Category Archives: kannada guide

ವಿದ್ಯಾರ್ಥಿಗಳು ಪ್ರಿಪೇಡ್‌ ಎಜುಕೇಷನ್ App ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

By | 06/07/2021

ಬಾಗಲಕೋಟೆಯ ಜನಪ್ರಿಯ ನೆಪ್ರೊಲಜಿಸ್ಟ್ ಡಾ. ಸಂದೀಪ್ ಹುಯಿಲಗೋಳ ಅವರು ಒಂದಿಷ್ಟು ಸಮಾನಾಸಕ್ತ ತಂಡವನ್ನು ಕಟ್ಟಿಕೊಂಡು ಆರಂಭಿಸಿದ ಪ್ರಿಪೆಡ್‌ ಕಲಿಕಾ ಆಪ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯವಾಗಿ ನರ್ಸಿಂಗ್‌, ಪ್ಯಾರಾಮೆಡಿಕಲ್‌ ಮತ್ತು ಅಲೈಡ್‌ ಹೆಲ್ತ್ ಕೇರ್‌ ವಿದ್ಯಾರ್ಥಿಗಳಿಗೆ, ಇಂಗ್ಲಿಷ್‌ನಲ್ಲಿ ಕಲಿಯುವುದು ಕಷ್ಟ ಎನ್ನುವವರಿಗೆ ಈ ವೈದ್ಯರ ತಂಡವು ಸರಳವಾಗಿ ಆಪ್‌ ಮೂಲಕ ಬೋಧಿಸುತ್ತಿದೆ. ಶೈಕ್ಷಣಿಕ ಹಬ್ ಆದ ಬಾಗಲಕೋಟೆಯ ಡಾ. ಸಂದೀಪ್ ಅವರು ಕನ್ನಡ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಯ ಬೋಧಿಸುವ ವಿಶೇಷ ಸೇವೆ ಪರಿಚಯಿಸಿದ್ದಾರೆ. ಈ ಕುರಿತು ನಮ್ಮ… Read More »

ನಿಮ್ಮ ಬಿಸ್ನೆಸ್ ಅನ್ನು ಹೆಚ್ಚು ಜನರಿಗೆ ತಲುಪಿಸುವುದು ಹೇಗೆ?

By | 06/05/2021

ಪ್ರತಿಯೊಬ್ಬರೂ ಬಿಸ್ನೆಸ್‌ ಮೂಲಕ ಸ್ವಾವಲಂಬಿಯಾಗಲು ಬಯಸುತ್ತಾರೆ. ಸಣ್ಣ ಬಿಸ್ನೆಸ್‌ ಇರಲಿ, ದೊಡ್ಡ ಬಿಸ್ನೆಸ್‌ ಇರಲಿ, ಉದ್ಯಮಿಗಳಿಗೆ ಅವರದ್ದೇ ಆದ ಗೌರವ ಇರುತ್ತದೆ. ಊರಿನಲ್ಲಿ ಪುಟ್ಟ ಗೂಡಂಗಡಿ, ಚಹಾದಂಗಡಿ, ಜೆರಾಕ್ಸ್‌ ಅಂಗಡಿಯಿಂದ ದೊಡ್ಡ ಕಂಪನಿಗಳವರೆಗೆ ವಿವಿಧ ಬಗೆಯ ಬಿಸ್ನೆಸ್‌ ಮಾಡುವವರು ನಮ್ಮ ನಿಮ್ಮ ನಡುವೆ ಇದ್ದಾರೆ. ಎಲ್ಲಾ ಬಿಸ್ನೆಸ್‌ಗಳಿಗೂ ಪ್ರಮುಖ ಸಮಸ್ಯೆ ಮತ್ತು ಸವಾಲು ಎಂದರೆ ಹೆಚ್ಚು ಗ್ರಾಹಕರನ್ನು ತಲುಪುವುದು. ಮೊದಲಾದರೆ ಆನ್‌ಲೈನ್‌ ಜಗತ್ತು ಈಗಿನಂತೆ ಇರಲಿಲ್ಲ. ನಿಜ ಹೇಳಬೇಕೆಂದರೆ ಆನ್‌ಲೈನ್‌ ಕಲ್ಪನೆಯೇ ಇರಲಿಲ್ಲ. ಪತ್ರಿಕೆ, ಟೀವಿ, ರೇಡಿಯೋ ಜಾಹೀರಾತುಗಳೇ ಗ್ರಾಹಕರನ್ನು ತಲುಪಲು… Read More »

ವೆಬ್ ಡಿಸೈನರ್ ಅಥವಾ ಡೆವಲಪರ್ ಮಾತುಗಳನ್ನು ಗಂಭೀರವಾಗಿ ಕೇಳುವ ಅಗತ್ಯವಿದೆಯೇ?

By | 13/12/2020

ಈಗಿನ ಕಾಲದಲ್ಲಿ ಯೂಟ್ಯೂಬ್‌ ಅಥವಾ ಇನ್ಯಾವುದೋ ಮಾಧ್ಯಮದ ಸಹಾಯದಿಂದ ಬೇಸಿಕ್‌ ವೆಬ್‌ಡಿಸೈನಿಂಗ್‌ ತಂತ್ರವನ್ನು ಕಲಿಯಬಹುದು (ಕಲಿಯುವ ಆಸಕ್ತಿಯಿದ್ದರೆ ಮಾತ್ರ). ಇಂತಹ ಸಮಯದಲ್ಲಿ ವೆಬ್‌ಡಿಸೈನರ್‌ ಮೂಲಕ ಸಿದ್ಧಪಡಿಸಿಕೊಂಡ ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರಯೋಗ ಮಾಡಲು ನಿಮಗೆ ಆಸಕ್ತಿ ಮೂಡಬಹುದು. ಆದರೆ, ಕಲಿಯುವ ಉದ್ದೇಶವಿದ್ದರೆ ಪ್ರತ್ಯೇಕ ಹೋಸ್ಟಿಂಗ್‌ ತೆಗೆದುಕೊಂಡು ಕಲಿಯುವುದು ಒಳ್ಳೆಯದು. ಅಥವಾ ಲೋಕಲ್‌ ಹೋಸ್ಟ್‌ ಮೂಲಕ ಪ್ರಯತ್ನಿಸಬಹುದು. ಈ ಲೇಖನದಲ್ಲಿ ಚರ್ಚಿಸಲು ಉದ್ದೇಶಿಸಿರುವ ವಿಷಯ ಇದಲ್ಲ. ಈಗಾಗಲೇ ಹತ್ತು ಹಲವು ವೆಬ್‌ಸೈಟ್‌ಗಳನ್ನು ಕರ್ನಾಟಕ ಬೆಸ್ಟ್‌ ಫ್ರಿಲ್ಯಾನ್ಸಿಂಗ್‌ ಮೂಲಕ ಮಾಡಿರುವುದರಿಂದ ವೈವಿಧ್ಯಮಯ ಜನರ ಪರಿಚಯವಾಗಿದೆ. ಹೊಸ… Read More »

Startup Guide: ಹೊಸ ಉದ್ಯಮ ಆರಂಭಿಸಲು ಬಯಸುವವರಿಗೆ ಮಾರ್ಗದರ್ಶಿ

By | 05/10/2020

ಕರ್ನಾಟಕ ಬೆಸ್ಟ್‌ ಮೂಲಕ ಹತ್ತು ಹಲವು ಸ್ಟಾರ್ಟ್‌ಅಪ್‌ಗಳು ತಮ್ಮ ವೆಬ್‌ಸೈಟ್‌ಗಳನ್ನು ವಿನ್ಯಾಸ ಮಾಡಿಕೊಂಡಿವೆ. ಹೀಗಾಗಿ, ಅವರ ಏಳುಬೀಳುಗಳನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ದೊರಕಿದೆ. ಇದೇ ರೀತಿ ಒಂದಿಷ್ಟು ಸ್ಟಾರ್ಟ್‌ಅಪ್‌ಗಳ ಯಶಸ್ಸು ಕಂಡು ಬೆರಗಾಗಿದ್ದೇನೆ. ಇನ್ನು ಕೆಲವು ಸ್ಟಾರ್ಟಪ್‌ಗಳು ಆರಂಭದಲ್ಲಿ ಧಾಮ್‌ಧೂಮ್‌ ಎಂದರೂ ಕೊನೆಗೂ ಠುಸ್‌ ಎಂದದ್ದನ್ನು ನೋಡಿದ್ದೇನೆ. ಇಂತಹ ಅನುಭವಗಳ ನೆಲೆಯಲ್ಲಿ ಇಲ್ಲೊಂದಿಷ್ಟು ಸ್ಟಾರ್ಟಪ್‌ ಟಿಪ್ಸ್‌ ನೀಡಿದ್ದೇನೆ. ಇದುಸ್ಟಾರ್ಟಪ್ ಕಾಲ. ಈಗಾಗಲೇ ಅಸ್ತಿತ್ವಕ್ಕೆ ಬಂದ ಬಹುತೇಕ ಸ್ಟಾರ್ಟ್‍ಅಪ್‍ಗಳನ್ನು ಗಮನಿಸಿ. ಅವುಗಳಲ್ಲಿ ಎಲ್ಲವೂ ಸಕ್ಸಸ್ ಆಗಿಲ್ಲ. ಒಂದಿಷ್ಟು ಜನರು ಆರಂಭಶೂರತನ ಪ್ರದರ್ಶಿಸಿ,… Read More »

ನಿಮ್ಮ ವೆಬ್ಸೈಟ್ಗೆ ಗೂಗಲ್ ಆಡ್ಸೆನ್ಸ್ ಅನುಮತಿ ದೊರಕಿಲ್ಲವೇ? ಈ ಟಿಪ್ಸ್ ಗಮನಿಸಿ

By | 24/08/2020

ಕಳೆದ ಕೆಲವು ತಿಂಗಳಿನಿಂದ ಕನ್ನಡ ವೆಬ್‌ಸೈಟ್‌ಗಳಿಗೂ ಗೂಗಲ್‌ ಆಡ್‌ಸೆನ್ಸ್‌ ಬೆಂಬಲ ನೀಡುತ್ತಿದೆ. ನೂರಾರು ಬ್ಲಾಗ್‌ ಅಥವಾ ವೆಬ್‌ಸೈಟ್‌ ಮಾಲಿಕರಿಗೆ ಇದು ಖುಷಿ ತಂದಿರುವ ವಿಷಯ. ಆದರೆ, ಕೆಲವು ವೆಬ್‌ಸೈಟ್‌ಗಳಿಗೆ, ಬ್ಲಾಗ್‌ಗಳಿಗೆ ಇನ್ನೂ ಗೂಗಲ್‌ ಆಡ್‌ಸೆನ್ಸ್‌ ಬೆಂಬಲ ದೊರಕಿಲ್ಲ. ತಮ್ಮ ಆದಾಯದ ಮೂಲವೇ ಬತ್ತಿಹೋಗುವ ಆತಂಕದಲ್ಲಿ ವೆಬ್‌ಸೈಟ್‌, ಬ್ಲಾಗ್‌ ಮಾಲಿಕರಿದ್ದಾರೆ. ಕರ್ನಾಟಕ ಬೆಸ್ಟ್‌ ವೆಬ್‌ ಡಿಸೈನ್‌ ಮೂಲಕ ನಿರ್ಮಿಸಿದ ೩೦ಕ್ಕೂ ಹೆಚ್ಚು ನ್ಯೂಸ್‌ ವೆಬ್‌ಸೈಟ್‌ಗಳಿಗೆ ಆಡ್‌ಸೆನ್ಸ್‌ ಬೆಂಬಲ ದೊರಕಿದೆ. ಆದರೆ, ಅರ್ಜಿ ಸಲ್ಲಿಸಿರುವುದರಲ್ಲಿ ಎರಡು ವೆಬ್‌ಸೈಟ್‌ಗಳಿಗೆ ಇನ್ನೂ ಆಡ್‌ಸೆನ್ಸ್‌ ಬೆಂಬಲ ದೊರಕಿಲ್ಲ. ಅದಕ್ಕೆ… Read More »

ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಮುಂದೇನು? ಇಲ್ಲಿವೆ 80+ ಕರಿಯರ್ ಆಯ್ಕೆಗಳು

By | 16/07/2020

ಏನು ಓದಿದರೆ, ಯಾವ ಉದ್ಯೋಗ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಹುದು? ಈಗಿನ ಬೇಡಿಕೆಯ ಉದ್ಯೋಗಗಳು ಯಾವುವು? ಇತ್ಯಾದಿ ಶಿಕ್ಷಣ-ಕರಿಯರ್ ಮಾಹಿತಿಯನ್ನು ಯುವಜನತೆಗೆ ಒದಗಿಸುವ ಸಲುವಾಗಿ ಈ ಡಿಜಿಟಲ್‌ ಕೈಪಿಡಿಯನ್ನು ರಚಿಸಲಾಗಿದೆ. ವಿವಿಧ ಹುದ್ದೆಗಳು, ಶೈಕ್ಷಣಿಕ ಆಯ್ಕೆಗಳ ಕುರಿತು ಅಧ್ಯಯನ ನಡೆಸಿ ಮಾಹಿತಿ ನೀಡಲಾಗಿದೆ. ನಿಮ್ಮ ಕರಿಯರ್ ರೂಪಿಸಿಕೊಳ್ಳಲು ವೃತಿಪರ ಸಹಾಯದ ಅಗತ್ಯಬಿದ್ದರೆ ಇಂತಹ ಸೇವೆಯನ್ನು ಒದಗಿಸುವ ಯೋಗ್ಯ, ತಜ್ಞ ವ್ಯಕ್ತಿಗಳಿಂದ ಪಡೆಯಬೇಕು. ಭವಿಷ್ಯ ಬದಲಾಯಿಸಬಹುದು! ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮುಗಿಸಿದ ಪರಿಚಯದ ವಿದ್ಯಾರ್ಥಿಗಳು ಪ್ರತಿವರ್ಷ ಕರೆ ಮಾಡಿ “ಯಾವ ಕೋರ್ಸ್ ಮಾಡಬೇಕು”, “ಯಾವುದನ್ನು… Read More »