ಬ್ರೇಕ್ ಫಾಸ್ಟ್ ರೆಸಿಪಿ: ಬಿಸಿಬಿಸಿಯಾದ ಬಿಸಿಬೇಳೆ ಬಾತ್

By | 24/09/2018
Bisibele bath recipe kannada

ಬಿಸಿಬೇಳೆ ಬಾತ್ ಬೆಳಿಗ್ಗಿನ ತಿಂಡಿಗೆ ಅಥವಾ ಮಧ್ಯಾಹ್ನದ ಊಟಕ್ಕೂ ಹೇಳಿಮಾಡಿಸಿದ್ದು. ತರಕಾರಿಗಳೆನ್ನೆಲ್ಲಾ ಒಟ್ಟಿಗೆ ಸೇರಿಸಿ ಬೇಯಿಸುವುದರಿಂದ ಸಾಂಬಾರು ಮಾಡುವ ಅಗತ್ಯವಿಲ್ಲ. ಬಿಸಿ ಬಿಸಿಯಿರುವಾಗಲೇ ಸವಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.

ಬಿಸಿಬೇಳೆ ಬಾತ್ ಪೌಡರ್ ಗೆ ಬೇಕಾಗುವ ಸಾಮಾಗ್ರಿ

ಒಣಮೆಣಸಿನಕಾಯಿ ಎಂಟರಿಂದ ಹತ್ತ ತೆಗೆದುಕೊಳ್ಳಿ, ಕಡಲೆಬೇಳೆ ಒಂದು ಹಿಡಿ, ಉದ್ದಿನಬೇಳೆ ಒಂದು ಹಿಡಿ, ಅರ್ಧ ತುಂಡು ಚಕ್ಕೆ, ಕೊತ್ತಂಬರಿಕಾಳು-3 ಚಮಚ, ಜೀರಿಗೆ ಕಾಳು ಚಮಚದಷ್ಟು, ಮೆಂತೆಕಾಳು-10ಕಾಳು ಸಾಕು, ಚಕ್ರಮೊಗ್ಗು-1, ಹಾಗೇ ಕಾಳುಮೆಣಸು ಕಾಲು ಚಮಚ, ಕರಿಬೇವಿನ ಸೊಪ್ಪು 1 ದಂಟು. ಮೊದಲಿಗೆ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಒಂದೊಂದೇ ಸಮಾಗ್ರಿಗಳನ್ನು ಎಣ್ಣೆ ಹಾಕದೇ ಚೆನ್ನಾಗಿ ಹುರಿದುಕೊಳ್ಳಿ. ಆದರೆ ಮೆಣಸು ಹುರಿಯುವಾಗ ತುಸು ಎಣ್ಣೆ ಹಾಕಿ. ಹುರಿದ ಸಾಮಾಗ್ರಿಗಳೆಲ್ಲಾ ಚೆನ್ನಾಗಿ ಆರಿದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಿ.

ಬಿಸಿಬೇಳೆ ಬಾತ್ ಗೆ ಬೇಕಾಗುವ ಸಾಮಾಗ್ರಿ

ಅಕ್ಕಿ ಒಂದು ಕಪ್ ತೆಗೆದುಕೊಳ್ಲಿ, ತೊಗರಿಬೇಳೆ ಒಂದು ಅರ್ಧ ಕಪ್, ಕ್ಯಾಋಎಟ್ ದೊಡ್ಡದಾದರೆ ಒಂದು ತೆಗೆದುಕೊಳ್ಳಿ, ಬಟಾಣಿ-ಕಾಳು ಕಪ್, ಬೀನ್ಸ್ ಕತ್ತರಿಸಿದ್ದು ಅರ್ಧ ಕಪ್, ಈದುಳ್ಳಿ ಒಂದು ದೊಡ್ಡದ್ದು, ಟೊಮೆಟೋ ಒಂದು, ಹುಣಸೆಹಣ್ಣು ಒಂದು ಚಿಕ್ಕ ನಿಂಬೆ ಗಾತ್ರದ್ದು, ಬೆಲ್ಲ-ಚಿಕ್ಕ ತುಂಡು, ಬಿಸಿಬೇಳೆ ಬಾತ್ ಪುಡಿ-6 ಚಮಚದಷ್ಟು, ಕೊಬ್ಬರಿ ತುರಿ-ಕಾಲು ಕಪ್, ತುಪ್ಪ-4 ಚಮಚದಷ್ಟು, ಸಾಸಿವೆ-ಸ್ವಲ್ಪ, ಅರಿಶಿನ-ಒಂದು ಚಿಟಿಕೆಯಷ್ಟು, ಗೋಡಂಬಿ-5ರಿಂದ6 , ಉಪ್ಪು ರುಚಿಗೆ ತಕ್ಕಷ್ಟು.

ಮೊದಲಿಗೆ ತರಕಾರಿಗಳೆನ್ಬೆಲ್ಲಾ ಚೆನ್ನಾಗಿ ಕತ್ತರಿಸಿಟ್ಟುಕೊಳ್ಳಿ. ಹಸಿ ಬಟಾಣಿಯಾದರೆ ತೊಂದರೆ ಒಂದು ವೇಳೆ ಒಣ ಬಟಾಣಿಯಾದರೆ ಅದನ್ನು ರಾತ್ರಿಯೇ ನೆನಸಿಟ್ಟುಕೊಳ್ಳಿ. ಹಾಗೇ ಹುಣಸೇಹಣ್ಣನ್ನು ಕೂಡ ನೀರಿನಲ್ಲಿ ನೆನೆಸಿ ಚೆನ್ನಾಗಿ ಕಿವುಚಿ ಇಟ್ಟುಕೊಳ್ಳಿ. ನಂತರ ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಹಾಗೇ ಬೇಳೆಯನ್ನು ಕೂಡ. ನಂತರ ಒಂದು ಕುಕ್ಕರ್ ಗೆ ತೊಳೆದಿಟ್ಟುಕೊಂಡ ಅಕ್ಕಿ, ಬೇಳೆ ತರಕಾರಿ, ಬಟಾಣಿಗಳನ್ನೆಲ್ಲಾ ಸೇರಿಸಿ 6 ಲೋಟ ನೀರು ಹಾಕಿ ಚಿಟಿಕೆ ಅರಿಶಿನ ಸೇರಿಸಿ ಮೂರು ವಿಷಲ್ ಬರಿಸಿ.

ನಂತರ ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ನಾಲ್ಕು ಚಮಚ ತುಪ್ಪ ಹಾಕಿ ಅದು ಕಾದ ಬಳಿಕ ಅದಕ್ಕೆ ಸಾಸಿವೆ ಸೇರಿಸಿ. ಸಾಸಿವೆ ಸಿಡಿದಾಗ ಗೋಡಂಬಿಯನ್ನು ಹಾಕಿ. ನಂತರ ಈರುಳ್ಳಿ ಹಾಕಿ. ಈರುಳ್ಳಿ ಗುಲಾಬಿ ಬಣ್ಣಕ್ಕೆ ತಿರುಗಿದಾಗ ಟೊಮೆಟೊ ಹಣ್ಣನ್ನು ಹಾಕಿ ತುಸು ಉಪ್ಪು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಇದಕ್ಕೆ ಕುಕ್ಕರ್ ನಲ್ಲಿ ಬೆಂದ ಅಕ್ಕಿ ಬೇಳೇಯನ್ನು ಹಾಕಿ ಚೆನ್ನಾಗಿ ತಿರುವಿ. ಆಮೇಲೆ ಹುಣಸೆಹಣ್ಣಿನ ರಸ, ಉಪ್ಪು, ಬೆಲ್ಲ, ಕೊಬ್ಬರಿ ತುರಿ ಹಾಕಿ ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕುದಿಸಿದರೆ ರುಚಿಕರವಾದ ಬಿಸಿಬೇಳೆ ಬಾತ್ ರೆಡಿ.

ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ.  
ನಮ್ಮ ಇಮೇಲ್ ವಿಳಾಸ: bpchand@gmail.com


Leave a Reply

Your email address will not be published. Required fields are marked *