Category Archives: ವ್ಯಕ್ತಿತ್ವ ವಿಕಸನ

ನೀತಿಕತೆ: ಚಿಟ್ಟೆಮರಿ ಮತ್ತು ಪರೋಪಕಾರಿ ಹುಡುಗ

ಅವನು ತುಂಬಾ ಹೃದಯವಂತ. ಯಾರೇ ಕಷ್ಟದಲ್ಲಿದ್ದರೂ ಸಹಾಯ ಮಾಡುವ ಪರೋಪಕಾರಿ. ಒಂದಿನ ಹೂದೋಟಕ್ಕೆ ಹೋದಾಗ ಅಲ್ಲೊಂದು ಚಿಟ್ಟೆಯ ಗೂಡು ಕಂಡ. ರೇಷ್ಮೆ ಹುಳುಗಳ ಗೂಡು ರೀತಿ ಹುಳು ಚಿಟ್ಟೆಯಾಗುವ ಮುನ್ನ ಇಂತಹದೊಂದು ಗೂಡಿನಿಂದ ಹೊರಬರಬೇಕು. ಒಂದಿನ ಈ ಯುವಕ ಆ ಚಿಟ್ಟೆಯ ಗೂಡು ಕಂಡ. ಅದು ಕೊಂಚ ತೆರೆದಿರುವುದನ್ನು ನೋಡಿದ. ತುಂಬಾ ಗಂಟೆ ಅಲ್ಲೇ ಕುಳಿತ.  ಆ ಚಿಟ್ಟೆ ಹುಳು ಪಾಪ ಆ ಗೂಡಿನಿಂದ ತನ್ನ ದೇಹವನ್ನು ಹೊರಗೆ ಹಾಕಲು ತುಂಬಾ ಕಷ್ಟಪಡುತ್ತಿತ್ತು.  ಆ ಯುವಕ ಹೀಗೆ ನೋಡುತ್ತಲೇ ಇದ್ದ. ಪಾಪ… Read More »

ಶ್ರೀಮಂತನನ್ನು ಮದುವೆಯಾಗಲು ಏನು ಮಾಡಬೇಕು? ಈ ಪ್ರಶ್ನೆಗೆ ಮಾರ್ಮಿಕ ಉತ್ತರ ಇಲ್ಲಿದೆ ನೋಡಿ

ಅದೊಂದು ಆನ್‍ಲೈನ್‍ನ ಜನಪ್ರಿಯ ಚರ್ಚಾ ತಾಣ. ಅಲ್ಲೊಬ್ಬಳು ಯುವತಿ ಹೀಗೊಂದು ಪ್ರಶ್ನೆ ಬರೆದಿದ್ದಳು. ಪ್ರಶ್ನೆಯ ಶೀರ್ಷಿಕೆ: ಶ್ರೀಮಂತ ಯುವಕನನ್ನು ಮದುವೆಯಾಗಲು ನಾನು ಏನು ಮಾಡಬೇಕು? ಪ್ರಶ್ನೆಯ ವಿವರಣೆ: ನಾನು ತುಂಬಾ ಪ್ರಾಮಾಣಿಕವಾಗಿ ಈ ಪ್ರಶ್ನೆ ಕೇಳುತ್ತಿದ್ದೇನೆ.  ನನಗೆ 25 ವರ್ಷ ವಯಸ್ಸು. ನಾನು ನೋಡಲು ತುಂಬಾ ಸುಂದರಿ. ನನ್ನ ಅಭಿರುಚಿಗಳೂ ಉತ್ತಮವಾಗಿವೆ. ವರ್ಷಕ್ಕೆ 500 ಸಾವಿರ ಡಾಲರ್ ಅಥವಾ ಅದಕ್ಕಿಂತ ಹೆಚ್ಚು ವೇತನ ಇರುವ ಯುವಕನನ್ನು ಮದುವೆಯಾಗಬೇಕು ಎನ್ನುವುದು ನನ್ನ ಅಭಿಲಾಸೆ.  ಈ ಫೋರ್ಮ್ ನಲ್ಲಿ ಇಷ್ಟು ವೇತನ ಇರುವ ಯಾರಾದರೂ… Read More »

ನೀತಿಕತೆ: ನಮ್ಮ ಮೌಲ್ಯ ಕಡಿಮೆಯಾಗದು

ಒಂದು ಸೆಮಿನಾರ್‍ನಲ್ಲಿ ಭಾಷಣಗಾರರು ಕೈಯಲ್ಲಿ 2000 ರೂಪಾಯಿಯ ನೋಟೊಂದನ್ನು ಹಿಡಿದು ಸಭಿಕರಲ್ಲಿ `ಈ ಹಣ ಯಾರಿಗೆ ಬೇಕು?’ ಎಂದು ಪ್ರಶ್ನಿಸಿದರು. ಬಹುತೇಕರು ಕೈ ಎತ್ತಿದರು.  `ನಾನು ಈ ಹಣವನ್ನು ನಿಮಗೆ ನೀಡುವ ಮೊದಲು ಒಂದು ಕೆಲಸ ಮಾಡುತ್ತೇನೆ’ ಎಂದು ಹೇಳಿ ಆ ನೋಟನ್ನು ಕೆಳಗೆ ಹಾಕಿದರು. `ಈಗ ಯಾರಿಗೆ ಈ ಹಣ ಬೇಕು?’ ಎಂದರು. ಈಗಲೂ ಬಹುತೇಕರು ಕೈ ಎತ್ತಿದರು. ಮತ್ತೆ ಆ ಭಾಷಣಗಾರರು ಆ ಹಣವನ್ನು ಎತ್ತಿಕೊಂಡು ಅಲ್ಲಿದ್ದ ಕೊಳಕು ಮಣ್ಣಿನಲ್ಲಿ ಆ ನೋಟನ್ನು ಮುದ್ದೆ ಮಾಡಿದರು. ನಿಜಕ್ಕೂ ಆ… Read More »

ಸ್ಫೂರ್ತಿದಾಯಕ ಕತೆ: ಕೆಂಟುಕಿ ಚಿಕನ್ ಸ್ಥಾಪಕನ ಯಶೋಗಾಥೆ

ಅವರಿಗೆ 67 ವರ್ಷ ವಯಸ್ಸಾಗಿತ್ತು. ಪುಟ್ಟ ಮನೆಯಿತ್ತು. ಹಳೆಯ ಕಾರಿತ್ತು. ಒಟ್ಟಾರೆ ನಿವೃತ್ತಿ ಜೀವನ ಮಾಡುವ ಸಮಯವಾಗಿತ್ತು. ಆದರೆ, ಅವರಲ್ಲಿ ಹೆಚ್ಚಿನ ಹಣವಿರಲಿಲ್ಲ. 99 ಡಾಲರ್ ಸಾಮಾಜಿಕ ಭದ್ರತಾ ಚೆಕ್ ಇತ್ತು. ಇಷ್ಟು ಹಣದಲ್ಲಿ ನಿವೃತ್ತಿ ಜೀವನ ತುಂಬಾ ಕಷ್ಟವಾಗುತ್ತಿತ್ತು. ಹೆಚ್ಚೆಂದರೆ ಕೆಲವೇ ತಿಂಗಳಲ್ಲಿ ಈ ಹಣ ಮುಗಿದು ಹೋಗುತ್ತಿತ್ತು. ಆದರೆ, ಆ ವ್ಯಕ್ತಿ ಜೀವನವನ್ನು ಹಾಗೆಯೇ ಬಿಡಲು ಇಚ್ಚಿಸಲಿಲ್ಲ. ಏನೋ ಬದಲಾವಣೆ ಮಾಡುವ ಗುರಿ ಹಾಕಿಕೊಂಡರು. ಏನಾದರೂ ಮಾರಾಟ ಮಾಡಿ ಜೀವನ ನಡೆಸೋಣ ಎಂದುಕೊಂಡರು. ಮಾರಾಟ ಮಾಡಲು ಅವರಲ್ಲಿ ಅಂತಹದ್ದೇನೂ… Read More »

ಕರಿಯರ್ ಆಗಿ ಪರಿವರ್ತಿಸಬಹುದಾದ 7 ಹವ್ಯಾಸಗಳು

ಬಿಡುವಿನ ವೇಳೆಯಲ್ಲಿ ಅಥವಾ ಸಮಯ ಕಳೆಯಲೆಂದು ಆರಂಭಿಸಿದ ನಮ್ಮ ಹವ್ಯಾಸವೇ ಕರಿಯರ್ ಆಗಿ ಬದಲಾದರೆ ಜೀವನಪೂರ್ತಿ ಹವ್ಯಾಸದೊಂದಿಗೆ ವೃತ್ತಿ ಜೀವನ ನಡೆಸಬಹುದು. ಎಲ್ಲಾ ಹವ್ಯಾಸಗಳು ಈಗಿನ ದುಬಾರಿ ಜಗತ್ತಿನಲ್ಲಿ ಹೊಟ್ಟೆ ತುಂಬಿಸಲು ಸಾಕಾಗದು. ಆದರೆ, ಕೆಲವು ಹವ್ಯಾಸಗಳನ್ನು ಸಮರ್ಥ ಕರಿಯರ್ ಆಗಿ ಪರಿವರ್ತಿಸಿಕೊಂಡರೆ ಕೈತುಂಬಾ ಹಣ ಸಂಪಾದಿಸಬಹುದು. Image Credit: mscareergirl ಕ್ರೀಡೆ ದಿನ ಶಾಲೆ, ಕಾಲೇಜು ಮುಗಿಸಿ ಬಂದು ಕ್ರಿಕೆಟ್ ಆಡಲು ಓಡುವವರು ಅಥವಾ ಶಾಲಾ ಕಾಲೇಜುಗಳಲ್ಲಿಯೇ ಕ್ರಿಕೆಟ್ ಆಡುವವರು ನೀವಾಗಿರಬಹುದು. ಇದೇ ರೀತಿ ಹಾಕಿ, ಫುಟ್ಬಾಲ್ ಆಟಗಾರರೂ ಆಗಿರಬಹುದು.… Read More »