಟ್ರಾನ್ಸ್‌ಮಿಷನ್‌ ಹೊಂದಿರುವ ವೆಗೊ ಕಂಫರ್ಟ್‌ ಮತ್ತು ನಿರ್ವಹಣೆ ದೃಷ್ಟಿಯಿಂದಲೂ ಉತ್ತಮವಾಗಿದೆ. ಇದರ ಬೆಂಗಳೂರು ಶೋರೂಂ ದರ: ` 42,500
ಸ್ಕೂಟಿ ಸ್ಟ್ರೀಕ್‌

ಇದು ಟಿವಿಎಸ್‌ನ ಪೆಪ್ಟ್‌ ನಂತರದ ಇನ್ನೊಂದು ಆಕರ್ಷಕವಾದ ಸ್ಕೂಟಿಯಾಗಿದೆ.. ಕಂಪನಿಯು 90ಸಿಸಿ ಟಿವಿಎಸ್‌ ಸ್ಕೂಟಿಯನ್ನು ಮಹಿಳೆಯರಿಗಾಗಿ ಮತ್ತು 100ಸಿಸಿ ಪ್ಲಸ್‌ ಸ್ಕೂಟಿ ಸ್ಟ್ರೀಕ್‌ನ್ನು ಪುರುಷರಿಗಾಗಿ ಹೊರತಂದಿದೆ. ಗೇರ್‌ಲೆಸ್‌ ಸ್ಟ್ರೀಕ್‌ ಕೆಂಪು, ನೀಲಿ, ಕಪ್ಪು, ಪಿಂಕ್‌ ಮತ್ತು ನೇರಳೆ ಬಣ್ಣಗಳಲ್ಲಿ ದೊರಕುತ್ತದೆ. ಇದು ನಗರದ ರಸ್ತೆಗಳಲ್ಲಿ ಪ್ರತಿಲೀಟರ್‌ ಇಂಧನಕ್ಕೆ 40-45 ಕಿ.ಮೀ ಮೈಲೇಜ್‌ ನೀಡುತ್ತದೆ. ಅಂದಹಾಗೇ ಕಂಪನಿಯು ಮುಂದಿನ ಡಿಸೆಂಬರ್‌ನಲ್ಲಿ ಸ್ಕೂಟಿ ಸ್ಟ್ರೀಕ್‌ ಹೈಬ್ರಿಡ್‌ ವರ್ಷನ್‌ ಹೊರತರಲು ಯೋಜಿಸಿದೆ.ಬೆಂಗಳೂರು ಎಕ್ಸ್‌ಶೋರೂಂ ದರ: 33,770 ರೂ.

ಸ್ಮೂತ್‌ ಡ್ರೈವ್‌ಗೆ ಇನ್ನಷ್ಟು

ಸುಜುಕಿ ಆ್ಯಕ್ಸಸ್‌ 125

ಇದು ಜಪಾನಿಸ್‌ ಸ್ಟೈಲ್‌ ಫೀಚರ್‌ಗಳನ್ನು ಹೊಂದಿದ್ದು ವಿನ್ಯಾಸದಲ್ಲಿ ಆ್ಯಕ್ಟಿವಾದಂತೆಯೇ ಇದೆ. ಉದ್ದವಾದ ವೀಲ್‌ಬೇಸ್‌ ಇದಕ್ಕೆ ಕಾಂಪ್ಯಾಕ್ಟ್‌  ಲುಕ್‌ ನೀಡಿದೆ. ಇದು 125 ಸಿಸಿ ಎಂಜಿನ್‌ ಹೊಂದಿದ್ದು ಪ್ರತಿಲೀಟರ್‌ ಪೆಟ್ರೋಲ್‌ಗೆ ಸುಮಾರು 40 ಕಿ.ಮೀ ಮೈಲೇಜ್‌ ನೀಡುತ್ತದೆ. ಪಿಕ್‌ಅಪ್‌ ಮತ್ತು ಫ್ರೀ ಸ್ಟಾರ್ಟ್‌ ಫೀಚರ್‌ಗಳಿಂದ ಇದು ಇಷ್ಟವಾಗುವಂತಿದೆ. ಬೆಂಗಳೂರು ಎಕ್ಸ್‌ ಶೋರೂಂ ದರ: ` 43,621
ಮಹೀಂದ್ರಾ ರೋಡಿಯೊ ಮತ್ತು ಡ್ಯೂರೊ

ಇದು ಮಹೀಂದ್ರ ಕಂಪನಿಯ ಉತ್ಪನ್ನಗಳಾಗಿವೆ. ಮಹೀಂದ್ರಾ ರೋಡಿಯೊ 125 ಸಿಸಿ ಎಂಜಿನ್‌ ಹೊಂದಿದ್ದು 8.0 ಹಾರ್ಸ್‌ಪವರ್‌ ಹೊಂದಿದೆ. ಸ್ಮೂತ್‌ ಆ್ಯಕ್ಸಿಲೇರೆಷನ್‌ ಮತ್ತು ಎಕ್ಸಲೆಂಟ್‌ ಪಿಕ್‌ಅಪ್‌ನಿಂದಾಗಿ ಆರಾಮವಾಗಿ ಡ್ರೈವ್‌ ಮಾಡಬಹುದಾಗಿದೆ. ವಿಶೇಷವಾಗಿ ವಿನ್ಯಾಸ ಮಾಡಿರುವ ಸ್ಮೂತ್‌ ಬ್ರೇಕ್‌ ಸೇಫ್‌ ಡ್ರೈವಿಂಗ್‌ಗೆ ಸೂಕ್ತವಾಗಿದೆ. ಮಹೀಂದ್ರಾ ರೋಡಿಯೊ ಕಂಫರ್ಟ್‌ ಮತ್ತು ಸೇಫ್ಟಿ ದೃಷ್ಟಿಯಿಂದ ಉತ್ತಮವಾಗಿದೆ.ಮಹೀಂದ್ರಾ ಡ್ಯೂರೊ ಇದು ಪರ್ಲ್‌ ವೈಟ್‌, ಗೋಲ್ಡನ್‌ ಬಿಯೆಜ್‌ ಸೇರಿದಂತೆ ಆರು ಬಣ್ಣಗಳಲ್ಲಿ ದೊರಕುತ್ತದೆ. ಇದು ಸ್ಟೈಲಿಶ್‌ ಬಾಡಿ ಗ್ರಾಫಿಕ್ಸ್‌, ಹಗುರ ವಿನ್ಯಾಸದಿಂದ ಗಮನಸೆಳೆಯುತ್ತದೆ. ಮಹೀಂದ್ರಾ ಫ್ಲೈಟ್‌ ಬೈಕನ್ನು ಕಂಪನಿ 2009ರಲ್ಲಿ ಹೊರತಂದಿತ್ತು. 125 ಸಿಸಿ ಎಂಜಿನ್‌ ಹೊಂದಿರುವ ಇದರಲ್ಲಿ ಎದುರುಗಡೆ ಇಂಧನ ಟ್ಯಾಂಕ್‌, 4ಇನ್‌1 ಕೀ, ದೊಡ್ಡದಾದ ಸ್ಟೋರೆಜ್‌ ಸ್ಥಳಾವಕಾಶ, ಟೆಲಿಸೋಪಿಕ್‌ ಸಸ್ಪೆನ್ಷನ್‌ ಸೇರಿದಂತೆ ಹಲವು ಫೀಚರ್‌ಗಳಿವೆ.
ೈನಟಿಕ್‌ ಸ್ಯಾಮ್‌ ಫ್ಲೈಟ್‌ 125 ಸಿಸಿಇದು ಕೈನಟಿಕ್‌ ಮತ್ತು ಸ್ಯಾಂಗ್‌ ಯಾಂಗ್‌ ಮೋಟರ್ಸ್‌ನ ಜಂಟಿ ಉತ್ಪನ್ನ. ವೃತ್ತಾಕಾರದ ಇಂಡಿಕೇಟರ್‌, ಬಾಡಿ ಕಲರ್‌ನ ಸೈಡ್‌ ಮಿರರ್‌  ಸೇರಿದಂತೆ ಇದು ಆಕರ್ಷಕ ವಿನ್ಯಾಸದಿಂದ ಗಮನ ಸೆಳೆಯುತ್ತದೆ.ಬೆಂಗಳೂರು ಎಕ್ಸ್‌ಶೋರೂಂ ದರ: ` 36,617
ಹೀರೋ ಹೋಂಡಾ ಪ್ಲೆಷರ್‌

ಎಲ್ಲ ಫನ್‌ಗಳು ಹುಡುಗರಿಗೇ ಯಾಕೆ? ಅನ್ನುವ ಜಾಹೀರಾತಿನೊಂದಿಗೆ ಹೀರೋ ಹೋಂಡಾ ಕಂಪನಿಯು ಪ್ಲೆಷರ್‌ ಸ್ಪೆಷಲ್‌ ಅಡಿಷನ್‌ ಸ್ಕೂಟರ್‌ನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಹೊಸ ಸ್ಕೂಟರ್‌ ಪರ್ಲ್‌ ವೈಟ್‌ ಮತ್ತು ರೆಡ್‌ ಕಲರ್‌ಗಳಲ್ಲಿ ದೊರಕುತ್ತದೆ. ಉಳಿದಂತೆ ಎಲ್ಲ ಪ್ಲೆಷರ್‌ ಸ್ಕೂಟರ್‌ಗಳು 8 ಆಕರ್ಷಕ ಬಣ್ಣದಲ್ಲಿ ದೊರಕುತ್ತಿವೆ. ಇದು 100 ಸಿಸಿ ಎಂಜಿನ್‌, ಗೇರ್‌ಲೆಸ್‌ ಟ್ರಾನ್ಸ್‌ಮಿಷನ್‌ ಮತ್ತು ಲೈಟ್‌ವೇಟ್‌ ಎಬಿಎಸ್‌ ಬಾಡಿ ಹೊಂದಿದೆ. ಪ್ರತಿಲೀಟರ್‌ಗೆ ಸುಮಾರು 50ರಿಂದ 55 ಕಿ.ಮೀ. ಮೈಲೇಜ್‌ ನೀಡುತ್ತದೆ. ಬೆಂಗಳೂರು ಎಕ್ಸ್‌ಶೋರೂಂ ದರ: ಪ್ಲೆಷರ್‌- ` 37,682. ಸ್ಪೆಷಲ್‌ ಎಡಿಷನ್‌: ` 38,186

Author: Rashmi Kannadathi

Profession: consultant optometrist. Hobby: Web Developer, SEO Consultaņt, Bloggȩr

Leave a Reply

Your email address will not be published. Required fields are marked *