Category Archives: ಹಾಗೇ ಸುಮ್ಮನೆ!

ಜೋರು ಮಳೆಗೆ ಹಾಗೆ ಸುಮ್ಮನೆ…

ನಾಲ್ಕು ದಿನಗಳಿಂದ ಬಿಡದೆ ಜಡಿಮಳೆ ಸುರಿಯುತ್ತಿದೆ ಎಂಬ ಸುದ್ದಿ ಕಿವಿಗೆ ಬಿದ್ದರೂ ಬಿಡದೆ ಬೆಂಗಳೂರಿನಿಂದ ಊರ ಬಸ್ ಹತ್ತಿದೆ. ಕಂಪನಿಯ ವಾರ್ಷಿಕ, ತ್ರೈಮಾರ್ಸಿಕ, ಮಾಸಿಕ, ಪಾಕ್ಷಿಕ ಮುಗಿಯದ ಗೋಲುಗಳ ಗೋಳಿನಿಂದ ತಲೆಯಂತೂ ಚಿಟ್ಟುಹಿಡಿದಿತ್ತು. ಊರಲ್ಲಿ ಬಸ್ ಇಳಿದಾಗ ನನ್ನ ಸ್ವಾಗತಿಸಿದ್ದು ಬಿರುಮಳೆಯೇ. ಬಾ ಮಳೆಯೇ ಬಾ… ಹಾಡು ಗುನುಗುತ್ತ ಒದ್ದೆಮುದ್ದೆಯಾಗಿ ಓಡಿ ಮನೆ ತಲುಪಿದೆ. ಎಷ್ಟೊಂದು ಹಿತವೆನಿಸಿತು ಗೊತ್ತ? ನಮ್ಮೂರ ಮಳೆ ಒಂಚೂರು ಜಾಸ್ತಿ ಸ್ಪೆಷಲ್ ಅಂತ ಅಂದುಕೊಂಡೆ. *** ಹೊಸ ಟಿವಿಯಲ್ಲಿ ಹಳೆ ಚಾನಲುಗಳು ಬೋರು ಹೊಡೆಸಿತ್ತು. ಸೀದಾ ಅಪ್ಪನ… Read More »

ನನ್ನ ಹೃದಯವನ್ನು ನಿನ್ನ ಹೃದಯದಲ್ಲಿಟ್ಟುಕೋ

********* ನೂರಾರು ನೆನಪುಗಳನ್ನು ನೆನಪಿಸಲಾಗದು ನನಗೆ ಅದಕ್ಕೆ ಅವಳ ಹೆಸರನ್ನೊಮ್ಮೆ ಜ್ಞಾಪಿಸಿಕೊಳ್ಳುತ್ತೇನೆ ಸಾವಿರ ನೆನಪುಗಳು ಮೆರವಣಿಗೆ ಹೊರಡುತ್ತವೆ… ******* ನನ್ನ ಹೃದಯವನ್ನು ನಿನ್ನ ಹೃದಯದಲ್ಲಿಟ್ಟುಕೋ ಗೆಳತಿ.. ನನ್ನ ಯಾತನೆ ನಿನಗರಿವಾದೀತು ***** ಮುಂಜಾನೆ ಅರಳಿದ ಹೂವುಗಳು ಸಂಜೆ ನರಳುತ್ತವೆ… ಸಂಜೆ ಅರಳಿದ ಹೂವುಗಳು ಕತ್ತಲಲ್ಲಿ ನರಳುತ್ತವೆ ****** ದಿನಕೊಂದಿಷ್ಟು ಮುಗುಳುನಗು ದಿನಕರನ ನೋಡಿ ಬಿರಿದ್ಹಾಂಗೆ ಮಲ್ಲಿಗೆ ಮೊಗ್ಗು ಅವಳ ನಗು ***** ಈ ಚಿಟ್ಟೆಯ ಸ್ನೇಹ ಸಾಕೆನಿಸಿದರೆ ಹೇಳು ಹೂವೆ.. ನಾನು ಹೋಗುವೆ ಸೂರ್ಯನೆಡೆಗೆ ರೆಕ್ಕೆ ಸುಟ್ಟ ಮೇಲೆ ನಿನ್ನ ಬುಡ… Read More »

ಕವಿತೆ ಬರೆಯಲಾಗದ ಬ್ರಹ್ಮ ನಿನ್ನ ಸೃಷ್ಟಿಸಿದ

ಕವಿತೆ ಬರೆಯಲಾಗದ ಬ್ರಹ್ಮ ನಿನ್ನ ಸೃಷ್ಟಿಸಿದ ಒಂದೇ ಕವಿತೆಗೆ ಹಲವು ಮುಖಗಳಿವೆಯಂತೆ! ನಿನ್ನ ಹಾಗೆಯೇ< ನಿನ್ನ ನೋಡಿದ ನಾನು ಕವಿತೆಯ ಸೃಷ್ಟಿಸಲಾಗದೆ ಒದ್ದಾಡಿದೆ… ನೀನು ಸಿಕ್ಕ ಮೇಲೆ ಕವಿತೆಯಲ್ಲಿ ಮೈ ಮರೆತು ಬಿಟ್ಟೆ ನಾನು ಕವಿತೆಯೇ ಅಲ್ಲದ ಪದಗಳಿಗೆ ಕವಿತೆ ಅಂದುಬಿಟ್ಟೆ ಈಗ ಮಾತನಾಡಲು ನೀನಿಲ್ಲ ನಾನು ಮೌನಿಯಾಗಲೇ ಮತ್ತೆ.. ಈ ಕವಿತೆಯ ಒಂದೊಂದು ಚರಣಗಳಿಗೂ ಸಂಬಂಧವಿಲ್ಲ, ಈಗ ಥೇಟ್ ನಮ್ಮ ಹಾಗೆಯೇ… ಪ್ರೀತಿಯ ವ್ಯಾಲಿಡಿಟಿ ಮುಗಿಸಿಬಿಟ್ಟ ಬ್ರಹ್ಮ ಈಗ ನಿನ್ನ ಹೃದಯದಲ್ಲಿ ಕಲ್ಲನ್ನಿಟ್ಟಿದ್ದಾನೆ

ನೀವು ಇಂಟರ್‌ನೆಟ್‌ನಲ್ಲಿ ಚಂದಮಾಮ ಓದುತ್ತೀರಾ?

ಬೇತಾಳನ ಕಥೆಗಳು, ಪಂಚತಂತ್ರ ಕಥೆಗಳು, ಜನಪದ ಕಥೆಗಳು ಇತ್ಯಾದಿಗಳಿಂದ ಒಂದು ಕಾಲದಲ್ಲಿ ಎಲ್ಲರ ಮನೆಮಾತಾಗಿದ್ದ ಚಂದಮಾಮ ಇಂದು ಅಪರೂಪ. ಆದರೆ ಈಗಲೂ ಅದಕ್ಕೆ ಬೇಕಾದಷ್ಟು ಓದುಗರಿದ್ದಾರೆ. ನಾನಂತು ಚಿಕ್ಕದಿರುವುಗಾ ತಪ್ಪದೇ ಓದುತ್ತಿದ್ದೆ. ಇಲ್ಲೊಂದು ಜಾನಪದ ಕಥೆಯಿದೆ ಚಂದಮಾಮದಿಂದ ಕದ್ದದ್ದು. ಇಷ್ಟವಾದರೆ ಈ ಲಿಂಕ್‌ ಮೂಲಕ ಹೋಗಿ ಸಾಕಾಗುವಷ್ಟು ಓದಿ ಬನ್ನಿ. http://www.chandamama.com/lang/KAN/index.htm ವಿದೂಷಕನ ಸಮಸ್ಯೆ ಲೇಖಕ: ಚಂದಮಾಮ | 3rd Jan, 2011 ಒಂದಾನೊಂದು ಕಾಲದಲ್ಲಿ ವಿನಯನೆಂಬ ರಾಜ ನೊಬ್ಬನಿದ್ದನು. ಅವನಿಗೇ ಚದುರಂಗವೆಂದರೆ ತುಂಬಾ ಪ್ರೀತಿ. ಆದರೆ ರಾಜನಾದುದರಿಂದ, ಅವನ ಸರಿಸಮಾನರಾಗಿ… Read More »

ಸೃಷ್ಟಿ

ಸೃಷ್ಟಿಕರ್ತ ತನ್ನ ಚೆಲುವಾದ ಪತ್ನಿಯೊಂದಿಗೆ ಆಕಾಶ ಮಾರ್ಗದಲ್ಲಿ ಸಂಚರಿಸುತ್ತಿದ್ದ. `ಸಖ ಅಲ್ಲಿ ಕಾಣುವ ಆ ಗ್ರಹದಲ್ಲಿ ಒಂದಿಷ್ಟು ಹೊತ್ತು ವಿಶ್ರಾಂತಿ ಪಡೆಯೋಣವೇ?’ ಸಖಿಯ ಬಯಕೆಯರಿತ ಸೃಷ್ಟಿಕರ್ತ ತನ್ನ ವಾಹನವನ್ನು ಆ ಗ್ರಹದಲ್ಲಿ ಇಳಿಸಿದನು. ಅವರಿಬ್ಬರು ತುಂಬಾ ಹೊತ್ತು ಅಲ್ಲಿ ವಿಶ್ರಾಂತಿ ಪಡೆದು ಇನ್ನೇನೂ ಹೋಗಬೇಕೆಂದು ಎದ್ದಾಗ ಸಖಿ ಹೇಳಿದಳು. ನಾಥ ನಾವಿಲ್ಲಿ ವಿಶ್ರಾಂತಿ ಪಡೆದ ನೆನಪಿಗೆ ಏನಾದರೂ ಮಾಡಬಾರದೇ. ಸೃಷ್ಟಿಕರ್ತನಿಗೂ ಅದು ಸರಿಯೆನಿಸಿತು. ಒಂದು ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿದ. ಅವರ ವಾಸಕ್ಕೆ ಅನುಕೂಲವಾಗುವಂತಹ ವಾತಾವರಣ, ನೀರು, ಕಾಡು, ಪ್ರಾಣಿ ಪಕ್ಷಿಗಳನ್ನು… Read More »