Category Archives: ಕವನ

ಗೆಳತಿ ಮುಂದೊಂದು ಜನ್ಮವಿದ್ದರೆ

ಮುಂದೊಂದು ಜನ್ಮವಿದ್ದರೆ ನಮ್ಮೂರ ನದಿ ತೀರದಲ್ಲಿ ಜೊತೆಯಾಗಿ ಆಡೋಣ ಗೆಳತಿ ನನ್ನ ಅಂಗಿಗೆ ನಿನ್ನ ಶಾಲ ಕಟ್ಟಿ ಬಿಡದಂತೆ ಕೈಹಿಡಿದು ಜೊತೆಯಾಗಿ ನಡೆಯೋಣ ಗೆಳತಿ ಮತ್ತೊಂದು ಜನ್ಮವಿದ್ದರೆ ಹಾರಂಗಿ ತೀರದಲ್ಲಿ ಹೂವಾಗಿರೋಣ ದಿನದ ಬದುಕು ಮುಗಿಸೋಣ ಗೆಳತಿ ಮತ್ತೂ ಒಂದು ಜನ್ಮವಿದ್ದರೆ ಪಯಶ್ವಿನಿ, ಕುಮಾರಧಾರ ತೀರದಲ್ಲಿ ಪ್ರೀತಿ ಮನೆಕಟ್ಟೋಣ ಗೆಳತಿ ಕಬಿನಿ, ಕಾಳಿ, ಕಾವೇರಿ ತುಂಗಾ, ವೇದಾ, ಶರಾವತಿ, ಭದ್ರೆ ಎಲ್ಲಾದರೂ ಸರಿ, ಜೊತೆಯಾಗಿರೋಣ ಬಾ ಎಂದರೆ ನದಿ ಬಿಟ್ಟು ಬದುಕೋಣ ಬೇಡವೆಂದರೆ ನದಿಯೊಳಗೆ ಬದುಕೋಣ ನದಿತೀರದಲ್ಲೇ ಹುಟ್ಟಿಬರೋಣ ಗೆಳತಿ ಪ್ರತಿಜನ್ಮ… Read More »

ನನ್ನ ಹೃದಯವನ್ನು ನಿನ್ನ ಹೃದಯದಲ್ಲಿಟ್ಟುಕೋ

********* ನೂರಾರು ನೆನಪುಗಳನ್ನು ನೆನಪಿಸಲಾಗದು ನನಗೆ ಅದಕ್ಕೆ ಅವಳ ಹೆಸರನ್ನೊಮ್ಮೆ ಜ್ಞಾಪಿಸಿಕೊಳ್ಳುತ್ತೇನೆ ಸಾವಿರ ನೆನಪುಗಳು ಮೆರವಣಿಗೆ ಹೊರಡುತ್ತವೆ… ******* ನನ್ನ ಹೃದಯವನ್ನು ನಿನ್ನ ಹೃದಯದಲ್ಲಿಟ್ಟುಕೋ ಗೆಳತಿ.. ನನ್ನ ಯಾತನೆ ನಿನಗರಿವಾದೀತು ***** ಮುಂಜಾನೆ ಅರಳಿದ ಹೂವುಗಳು ಸಂಜೆ ನರಳುತ್ತವೆ… ಸಂಜೆ ಅರಳಿದ ಹೂವುಗಳು ಕತ್ತಲಲ್ಲಿ ನರಳುತ್ತವೆ ****** ದಿನಕೊಂದಿಷ್ಟು ಮುಗುಳುನಗು ದಿನಕರನ ನೋಡಿ ಬಿರಿದ್ಹಾಂಗೆ ಮಲ್ಲಿಗೆ ಮೊಗ್ಗು ಅವಳ ನಗು ***** ಈ ಚಿಟ್ಟೆಯ ಸ್ನೇಹ ಸಾಕೆನಿಸಿದರೆ ಹೇಳು ಹೂವೆ.. ನಾನು ಹೋಗುವೆ ಸೂರ್ಯನೆಡೆಗೆ ರೆಕ್ಕೆ ಸುಟ್ಟ ಮೇಲೆ ನಿನ್ನ ಬುಡ… Read More »

ಕವಿತೆ ಬರೆಯಲಾಗದ ಬ್ರಹ್ಮ ನಿನ್ನ ಸೃಷ್ಟಿಸಿದ

ಕವಿತೆ ಬರೆಯಲಾಗದ ಬ್ರಹ್ಮ ನಿನ್ನ ಸೃಷ್ಟಿಸಿದ ಒಂದೇ ಕವಿತೆಗೆ ಹಲವು ಮುಖಗಳಿವೆಯಂತೆ! ನಿನ್ನ ಹಾಗೆಯೇ< ನಿನ್ನ ನೋಡಿದ ನಾನು ಕವಿತೆಯ ಸೃಷ್ಟಿಸಲಾಗದೆ ಒದ್ದಾಡಿದೆ… ನೀನು ಸಿಕ್ಕ ಮೇಲೆ ಕವಿತೆಯಲ್ಲಿ ಮೈ ಮರೆತು ಬಿಟ್ಟೆ ನಾನು ಕವಿತೆಯೇ ಅಲ್ಲದ ಪದಗಳಿಗೆ ಕವಿತೆ ಅಂದುಬಿಟ್ಟೆ ಈಗ ಮಾತನಾಡಲು ನೀನಿಲ್ಲ ನಾನು ಮೌನಿಯಾಗಲೇ ಮತ್ತೆ.. ಈ ಕವಿತೆಯ ಒಂದೊಂದು ಚರಣಗಳಿಗೂ ಸಂಬಂಧವಿಲ್ಲ, ಈಗ ಥೇಟ್ ನಮ್ಮ ಹಾಗೆಯೇ… ಪ್ರೀತಿಯ ವ್ಯಾಲಿಡಿಟಿ ಮುಗಿಸಿಬಿಟ್ಟ ಬ್ರಹ್ಮ ಈಗ ನಿನ್ನ ಹೃದಯದಲ್ಲಿ ಕಲ್ಲನ್ನಿಟ್ಟಿದ್ದಾನೆ

ಬರೆದದ್ದೇ ಕವಿತೆ

ಪ್ರತಿದಿನ ಅದೇ ಪ್ಲಾಟ್ ಫಾರ್ಮ್ ನಲ್ಲಿ ನಿನ್ನ ನನ್ನ ಕಣ್ಣುಗಳು ಮಿಲನವಾಗುತ್ತವೆ ನೀನು ಮಾತನಾಡುವುದಿಲ್ಲ, ತಲೆ ತಗ್ಗಿಸಿಬಿಡುವೆ, ನಾನು ಏನೋ ಕಳೆದುಕೊಂಡಂತೆ ಬಸ್ ಹತ್ತುತ್ತೇನೆ ಮತ್ತೆ ಮರುದಿನ ಅದೇ ಪ್ಲಾಟ್ ಫಾರ್ಮ್ ಮಾತಿಲ್ಲ, ಕತೆಯಿಲ್ಲ, ಕನಸುಗಳು ಮಾತ್ರ ಗೊತ್ತಾಗದಂತೆ ಮುಗುಳ್ನಗೆಯ ವಿನಿಮಯವಾಗುತ್ತದೆ, ಕಣ್ಣುಗಳು ಮಿಲನವಾಗುತ್ತವೆ. ಮತ್ತೆ ಮರುದಿನ ಅದೇ ಪ್ಲಾಟ್ ಫಾರ್ಮ್ ನಲ್ಲಿ ನಾನು ನೀನು ಮತ್ತೆ ಸೇರುತ್ತೇವೆ ಕಣ್ಣುಗಳು ಅರಳುತ್ತವೆ, ಮನಸು ಮಾತನಾಡುತ್ತದೆ ನಾನು ಬಸ್ ಮಿಸ್ ಮಾಡಿಕೊಳ್ಳುತ್ತೇನೆ ಒಂದೆರಡು ದಿನ ನೋಡದೆ ಇದ್ದರೆ ಏನೋ ಕಳೆದುಕೊಂಡಂತೆ ಹುಡುಕುತ್ತೇನೆ ಮತ್ತೆ… Read More »

ಅವಳ ಸ್ವಗತ

ಮುಂಜಾನೆಯ ಚಳಿಯಲ್ಲಿ ಮೈ ಬಿಸಿಯೇರುತ್ತಿದ್ದರೂ ತಣ್ಣಗಿನ ನೀರಲ್ಲಿ ಜಳಕವ ಮಾಡಿ ಓದುತ್ತಿದ್ದೆ….ಕನಸ ಹೆಬ್ಬಾಗಿಲಿನಲ್ಲಿ **** ಕನ್ನಡಿ ನೋಡಿ ಕೆಂಪಾಗುತ್ತಿದ್ದೆ ಕಾಡಿಗೆ ಕಣ್ಣಲ್ಲಿ ಕಾಡುವ ಕನಸುಗಳು ಎಲ್ಲಿದ್ದೆ ನೀನು..? ಜೊತೆಗೆ ನಾನು, ನಗುವ ತೊಟ್ಟಿಲಲ್ಲಿ ನೂರು ಕನಸು.. **** ಶಬರಿಯಾಗಿ ನಾ ಕಾದೆ, ಶಕುಂತಲೆ ನಾನಾದೆ ಕೊಳಲನೂದುವ ಕೃಷ್ಣನ ಕಾಯೋ ರಾಧೆಯಾದೆ ಬಿಂದಿಯಾಗಿ ಬಂದ, ಬಂಧಿಯಾಗಿ ಹೋದೆ ಅಹಲ್ಯೆಯಾಗಿ ನಾನು ಸ್ವತಃ ಕಲ್ಲಾದೆ! **** ಮಳೆಬಿಲ್ಲ ಪಡೆಯೋ ಬಯಕೆಯಿಂದ ಗಾಳಿಪಟ ನಾನಾದೆ, ಅವನು ದಾರವಾದ ಪಂಜರದ ಬಾಗಿಲು ತೆರೆದಿಟ್ಟರೂ, ಹಾರಲಾಗದ ಗಿಣಿಯಾದೆ ನಾನು..… Read More »

ಆರ್ತನಾದ

ಆರ್ತನಾದ ಕಾಲದ ಚಕ್ರದಲ್ಲಿ ಅತ್ತಇತ್ತ ಉರುಳುರುತ ಕರುಳ ಉರಿಸುವ ನೋವಿನ ಕಾವಿನಿಂದ ನರಳುತ್ತ ಸಾವಿನತ್ತ ಸಾಗಲು ಸಿದ್ಧವಾಗಿ ನಿಂತಿಹ ಮುದುಕಿ ನಾನು…. ಅರ್ಥವಿಲ್ಲದ `ಅರ್ಥದ’ ಬೆನ್ನ ಹಿಂದೆ ಹಾರಿದ ಹೊಟ್ಟೆ, ಬಟ್ಟೆ ಕಟ್ಟಿ ಕೆತ್ತಿಹ ಹೊನ್ನ ಶಿಲ್ಪ ತನುಜರೇ ಕೇಳಿಸದೇ ಯಮಪಾಶದಲ್ಲಿ ಶೇಷವಾಗುತಿಹ ಮಾತೆಯ ಆರ್ತನಾದ (ನಾನು ಪದವಿಯಲ್ಲಿರುವಾಗ ಬರೆದ ಕವಿತೆ)

ನಗುವ ಹೂವಿಗೆ..

ನಗುವ ಹೂವಿಗೆ ದಿನಕ್ಕೊಂದಿಷ್ಟು ಮುಗುಳು ನಗು ದಿನಕರನ ನೋಡಿ.. ಬಿರಿದಾಂಗೆ ಬಳ್ಳಿತುಂಬಾ ಮಲ್ಲಿಗೆ ಮೊಗ್ಗು ಏನೆನ್ನಲಿ ಹುಡುಗಿ ನಿನ್ನ ನಗುವ ಬೆಡಗು ಕಪ್ಪು ಸಮಾಜದ ನಡುವೆ ಕಣ್ಣಾ ಮುಚ್ಚಾಲೆ ಆಟವೇ… ಯಾರಿಗೂ ಕಾಣದಾಂಗೆ ಸ್ಫುರಿಸುವೆ ಮುಗುಳ್ನಗೆಯ ಒಲವ ನೋಟ… ನಿನ್ನೀ ನಗುವಲ್ಲಿ ನೂರು ಮಾತು ನೂರೊಂದು ಮಧುರ ಕಾವ್ಯ.. ಭಾವ ನವಿರೇಳುತಿದೆ ನಲಿದಾಡುತಿದೆ ನವಿಲಾಗಿ ಮನಸ್ಸು… ಒಲವ ರಂಗವಲ್ಲಿ ಚೆಲುವ ರಾಗದಲ್ಲಿ ಅನುರಾಗದ ಕಂಪು ಕಣಜ ನಿನ್ನೀ ಮನ ಮೈಮಾಟದಲ್ಲಿ ಮಳೆ ಬಿಲ್ಲ ಚೆಲುವು… ನಿತ್ಯ ನಗುವ ಮಲ್ಲಿಗೆಯಾಗು ಕನಸ ಮುದ್ದು… Read More »

ಹನಿ ಹನಿ

ನೆನಪು ನಿನ್ನ ನೆನಪು ಸೂಜಿಮೊನೆ ಎದೆಯಲ್ಲಿ ಚುಚ್ಚಿದ ಹಾಗೆ ಯಾತನೆ ಹೆಜ್ಜೆ ಅವಳ ಹೆಜ್ಜೆ ಸದ್ದಾಗುವುದಿಲ್ಲ ಆದರೆ ಅವಳ ಕಾಲ್ಗೆಜ್ಜೆ ಸುಮ್ಮನಿರುವುದಿಲ್ಲ ತಾಳ ಅಂದಿನ ಹುಡುಗಿಯರ ಹೆಜ್ಜೆಗೆ ಗೆಜ್ಜೆಯ ಸದ್ದಾಗಿತ್ತು ತಾಳ ಇಂದಿನ ಹುಡುಗಿಯರ ಹೆಜ್ಜೆಗೆ ಹೈಹೀಲ್ಡ್‌ನ ಸದ್ದೇ ಬ್ಯಾಂಡುಮೇಳ

ಅಮ್ಮನ ಕಣ್ಣೀರು

ಬಾನ ಚಂದಿರನ ತಂದು ಕೊಡೆಂದು ಕೇಳಿದ ಮಗುವಿಗೆ ಕಳೆದು ಹೋದ ಇನಿಯನ ಚಂದಿರನಲ್ಲಿ ನೋಡುತಿರುವ ಅಮ್ಮನ ಕಣ್ಣೀರು ಕಾಣಿಸಲಿಲ್ಲ