ವೆಬ್ ಸೈಟ್ ಗೈಡ್: ಡೊಮೈನ್ ಖರೀದಿ ಹೇಗೆ?

By | June 23, 2018

ಗೂಗಲ್.ಕಾಂ, ಫೇಸ್ಬುಕ್.ಕಾಂ, ಯಾಹೂ… ಹೀಗೆ ಎಷ್ಟೊಂದು ಸುಂದರ ಹೆಸರುಗಳ ವೆಬ್ ಸೈಟ್ ಗಳಿವೆ. ನೀವೂ ಒಂದು ವೆಬ್ ಸೈಟ್ ಡೊಮೈನ್ ಹೆಸರು ಖರೀದಿಸಲು ಬಯಸಿದರೆ ಈ ಗೈಡ್ ನಿಮಗೆ ಸಹಕಾರಿಯಾಗಬಹುದು.

ನೀವು ನಿಮ್ಮ ಹೆಸರಿನ ಡೊಮೈನ್ ಖರೀದಿಸಲು ಬಯಸುವಿರಾ? ನಿಮ್ಮ ವೈಯಕ್ತಿಕ ಸಾಧನೆ, ಬ್ಲಾಗ್ ಮೂಲಕ ವೆಬ್ ಲೋಕಕ್ಕೆ ಕಾಲಿಡಲು ಸ್ವಂತ ಹೆಸರಿನ ಡೊಮೈನ್ ಸೂಕ್ತ. ನನಗೂ ನನ್ನ ಪೂರ್ತಿ ಹೆಸರಿನ ಡೊಮೈನ್ ಹೆಸರು ಬೇಕಿತ್ತು. ಪ್ರವೀಣ್ ಚಂದ್ರ. ಕಾಂ ಎಂಬ ಹೆಸರನ್ನು ಯಾರೋ ಇದೇ ಹೆಸರಿನ ಜನಪ್ರಿಯ ವೈದ್ಯರು ಖರೀದಿಸಿಯಾಗಿತ್ತು. ನನ್ನ ಮುಂದೆ ಬೇರೆ ಆಯ್ಕೆ ಇರಲಿಲ್ಲ. ಕೇವಲ ಪ್ರವೀಣ್.ಕಾಂ ಎಂದರೆ ಅದು ನನ್ನ ಹೆಸರಾಗದು. ಯಾಕೆಂದರೆ, ಭಾರತ ದೇಶದಲ್ಲಿ ಸಾವಿರಾರು ಪ್ರವೀಣರು ಇದ್ದಾರೆ J ಹೀಗಾಗಿ ನಾನು ಆಯ್ಕೆ ಮಾಡಿಕೊಂಡದ್ದು http://www.praveenputtur.com/

ಹೆಸರಿನ ಡೊಮೈನ್ ಅನ್ನು ವೈಯಕ್ತಿಕ ಪರಿಚಯಕ್ಕೆ ಸೀಮಿತಗೊಳಿಸಿದೆ. ವೈಯಕ್ತಿಕ ಕೊಂಚ ಹೆಚ್ಚು ಸಾರ್ವತ್ರಿಕವಾದ ಡೊಮೈನ್ ಹೆಸರು ಖರೀದಿಸಬೇಕೆಂದಿನಿಸಿತು. ಸಾಕಷ್ಟು ಹೆಸರುಗಳನ್ನು ಖರೀದಿಸಿದೆ. ಅವೆಲ್ಲವನ್ನೂ ಬಿಟ್ಟು ಅಂತಿಮವಾಗಿ ನನಗೆ ಇಷ್ಟವಾದದ್ದು http://karnatakabest.com/

ನೀವು ಗಮನಿಸಿರಬಹುದು. ಇವೆರಡು ಡೊಮೈನ್ ಹೆಸರುಗಳು ಸರಳವಾಗಿವೆ. ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವಂತೆ ಇವೆ. ಹೀಗಾಗಿ ಈ ಗೈಡ್ ನ ಮೊದಲ ಪಾಠ

#1. ಸರಳವಾಗಿರುವ, ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವಂತಹ ಡೊಮೈನ್ ಹೆಸರು ಖರೀದಿಸಿ.

ಈಗ ಡೊಮೈನ್ ಮಾರಾಟದಲ್ಲಿ ಸಾಕಷ್ಟು ಪೈಪೋಟಿ ನಡೆಯುತ್ತಿದೆ. 99 ರೂಪಾಯಿ, 130 ರೂಪಾಯಿಗೆ ಡೊಮೈನ್ ಖರೀದಿಸಿ ಎಂಬ ಜಾಹೀರಾತುಗಳು ಬರುತ್ತವೆ. ಹೀಗೆ, ಕಡಿಮೆ ಹಣಕ್ಕೆ ದೊರಕಬೇಕಾದರೆ ನೀವು ಎರಡು ವರ್ಷದ ಪ್ಲಾನಿಂಗ್ ಖರೀದಿಸಬೇಕು. ಇಲ್ಲವಾದರೆ, ಈ ಆಫರ್ ಗಳು ದೊರಕುವುದಿಲ್ಲ. ಕೆಲವೊಂದು ಹೋಸ್ಟಿಂಗ್ ಖರೀದಿ ಸಮಯದಲ್ಲಿ ಡೊಮೈನ್ ಉಚಿತವಾಗಿ ದೊರಕುತ್ತದೆ. ಈ ಉಚಿತ ಹಣವನ್ನು ಮುಂದಿನ ರಿನಿವಲ್ ಸಮಯಗಳಲ್ಲಿ ಕಂಪನಿಗಳು ವಸೂಲು ಮಾಡಬಹುದು(ನಿಮಗೆ ತಿಳಿಯದಂತೆ).

# 2 ಒಳ್ಳೆಯ ಆಫರ್ ಗಳನ್ನು ಹುಡುಕಿ. ಆದರೆ, ರಿನೀವಲ್ ಸಮಯದಲ್ಲಿ ಅವುಗಳ ಬೆಲೆ ಎಷ್ಟು ಇದೆ ಎನ್ನುವುದನ್ನು ತಿಳಿದುಕೊಳ್ಳಿ.

#3 ನೀವು ಆಯ್ಕೆ ಮಾಡುವ ಡೊಮೈನ್ ಹೆಸರು ನಿಮ್ಮ ಭವಿಷ್ಯ ಬದಲಾಯಿಸುವ ಹೆಸರಾಗಿರಬಹುದು. ಹೀಗಾಗಿ, ಹೆಸರು ಆಯ್ಕೆ ಮಾಡುವ ಮೊದಲು ಸಾಕಷ್ಟು ಹೋಂವರ್ಕ್ ಮಾಡಿರಿ.

#4 ನೀವು ಆಯ್ಕೆ ಮಾಡಿಕೊಂಡ ಹೆಸರುಗಳ ಡೊಮೈನ್ ಲಭ್ಯವಿದೆಯೇ ಎಂದು ಹುಡುಕಿ.

#5 ಡೊಮೈನ್ ಹೆಸರು ಅತ್ಯುತ್ತಮವಾಗಿದ್ದರೆ, ಹಲವು ವರ್ಷಗಳ ಖರೀದಿಗೆ ಆಫರ್ ಗಳು ಇದ್ದರೆ ಕನಿಷ್ಠ 2 ವರ್ಷದ ಆಫರ್ ಅನ್ನು ಖರೀದಿಸಿ. ಉದಾಹರಣೆಗೆ ಗೋಡ್ಯಾಡಿಯಲ್ಲಿ ಎರಡು ವರ್ಷದ ಡೊಮೈನ್ ವಾಲಿಡಿಟಿಗೆ 1000 ರೂ.ಗಿಂತ ಕಡಿಮೆ ಇರುತ್ತದೆ. ಬೇರೆ ತಾಣಗಳಲ್ಲಿ ಒಂದು ವರ್ಷಕ್ಕೆ ಪಾವತಿಸುವುದನ್ನು ಇಲ್ಲಿ ಎರಡು ವರ್ಷಕ್ಕೆ ಪಾವತಿಸಿದರೆ ಸಾಕು.

#6 ಈಗ ನಿಮಗೆ ಚಂದದ ಹೆಸರು ಎಂದೆನಿಸುವುದು ಮುಂದಿನ ಹತ್ತಿಪ್ಪತ್ತು ವರ್ಷಗಳ ನಂತರವೂ ಅಂದವಾಗಿ ಉಳಿಯಬಹುದೇ ಯೋಚಿಸಿ. ಭವಿಷ್ಯವನ್ನು ನೋಡಿಕೊಂಡು ಯಾವುದೇ ಕಾರ್ಯಮಾಡಿ.

#7 ತುಂಬಾ ಉದ್ದವಾದ ಡೊಮೈನ್ ಹೆಸರು ಖರೀದಿಸಬೇಡಿ. ಸರಳವಾಗಿ, ಕಡಿಮೆ ಅಕ್ಷರಗಳಿರುವ ಹೆಸರು ಖರೀದಿಸಿ.

#8 .ಕಾಂ, .ನೆಟ್, .ಆರ್ಗ್ ಇತ್ಯಾದಿ ಹಲವು ಬಗೆಯ ಡೊಮೈನ್ ಗಳು ದೊರಕುತ್ತವೆ. ನಿಮಗೆ ಬೇಕಾದ್ದನ್ನು ಖರೀದಿಸಿ. ವಾಣಿಜ್ಯ ಉದ್ದೇಶಕ್ಕೆ ಆಗಿದ್ದರೆ .ಕಾಂ ಅನ್ನೇ ಖರೀದಿಸಿ.

#9 ದೊಡ್ಡದೊಡ್ಡ ಕಂಪನಿಗಳ ಹೆಸರನ್ನು ಹೋಲುವ ಡೊಮೈನ್ ಖರೀದಿಸಿ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸಬೇಡಿ. ಟ್ರೇಡ್ ಮಾರ್ಕ್ ಇರುವ ಡೊಮೈನ್ ಖರೀದಿಸಿದರೆ ಕಠಿಣ ಕಾನೂನು ತೊಂದರೆಗಳಿಗೆ ಈಡಾಗುವ ಅಪಾಯವಿದೆ.

#10 ಡೊಮೈನ್ ಹೆಸರಿನಲ್ಲಿ ಸಂಖ್ಯೆಗಳು ಇರುವುದು ಬೇಡ.

#11 ಸೋಷಿಯಲ್ ಮೀಡಿಯಾ ಸೈಟ್ ಗಳಲ್ಲಿ ಪುಟಗಳನ್ನು ರಚಿಸಿ ನೋಡಿ. ಅಲ್ಲೂ ಅದೇ ಹೆಸರಿನಲ್ಲಿ ಪುಟಗಳನ್ನು ರಚಿಸಲು ಸಾಧ್ಯವಾದರೆ ಮಾತ್ರ ಆ ಹೆಸರಿನ ಡೊಮೈನ್ ಖರೀದಿಸಿ.

#12 ಒಟ್ಟಾರೆ ತುಂಬಾ ಕ್ಲಿಷ್ಟವಾದ ಹೆಸರನ್ನು ಖರೀದಿಸಬೇಡಿ. ಇಂದು ನಿಮ್ಮ ವೆಬ್ ಸೈಟಿಗೆ ಭೇಟಿ ನೀಡಿದವರು ನಾಳೆ ನಿಮ್ಮ ವೆಬ್ ಸೈಟಿನ ಹೆಸರನ್ನು ನೆನಪಿಸಿಕೊಳ್ಳುವಂತೆ ಇರಲಿ.

Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಹಿರಿಯ ಉಪಸಂಪಾದಕ. ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ  ಓದುವುದು, ಬರೆಯುವುದು ಇಷ್ಟದ ಕೆಲಸ. ಹೆಚ್ಚಿನ ವಿವರಕ್ಕೆ ನನ್ನ ಬಗ್ಗೆ ಪುಟವನ್ನು ನೋಡಿ

2 thoughts on “ವೆಬ್ ಸೈಟ್ ಗೈಡ್: ಡೊಮೈನ್ ಖರೀದಿ ಹೇಗೆ?

  1. Pingback: ಬ್ಲಾಗರ್ ಗೆ ವೆಬ್ ಸೈಟ್ ರೂಪ ನೀಡುವುದು ಹೇಗೆ? | KarnatakaBest.Com

  2. Pingback: 400 ರೂ.ಗೆ ಸ್ವಂತ ವೆಬ್ಸೈಟ್ ನಿರ್ಮಿಸುವುದು ಹೇಗೆ? | KarnatakaBest.Com

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.