Category Archives: books

ಸೇತುರಾಮ್ ಅವರ “ನಾವಲ್ಲ” ಕಥಾ ಸಂಕಲನ

ನಾವಲ್ಲ1 ಎಸ್.ಎನ್. ಸೇತುರಾಮ್ ಕಥಾ ಸಂಕಲನkannada☆☆☆☆☆ಸೇತುರಾಮ್ ನಾಟಕಗಳು ನನಗಿಷ್ಟ. ಅವರ “ಅತೀತ” ನಾಟಕವನ್ನು ರಂಗಶಂಕರದಲ್ಲಿ ನೋಡಿದ್ದೆ. ಕೆಲವೇ ಪಾತ್ರಗಳಾದರೂ ಇಡೀ ನಾಟಕಕ್ಕೆ ಇವರೇ ಪ್ರಮುಖ ಸೂತ್ರದಾರಿ. ಮಾತಿನಲ್ಲಿಯೇ ಮನಸ್ಸು ಮುಟ್ಟುತ್ತಿದ್ದ ಅವರ ನಟನೆ ಇಷ್ಟವಾಗಿತ್ತು. ಇವರ “ನಾವಲ್ಲ” ಪುಸ್ತಕ ಓದಲು ಕುಳಿತರೂ ನಾಟಕದಲ್ಲಿ ಅವರೇ ಮಾತನಾಡಿದಂತೆ ಆಗುತ್ತಿತ್ತು. ಅತೀತದಲ್ಲಿ ಅವರ ಮಾತಿನ ಶೈಲಿ ಹೇಗಿತ್ತೋ, ಅವರ ಬರವಣಿಗೆಯ ಶೈಲಿಯೂ ಹಾಗೆಯೇ ಇದೆ. ಇತರರ ಬರವಣಿಗೆ ಶೈಲಿ ಅನುಕರಣೆಯೇ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ತನ್ನ ಸ್ವಂತ ಬರವಣಿಗೆ ಶೈಲಿ ಮೂಲಕ ಸೇತುರಾಮ್ ಇಷ್ಟವಾಗುತ್ತಾರೆ.… Read More »

ಪುಸ್ತಕ ಪರಿಚಯ: ಮಹತ್ವಾಕಾಂಕ್ಷೆ

ಮಹತ್ವಾಕಾಂಕ್ಷೆ1 ಪರಶಿವಪ್ಪ ವ್ಯಕ್ತಿತ್ವ ವಿಕಸನಸ್ನೇಹಾ ಬುಕ್ ☆☆☆☆☆ಮಹತ್ವಾಕಾಂಕ್ಷೆಯು ಪರಶಿವಪ್ಪ ಅವರ ಮೊದಲ ಪುಸ್ತಕ. ಮೊದಲ ಪ್ರಯತ್ನ. ಮೂಲತಃ ಬರಹಗಾರರಲ್ಲ. ಆದರೆ, ಬರೆಯಲು ಅವರಲ್ಲಿ ಸಾಕಷ್ಟು ಅನುಭವಗಳಿವೆ. ತಾನು ಸಾಗಿ ಬಂದ ಹಾದಿ ಮತ್ತು ತನ್ನಂತೆಯೇ ಮಹತ್ವಾಕಾಂಕ್ಷೆಯಿಂದ ಬೆಳೆದುಬಂದವರ ಕುರಿತು ಬರೆಯುವ ಪ್ರಯತ್ನವನ್ನು ಮಹತ್ವಾಕಾಂಕ್ಷೆಯಲ್ಲಿ ಮಾಡಿದ್ದಾರೆ. ಪುಸ್ತಕದಲ್ಲಿ ಅಣ್ಣನ, ಆತ್ಮೀಯ ವ್ಯಕ್ತಿಯ ಸ್ಥಾನದಲ್ಲಿ ನಿಂತು ಓದುಗರಿಗೆ ಸ್ಪೂರ್ತಿ ತುಂಬಲು ಪ್ರಯತ್ನಿಸುತ್ತಾರೆ.  ಪರಶಿವಪ್ಪ ಅವರು ಬರೆದ ಮಹತ್ವಾಕಾಂಕ್ಷೆ ಪುಸ್ತಕ ಇಲ್ಲಿದೆ. ಪುಸ್ತಕ ಪರಿಚಯ: ಸಾಫ್ಟ್ ಮನ ಮತ್ತು ಮಹತ್ವಾಕಾಂಕ್ಷೆ

ಪುಸ್ತಕ ಪರಿಚಯ: ಸಾಫ್ಟ್ ಮನ ಮತ್ತು ಮಹತ್ವಾಕಾಂಕ್ಷೆ

ಕಾದಂಬರಿಯಾದರೆ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಒಂದೇ ಉಸಿರಿಗೆ ಓದಬಹುದು. ಪುಟ್ಟಪುಟ್ಟ ಲೇಖನಗಳಿಗರುವ ಪುಸ್ತಕಗಳನ್ನು ಒಂದೇ ಸಾರಿ ಓದಿ ಮುಗಿಸಬೇಕಿಲ್ಲ. ಒಂದೊಂದು ಲೇಖನ ಓದಿ ವಿರಮಿಸಿ ಮತ್ತೆ ಮುಂದಿನ ಲೇಖನ ಓದಬಹುದು. ನಾನು ಇತ್ತೀಚೆಗೆ ಒಂದೇ ಬಾರಿ ಎರಡು ಕನ್ನಡ ಪುಸ್ತಕಗಳನ್ನು ಖರೀದಿಸಿದೆ. ಸುಧಾಮೂರ್ತಿಯವರ “ಸಾಫ್ಟ್ ಮನ” ಮತ್ತು ಪರಶಿವಪ್ಪ ಅವರ “ಮಹತ್ವಾಕಾಂಕ್ಷೆ”. ಶೀರ್ಷಿಕೆ ಬೇರೆಬೇರೆಯಾಗಿ ಕಂಡರೂ ಎರಡೂ ಪುಸ್ತಕಗಳೂ ಬದುಕಿನ ಕತೆಗಳನ್ನೇ ಹೇಳಿ ಸ್ಫೂರ್ತಿ ತುಂಬುವಂತದ್ದು. ನಾನು ಈ ಎರಡು ಪುಸ್ತಕಗಳನ್ನೂ ಒಟ್ಟಿಗೆ ಓದಿದೆ! ಅಂದರೆ, ಸಾಫ್ಟ್ ಮನದ ಕೆಲವು… Read More »

ಪುಸ್ತಕ ಪರಿಚಯ: ಸೇತುರಾಮ್ ಅವರ “ನಾವಲ್ಲ” ಕಥಾ ಸಂಕಲನ

ಇತ್ತೀಚೆಗೆ ನಾನು ಓದಿ ಮುಗಿಸಿದ ಪುಸ್ತಕ ಎಸ್.ಎನ್. ಸೇತುರಾಮ್ ರಚಿಸಿದ “ನಾವಲ್ಲ” ಎಂಬ ಕಥಾ ಸಂಕಲನ. ದೊಡ್ಡ ಪುಸ್ತಕವನ್ನು ಒಂದೆರಡೇ ದಿನದಲ್ಲಿ ಓದಿ ಮುಗಿಸುವ ನನಗೆ ಈ ಆರು ಕತೆಗಳ ಪುಸ್ತಕವನ್ನು ಓದಿ ಮುಗಿಸಲು ಭರ್ತಿ ಆರು ದಿನ ಬೇಕಾಯಿತು. ತಡವಾಗಿರುವುದಕ್ಕೆ ಕಾರಣ “ಇದರಲ್ಲಿರುವ ಒಂದೊಂದು ಕತೆಯೂ ಮನಸ್ಸಿನ ಮೇಲೆ ಬೀರುವ ಪರಿಣಾಮ, ಚಿಂತನೆಗೆ ಹಚ್ಚುವ ಪರಿ, ಮೂಡಿಸುವ ಭಾವ ಇತ್ಯಾದಿಗಳು”. ನಾನು ಓದಿದ ಅತ್ಯುತ್ತಮ ಕಥಸಂಕಲನವಿದು. ಸೇತುರಾಮ್ ನಾಟಕಗಳು ನನಗಿಷ್ಟ. ಅವರ “ಅತೀತ” ನಾಟಕವನ್ನು ರಂಗಶಂಕರದಲ್ಲಿ ನೋಡಿದ್ದೆ. ಕೆಲವೇ ಪಾತ್ರಗಳಾದರೂ… Read More »

ಕನ್ನಡ ಪುಸ್ತಕ ಖರೀದಿಸಲು ಇರುವ 10+ ಆನ್ ಲೈನ್ ಪುಸ್ತಕದಂಗಡಿಗಳು

ಪುಸ್ತಕದಂಗಡಿಗೆ ಹೋಗಲು ಸಮಯದ ಲಭ್ಯತೆ ಇಲ್ಲದವರಿಗೆ ಆನ್ ಲೈನ್ ಪುಸ್ತಕದಂಗಡಿಗಳು ಆಸರೆಯಾಗಬಲ್ಲವು. ಇಂಗ್ಲಿಷ್ ಭಾಷೆಯ ಪುಸ್ತಕದಂಗಡಿಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಇ-ಪುಸ್ತಕ ತಾಣಗಳು ಕಡಿಮೆ ಇಲ್ಲವೆಂದು ಹೇಳುವಂತೆ ಇಲ್ಲ. ಯಾಕೆಂದರೆ, ಕನ್ನಡ ಪುಸ್ತಕ ಖರೀದಿಗೆ ಸಾಕಷ್ಟು ವೆಬ್ ಸೈಟ್ ಗಳು ಇವೆ. ಸಂತೋಷದ ಸಂಗತಿಯೆಂದರೆ ಇಂತಹ ವೆಬ್ ಸೈಟ್ ಗಳಲ್ಲಿ ಬಹುತೇಕ ಆನ್ ಲೈನ್ ಪುಸ್ತಕದಂಗಡಿಗಳನ್ನು ಪುಸ್ತಕ ಪ್ರಕಾಶಕರು, ಪುಸ್ತಕ ಮಳಿಗೆಯ ಮಾಲೀಕರೇ ಮಾಡಿದ್ದಾರೆ. ಪುಸ್ತಕ ಓದಬೇಕಿತ್ತು. ಪುಸ್ತಕದ ಅಂಗಡಿಗೆ ಹೋಗಲು ಸಮಯದ ಕೊರತೆ ಇದೆ ಎನ್ನುವವರ ಮಾಹಿತಿಗಾಗಿ ಇಲ್ಲೊಂದಿಷ್ಟು ಇ-ಪುಸ್ತಕದಂಗಡಿಗಳ ಪಟ್ಟಿ ನೀಡಲಾಗಿದೆ.… Read More »