Category Archives: Featured

ವ್ಯಕ್ತಿತ್ವ ವಿಕಸನ: ಲೀಡರ್ ಆಗುವುದು ಹೇಗೆ?

ನಾಯಕತ್ವದ ಕುರಿತು “Are Leaders Born or Made?’ ಎಂಬ ಪ್ರಶ್ನೆ ತುಂಬಾ ಫೇಮಸ್. ಕೆಲವರ ಪ್ರಕಾರ ನಾಯಕತ್ವವೆನ್ನುವುದು ಹುಟ್ಟುಗುಣ, ನಾಯಕರನ್ನು ನಿಸರ್ಗವೇ ಸೃಷ್ಟಿಸುತ್ತದೆ. ಇನ್ನು ಕೆಲವರ ಪ್ರಕಾರ, ನಾಯಕರು ಹುಟ್ಟುವುದಲ್ಲ, ಅವರು ನಾಯಕರಾಗಿ ಬೆಳೆದವರು’. ರಾಜರುಗಳ ಕಾಲಕ್ಕೆ “Leaders Born ‘ ಎನ್ನುವುದು ಸರಿಯಾದ ಮಾತು ಆಗಿದ್ದೀರಬಹುದು. ಆದರೆ, ಈ ಕಾರ್ಪೋರೆಟ್ ಜಗತ್ತಿನಲ್ಲಿ “Leaders Made’ ಎನ್ನುವುದೇ ಪರಮಸತ್ಯ. `ಹುಟ್ಟುತ್ತಲೇ ಯಾರು ನಾಯಕರಲ್ಲ. ಅವರು ಹುಟ್ಟಿದ ನಂತರ ನಾಯಕರಾದವರು. ಅವರು ಸರಳವಾಗಿ ನಾಯಕರಾದವರಲ್ಲ. ತಮ್ಮ ಕಠಿಣ ಪರಿಶ್ರಮದಿಂದ ಆ ಸ್ಥಾನಕ್ಕೆ… Read More »

400 ರೂ.ಗೆ ಸ್ವಂತ ವೆಬ್ಸೈಟ್ ನಿರ್ಮಿಸುವುದು ಹೇಗೆ?

ವೆಬ್ ಸೈಟ್ ನಿರ್ಮಾಣಕ್ಕೆ ಹಲವು ಸಾವಿರ ರೂಪಾಯಿ ವಿನಿಯೋಗಿಸಬೇಕು. ಆರಂಭದಲ್ಲಿ 3 ಸಾವಿರ ರೂ.ಗೆ ವೆಬ್ಸೈಟ್ ರೂಪಿಸಿಕೊಡುತ್ತೇವೆ ಎನ್ನುವ ವೆಬ್ ಡಿಸೈನರ್ ಗಳು ನಮ್ಮ ಕನಿಷ್ಠ ಬೇಡಿಕೆ ಈಡೇರಿಸಲೂ ಕೆಲವು ಸಾವಿರ ರೂ. ಹೆಚ್ಚಿಸುತ್ತ ಹೋಗುತ್ತಾರೆ. ಒಂದು ಸಾಧಾರಣ ವೆಬ್ ಸೈಟ್ ರೂಪುಗೊಳ್ಳಲು ಕನಿಷ್ಠ 10 ಸಾವಿರ ರೂ. ಪಡೆದೇ ಪಡೆಯುತ್ತಾರೆ. ವರ್ಷಗಳು ಕಳೆದಂತೆ ಆ ಹಣ ಹೆಚ್ಚಾಗುತ್ತ ಹೋಗುತ್ತದೆ. ಯಾವುದೋ ಕನಸಿಟ್ಟುಕೊಂಡು ವೆಬ್ಸೈಟ್ ಆರಂಭಿಸಿದವರಿಗೆ ದಿನಕಳೆದಂತೆ ಇದು ಹೊರೆಯಾಗಿ ಪರಿಣಮಿಸುತ್ತದೆ. ಇಂತಹ ಸಮಯದಲ್ಲಿ 400 ರೂಪಾಯಿಗೆ ವೆಬ್ಸೈಟ್ ನಿರ್ಮಿಸಬಹುದು ಎಂದು… Read More »

ಬೆಸ್ಟ್ ಸಿನಿಮಾ: ಹಚಿಕೊ ಎಂಬ ಕುಚಿಕು ಗೆಳೆಯ

ಜಪಾನಿನ ಶಿಬುಯಾ ರೈಲ್ವೆ ನಿಲ್ದಾಣದ ಮುಂದೆ ಒಂದು ನಾಯಿಯ ಕಂಚಿನ ಮೂರ್ತಿ ಇದೆ. ಆ ನಾಯಿ ಸತ್ತ ದಿನದಂದು ಪ್ರತಿವರ್ಷ ಅಲ್ಲೊಂದು ಚಿರಸ್ಮರಣೆ ಕಾರ್ಯಕ್ರಮವೂ ನಡೆಯುತ್ತದೆ. ಜಪಾನಿವರ ಪಾಲಿಗೆ ಆ ನಾಯಿಯೆಂದರೆ ನಂಬಿಕೆ ಮತ್ತು ನಿಷ್ಠೆಯ ಪ್ರತೀಕ. ಪ್ರವೀಣ್ ಚಂದ್ರ ಪುತ್ತೂರು ಆ ನಾಯಿಯ ಹೆಸರು ಹಾಚಿ. ಆ ನಾಯಿಯ ಸತ್ಯಕತೆ ಆಧರಿತ ಚಿತ್ರದ ಹೆಸರು ಹಚಿಕೊ (hachiko monogatari). ಇದು ಪ್ರೊಫೆಸರ್ ಮತ್ತು ಆತನ ಪ್ರೀತಿಯ ನಾಯಿ ಹಾಚಿ ನಡುವೆ ನಡೆಯುವ ಭಾವನಾತ್ಮಕ ತಾಕಲಾಟದ ಕತೆ. ಪ್ರಾಣಿಗೆ ಮನುಷ್ಯರ ಜೊತೆ… Read More »

ಚಿಕ್ಕಮಗಳೂರು ಪ್ರವಾಸ-ಕಾಫಿ ನಾಡಿನ ಘಮಲು

ಒಂದು ಕಡೆ ಕಾಫಿ ಕಣಿವೆ, ಅವುಗಳ ನಡುವೆ ಕಾಣುವ ಓಕ್ ಟ್ರೀಗಳು, ಬೆಟ್ಟಗಳ ನಡುವೆ ಸೂರ್ಯನ ನೆರಳು-ಬೆಳಕಿನಾಟಗಳನ್ನು ನೋಡುತ್ತಿದ್ದರೆ ಪ್ರಕೃತಿ ಮಾತೆಯ ಮಡಿಲಲ್ಲಿ ನಾವೆಷ್ಟು ಚಿಕ್ಕವರು ಎನಿಸುತ್ತದೆ. ತಣ್ಣಗೆ ಬೀಸುವ ಗಾಳಿಗೆ ಮುಖವೊಡ್ಡಿ ನಿಂತರೆ ಹಾಯೆನಿಸುತ್ತದೆ.