Category Archives: ನೆನಪುಗಳ ತೋಟದಲ್ಲಿ

ಜೋರು ಮಳೆಗೆ ಹಾಗೆ ಸುಮ್ಮನೆ…

ನಾಲ್ಕು ದಿನಗಳಿಂದ ಬಿಡದೆ ಜಡಿಮಳೆ ಸುರಿಯುತ್ತಿದೆ ಎಂಬ ಸುದ್ದಿ ಕಿವಿಗೆ ಬಿದ್ದರೂ ಬಿಡದೆ ಬೆಂಗಳೂರಿನಿಂದ ಊರ ಬಸ್ ಹತ್ತಿದೆ. ಕಂಪನಿಯ ವಾರ್ಷಿಕ, ತ್ರೈಮಾರ್ಸಿಕ, ಮಾಸಿಕ, ಪಾಕ್ಷಿಕ ಮುಗಿಯದ ಗೋಲುಗಳ ಗೋಳಿನಿಂದ ತಲೆಯಂತೂ ಚಿಟ್ಟುಹಿಡಿದಿತ್ತು. ಊರಲ್ಲಿ ಬಸ್ ಇಳಿದಾಗ ನನ್ನ ಸ್ವಾಗತಿಸಿದ್ದು ಬಿರುಮಳೆಯೇ. ಬಾ ಮಳೆಯೇ ಬಾ… ಹಾಡು ಗುನುಗುತ್ತ ಒದ್ದೆಮುದ್ದೆಯಾಗಿ ಓಡಿ ಮನೆ ತಲುಪಿದೆ. ಎಷ್ಟೊಂದು ಹಿತವೆನಿಸಿತು ಗೊತ್ತ? ನಮ್ಮೂರ ಮಳೆ ಒಂಚೂರು ಜಾಸ್ತಿ ಸ್ಪೆಷಲ್ ಅಂತ ಅಂದುಕೊಂಡೆ. *** ಹೊಸ ಟಿವಿಯಲ್ಲಿ ಹಳೆ ಚಾನಲುಗಳು ಬೋರು ಹೊಡೆಸಿತ್ತು. ಸೀದಾ ಅಪ್ಪನ… Read More »

ನೀವು ಇಂಟರ್‌ನೆಟ್‌ನಲ್ಲಿ ಚಂದಮಾಮ ಓದುತ್ತೀರಾ?

ಬೇತಾಳನ ಕಥೆಗಳು, ಪಂಚತಂತ್ರ ಕಥೆಗಳು, ಜನಪದ ಕಥೆಗಳು ಇತ್ಯಾದಿಗಳಿಂದ ಒಂದು ಕಾಲದಲ್ಲಿ ಎಲ್ಲರ ಮನೆಮಾತಾಗಿದ್ದ ಚಂದಮಾಮ ಇಂದು ಅಪರೂಪ. ಆದರೆ ಈಗಲೂ ಅದಕ್ಕೆ ಬೇಕಾದಷ್ಟು ಓದುಗರಿದ್ದಾರೆ. ನಾನಂತು ಚಿಕ್ಕದಿರುವುಗಾ ತಪ್ಪದೇ ಓದುತ್ತಿದ್ದೆ. ಇಲ್ಲೊಂದು ಜಾನಪದ ಕಥೆಯಿದೆ ಚಂದಮಾಮದಿಂದ ಕದ್ದದ್ದು. ಇಷ್ಟವಾದರೆ ಈ ಲಿಂಕ್‌ ಮೂಲಕ ಹೋಗಿ ಸಾಕಾಗುವಷ್ಟು ಓದಿ ಬನ್ನಿ. http://www.chandamama.com/lang/KAN/index.htm ವಿದೂಷಕನ ಸಮಸ್ಯೆ ಲೇಖಕ: ಚಂದಮಾಮ | 3rd Jan, 2011 ಒಂದಾನೊಂದು ಕಾಲದಲ್ಲಿ ವಿನಯನೆಂಬ ರಾಜ ನೊಬ್ಬನಿದ್ದನು. ಅವನಿಗೇ ಚದುರಂಗವೆಂದರೆ ತುಂಬಾ ಪ್ರೀತಿ. ಆದರೆ ರಾಜನಾದುದರಿಂದ, ಅವನ ಸರಿಸಮಾನರಾಗಿ… Read More »

25ರ ಲಹರಿಯಲ್ಲಿ

ಒಂದಲ್ಲ, ಎರಡಲ್ಲ, ಹತ್ತಾರು ಬಾರಿ ಲೆಕ್ಕ ಮಾಡಿ ನೋಡಿದೆ. 25ಕ್ಕಿಂತ ಕಡಿಮೆಯಾಗುವುದೇ ಇಲ್ಲ. ಮತ್ತೆ ಮತ್ತೆ ಲೆಕ್ಕ ಮಾಡಿ ಅದೇ ಉತ್ತರ ಬಂದಾಗ ಒಂದಿಷ್ಟು ಖುಷಿ ಮತ್ತು ದಿಗಿಲು ಜೊತೆಯಾಯಿತು. ಮುಂಜಾನೆ ಎದ್ದಾಗಲೇ 4 ಮೆಸೆಜ್‌ಗಳು ಬರ್ತ್‌ಡೇ ವಿಷ್‌ ಮಾಡಲು ಕಾಯುತ್ತಿದ್ದವು. ಸ್ವಲ್ಪ ಸಮಯವಾದಾಗ ಮತ್ತೆ ಒಬ್ಬರು ಮೆಸೆಜ್‌ ಮಾಡಿದರು. ಸ್ವಲ್ಪ ಹೊತ್ತಾದಾಗ ಗೆಳೆಯ ಸೂರ್ಯ ಕಾಲ್‌ ಮಾಡಿ ವಿಷ್‌ ಮಾಡಿದ. ಮೊಬೈಲ್‌ನ ಬ್ರೌಸರ್‌ ಆನ್‌ ಮಾಡಿ ನೋಡಿದಾಗ ಸುಮಾರು ಬರ್ತ್‌ಡೇ ವಿಷ್‌ಗಳು ಬಂದಿದ್ದವು. ಆಫೀಸ್‌ಗೆ ಹೋಗಿ ನೋಡಿದಾಗ ಫೇಸ್‌ಬುಕ್‌ನಲ್ಲಿ 19… Read More »

ಲಾವಣ್ಯ ಎಂಬ ಬಾಲ್ಯದ ಗೆಳತಿ

ಮೊನ್ನೆ ನನ್ನ ರಿಲೇಷನ್‌ ಹುಡುಗಿ ಮಮತಾ ಸಿಕ್ಕಾಗ ಸುಮ್ಮಗೆ ಕೇಳಿದ್ದೆ? ಲಾವಣ್ಯ ಹೇಗಿದ್ದಾಳೆ ಅಂತ? ಅವಳಿಗೆ ಎಷ್ಟು ಅಚ್ಚರಿಯಾಯಿತೆಂದರೆ `ನೀನಿನ್ನೂ ಅವಳನ್ನು ಮರೆತಿಲ್ವಾ? ಅಂತ ಕೇಳಿ ಆಮೇಲೆ `ಅವಳಿಗೆ ಮದುವೆಯಾಗಿದೆ. ಗಂಡ ಮಿಲಿಟರಿಯಲ್ಲಿದ್ದಾನೆ’ ಅನ್ನೋ ಬಾಂಬ್‌ ಕೂಡ ಹಾಕಿದಳು. ಆದರೆ ಆ ಬಾಂಬ್‌ ಸ್ಪೋಟಗೊಂಡಿರಲಿಲ್ಲ. ಯಾಕೆಂದರೆ ಅದು ನನ್ನ ಐದನೇ ಕ್ಲಾಸ್‌ನಲ್ಲಿ ನಡೆದ ಲವ್‌!ಹೌದು. ಆಗ ಪ್ರೀತಿ ಪ್ರೇಮ ಪ್ರಣಯ ಅಂದ್ರೆ ಏನಂತ ಸರಿಯಾಗಿ ಗೊತ್ತಿರದ ವಯಸ್ಸು. ನನ್ನ ತಂದೆ ಮದುವೆಯಾದ ನಂತರ ಮಡಿಕೇರಿ ಎಂಬ ಊರನ್ನು ಬಿಟ್ಟು ಪುತ್ತೂರಲ್ಲಿ ನೆಲೆ… Read More »

ಬಣ್ಣಗಳು

ಬಣ್ಣಗಳೇ ಬಣಗಳಾಗದಿರಿ ವರ್ಣಗಳೇ ವಿವರ್ಣಗಳಾಗದಿರಿ ಬಿಳಿ ಪಾರಿವಾಳದ ಚಿತ್ರ ಬಿಡಿಸಬೇಕಿದೆ ಜೊತೆಯಾಗಿರಿ ನಲ್ಮೆಯ ನಾಳೆಯ ಖಾಲಿ ಹಾಳೆಯಲ್ಲಿ ಪ್ರೀತಿ ಬಣ್ಣ ಗೀಚಿರಿ