Category Archives: Featured

ಕನಕಮಜಲು: ಕರಾವಳಿಯಲ್ಲೊಂದು ಕಲಾಗ್ರಾಮ

ಕರಾವಳಿ ಸೇರಿದಂತೆ ಕರ್ನಾಟಕದಲ್ಲಿ ಗ್ರಾಮಕ್ಕೊಂದು ಯುವಕಮಂಡಲ-ಯುವತಿ ಮಂಡಲಗಳು ಸಾಮಾನ್ಯ. ಪ್ರತಿ ಯುವ ಸಂಘಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅಂತಹ ವ್ಯತ್ಯಾಸಗಳು ಇರುವುದಿಲ್ಲ. ಆಗಾಗ ಗ್ರಾಮೀಣ ನಾಟಕ, ಯಕ್ಷಗಾನ, ಹಾಡು ನೃತ್ಯ, ಒಂದಿಷ್ಟು ಗ್ರಾಮೀಣ ಕ್ರೀಡೆಗಳು, ಶ್ರಮದಾನ…. ಹೀಗೆ ಒಂದೇ ತೆರನಾದ ಚಟುವಟಿಕೆಗಳು. ನನ್ನ ಪಕ್ಕದೂರು ಕನಕಮಜಲು ಹಾಗಲ್ಲ. ನನ್ನ ಕಾಲೇಜು ದಿನಗಳಲ್ಲಿಯೇ ವಿನೂತನ ಕಾರ್ಯಕ್ರಮಗಳಿಂದ ಗಮನಸೆಳೆಯುತ್ತಿತ್ತು.ಊರು ಬಿಟ್ಟು ಬಂದು ಹತ್ತು ವರ್ಷ ಕಳೆದರೂ ಅಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳ ಸುದ್ದಿ ಸುದ್ದಿಪತ್ರಿಕೆಗಳಮೂಲಕವೇ ನನಗೆ ತಲುಪುತ್ತಿದೆ. ಇತ್ತೀಚೆಗೆ ಅಲ್ಲಿ ಕಲಾ ಕಾರ್ಯಕ್ರಮವೊಂದು ನಡೆದಾಗ ಆ… Read More »

ಸ್ಫೂರ್ತಿದಾಯಕ ಕತೆ: ಕೆಂಟುಕಿ ಚಿಕನ್ ಸ್ಥಾಪಕನ ಯಶೋಗಾಥೆ

ಅವರಿಗೆ 67 ವರ್ಷ ವಯಸ್ಸಾಗಿತ್ತು. ಪುಟ್ಟ ಮನೆಯಿತ್ತು. ಹಳೆಯ ಕಾರಿತ್ತು. ಒಟ್ಟಾರೆ ನಿವೃತ್ತಿ ಜೀವನ ಮಾಡುವ ಸಮಯವಾಗಿತ್ತು. ಆದರೆ, ಅವರಲ್ಲಿ ಹೆಚ್ಚಿನ ಹಣವಿರಲಿಲ್ಲ. 99 ಡಾಲರ್ ಸಾಮಾಜಿಕ ಭದ್ರತಾ ಚೆಕ್ ಇತ್ತು. ಇಷ್ಟು ಹಣದಲ್ಲಿ ನಿವೃತ್ತಿ ಜೀವನ ತುಂಬಾ ಕಷ್ಟವಾಗುತ್ತಿತ್ತು. ಹೆಚ್ಚೆಂದರೆ ಕೆಲವೇ ತಿಂಗಳಲ್ಲಿ ಈ ಹಣ ಮುಗಿದು ಹೋಗುತ್ತಿತ್ತು. ಆದರೆ, ಆ ವ್ಯಕ್ತಿ ಜೀವನವನ್ನು ಹಾಗೆಯೇ ಬಿಡಲು ಇಚ್ಚಿಸಲಿಲ್ಲ. ಏನೋ ಬದಲಾವಣೆ ಮಾಡುವ ಗುರಿ ಹಾಕಿಕೊಂಡರು. ಏನಾದರೂ ಮಾರಾಟ ಮಾಡಿ ಜೀವನ ನಡೆಸೋಣ ಎಂದುಕೊಂಡರು. ಮಾರಾಟ ಮಾಡಲು ಅವರಲ್ಲಿ ಅಂತಹದ್ದೇನೂ… Read More »

ಮಹೀಂದ್ರ ಮರಾಝೂ ವಿಮರ್ಶೆ- ಹೇಗಿದೆ ತಿಮಿಂಗಿಲ ವಿನ್ಯಾಸದ ಎಂಪಿವಿ ಕಾರು

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಹೊರತರುವ ವಾಹನಗಳೆಂದರೆ ದೇಶದ ಬಹುತೇಕರಿಗೆ ಅಚ್ಚುಮೆಚ್ಚು. ಸ್ಕಾರ್ಪಿಯೋ ಇತ್ಯಾದಿ ಬಹುಬೇಡಿಕೆಯ ವಾಹನಗಳನ್ನು ನೀಡಿರುವ ಮಹೀಂದ್ರ ಕಂಪನಿಯು ಇತ್ತೀಚೆಗೆ ಪರಿಚಯಿಸಿದ ಎಂಪಿವಿ ಹೆಸರು ಮರಾಝೂ. ಈಗಾಗಲೇ ರಸ್ತೆಯಲ್ಲಿರುವ ಮಾರುತಿ ಸುಜುಕಿ ಎರ್ಟಿಗಾ ಮತ್ತು ಟೊಯೊಟಾ ಇನ್ನೋವಾ ಕ್ರಿಸ್ಟಾಗೆ ಪೈಪೋಟಿ ನೀಡುವ ಕಾರಿದು. mahindra marazzo front lookmahindra marazzo side lookmahindra marazzo interiermahindra marazzo featuresmahindra marazzo seats and inside viewmahindra marazzo shark look ಮಹೀಂದ್ರ ಮರಾಝೂ ಎಂಪಿವಿಯ ಆರಂಭಿಕ ಎಕ್ಸ್ಶೋರೂಂ ದರ… Read More »

ಬೆಸ್ಟ್ ತುಳು ಸಿನಿಮಾ: ಕಾಡುವ “ಪಡ್ಡಾಯಿ” ಕಡಲು

ಗಿರಿರಾಜ್ ನಿರ್ದೇಶನದ “ಸುಗಂಧದ ಸೀಮೆಯಾಚೆ” ನೋಡಿದಾಗ ಅದರಲ್ಲಿ ಸುಗಂಧ(ಸೆಂಟ್)ವನ್ನು ಬಳಸಿಕೊಂಡ ರೀತಿ ತುಂಬಾ ಇಷ್ಟವಾಗಿತ್ತು. ಅಲ್ಲಿ ಅತ್ತರಿನ ಪರಿಮಳದ ಸುತ್ತ ನೆತ್ತರಿನ ಕಲೆಯಿತ್ತು. ಆದರೆ, ಬೆಂಗಳೂರಿನ ಇತ್ತೀಚೆಗೆ (ಬೆಂಗಳೂರಿನಲ್ಲಿರುವುದರಿಂದ ನೋಡುವುದು ತಡವಾಯಿತು) ಸುಚಿತ್ರಾ ಸಿನಿಮಾದಲ್ಲಿ ನೋಡಿದ ತುಳು ಸಿನಿಮಾ “ಪಡ್ಡಾಯಿ”ಯಲ್ಲಿಯೂ ಮೀನಿನ ಬೆವರಿನ ಜೊತೆಗೆ ಅತ್ತರಿನ ಘಾಟು ಇತ್ತು. ಮಾಧವ ಮೀನು ಹಿಡಿಯುವಲ್ಲಿ ಪರಿಣಿತ. ಆತನಿಗೆ ಕಡಲ ಗುಳಿಗ ಎಂಬ ಹೆಸರೂ ಇದೆ. ಆತ ನೀರಿನಲ್ಲಿ ಮೀನುಗಳ ಜಾಡು ಹಿಡಿದು ಬಲೆ ಬೀಸುವಲ್ಲಿ ಸಾಕಷ್ಟು ಪರಿಣಿತ ಎಂಬ ಕಾರಣಕ್ಕೆ ಈ ಹೆಸರು.… Read More »

ಜುಪೀಟರ್ ಸ್ಕೂಟರ್ ಟೆಸ್ಟ್ ರೈಡ್ ಮತ್ತು ಟಿವಿಎಸ್ ಫ್ಯಾಕ್ಟರಿ ಟೂರ್ ಅನುಭವ

ವಾಹನ ವೆಬ್ ತಾಣ ಡ್ರೈವ್ ಸ್ಪಾರ್ಕ್.ಕಾಂನಲ್ಲಿ “ಕನ್ನಡ ಸಂಪಾದಕ”ನಾಗಿ ಉದ್ಯೋಗ ಮಾಡುತ್ತಿದ್ದ ಸಂದರ್ಭದಲ್ಲಿ ಸಾಕಷ್ಟು ಹೊಸ ಕಾರು, ಬೈಕ್ ಬಿಡುಗಡೆ ಸಮಾರಂಭಗಳಿಗೆ ಹೋಗುವ ಅವಕಾಶ ದೊರಕುತ್ತಿತ್ತು. ನಂತರ ವಿಜಯನೆಕ್ಸ್ಟ್ ನಿಯತಕಾಲಿಕೆಯಲ್ಲಿ ವಾಹನ ಪುಟದ ಉಸ್ತುವಾರಿ ದೊರಕಿದಾಗಲೂ ಇಂತಹ ಅವಕಾಶ ಸಾಕಷ್ಟು ದೊರಕುತ್ತಿತ್ತು. ಆದರೂ, ನನಗೊಂದು ಆಸೆಯಿತ್ತು. ವಾಹನಗಳನ್ನು ಫ್ಯಾಕ್ಟರಿಯೊಳಗೆ ಹೇಗೆ ನಿರ್ಮಿಸುತ್ತಾರೆ? ಆಟೋಮೇಷನ್ ಇತ್ಯಾದಿ ಇತ್ತೀಚಿನ ತಂತ್ರಜ್ಞಾನಗಳೇನು? ಉದ್ಯೋಗಿಗಳು ವಾಹನ ನಿರ್ಮಾಣದ ಕೆಲಸವನ್ನು ಹೇಗೆ ಮಾಡುತ್ತಾರೆ? ಇದನ್ನೆಲ್ಲ ಕಣ್ಣಾರೆ ನೋಡಬೇಕು. ಇಂತಹ ಆಸೆಯನ್ನು ಈಡೇರಿಸಿಕೊಳ್ಳುವ ಅವಕಾಶವನ್ನು ಇಂಡಿಬ್ಲಾಗರ್ ಒದಗಿಸಿತು. ಕನ್ನಡ, ತಮಿಳು,… Read More »