Category Archives: Uncategorized

naguva huvige

ನಗುವ ಹೂವಿಗೆ…. ದಿನಕ್ಕೊಂದಿಷ್ಟು ಮುಗುಳು ನಗುದಿನಕರನ ನೋಡಿ..ಬಿರಿದಾಂಗೆ ಬಳ್ಳಿತುಂಬಾ ಮಲ್ಲಿಗೆ ಮೊಗ್ಗುಏನೆನ್ನಲಿ ಹುಡುಗಿ ನಿನ್ನ ನಗುವ ಬೆಡಗುಕಪ್ಪು ಸಮಾಜದ ನಡುವೆಕಣ್ಣಾ ಮುಚ್ಚಾಲೆ ಆಟವೇ…ಯಾರಿಗೂ ಕಾಣದಾಂಗೆ ಸ್ಫುರಿಸುವೆಮುಗುಳ್ನಗೆಯ ಒಲವ ನೋಟ… ನಿನ್ನೀ ನಗುವಲ್ಲಿ ನೂರು ಮಾತುನೂರೊಂದು ಮಧುರ ಕಾವ್ಯ..ಭಾವ ನವಿರೇಳುತಿದೆನಲಿದಾಡುತಿದೆ ನವಿಲಾಗಿ ಮನಸ್ಸು… ಒಲವ ರಂಗವಲ್ಲಿ ಚೆಲುವ ರಾಗದಲ್ಲಿಅನುರಾಗದ ಕಂಪು ಕಣಜನಿನ್ನೀ ಮನ ಮೈಮಾಟದಲ್ಲಿಮಳೆ ಬಿಲ್ಲ ಚೆಲುವು… ನಿತ್ಯ ನಗುವ ಮಲ್ಲಿಗೆಯಾಗುಕನಸ ಮುದ್ದು ಬದುಕ ಹಾಳೆಗೆಸಮಾಜದ ಉರಿಯ ನಾಲಗೆಗೆ ಸಿಗದಾಂಗೆಅಕ್ಷಯ ನಗುವಿರಲಿ ನಾಳೆಗೆ…

ಒಂದೇ ವಾಕ್ಯದ ಎರಡು ಕತೆ

೧.ಅವನು ಅವಳ ತಿರಸ್ಕರಿಸೋ ಹೊತ್ತಿಗೆ ಅವಳಿಗೆ ಹೊಟ್ಟೆನೋವು ಆರಂಭವಾಗಿತ್ತು ೨. ಚೋಮ ಮನೆಯೊಳಗೆ ಯಾಕೆ ಬರೋಲ್ಲ, ಅನ್ನೋ ಮಗನ ಪ್ರಶ್ನೆಗೆ ಅಮ್ಮ “ಮನೆಯೊಳಗೆ ಭೂತವಿದೆ’ ಎಂದಳು

ಇಷ್ಟ

ಅವಳಿಗೆಬೆಡ್ ರೂಂ ಇಷ್ಟಆದರೆ,ಮನೆಯದ್ದಲ್ಲ

ಗೋರಿ ಗೋರಿಗಳ ನಡುವೆ ಲಗೋರಿ

ಊಸರವಲ್ಲಿ ನನ್ನೂರುದಿನ ದಿನವೂ ಬಣ್ಣ ಬದಲಾಯಿಸುತ್ತಿದೆ ಸೂರು ಏರುತ್ತಿದೆ, ನಿಟ್ಟುಸಿರು ಜೊತೆಗೆತೇರು ಎಳೆಯೋರಿಲ್ಲ ಹಳೆ ರಥಗಳು ಜಾತ್ರೆಗೆ..ಉಕ್ಕುತುಕ್ಕು ಹಿಡಿಯೋ ಮುನ್ನ ಕಾಯಿಸಿ ಬಡಿಯೋರಿಲ್ಲಬೇವು, ಬೆಲ್ಲ, ಎಳ್ಳು ಎಲ್ಲ್ಲಾಅರ್ಥವಾಗೊದಿಲ್ವಎಲೆಗರು ಆಸೆಯಿಂದ ಕೆಚ್ಚಲು ನೋಡುತ್ತಿಲ್ಲ ಕಟ್ಟಿರುವೆ ಕಚ್ಚುತಿಲ್ಲ, ನೆಲಗಚ್ಚುತ್ತಿರುವ ಅರಿವಿಲ್ಲಹಿಂಗಾರ, ಮುಂಗಾರ, ದಿನಕ್ಕೆ ಎಷ್ಟು ಕಾಲ ಹೇಳು ಕಾಲ ಹೇಳು ಪ್ರೀತಿಗೂ ಬಂದಾವ ಬರಗಾಲಮೈ ನೆರೆದಿದ್ದ ಹುಡುಗಿ, ಗುಳಿ ಕೆನ್ನೆ ಬೆಡಗಿಬಾಣಂತಿ ಕಳೆದು ಹೋಗಿಹಳು ಸೊರಗಿ ಚಿಲಿಪಿಳಿ ಹಕ್ಕಿ, ಕುಹೂ ಕುಹೂ ಕೊಳಲು.. ಎಲ್ಲಿ ಅಳಿಲು ಹೇಳು ಊಸರವಲ್ಲಿ ನಿನಗೆ ಎಷ್ಟು ಬಣ್ಣkadu kadade… Read More »

ಬರೆದಂತೆ ಸಾಲುಗಳು

ಹುಣ್ಣಿಮೆ ಚಂದಿರ ನನ್ನ ಗೆಳೆಯದೂರದ ಚುಕ್ಕಿ ನನ್ನ ಸಖಿ….ನಾನು ರೆಕ್ಕೆ ಸೋಲದ ಎಲ್ಲೇ ಮೀರಿದ ಹಕ್ಕಿ…ಬೆಳದಿಂಗಳ ಬಯಸಿ ಹಾರುವೆ ಜಗವಿಡಿರೆಕ್ಕೆ ಸೋತರು ನಾನು ಸೋಲಲಾರೆ ಕೊನೆಯವರೆಗೆ ಹಾರೋದು ಮಾತ್ರ ನನ್ನ ಕೆಲಸಚಂದಿರ ಜೊತೆ ಇರೋ ತನಕಚುಕ್ಕಿ ಸಖಿ ಅಗೋ ತನಕ