Category Archives: ನೀತಿಕತೆ

ನೀತಿಕತೆ: ದೊಡ್ಡ ಆನೆಯನ್ನು ಕಟ್ಟಿರುವ ಸಣ್ಣ ಹಗ್ಗ

By | 23/10/2018

ಈ ಕತೆಯನ್ನು ನೀವು ಕೇಳಿರಬಹುದು. ಒಬ್ಬ ವ್ಯಕ್ತಿ ನಡೆದಾಡಿಕೊಂಡು ಹೋಗುವಾಗ ಅಲ್ಲೊಂದು ಆನೆಯನ್ನು ಕಟ್ಟಿ ಹಾಕಲಾಗಿತ್ತು. ಆ ಆನೆಯನ್ನು ಕಟ್ಟಿದ್ದು ಸಣ್ಣ ದಾರದ ಮೂಲಕವಾಗಿತ್ತು. ಆನೆ ಕಾಲನ್ನು ಕೊಡವಿದರೂ ಆ ದಾರ ತುಂಡಾಗಬಹುದಿತ್ತು. ಯಾವುದೇ ಸಮಯದಲ್ಲಿ ಬೇಕಾದರೂ ಆನೆ ಆ ಹಗ್ಗ ತುಂಡರಿಸಿ ಇತರರಿಗೆ ಅಪಾಯ ಉಂಟುಮಾಡಬಹುದಿತ್ತು.  ಈ ಕುರಿತು ಅಲ್ಲೇ ಇದ್ದ ಆನೆಯ ತರಬೇತುದಾರನಲ್ಲಿ ವಿಚಾರಿಸಿದ. ಈ ಆನೆಯು ಹಗ್ಗ ತುಂಡರಿಸಲು ಪ್ರಯತ್ನಿಸುವುದಿಲ್ಲವೇ ಎಂದು ಪ್ರಶ್ನಿಸಿದ. ಅದಕ್ಕೆ ಆ ಆನೆ ಕಾವಾಡಿಗ `ಇಲ್ಲ’ ಎಂದ. `ಈ ಆನೆ ಪುಟ್ಟ ಮರಿಯಾಗಿದ್ದಾಗ… Read More »

ನೀತಿಕತೆ: ಬಾವಿಗೆ ಬಿದ್ದ ಕತ್ತೆ, ಎದ್ದುಬಂದ ಕತೆ

By | 22/10/2018

ಒಬ್ಬ ವ್ಯಕ್ತಿಯು ಕತ್ತೆಯೊಂದನ್ನು ಸಾಕಿದ್ದ. ಅದು ಅವನ ಪ್ರೀತಿಯ ಕತ್ತೆಯಾಗಿತ್ತು. ಒಂದು ದಿನ ದಾರಿಯಲ್ಲಿ ಬರುತ್ತಿರುವಾಗ ಆ ಕತ್ತೆ ಪುಟ್ಟ ಬಾವಿಯೊಂದಕ್ಕೆ ಬಿದ್ದುಬಿಟ್ಟಿತು. ಎಷ್ಟೇ ಕಷ್ಟಪಟ್ಟರೂ ಆ ಕತ್ತೆಯನ್ನು ಅಲ್ಲಿಂದ ಹೊರತೆಗೆಯುವ ದಾರಿ ಅವನಿಗೆ ಹೊಳೆಯಲಿಲ್ಲ. ಸುತ್ತಲೂ ಜನರು ಗುಂಪುಗೂಡಿದ್ದರು. ಇದನ್ನು ಇಲ್ಲೇ ಬಿಟ್ಟು ಹೋದರೆ ಪಾಪ ತುಂಬಾ ಕಷ್ಟಪಡುತ್ತದೆ. ಅದಕ್ಕಾಗಿ ಈ ಪುಟ್ಟ ಬಾವಿಗೆ ಮಣ್ಣು ತುಂಬಿ ಅದನ್ನು ಕೊಂದು ಬಿಡಿ ಎಂಬ ಅಭಿಪ್ರಾಯ ಬಂತು. ತನ್ನ ಪ್ರೀತಿಯ ಕತ್ತೆಯನ್ನು ಸಾಯಿಸಲು ಅವನಿಗೆ ಮನಸ್ಸು ಬರಲಿಲ್ಲ. ಆದರೆ, ಬಾವಿಯೊಳಗೆ ನರಳಿ… Read More »

ನೀತಿಕತೆ: ಎಲ್ಲರ ಬದುಕಿನಲ್ಲಿಯೂ ಒಂದು ಕತೆ ಇರುತ್ತದೆ

By | 22/10/2018

ಇಪ್ಪತ್ನಾಲ್ಕು ವರ್ಷ ವಯಸ್ಸಿನ ತರುಣ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಕಿಟಕಿಯಾಚೆ ನೋಡಿ ಆ ಯುವಕ `ಅಪ್ಪ, ನೋಡಲ್ಲಿ, ಮರಗಳು ಹಿಂದೆ ಓಡುತ್ತಿವೆ’ ಎಂದ. ತಂದೆ ನಕ್ಕರು. ಆ ತರುಣನ ಎದುರು ಕುಳಿತ ನವದಂಪತಿಗಳಿಗೆ ಇದು ಅಸಹನೀಯ ಅನಿಸಿತು. ಇಷ್ಟು ದೊಡ್ಡ ಯುವಕ ಪುಟ್ಟ ಮಕ್ಕಳಂತೆ ಇದ್ದಾನಲ್ಲ ಎಂದೆನಿಸಿತು.  ಸ್ವಲ್ಪ ಹೊತ್ತಿನಲ್ಲಿ ಆ ತರುಣ `ಅಪ್ಪ, ಮೋಡಗಳೂ ನಮ್ಮೊಂದಿಗೆ ಸಾಗುತ್ತಿವೆ’ ಎಂದ. ಈಗ ನವದಂಪತಿಗಳಿಗೆ ತಡೆಯಲಾಗಲಿಲ್ಲ. ಆ ಯುವಕನ ತಂದೆಗೆ `ಇವನನ್ನು ಒಳ್ಳೆಯ ವೈದ್ಯರಿಗೆ ಯಾಕೆ ತೋರಿಸಬಾರದು?’ ಎಂದರು.  ಅದಕ್ಕೆ ಹಿರಿಯ ವ್ಯಕ್ತಿ ನಕ್ಕು… Read More »

ನೀತಿಕತೆ- ಮಕ್ಕಳಂತೆ ವರ್ತಿಸುವ 24ರ ತರುಣ

By | 06/09/2018

ಕೆಲವೊಮ್ಮೆ ಬದುಕು ನಾವು ನಿರೀಕ್ಷಿಸಿ ಇರದ ದಿಕ್ಕಿಗೆ ತಿರುಗಿಕೊಳ್ಳುತ್ತದೆ. ಇಂತಹ ಸಮಯದಲ್ಲಿ ಯಾವುದೋ ನೀತಿಕತೆಗಳು ನಿಮ್ಮ ಬದುಕಿಗೆ ಹೊಸ ದಿಕ್ಕು ತೋರಿಸಬಲ್ಲದು. ಅಂತಹ ನೀತಿಕತೆಯೊಂದು ಇಲ್ಲಿದೆ. ಎಲ್ಲರ ಬದುಕಿನಲ್ಲಿಯೂ ಒಂದು ಕತೆ ಇರುತ್ತದೆ 24 ವಯಸ್ಸಿನ ತರುಣ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಕಿಟಕಿಯಾಚೆ ನೋಡಿ ಆ ಯುವಕ `ಅಪ್ಪ, ನೋಡಲ್ಲಿ, ಮರಗಳು ಹಿಂದೆ ಓಡುತ್ತಿವೆ’ ಎಂದ. ತಂದೆ ನಕ್ಕರು. ಆ ತರುಣನ ಎದುರು ಕುಳಿತ ನವದಂಪತಿಗಳಿಗೆ ಇದು ಅಸಹನೀಯ ಅನಿಸಿತು. ಇಷ್ಟು ದೊಡ್ಡ ಯುವಕ ಪುಟ್ಟ ಮಕ್ಕಳಂತೆ ಇದ್ದಾನಲ್ಲ ಎಂದೆನಿಸಿತು. ಸ್ವಲ್ಪ ಹೊತ್ತಿನಲ್ಲಿ… Read More »