Category Archives: Career

ನೀವು ಕಾರು ಪ್ರಿಯರೇ? ನಿಮಗೆ ಸೂಕ್ತವಾದ ಹತ್ತು ಉದ್ಯೋಗಗಳು ಇಲ್ಲಿವೆ!

By | 07/07/2021

ಬಹುತೇಕರಿಗೆ ವಾಹನವೆಂದರೆ ಅಚ್ಚುಮೆಚ್ಚು. ಜಗತ್ತಿನಲ್ಲಿಂದು ವಾಹನ ಬಳಸುವವರು ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಾಣುತ್ತಿರುವುದರಿಂದ ಈ ಕ್ಷೇತ್ರದಲ್ಲಿಉದ್ಯೋಗಾವಕಾಶವೂ ಹೆಚ್ಚಾಗುತ್ತಿದೆ. ವಾಹನ ಇಷ್ಟಪಡುವವರಿಗೆ ವಿವಿಧ ಬಗೆಯ ಉದ್ಯೋಗಗಳೂ ಇಂದು ಲಭ್ಯ ಇವೆ. ಅಂದರೆ, ಸೈಕಲ್‌ ಪಂಕ್ಚರ್‌ ಹಾಕುವವರಿಂದ ಲಂಬೋರ್ಗಿನಿ, ಫೆರಾರಿ ಕಾರು ಮೆಕ್ಯಾನಿಕ್‌ವರೆಗೆ ವಿವಿಧ ಬಗೆಯ ಉದ್ಯೋಗಗಳು ಕಾಣಸಿಗುತ್ತವೆ.  ಆಟೋಮೋಟಿವ್‌ ವಿಭಾಗದ ಕೆಲವು ಉದ್ಯೋಗಗಳ ಮಾಹಿತಿ ಇಲ್ಲಿದೆ. ಆಟೋಮೊಬೈಲ್‌ ವಿನ್ಯಾಸಕರು: ನಿಮ್ಮ ಕನಸಿನ ಕಾರನ್ನು ವಿವಿಧ ರಚನೆಗಳ ಮೂಲಕ ವಿನ್ಯಾಸ ಮಾಡುವ ಕೆಲಸ ಮಾಡಬಹುದು. ಈ ಉದ್ಯೋಗದಲ್ಲಿನಿಜವಾದ ಕಾರಿನ ಜೊತೆಗೆ ಕೆಲಸಕ್ಕಿಂತ ಕಾಗದ, ಡ್ರಾಯಿಂಗ್‌… Read More »

ಕರಿಯರ್ ಪ್ಲ್ಯಾನಿಂಗ್ ಹೇಗೆ? ಯಶಸ್ಸು ಪಡೆಯಲು ಬಯಸುವವರಿಗೆ ಅಮೂಲ್ಯ ಟಿಪ್ಸ್

By | 06/07/2021

ಕರಿಯರ್‌ ಯೋಜನೆ ಮಾಡುವುದು ಕೊಂಚ ಕಷ್ಟದ ಕೆಲಸ. ಹೀಗಾಗಿ, ಬಹುತೇಕರು ಇದನ್ನು ಮಾಡಲು ಹೋಗುವುದಿಲ್ಲ. ಇದರಿಂದಾಗಿ ಹೆಚ್ಚಿನವರ ಕರಿಯರ್‌ ಬದುಕು ಗಾಳಿಬಂದ ಕಡೆ ಸಾಗುವ ಗಾಳಿಪಟದಂತಾಗುತ್ತದೆ. ಕರಿಯರ್‌ ಪ್ಲ್ಯಾನಿಂಗ್‌ ಎಂದರೇನು? ವ್ಯಕ್ತಿಯೊಬ್ಬರ ವೃತ್ತಿಪರ ಗುರಿಗಳನ್ನು ನಿಗದಿಪಡಿಸುವ ಮತ್ತು ಅವುಗಳನ್ನು ಸಾಧಿಸಲು ದಾರಿ ಹುಡುಕುವ ನಿರಂತರ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ಸ್ವಯಂ ಮೌಲ್ಯಮಾಪನ, ಮಾರುಕಟ್ಟೆ ಅಧ್ಯಯನ ಮತ್ತು ನಿರಂತರ ಕಲಿಕೆ ಅತ್ಯಂತ ಅವಶ್ಯ. ನಿಮ್ಮ ಕರಿಯರ್‌ ಅನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲು ಇದು ಅಗತ್ಯವಾಗಿದೆ. ಪ್ರಯೋಜನಗಳು ಈ ಮುಂದಿನ ವಿಧಾನಗಳನ್ನು ಅನುಸರಿಸಿ. *ನಿಮ್ಮ ಗುರಿಗಳನ್ನು… Read More »

ಕ್ಯಾಡ್‌ನೆಸ್ಟ್‌ನಿಂದ ಹತ್ತು ದಿನಗಳ ಉದ್ಯೋಗಾಧರಿತ ಕೋರ್ಸ್‌ಗಳ ಉಚಿತ ಕಲಿಕೆಗೆ ಅವಕಾಶ, ಈಗಲೇ ಜಾಯಿನ್ ಆಗಿ

By | 22/06/2021

ಕೋವಿಡ್‌-೧೯ ಅನ್‌ಲಾಕ್‌ ಬಳಿಕ ಇದೇ ಮೊದಲ ಬಾರಿಗೆ ಹತ್ತು ದಿನಗಳ ವಿಶೇಷ ಉಚಿತ ಆನ್‌ಲೈನ್‌ ಕೋರ್ಸ್‌ಗಳನ್ನು ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆ ಕ್ಯಾಡ್‌ನೆಸ್ಟ್‌ ಆರಂಭಿಸಿದೆ. ಈ ಅವಧಿಯಲ್ಲಿ ಕ್ಯಾಡ್‌ನೆಸ್ಟ್‌ ವಿದ್ಯಾರ್ಥಿಗಳು ಮತ್ತು ಇತರರು ಉದ್ಯೋಗ ಕ್ಷೇತ್ರದಲ್ಲಿ ಬೇಡಿಕೆಯಲ್ಲಿರುವ ವಿವಿಧ ಕೋರ್ಸ್‌ಗಳನ್ನು ಕಲಿಯಬಹುದು. ಯಾವೆಲ್ಲ ಕೋರ್ಸ್‌ಗಳು ಉಚಿತ ಅಡ್ವಾನ್ಸಡ್‌ ಎಕ್ಸೆಲ್‌, ಕಂಪ್ಯೂಟರ್‌ ಬೇಸಿಕ್ಸ್‌, ಟ್ಯಾಲಿ ಪ್ರೈಮ್‌, ಆಟೋಕ್ಯಾಡ್‌ ಮೆಕ್ಯಾನಿಕಲ್‌ ಈ ನಾಲ್ಕು ಕೋರ್ಸ್‌ಗಳನ್ನು ಕರ್ನಾಟಕದ ವಿದ್ಯಾರ್ಥಿಗಳು ಕಲಿಯಬಹುದಾಗಿದೆ. ಇವುಗಳಲ್ಲಿ ಅಡ್ವಾನ್ಸಡ್‌ ಎಕ್ಸೆಲ್‌, ಕಂಪ್ಯೂಟರ್‌ ಬೇಸಿಕ್ಸ್‌ ಮತ್ತು ಟ್ಯಾಲಿ ಪ್ರೈಮ್‌ ಕೋರ್ಸ್‌ಗಳು ಪ್ರತಿದಿನ… Read More »

Preped Eduteck App ಪ್ರಿಪೇರ್ ಎಜುಟೆಕ್ App ಬಿಡುಗಡೆ: ಕನ್ನಡ ವಿದ್ಯಾರ್ಥಿಗಳಿಗೆ ಹೊಸ ಆಶಾಕಿರಣ

By | 14/06/2021

ಕರ್ನಾಟಕದ ಅದರಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪಠ್ಯಪುಸ್ತಕ, ಇಂಗ್ಲಿಷ್ ಟೀಚಿಂಗ್ ಒಮ್ಮೊಮ್ಮೆ ಕಷ್ಟವೆಂದೆನಿಸುತ್ತದೆ. ಅಯ್ಯೋ ಕ್ಲಾಸ್ನಲ್ಲಿ ಏನು ಹೇಳ್ತರಪ್ಪ. ಒಂದು ಪದನೂ ಅರ್ಥ ಆಗೋದಿಲ್ಲ ಎನ್ನುವುದು ಬಹುತೇಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಗೋಳು. ಅದರಲ್ಲಿಯೂ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಯ ಇತರೆ ಕೋರ್ಸ್‌ಗಳನ್ನು ಕಲಿಯಲು ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಸೇರಿದ ವಿದ್ಯಾರ್ಥಿಗಳಿಗೆ ಟೀಚಿಂಗ್ ಅರ್ಥವಾಗದೆ ಕಷ್ಟಪಡುವುದುಂಟು. ಈ ಲೆಕ್ಚರರ್ ಕನ್ನಡದಲ್ಲಿ ಒಂದೂ ವರ್ಡ್ ಹೇಳೋದಿಲ್ಲ ಎನ್ನುವುದು ವಿದ್ಯಾರ್ಥಿಗಳ ದೂರು. ಕನ್ನಡ ವಿದ್ಯಾರ್ಥಿಗಳೇ ಭಯಬೇಡ ಆರಂಭಿಕ ಶಿಕ್ಷಣದಲ್ಲಿ ಮೊದಲ ಮತ್ತು ಎರಡನೇಯ… Read More »

ವಾಟ್ಸ್‌ಆ್ಯಪ್‌ ಸ್ಥಾಪಕ ಜಾನ್‌ ಕೋಮ್‌ ಯಶೋಗಾಥೆ, ಯಶಸ್ಸು ಪಡೆಯಬೇಕೆನ್ನುವವರು ತಪ್ಪದೇ ಓದಿ

By | 08/03/2021

ಜಗತ್ತಿನ ಸುಮಾರು 109 ದೇಶಗಳಲ್ಲಿ ಜನಪ್ರಿಯತೆ ಪಡೆದಿರುವ ವಾಟ್ಸ್‌ಆ್ಯಪ್‌ ಬಗ್ಗೆ ಗೊತ್ತಿಲ್ಲದೆ ಇರುವವರು ಯಾರೂ ಇರಲಿಕ್ಕಿಲ್ಲ. ಇದನ್ನು ಬರೋಬ್ಬರಿ 1600 ಕೋಟಿ ಡಾಲರ್‌ ಕೊಟ್ಟು ಫೇಸ್‌ಬುಕ್‌ ಖರೀದಿಸಿತ್ತು. ಇಷ್ಟೊಂದು ದುಬಾರಿ ಮೊತ್ತಕ್ಕೆ ಬಿಕರಿಯಾದ ವಾಟ್ಸ್‌ಆ್ಯಪ್‌ ಅನ್ನು ಆರಂಭಿಸಿದ್ದು ಜಾನ್‌ ಕೋಮ್‌. ಈತನ ಬಾಲ್ಯ, ಬದುಕು, ಸಾಧನೆ ಎಲ್ಲರಿಗೂ ಸೂಧಿರ್ತಿ ನೀಡುವಂತದ್ದು.ಈತನ ಕತೆ ಆರಂಭವಾಗುವುದು ದೂರದ ಉಕ್ರೈನ್‌ನಿಂದ. ಅದು 1992ನೇ ಇಸವಿ. ಜಾನ್‌ ಕೋಮ್‌ ಎಂಬ ಬಾಲಕನಿಗೆ 16 ವರ್ಷ ವಯಸ್ಸು. ಅರ್ಥವ್ಯವಸ್ಥೆ ಕೆಟ್ಟದಾಗಿತ್ತು. ಯಾರ ಕೈಯಲ್ಲಿಯೂ ದುಡ್ಡಿರಲಿಲ್ಲ. ದಟ್ಟ ದರಿದ್ರ ಪರಿಸ್ಥಿತಿ.… Read More »

ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತಯಾರಿ ಹೇಗಿರಬೇಕು? ಪೂರ್ವ ಸಿದ್ಧತೆ ಇಲ್ಲದೆ ಪರೀಕ್ಷೆ ಬರೆಯಬೇಡಿ

By | 08/03/2021

ಪ್ರತಿವರ್ಷ ರೈಲ್ವೆ, ಬ್ಯಾಂಕ್‌, ಕೆಪಿಎಸ್‌ಸಿ, ಯುಪಿಎಸ್‌ಸಿ, ಪಿಡಿಒ, ಪೊಲೀಸ್‌ ನೇಮಕ ಪರೀಕ್ಷೆ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಭ್ಯರ್ಥಿಗಳು ಎದುರಿಸಬೇಕಿರುತ್ತದೆ. ಬಹುತೇಕರು ಸರಕಾರಿ ಉದ್ಯೋಗ ಸಿಕ್ಕರೆ ಸಿಗಲಿ ಎಂಬ ಆಸೆಯಿಂದ ಅರ್ಜಿ ಸಲ್ಲಿಸುತ್ತಾರೆ. ಯಾವುದೇ ಸಮರ್ಪಕ ಸಿದ್ಧತೆ ಇಲ್ಲದೆ ಪರೀಕ್ಷೆ ಬರೆದು ಫಲಿತಾಂಶದಲ್ಲಿ ಹೆಸರು ಇಲ್ಲದೆ ಇರುವುದನ್ನು ‘ಸರಕಾರಿ ಜಾಬ್ಸ್‌ ಸಿಗುವುದು ಸುಲಭವಲ್ಲ’ ಎಂದುಕೊಳ್ಳುತ್ತಾರೆ.ಉದ್ಯೋಗ ಮಾರುಕಟ್ಟೆಯಲ್ಲೀಗ ಸ್ಪರ್ಧೆ ಹೆಚ್ಚಿದೆ. ಯಾವುದೇ ಜಾಬ್‌ ನೋಟಿಫಿಕೇಷನ್‌ ಪ್ರಕಟವಾಗಲಿ. ಇರುವುದು ಕೆಲವೇ ಹುದ್ದೆಗಳಾಗಿದ್ದರೂ ಸಾವಿರ, ಲಕ್ಷ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಸರಕಾರಿ ನೌಕರಿಗಿರುವ ಸೆಳೆತ… Read More »