Category Archives: ರೆಸಿಪಿ

ಬ್ರೇಕ್ ಫಾಸ್ಟ್ ರೆಸಿಪಿ: ಬಿಸಿಬಿಸಿಯಾದ ಬಿಸಿಬೇಳೆ ಬಾತ್

By | 24/09/2018

ಬಿಸಿಬೇಳೆ ಬಾತ್ ಬೆಳಿಗ್ಗಿನ ತಿಂಡಿಗೆ ಅಥವಾ ಮಧ್ಯಾಹ್ನದ ಊಟಕ್ಕೂ ಹೇಳಿಮಾಡಿಸಿದ್ದು. ತರಕಾರಿಗಳೆನ್ನೆಲ್ಲಾ ಒಟ್ಟಿಗೆ ಸೇರಿಸಿ ಬೇಯಿಸುವುದರಿಂದ ಸಾಂಬಾರು ಮಾಡುವ ಅಗತ್ಯವಿಲ್ಲ. ಬಿಸಿ ಬಿಸಿಯಿರುವಾಗಲೇ ಸವಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಬಿಸಿಬೇಳೆ ಬಾತ್ ಪೌಡರ್ ಗೆ ಬೇಕಾಗುವ ಸಾಮಾಗ್ರಿ ಒಣಮೆಣಸಿನಕಾಯಿ ಎಂಟರಿಂದ ಹತ್ತ ತೆಗೆದುಕೊಳ್ಳಿ, ಕಡಲೆಬೇಳೆ ಒಂದು ಹಿಡಿ, ಉದ್ದಿನಬೇಳೆ ಒಂದು ಹಿಡಿ, ಅರ್ಧ ತುಂಡು ಚಕ್ಕೆ, ಕೊತ್ತಂಬರಿಕಾಳು-3 ಚಮಚ, ಜೀರಿಗೆ ಕಾಳು ಚಮಚದಷ್ಟು, ಮೆಂತೆಕಾಳು-10ಕಾಳು ಸಾಕು, ಚಕ್ರಮೊಗ್ಗು-1, ಹಾಗೇ ಕಾಳುಮೆಣಸು ಕಾಲು ಚಮಚ, ಕರಿಬೇವಿನ ಸೊಪ್ಪು 1 ದಂಟು. ಮೊದಲಿಗೆ ಒಂದು… Read More »

ರೆಸಿಪಿ: ರುಚಿಯಾದ ಬಟರ್ ಚಿಕನ್ ಮಾಡುವುದು ಹೇಗೆ?

By | 23/09/2018

ಬಟರ್ ಚಿಕನ್ ರೊಟ್ಟಿ, ಚಪಾತಿ ಜತೆ ಹೇಳಿ ಮಾಡಿಸಿದ ಗ್ರೇವಿ. ಹೋಟೆಲ್ ನಲ್ಲಿ ಒಂದಷ್ಟು ದುಡ್ಡು ಕೊಟ್ಟು ಬಟರ್ ಚಿಕನ್ ತಿನ್ನುವ ಬದಲು ಮನೆಯಲ್ಲಿಯೇ ಈ ರುಚಿಯಾದ ಬಟರ್ ಚಿಕನ್ ಸವಿಯಲು ಸಿದ್ಧ ಕೋಳಿಮಾಂಸ ಅರ್ಧ ಕೆ.ಜಿ ತೆಗೆದುಕೊಳ್ಳಿ. ಈರುಳ್ಳಿ-ಒಂದು ದೊಡ್ಡದ್ದು, ಟೊಮೆಟೊ-ಹದ ಗಾತ್ರದ್ದು ಎರಡು ತೆಗೆದುಕೊಳ್ಳಿ ಹಾಗೇ ಇದನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಕೆಂಪು ಮೆಣಸಿನ ಪುಡಿ ಒಂದು ಚಮಚದ್ಟು, ಜೀರಿಗೆ ಪುಡಿ ಅರ್ಧ ಚಮಚ, ಮೊಸರು 250 ಗ್ರಾಂನಷ್ಟಿದ್ದರೆ ಸಾಕು. ಹಸಿಮೆಣಸು 4, ಗೋಡಂಬಿ-ಕಾಲು ಕಪ್ ತೆಗೆದುಕೊಳ್ಳಿ,… Read More »

ಬರೀ ಆಮ್ಲೆಟ್ ಮಾಡಿ ತಿನ್ನುವ ಬದಲು ಒಮ್ಮೆ ಆಮ್ಲೆಟ್ ಗ್ರೇವಿ ಮಾಡಿ ನೋಡಿ

By | 23/09/2018

ಆಮ್ಲೆಟ್ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮೊಟ್ಟೆಯಿಂದ ತಯಾರಿಸುವ ಯಾವ ಆಹಾರವಾದರೂ ಅದು ರುಚಿಯಾಗಿಯೇ ಇರುತ್ತದೆ. ಅದರಲ್ಲಿ ಆಮ್ಲೆಟ್ ಕೂಡ ಒಂದು. ತುಂಬಾ ಹಸಿವಾದಾಗ ತಿನ್ನಲು ಏನು ಸಿಗದಿದ್ದಾಗ ಎಲ್ಲರಿಗೂ ಮೊದಲು ನೆನಪಾಗುವುದು ಆಮ್ಲೆಟ್. ಯಾಕೆಂದರೆ ಇದನ್ನು ತುಂಬಾ ಸುಲಭವಾಗಿ, ತಕ್ಷಣ ತಯಾರಿಸಬಹುದು. ಅಲ್ಲದೇ ತಿನ್ನಲು ಬಹಳ ರುಚಿಕರವಾದ ತಿನಿಸು. ಹಾಗೇ ಈ ಆಮ್ಲೆಟ್ ನಿಂದ ಗಟ್ಟಿಯಾದ ಗ್ರೇವಿ ಕೂಡ ತಯಾರಿಸಬಹುದು. ಅದನ್ನು ಅನ್ನ, ರೊಟ್ಟಿ, ಚಪಾತಿ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಅದನ್ನು ತಯಾರಿಸುವ ವಿಧಾನ ಇಲ್ಲಿದೆ ನೋಡಿ.… Read More »

ನಿಮ್ಮನ್ನು ಆರೋಗ್ಯಕರವಾಗಿಸುವ ಮೆಂತ್ಯಕಾಳಿನ ಸಾಂಬಾರ್

By | 21/09/2018

ಮೆಂತ್ಯಕಾಳು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ ಪದಾರ್ಥಗಳಲ್ಲಿ ಒಂದು. ಇದನ್ನು ಪ್ರತಿದಿನ ಬಳಸುತ್ತಾ ಬಂದರೆ ಆರೋಗ್ಯಕರ ಜೀವನ ನಮ್ಮದಾಗುತ್ತದೆ. ಈ ಮೆಂತ್ಯಕಾಳುಗಳಲ್ಲಿ ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ, ನಿಯೊಸಿಸ್, ಪೊಟ್ಯಾಶಿಯಂಗಳಿವೆ. ಇದು ಆರೋಗ್ಯದ ಜೊತೆಗೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇಷ್ಟೊಂದು ಆರೋಗ್ಯಕರವಾದ ಮೆಂತ್ಯಕಾಳನ್ನು ಕೆಲವರು ಪ್ರತಿದಿನ ನೆನೆಸಿ ತಿನ್ನತ್ತಾರೆ. ಇನ್ನು ಕೆಲವರು ಅದು ಕಹಿ ಎಂದು ಅದರ ಹತ್ತಿರ ಕೂಡ ಸುಳಿಯುವುದಿಲ್ಲ. ಅಂತವರಿಗೆ ರುಚಿಕರವಾದ, ಆರೋಗ್ಯಕರವಾದ, ತುಂಬಾ ಸುಲಭವಾಗಿ ರೆಡಿಯಾಗುವಂತಹ ಮೆಂತ್ಯ ಕಾಳಿನ ಸಾಂಬಾರ್ ಮಾಡಿ ಕೊಡಿ. ಈ ಮೆಂತ್ಯಕಾಳಿನ ಸಾಂಬಾರ್ ಮಾಡಲು… Read More »

ರೆಸಿಪಿ: ಶಾಹಿ ಮಟರ್ ಪನ್ನೀರ್ ಗ್ರೇವಿ

By | 18/09/2018

ಪನ್ನೀರ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರಿಗೆಲ್ಲಾ ತುಂಬಾ ಇಷ್ಟ. ಇದರಿಂದ ತಯಾರಿಸಲಾಗುವ ಗ್ರೇವಿ ಕೂಡ ತುಂಬಾ ಚೆನ್ನಾಗಿ ಇರುತ್ತೆ. ಚಪಾತಿ, ಪುಲ್ಕ, ರೋಟಿ ಜತೆಗೆ ಈ ಗ್ರೇವಿ ಹೇಳಿಮಾಡಿಸಿದ್ದು. ಹೊರಗಡೆ ಹೊಟೆಲ್ ನಲ್ಲಿ ತಿನ್ನುವುದಕ್ಕಿಂತ ಮನೆಯಲ್ಲಿ ಮಾಡಿ ಇದರ ರುಚಿ ಸವಿಯಿರಿ. ಪನ್ನೀರ್ ಗ್ರೇವಿ ಮಾಡಲು ಬೇಕಾಗಿರುವ ಸಾಮಾಗ್ರಿ ಬಟಾಣಿ-ಕಾಲು ಕಪ್ ತೆಗೆದುಕೊಳ್ಳಿ. ಬೆಣ್ಣೆ-1 ಚಮಚದಷ್ಟು, ಪನೀರ್-50 ಗ್ರಾಂ ಸಾಕು. ತುಪ್ಪ-1 ಚಮಚ, ಹಾಲು-1/4 ಕಪ್, ಒಣಮೆಣಸಿನಪುಡಿ-1 ಚಮಚದಷ್ಟು, ಅರಿಶಿನ-1/12 ಚಮಚ, ಕೊತ್ತಂಬರಿ ಪುಡಿ-1 ಚಮಚ, ದಪ್ಪನೆಯ ಕ್ರಿಮ್-2 ಚಮಚದಷ್ಟು, ಕಸೂರಿ… Read More »

ಚಪಾತಿ ಮಿಕ್ಕಿದೆ ಎಂದು ಚಿಂತಿಸಬೇಡಿ, ರುಚಿಕರವಾದ ಚಪಾತಿ ನೂಡಲ್ಸ್ ತಯಾರಿಸಿ

By | 16/09/2018

ಚಪಾತಿ ಆರೋಗ್ಯಕ್ಕೆ ತುಂಬಾ ಉತ್ತಮವಾದುದು. ಚಪಾತಿಯನ್ನು ಗೋಧಿಯಿಂದ ತಯಾರಿಸುವುದರಿಂದ ಇದರಲ್ಲಿ ಕೊಬ್ಬನಾಂಶ ಕಡಿಮೆ ಇರುತ್ತೆ ಹಾಗೂ ಹಲವು ಖನಿಜಾಂಶಗಳನ್ನು ಒಳಗೊಂಡಿರುವ ಕಾರಣ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಈ ಚಪಾತಿಯಿಂದ ಸಿಗುತ್ತದೆ. ಇದು ದೇಹದ ತೂಕ ಇಳಿಸಿಕೊಳ್ಳಲು ಕೂಡ ತುಂಬಾ ಸಹಕಾರಿಯಾಗಿದೆ. ಚಪಾತಿಯನ್ನು ಹೆಚ್ಚಾಗಿ ರಾತ್ರಿ ಸಮಯದಲ್ಲಿ ತಿನ್ನುತ್ತಾರೆ. ಅದರಲ್ಲೂ ತುಂಬಾ ದಪ್ಪ ಇರುವವರು ದೇಹದ ತೂಕ ಇಳಿಸಲು ಹಾಗೂ ರಾತ್ರಿ ಅನ್ನ ತಿಂದರೆ ಸರಿಯಾಗಿ ಜೀರ್ಣ ಆಗದೆ ಇರುವವರು ರಾತ್ರಿ ಚಪಾತಿಯನ್ನು ತಿನ್ನುತ್ತಾರೆ. ಆದರೆ ಎಲ್ಲಾ ತಿಂದು ಮುಗಿದ ಮೇಲೆ ಮಾಡಿದ… Read More »