Category Archives: Uncategorized

ಮಹೀಂದ್ರ ಮರಾಝೂ ವಿಮರ್ಶೆ- ಹೇಗಿದೆ ತಿಮಿಂಗಿಲ ವಿನ್ಯಾಸದ ಎಂಪಿವಿ ಕಾರು

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಹೊರತರುವ ವಾಹನಗಳೆಂದರೆ ದೇಶದ ಬಹುತೇಕರಿಗೆ ಅಚ್ಚುಮೆಚ್ಚು. ಸ್ಕಾರ್ಪಿಯೋ ಇತ್ಯಾದಿ ಬಹುಬೇಡಿಕೆಯ ವಾಹನಗಳನ್ನು ನೀಡಿರುವ ಮಹೀಂದ್ರ ಕಂಪನಿಯು ಇತ್ತೀಚೆಗೆ ಪರಿಚಯಿಸಿದ ಎಂಪಿವಿ ಹೆಸರು ಮರಾಝೂ. ಈಗಾಗಲೇ ರಸ್ತೆಯಲ್ಲಿರುವ ಮಾರುತಿ ಸುಜುಕಿ ಎರ್ಟಿಗಾ ಮತ್ತು ಟೊಯೊಟಾ ಇನ್ನೋವಾ ಕ್ರಿಸ್ಟಾಗೆ ಪೈಪೋಟಿ ನೀಡುವ ಕಾರಿದು. mahindra marazzo front lookmahindra marazzo side lookmahindra marazzo interiermahindra marazzo featuresmahindra marazzo seats and inside viewmahindra marazzo shark look ಮಹೀಂದ್ರ ಮರಾಝೂ ಎಂಪಿವಿಯ ಆರಂಭಿಕ ಎಕ್ಸ್ಶೋರೂಂ ದರ… Read More »

ಹೆಸರುಬೇಳೆ ಪಾಯಸ ಮಾಡುವುದು ಹೇಗೆ?

ಪಾಯಸ ಪ್ರಿಯರಿಗೆ ಕರ್ನಾಟಕದಲ್ಲಿ ಹಲವು ಬೆಸ್ಟ್‍ ಪಾಯಸ ರೆಸಿಪಿಗಳಿವೆ. ಶಾವಿಗೆ ಪಾಯಸ, ಅಕ್ಕಿ ಪಾಯಸ, ಕ್ಯಾರೆಟ್ ಪಾಯಸ, ಕಡಲೆಬೇಳೆ ಪಾಯಸ, ಹೆಸರುಬೇಳೆ ಪಾಯಸ ಹೀಗೆ ಹಲವು ಬಗೆಯ ಪಾಯಸ ಮಾಡಬಹುದು. ಇಂದು ಕರ್ನಾಟಕ ಬೆಸ್ಟ್ ಪರಿಚಯಿಸುತ್ತಿರುವುದು ಸವಿಯಾದ, ಸಿಹಿಯಾದ ಮತ್ತು ವಾಹ್ ಎನಿಸುವ ಹೆಸರುಬೇಳೆ ಪಾಯಸ. ಹೆಸರುಬೇಳೆ ಪಾಯಸ ಮಾಡಲು ಏನೇನು ಬೇಕು? ಹೆಸರೇ ಹೇಳುವಂತೆ ಹೆಸರಬೇಳೆ ಪಾಯಸ ಮಾಡಲು ಹೆಸರಬೇಳೆಯಂತೂ ಬೇಕೇ ಬೇಕು. ಇಲ್ಲಿ ಹೆಚ್ಚು ಜನರಿಗೆ ಸಾಕಾಗುವಷ್ಟು ಪಾಯಸ ಮಾಡಲು ಐಡಿಯಾ ನೀಡಲಾಗಿದೆ. ನಿಮಗೆ ಕಡಿಮೆ ಪಾಯಸ ಸಾಕೆಂದರೆ… Read More »

ರಕ್ಷಾ ಬಂಧನದ ಸಡಗರ-ರಾಖಿ ಹಬ್ಬದ ಕುರಿತು ನಿಮಗೆಷ್ಟು ಗೊತ್ತು?

ಮೊದಲಿಗೆ ಕರ್ನಾಟಕ ಬೆಸ್ಟ್ ಓದುಗರಿಗೆ ಶ್ರಾವಣ ಮಾಸದ ಪ್ರಮುಖ ಹಬ್ಬವಾದ ರಕ್ಷಾ ಬಂಧನದ ಶುಭಾಶಯ. ಆಗಸ್ಟ್ 26 ಭಾರತದ್ಯಾಂತ ರಕ್ಷಾ ಬಂಧನದ ಸಂಭ್ರಮ. ಇದೊಂದು ವಿಶೇಷ ಹಬ್ಬ. ಇದು ಸಹೋದರ-ಸಹೋದರಿಯರ ನಡುವೆ ಮಾತ್ರ ರಾಖಿ ಕಟ್ಟುವ ಹಬ್ಬವಲ್ಲ. ತನು, ಮನ, ಧನ, ಧರ್ಮ, ಸತಿತ್ವ, ಆಪತ್ತಿನಿಂದ, ಸಂಕಟಗಳಿಂದ ರಕ್ಷಣೆ ಸೇರಿದಂತೆ ಹತ್ತು ಹಲವು ರಕ್ಷಣೆಯ ಅಭಯ ನೀಡುವ ಹಬ್ಬವಾಗಿದೆ. happy raksha bandhan to all Karnataka Best Readers 🙂  ರಕ್ಷಾ ಬಂಧನವನ್ನು ಯಾವಾಗ ಆಚರಿಸಲಾಗುತ್ತದೆ? ಶ್ರಾವಣ ಮಾಸದ ಹುಣ್ಣಿಮೆಯಂದು ನೂಲು… Read More »

ಕರ್ನಾಟಕದ ವಿವಿಧ ಸರ್ಕಾರಿ ವೆಬ್ ಸೈಟ್ ಗಳ ವಿವರ ಮತ್ತು ವಿಳಾಸ

ವಿವಿಧ ಸರ್ಕಾರಿ ಕೆಲಸ ಕಾರ್ಯಗಳು, ಮಾಹಿತಿಗಳು, ಅಧಿಸೂಚನೆಗಳನ್ನು ಪಡೆಯಲು ಸರಕಾರದ ವಿವಿಧ ಇಲಾಖೆಗಳ ವೆಬ್ ಸೈಟ್ ಗಳಿಗೆ ಭೇಟಿ ನೀಡಬೇಕು. ಆದರೆ, ಎಲ್ಲಾ ವೆಬ್ ಸೈಟ್ ವಿವರಗಳ ವಿಳಾಸ ಎಲ್ಲರಿಗೂ ತಿಳಿದಿರುವುದಿಲ್ಲ. ಗೂಗಲ್ ನಲ್ಲಿ ಹುಡುಕಿದರೆ ಎಲ್ಲವೂ ದೊರಕುತ್ತದೆ ಎಂದು ಹೇಳುವಂತೆ ಇಲ್ಲ. ಹೀಗಾಗಿ ಕರ್ನಾಟಕದ ವಿವಿಧ ಇಲಾಖೆಗಳ ವೆಬ್ ಸೈಟ್ ವಿಳಾಸಗಳನ್ನು ಕರ್ನಾಟಕ ಬೆಸ್ಟ್ ಇಲ್ಲಿ ನೀಡಿದೆ.

ರೆಸಿಪಿ: ಮಂಗಳೂರು ಬನ್ಸ್ ತಯಾರಿಸುವುದು ಹೇಗೆ?

ರಶ್ಮಿ ಪ್ರವೀಣ್ ಕರಾವಳಿಗರಿಗೆ ಬನ್ಸ್ ಅಂದ್ರೆ ಇಷ್ಟ. ಕರಾವಳಿ ಬಿಟ್ಟು ಪರ ಊರಿಗೆ ಹೋದವರಿಗೆ ಬೆಂಗಳೂರಿನಂತಹ ನಗರಗಳಲ್ಲಿ ಬನ್ಸ್ ಕಂಡರಂತೂ ಬಾಯಲ್ಲಿ ನೀರೂರುವುದು ಸಹಜ. ಆದರೆ, ಬೆಂಗಳೂರಿನಂತಹ ನಗರಗಳಲ್ಲಿ ಮಾಡುವ ಬನ್ಸ್ ಗೂ ಮಂಗಳೂರಿನಲ್ಲಿ ಮಾಡುವ ಬನ್ಸ್ ಗೂ ರುಚಿಯಲ್ಲಿ ಅಜಗಜಾಂತರ ವ್ಯತ್ಯಾಸ ಇರುತ್ತದೆ.  ಮಂಗಳೂರು ಬನ್ಸ್ ಮಾಡುವುದು ಬಲು ಸುಲಭ. ನೀವೂ ಟ್ರೈ ಮಾಡಬಹುದು. ಬನ್ಸ್ ಮಾಡುವ ವಿಧಾನಬೇಕಾಗುವ ಸಾಮಾಗ್ರಿಗಳುಮೈದಾ ಹಿಟ್ಟು 4 ಕಪ್  ಬಾಳೆಹಣ್ಣು 2 ಅಥವಾ 3 (ಚೆನ್ನಾಗಿ ಹಣ್ಣಾಗಿರಲಿ)  ಸಕ್ಕರೆ ಅರ್ಧ ಕಪ್ (ಸಿಹಿ ಹೆಚ್ಚು ಬೇಕಿದ್ದರೆ… Read More »

ವರ್ಡ್ ಪ್ರೆಸ್: ಸ್ವಂತ ವೆಬ್ ಸೈಟ್ ನಿರ್ಮಾಣಕ್ಕೆ ಮಾರ್ಗದರ್ಶಿ

ನನ್ನಲ್ಲೊಂದು ಸ್ವಂತ ವೆಬ್ ಸೈಟ್ ಇರಬೇಕಿತ್ತು ಹೀಗೊಂದು ಕನಸು ನನಗಿತ್ತು. ಆದರೆ, ವೆಬ್ ಸೈಟ್ ನಿರ್ಮಿಸುವವರಿಗೆ ಹತ್ತು ಸಾವಿರವಾದರೂ ಕೊಡುವ ಆಸಕ್ತಿ ನನ್ನಲ್ಲಿರಲಿಲ್ಲ. ಆ ವಿಷಯದಲ್ಲಿ ನನ್ನಲೊಬ್ಬ ಕಂಜೂಸ್ ಇದ್ದ.

ಮರಳಿ ಗೂಡಿಗೆ

ಅವನ ಹೆಸರು ಮೈಕೆ ಕಾರೊಲ್‌. ಬ್ರಿಟನ್‌ನಾತ. 8 ವರ್ಷಗಳ ಹಿಂದೆ ಲಾಟರಿಯಲ್ಲಿ ಆತನಿಗೆ 97 ದಶಲಕ್ಷ ಪೌಂಡ್‌ ಲಾಟರಿ ಹೊಡೆಯಿತು. ಈಗ ಆತ ದೊಡ್ಡ ಉದ್ಯಮಿಯಾಗಿರಬಹುದು ಅಥವಾ ಆರಾಮದಾಯಕ ಜೀವನ ನಡೆಸುತ್ತಿರಬಹುದು ಅಂತ ಯೋಚಿಸುತ್ತಿದ್ದೀರಾ?. ಇಲ್ಲ ಸ್ವಾಮಿ, ಲಾಟರಿ ಹೊಡೆದಾಗ ರಾಜಿನಾಮೆ ನೀಡಿದ್ದ ವಾರಕ್ಕೆ 200 ಪೌಂಡ್‌ ಪಗಾರ ಪಡೆಯುತ್ತಿದ್ದ ಹಳೆಯ ಕೆಲಸಕ್ಕೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದಾನಂತೆ! ಅರೇ ಅಷ್ಟು ದುಡ್ಡು ಏನು ಮಾಡಿದ ಅಂತಿರಾ? 26 ವರ್ಷದ ಕಾರೊಲ್‌ ಲಾಟರಿ ದುಡ್ಡನ್ನೇಲ್ಲ ಡ್ರಗ್ಸ್‌, ವ್ಯೆಶೈಯರಿಗೆ, ಪಾರ್ಟಿಗಳಿಗೆ, ಮದ್ಯ, ಜೂಜಾಟ ಮತ್ತು… Read More »

ಸುಮ್ಮನೆ ಸಾಲುಗಳು

************* ಕಡಲಾಳದಲ್ಲಿ ಒಡಲಾಳದ ಭೋರ್ಗರೆತ ಭೂಕಂಪ ಭರತ ಇಳಿತ ಅನವರತ *********** ಹೆಚ್ಹಿನ ಹೂವುಗಳು ಮುಂಜಾನೆಯೇ ಅರಳುತ್ತವೆಸಂಜೆಯದಾಗ ನರಳುತ್ತವೆ ಸಂಜೆ ಹೂವು ಮಾತ್ರ ಸಂಜೆ ಅರಳುತ್ತದೆಕತ್ತಲಿನತ್ತ ಹೊರಳುತ್ತದೆ ****************************

naguva huvige

ನಗುವ ಹೂವಿಗೆ…. ದಿನಕ್ಕೊಂದಿಷ್ಟು ಮುಗುಳು ನಗುದಿನಕರನ ನೋಡಿ..ಬಿರಿದಾಂಗೆ ಬಳ್ಳಿತುಂಬಾ ಮಲ್ಲಿಗೆ ಮೊಗ್ಗುಏನೆನ್ನಲಿ ಹುಡುಗಿ ನಿನ್ನ ನಗುವ ಬೆಡಗುಕಪ್ಪು ಸಮಾಜದ ನಡುವೆಕಣ್ಣಾ ಮುಚ್ಚಾಲೆ ಆಟವೇ…ಯಾರಿಗೂ ಕಾಣದಾಂಗೆ ಸ್ಫುರಿಸುವೆಮುಗುಳ್ನಗೆಯ ಒಲವ ನೋಟ… ನಿನ್ನೀ ನಗುವಲ್ಲಿ ನೂರು ಮಾತುನೂರೊಂದು ಮಧುರ ಕಾವ್ಯ..ಭಾವ ನವಿರೇಳುತಿದೆನಲಿದಾಡುತಿದೆ ನವಿಲಾಗಿ ಮನಸ್ಸು… ಒಲವ ರಂಗವಲ್ಲಿ ಚೆಲುವ ರಾಗದಲ್ಲಿಅನುರಾಗದ ಕಂಪು ಕಣಜನಿನ್ನೀ ಮನ ಮೈಮಾಟದಲ್ಲಿಮಳೆ ಬಿಲ್ಲ ಚೆಲುವು… ನಿತ್ಯ ನಗುವ ಮಲ್ಲಿಗೆಯಾಗುಕನಸ ಮುದ್ದು ಬದುಕ ಹಾಳೆಗೆಸಮಾಜದ ಉರಿಯ ನಾಲಗೆಗೆ ಸಿಗದಾಂಗೆಅಕ್ಷಯ ನಗುವಿರಲಿ ನಾಳೆಗೆ…

ಒಂದೇ ವಾಕ್ಯದ ಎರಡು ಕತೆ

೧.ಅವನು ಅವಳ ತಿರಸ್ಕರಿಸೋ ಹೊತ್ತಿಗೆ ಅವಳಿಗೆ ಹೊಟ್ಟೆನೋವು ಆರಂಭವಾಗಿತ್ತು ೨. ಚೋಮ ಮನೆಯೊಳಗೆ ಯಾಕೆ ಬರೋಲ್ಲ, ಅನ್ನೋ ಮಗನ ಪ್ರಶ್ನೆಗೆ ಅಮ್ಮ “ಮನೆಯೊಳಗೆ ಭೂತವಿದೆ’ ಎಂದಳು

ಇಷ್ಟ

ಅವಳಿಗೆಬೆಡ್ ರೂಂ ಇಷ್ಟಆದರೆ,ಮನೆಯದ್ದಲ್ಲ