Category Archives: Scooter

ಜುಪೀಟರ್ ಸ್ಕೂಟರ್ ಟೆಸ್ಟ್ ರೈಡ್ ಮತ್ತು ಟಿವಿಎಸ್ ಫ್ಯಾಕ್ಟರಿ ಟೂರ್ ಅನುಭವ

ವಾಹನ ವೆಬ್ ತಾಣ ಡ್ರೈವ್ ಸ್ಪಾರ್ಕ್.ಕಾಂನಲ್ಲಿ “ಕನ್ನಡ ಸಂಪಾದಕ”ನಾಗಿ ಉದ್ಯೋಗ ಮಾಡುತ್ತಿದ್ದ ಸಂದರ್ಭದಲ್ಲಿ ಸಾಕಷ್ಟು ಹೊಸ ಕಾರು, ಬೈಕ್ ಬಿಡುಗಡೆ ಸಮಾರಂಭಗಳಿಗೆ ಹೋಗುವ ಅವಕಾಶ ದೊರಕುತ್ತಿತ್ತು. ನಂತರ ವಿಜಯನೆಕ್ಸ್ಟ್ ನಿಯತಕಾಲಿಕೆಯಲ್ಲಿ ವಾಹನ ಪುಟದ ಉಸ್ತುವಾರಿ ದೊರಕಿದಾಗಲೂ ಇಂತಹ ಅವಕಾಶ ಸಾಕಷ್ಟು ದೊರಕುತ್ತಿತ್ತು. ಆದರೂ, ನನಗೊಂದು ಆಸೆಯಿತ್ತು. ವಾಹನಗಳನ್ನು ಫ್ಯಾಕ್ಟರಿಯೊಳಗೆ ಹೇಗೆ ನಿರ್ಮಿಸುತ್ತಾರೆ? ಆಟೋಮೇಷನ್ ಇತ್ಯಾದಿ ಇತ್ತೀಚಿನ ತಂತ್ರಜ್ಞಾನಗಳೇನು? ಉದ್ಯೋಗಿಗಳು ವಾಹನ ನಿರ್ಮಾಣದ ಕೆಲಸವನ್ನು ಹೇಗೆ ಮಾಡುತ್ತಾರೆ? ಇದನ್ನೆಲ್ಲ ಕಣ್ಣಾರೆ ನೋಡಬೇಕು. ಇಂತಹ ಆಸೆಯನ್ನು ಈಡೇರಿಸಿಕೊಳ್ಳುವ ಅವಕಾಶವನ್ನು ಇಂಡಿಬ್ಲಾಗರ್ ಒದಗಿಸಿತು. ಕನ್ನಡ, ತಮಿಳು,… Read More »

ಯಾರು ಆ್ಯಕ್ಟಿವ್‌ ಮೂರರೊಳಗೆ?

ಹೆಚ್ಚಿನವರಿಗೆ ಹೋಂಡಾ ಕಂಪನಿಯ ಸ್ಕೂಟರ್‌ಗಳೆಂದರೆ ಅಚ್ಚುಮೆಚ್ಚು. ಆದರೆ ಅವರಿಗೆ ಕಂಪನಿಯ ಆ್ಯಕ್ಟಿವಾ, ಡಿಯೊ ಮತ್ತು ಏವಿಯೇಟರ್‌ ಸ್ಕೂಟರ್‌ಗಳಲ್ಲಿ ಯಾವುದು ಬೆಟರ್‌ ಎಂಬ ಸಂದಿಗ್ಧತೆ. ಈ ಮೂರರಮೇಲೊಂದು ಸ್ಮೂತ್‌ ರೈಡ್‌ ಇಲ್ಲಿದೆ ನೀವು ನಗರಗಳಲ್ಲಿ ಸಂಚಾರಿಸುವಾಗ ಒಮ್ಮೆ ರಸ್ತೆಯನ್ನು ಗಮನವಿಟ್ಟು ನೋಡಿ. ಹೋಂಡಾ ಕಂಪನಿಯ ಆ್ಯಕ್ಟಿವಾ, ಡಿಯೊ ಮತ್ತು ಏವಿಯೇಟರ್‌ ಸ್ಕೂಟರ್‌ಗಳು ಕಣ್ಣಿಗೆ ಬೀಳುತ್ತವೆ. ಸರಿಯಾಗಿ ನೋಡಿದಾಗ ಆ್ಯಕ್ಟಿವಾ ಸ್ಕೂಟರ್‌ರೇಟ್‌ಗಳದ್ದೇ ಕಾರುಬಾರು. ಒಂದಿಷ್ಟು ಡಿಯೊ ಮತ್ತು ಏವಿಯೇಟರ್‌ ಸಹ ಸಂಚರಿಸುತ್ತಿರುತ್ತವೆ. ಒಂದೇ ಕಂಪನಿಯ ಮೂರು ಉತ್ಪನ್ನಗಳಲ್ಲಿ ಅಂತಹ ಮಹತ್ವದ ಏನು ವ್ಯತ್ಯಾಸವಿದೆ ಎಂಬ… Read More »