ಬೆಳಗ್ಗೆ ಟಿಪನ್ ಗೆ ಮಾಡಿ ಬಿಸಿಬಿಸಿ ಮೊಟ್ಟೆ ಶಾವಿಗೆ ಬಾತ್

By | 08/10/2018

ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಟ್ಟೆಯಿಂದ ಹಲವು ಬಗೆಯ ಅಡುಗೆಗಳನ್ನು, ತಿಂಡಿಗಳನ್ನು ಮಾಡಬಹುದು. ಮೊಟ್ಟೆ ಹಾಕಿ ಮಾಡಿದ ಎಲ್ಲಾ ಅಡುಗೆಗಳು ರುಚಿಕರವಾಗಿಯೇ ಇರುತ್ತದೆ. ಅದರಲ್ಲಿ ಮೊಟ್ಟೆ ಶಾವಿಗೆ ಬಾತ್ ಕೂಡ ಒಂದು. ಕೆಲವು ಮಕ್ಕಳು ಮೊಟ್ಟೆ ತಿನ್ನಲು ಇಷ್ಟಪಡುವುದಿಲ್ಲ. ಅಂತಹ ಮಕ್ಕಳಿಗೆ ಈ ಮೊಟ್ಟೆ ಶಾಮಿಗೆ ಬಾತ್ ಮಾಡಿಕೊಡಿ. ಇದು ಬಹು ಬೇಗನೆ, ತುಂಬಾ ಸುಲಭವಾಗಿ ಮಾಡಬಹುದಾದಂತಹ ಒಂದು ತಿಂಡಿ.

ಇದಕ್ಕೆ ಯಾವ ಯಾವ ಸಾಮಾಗ್ರಿಗಳು ಬೇಕಾಗುತ್ತದೆ ಎಂಬುದನ್ನು ನೋಡೋಣ :

ಮೊಟ್ಟೆ 2 (ಅದರಲ್ಲಿ ಹಳದಿ ಭಾಗವನ್ನು ಮಾತ್ರ ತೆಗೆದುಕೊಳ್ಳಿ), ಶಾವಿಗೆ 500ಗ್ರಾಂ, ಸಣ್ಣದಾಗಿ ಹೆಚ್ಚಿದ ಈರುಳ್ಳಿ 2, ದನಿಯಾ 1 ಟೀ ಸ್ಪೂನ್, ಜೀರಿಗೆ 1 ಟೀ ಸ್ಪೂನ್, ಕೆಂಪು ಮೆಣಸಿನ ಕಾಯಿ 2, ದಾಲ್ಚಿನ್ನಿ 1, ಏಲಕ್ಕಿ 2, ಎಣ್ಣೆ ಅಥವಾ ತುಪ್ಪ ಹುರಿಯಲು ಬೇಕಾಗುವಷ್ಟು, ನೀರು 1 ಕಪ್, ಸಾಸಿವೆ 1 ಚಮಚ, ಕಡಲೇಬೇಳೆ 2 ಚಮಚ, ಕರಿಬೇವು ಸ್ವಲ್ಪ, ಬೆಣ್ಣೆ 3 ಟೀ ಸ್ಪೂನ್, ರುಚಿಗೆ ಬೇಕಾಗುವಷ್ಟು ಉಪ್ಪು.

ಮೊಟ್ಟೆ ಶಾವಿಗೆ ಬಾತ್ ಮಾಡುವ ವಿಧಾನ :

ದನಿಯಾ, ಜೀರಿಗೆ, ಕೆಂಪು ಮೆಣಸಿನ ಕಾಯಿ , ಏಲಕ್ಕಿ, ದಾಲ್ಚಿನ್ನಿ ಇವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ ಶಾವಿಗೆಯನ್ನು ಸಣ್ಣ ಉರಿಯಲ್ಲಿ ಸ್ವಲ್ಪ ಕೆಂಪಗಾಗುವ ತನಕ ಹುರಿಯಿರಿ. ಆಮೇಲೆ ಸಾಸಿವೆ, ಕಡಲೇಬೇಳೆ, ಕರಿಬೇವು, ಮೊಟ್ಟೆಯ ಹಳದಿ ಭಾಗ ಹಾಗೂ ರೆಡಿಮಾಡಿಕೊಂಡ ಪುಡಿ ಇವೆಲ್ಲವನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಕಲಸಿ. ನಂತರ ಈ ಮಿಶ್ರಣಕ್ಕೆ ನೀರು ಸೇರಿಸಿ ಗ್ಯಾಸ್ ಮೇಲೆ ಇಟ್ಟು ಕುದಿಸಿ. ನೀರು ಕುದಿದ ತಕ್ಷಣ ಶಾವಿಗೆ ಹಾಕಿ ಮಿಕ್ಸ್ ಮಾಡಿ. ನೀರು ಪೂರ್ತಿ ಆವಿಯಾಗುವವರೆಗೂ ಅದನ್ನು ಬೇಯಿಸಿದರೆ ಸಾಕು. ಈಗ ಬಿಸಿಬಿಸಿಯಾದ ಮೊಟ್ಟೆ ಶಾಮಿಗೆ ಬಾತ್ ರೆಡಿ. ಇದನ್ನು ಟೊಮೆಟೊ ಸಾಸ್ ಜೊತೆ ಸೇರಿಸಿ ತಿಂದರೆ ಇನಷ್ಟು ರುಚಿಕರವಾಗಿರುತ್ತದೆ. ಆದರೆ ಇದನ್ನು ಬಿಸಿ ಇರುವಾಗಲೇ ತಿನ್ನಬೇಕು. ಆರಿದ ಮೇಲೆ ತಿಂದರೆ ಇದು ರುಚಿಯಾಗಿರುವುದಿಲ್ಲ.