Category Archives: personality development

ವ್ಯಕ್ತಿತ್ವ ವಿಕಸನ: ಬಾಯಿ ಸುಮ್ಮನಿದ್ದರೂ, ದೇಹ ಸುಮ್ಮನಿರುವುದಿಲ್ಲ!

ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಗಾದೆ ಮಾತನ್ನು ಚಾಚುತಪ್ಪದೆ ಪಾಲಿಸುವವರು ನೀವಾಗಿರಬಹುದು. ಮಾತನಾಡುವಾಗ ಎಚ್ಚರಿಕೆ ವಹಿಸಲು ಕಲಿತಿದ್ದೀರಿ. ಅತ್ಯುತ್ತಮ ಸಂವಹನ ಕೌಶಲಗಳನ್ನು ಅನುಸರಿಸುತ್ತಿದ್ದೀರಿ. ಆದರೆ, ಇದನ್ನು ಕೇವಲ ಮೌಖಿಕ ಸಂವಹನಕ್ಕೆ ಸೀಮಿತಗೊಳಿಸಬೇಡಿ. ನೀವು ಆಡದೆ ಇದ್ದರೂ, ನಿಮ್ಮ ಆಂಗಿಕ ಭಾಷೆಯು ಮಾತನಾಡಬಹುದು. ಹೀಗಾಗಿ ಅಮೌಖಿಕ ಸಂವಹನದತ್ತಲೂ ಗಮನಹರಿಸಿರಿ. ವಿದ್ಯಾರ್ಥಿಗಳು ಕಾಲೇಜಿನಲ್ಲಿ, ಅಭ್ಯರ್ಥಿಗಳು ಉದ್ಯೋಗ ಸಂದರ್ಶನದಲ್ಲಿ, ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಮೌಖಿಕ ಸಂವಹನದಷ್ಟೇ ಅಮೌಖಿಕ ಸಂವಹನದ ಕುರಿತೂ ಗಮನ ನೀಡಬೇಕು. ಕಣ್ಣಲ್ಲಿ ಕಣ್ಣನ್ನಿಟ್ಟು ನೋಡಬಾರದೇ.. ಒಂದು ಅಧ್ಯಯನದ ಪ್ರಕಾರ… Read More »

ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಅತ್ಯುತ್ತಮ 6 ಮಾರ್ಗಗಳು

ಮರೆವು ವರವೂ ಹೌದು. ಶಾಪವೂ ಹೌದು. ತುಂಬಾ ದುಃಖದ ಸನ್ನಿವೇಶಗಳು, ಬದುಕಿನಲ್ಲಿ ನಡೆದ ಘಟನೆಗಳು ಬೇಕು ಎಂದರೂ ಮರೆಯುವುದಿಲ್ಲ. ಸದಾ ಬೆಂಬಿಡದೆ ಕಾಡುತ್ತಿರುತ್ತದೆ. ಆದರೆ, ಪರೀಕ್ಷೆ ಇತ್ಯಾದಿ ಸಂದರ್ಭದಲ್ಲಿ ಕೆಲವೊಂದು ವಿಷಯಗಳು ಎಷ್ಟು ಜ್ಞಾಪಿಸಿಕೊಂಡರೂ ನೆನಪಿಗೆ ಬರುವುದಿಲ್ಲ. ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಕರ್ನಾಟಕ ಬೆಸ್ಟ್ ಒಂದಿಷ್ಟು ಸಲಹೆಗಳನ್ನು ನೀಡುತ್ತಿದೆ. ಇದನ್ನು ಅನುಸರಿಸುವ ಮೂಲಕ ಅತ್ಯುತ್ತಮ ಮೆಮೊರಿ ಪವರ್ ಪಡೆಯಬಹುದು. ಈಗಿನ ಜೀವನಶೈಲಿಯೂ ನೆನಪಿನ ಶಕ್ತಿ ಕುಂಠಿತವಾಗಲು ಕಾರಣ ಎನ್ನುತ್ತಾರೆ ತಜ್ಞ ವ್ಯದ್ಯರುಗಳು. ಪರೀಕ್ಷೆಗೆ ಸಿದ್ಧತೆ ನಡೆಸುವವರು ನೋಟ್ಸ್ ಬರೆದಿಟ್ಟುಕೊಳ್ಳುವ ಮೂಲಕ,… Read More »

ವ್ಯಕ್ತಿತ್ವ ವಿಕಸನ: ಲೀಡರ್ ಆಗುವುದು ಹೇಗೆ?

ನಾಯಕತ್ವದ ಕುರಿತು “Are Leaders Born or Made?’ ಎಂಬ ಪ್ರಶ್ನೆ ತುಂಬಾ ಫೇಮಸ್. ಕೆಲವರ ಪ್ರಕಾರ ನಾಯಕತ್ವವೆನ್ನುವುದು ಹುಟ್ಟುಗುಣ, ನಾಯಕರನ್ನು ನಿಸರ್ಗವೇ ಸೃಷ್ಟಿಸುತ್ತದೆ. ಇನ್ನು ಕೆಲವರ ಪ್ರಕಾರ, ನಾಯಕರು ಹುಟ್ಟುವುದಲ್ಲ, ಅವರು ನಾಯಕರಾಗಿ ಬೆಳೆದವರು’. ರಾಜರುಗಳ ಕಾಲಕ್ಕೆ “Leaders Born ‘ ಎನ್ನುವುದು ಸರಿಯಾದ ಮಾತು ಆಗಿದ್ದೀರಬಹುದು. ಆದರೆ, ಈ ಕಾರ್ಪೋರೆಟ್ ಜಗತ್ತಿನಲ್ಲಿ “Leaders Made’ ಎನ್ನುವುದೇ ಪರಮಸತ್ಯ. `ಹುಟ್ಟುತ್ತಲೇ ಯಾರು ನಾಯಕರಲ್ಲ. ಅವರು ಹುಟ್ಟಿದ ನಂತರ ನಾಯಕರಾದವರು. ಅವರು ಸರಳವಾಗಿ ನಾಯಕರಾದವರಲ್ಲ. ತಮ್ಮ ಕಠಿಣ ಪರಿಶ್ರಮದಿಂದ ಆ ಸ್ಥಾನಕ್ಕೆ… Read More »

ವ್ಯಕ್ತಿತ್ವ ವಿಕಸನ: ಕೆಲಸದ ಕೊನೆಯ ಹತ್ತು ನಿಮಿಷ ಏನು ಮಾಡುವಿರಿ?

ಯಶಸ್ವಿ ಉದ್ಯೋಗಿಗಳು ತಮ್ಮ ಕೆಲಸದ ಅವಧಿಯ ಕೊನೆಯ ಹತ್ತು ನಿಮಿಷ ಹೇಗಿರುತ್ತಾರೆ? ಏನು ಮಾಡುತ್ತಾರೆ? ಈ ಕುರಿತು ಒಂದಿಷ್ಟು ಮಾಹಿತಿಗಳು ಇಂಟರ್‍ನೆಟ್‍ನಲ್ಲಿ ದೊರಕಿದವು. ಜೊತೆಗೆ ನಾನು ಭೇಟಿಯಾದ ಒಂದಿಷ್ಟು ವ್ಯಕ್ತಿಗಳಲ್ಲಿಯೂ ಇದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪಡೆದುಕೊಂಡೆ. ಫಲಿತಾಂಶವಾಗಿ ದೊರಕಿದ ಮಾಹಿತಿ ಇಲ್ಲಿ ಮುಂದೆ ನೀಡಲಾಗಿದೆ. ಈ ಲೇಖನ ವಿಜಯ ಕರ್ನಾಟಕ ಮಿನಿಯಲ್ಲಿ ಪ್ರಕಟಗೊಂಡಿದೆ. * ಪ್ರವೀಣ್ ಚಂದ್ರ ಪುತ್ತೂರು ಕರಿಯರ್‍ ನಲ್ಲಿ ಯಶಸ್ವಿಯಾದವರ ಪ್ರತಿ ನಡೆನುಡಿಯಲ್ಲಿಯೂ ಕಲಿಯಲು ಸಾಕಷ್ಟಿರುತ್ತದೆ. ಇಂತಹ ಉದ್ಯೋಗಿಗಳು ಕೆಲಸ ಹೇಗೆ ಆರಂಭಿಸುತ್ತಾರೆ? ಹೇಗೆ ಮುಗಿಸುತ್ತಾರೆ? ಟೀ ಬ್ರೇಕ್/ಊಟದ… Read More »