Category Archives: startup

ಕನ್ನಡ ಟೀಶರ್ಟ್ ಆನ್ ಲೈನ್ ಅಂಗಡಿ ಶುಭಾರಂಭ, ವಿದೇಶ್.ಕಾಂ ವಿಶೇಷತೆಗಳೇನು ಗೊತ್ತೆ?

ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕನ್ನಡಿಗರಿಗೊಂದು ಶುಭ ಸುದ್ದಿಯಿದೆ. wedesh.com  ಸ್ಟಾರ್ಟಪ್ ಲೋಕಾರ್ಪಣೆಗೊಂಡಿದೆ. ಕನ್ನಡದ ಸುಂದರ ವಿನ್ಯಾಸಗಳೊಂದಿಗೆ ಟೀಶರ್ಟ್ ಧರಿಸಲು ಬಯಸುವವರಿಗೆ ಸುಂದರ ಕೊಡುಗೆ ಇದಾಗಿದೆ. ಕರ್ನಾಟಕಬೆಸ್ಟ್.ಕಾಂ ಈ ಸ್ಟಾರ್ಟಪ್ ಗೆ ಬ್ಲಾಗ್ ಪಾಟ್ನರ್ ಆಗಿದೆ. ಹೀಗಾಗಿ ವಿದೇಶ್.ಕಾಂನ ಬ್ಲಾಗ್ ವಿಭಾಗದಲ್ಲಿ ಕರ್ನಾಟಕಬೆಸ್ಟ್ ನ ಲೇಖನಗಳನ್ನೂ ನೀವು ಓದಬಹುದಾಗಿದೆ.ವಿದೇಶ್.ಕಾಂ ಎಂದರೆ ಕನ್ನಡ ಟೀಶರ್ಟ್ ಗಳ ಗ್ಲೋಬಲ್ ತಾಣ. ಜಗತ್ತಿನ ಯಾವುದೇ ಮೂಲೆಯಲ್ಲಿರುವವರಿಗೂ ಕನ್ನಡ ನಾಡುನುಡಿ, ಸಂಸ್ಕೃತಿ, ವೈವಿಧ್ಯತೆಗಳನ್ನು ಸಾರುವ ಟೀಶರ್ಟ್ ಗಳನ್ನು ತಲುಪಿಸುವ ಮಹಾತ್ವಕಾಂಕ್ಷೆ ಈ ಕನ್ನಡ ಆನ್ ಲೈನ್ ಅಂಗಡಿಯದ್ದು.… Read More »