ವೆಬ್ ಸೈಟ್ ಗೈಡ್: ಡೊಮೈನ್ ಖರೀದಿ ಹೇಗೆ?

By | 08/01/2019

ಗೂಗಲ್.ಕಾಂ, ಫೇಸ್ಬುಕ್.ಕಾಂ, ಯಾಹೂ… ಹೀಗೆ ಎಷ್ಟೊಂದು ಸುಂದರ ಹೆಸರುಗಳ ವೆಬ್ ಸೈಟ್ ಗಳಿವೆ. ನೀವೂ ಒಂದು ವೆಬ್ ಸೈಟ್ ಡೊಮೈನ್ ಹೆಸರು ಖರೀದಿಸಲು ಬಯಸಿದರೆ ಈ ಗೈಡ್ ನಿಮಗೆ ಸಹಕಾರಿಯಾಗಬಹುದು.

 

 

ನೀವು ಗಮನಿಸಿರಬಹುದು. ಇವೆರಡು ಡೊಮೈನ್ ಹೆಸರುಗಳು ಸರಳವಾಗಿವೆ. ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವಂತೆ ಇವೆ. ಹೀಗಾಗಿ ಈ ಗೈಡ್ ನ ಮೊದಲ ಪಾಠ

#1. ಸರಳವಾಗಿರುವ, ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವಂತಹ ಡೊಮೈನ್ ಹೆಸರು ಖರೀದಿಸಿ.

ಈಗ ಡೊಮೈನ್ ಮಾರಾಟದಲ್ಲಿ ಸಾಕಷ್ಟು ಪೈಪೋಟಿ ನಡೆಯುತ್ತಿದೆ. 99 ರೂಪಾಯಿ, 130 ರೂಪಾಯಿಗೆ ಡೊಮೈನ್ ಖರೀದಿಸಿ ಎಂಬ ಜಾಹೀರಾತುಗಳು ಬರುತ್ತವೆ. ಹೀಗೆ, ಕಡಿಮೆ ಹಣಕ್ಕೆ ದೊರಕಬೇಕಾದರೆ ನೀವು ಎರಡು ವರ್ಷದ ಪ್ಲಾನಿಂಗ್ ಖರೀದಿಸಬೇಕು. ಈ ರೀತಿ ಕಡಿಮೆಗೆ ದೊರಕುತ್ತದೆ ಎಂದು ಖರೀದಿಸುವುದಕ್ಕಿಂತ ಸ್ಥಿರ ದರಗಳಲ್ಲಿ ದೊರಕುವಲ್ಲಿ ಖರೀದಿಸಿದರೆ ಭವಿಷ್ಯದಲ್ಲಿ ನಿಮಗೆ ಲಾಭವಾಗುತ್ತದೆ.  ಇಲ್ಲವಾದರೆ, ಈ ಆಫರ್ ಗಳು ದೊರಕುವುದಿಲ್ಲ. ಕೆಲವೊಂದು ಹೋಸ್ಟಿಂಗ್ ಖರೀದಿ ಸಮಯದಲ್ಲಿ ಡೊಮೈನ್ ಉಚಿತವಾಗಿ ದೊರಕುತ್ತದೆ. ಈ ಉಚಿತ ಹಣವನ್ನು ಮುಂದಿನ ರಿನಿವಲ್ ಸಮಯಗಳಲ್ಲಿ ಕಂಪನಿಗಳು ವಸೂಲು ಮಾಡಬಹುದು(ನಿಮಗೆ ತಿಳಿಯದಂತೆ). 

# 2 ಒಳ್ಳೆಯ ಆಫರ್ ಗಳನ್ನು ಹುಡುಕಿ. ಆದರೆ, ರಿನೀವಲ್ ಸಮಯದಲ್ಲಿ ಅವುಗಳ ಬೆಲೆ ಎಷ್ಟು ಇದೆ ಎನ್ನುವುದನ್ನು ತಿಳಿದುಕೊಳ್ಳಿ. ತುಂಬಾ ಕಡಿಮೆ ದರದಲ್ಲಿ ದೊರಕುವ ಡೊಮೈನ್‌ ಖರೀದಿಸುವಾಗ ಎಚ್ಚರವಹಿಸಿ. ಭವಿಷ್ಯದಲ್ಲಿ ನಿಮಗೆ ಆ ಡೊಮೈನ್‌ ನಂಬಲು ಕಷ್ಟವಾಗುವಷ್ಟು ದುಬಾರಿಯಾಗಿಬಿಡಬಹುದು. ಇದರ ಬದಲು ನಿಜವಾದ ದರದಲ್ಲಿಯೇ ಮಾರಾಟ ಮಾಡುವಲ್ಲಿ ಡೊಮೈನ್‌ ಖರೀದಿಸಿ. https://serverhug.com/ ಇತ್ಯಾದಿಗಳು ಗ್ರಾಹಕರಿಗೆ ಸಂಪೂರ್ಣವಾಗಿ ಡೊಮೈನ್, ಹೋಸ್ಟಿಂಗ್‌ ಸ್ವಾತಂತ್ರ್ಯ ನೀಡುವ ತಾಣಗಳಾಗಿವೆ. 

#3 ನೀವು ಆಯ್ಕೆ ಮಾಡುವ ಡೊಮೈನ್ ಹೆಸರು ನಿಮ್ಮ ಭವಿಷ್ಯ ಬದಲಾಯಿಸುವ ಹೆಸರಾಗಿರಬಹುದು. ಹೀಗಾಗಿ, ಹೆಸರು ಆಯ್ಕೆ ಮಾಡುವ ಮೊದಲು ಸಾಕಷ್ಟು ಹೋಂವರ್ಕ್ ಮಾಡಿರಿ.

#4 ನೀವು ಆಯ್ಕೆ ಮಾಡಿಕೊಂಡ ಹೆಸರುಗಳ ಡೊಮೈನ್ ಲಭ್ಯವಿದೆಯೇ ಎಂದು ಹುಡುಕಿ. 

#5 ಡೊಮೈನ್ ಹೆಸರು ಅತ್ಯುತ್ತಮವಾಗಿದ್ದರೆ, ಹಲವು ವರ್ಷಗಳ ಖರೀದಿಗೆ ಆಫರ್ ಗಳು ಇದ್ದರೆ ಕನಿಷ್ಠ 2 ವರ್ಷದ ಆಫರ್ ಅನ್ನು ಖರೀದಿಸಿ. 

#6 ಈಗ ನಿಮಗೆ ಚಂದದ ಹೆಸರು ಎಂದೆನಿಸುವುದು ಮುಂದಿನ ಹತ್ತಿಪ್ಪತ್ತು ವರ್ಷಗಳ ನಂತರವೂ ಅಂದವಾಗಿ ಉಳಿಯಬಹುದೇ ಯೋಚಿಸಿ. ಭವಿಷ್ಯವನ್ನು ನೋಡಿಕೊಂಡು ಯಾವುದೇ ಕಾರ್ಯಮಾಡಿ.

#7 ತುಂಬಾ ಉದ್ದವಾದ ಡೊಮೈನ್ ಹೆಸರು ಖರೀದಿಸಬೇಡಿ. ಸರಳವಾಗಿ, ಕಡಿಮೆ ಅಕ್ಷರಗಳಿರುವ ಹೆಸರು ಖರೀದಿಸಿ.

#8 .ಕಾಂ, .ನೆಟ್, .ಆರ್ಗ್ ಇತ್ಯಾದಿ ಹಲವು ಬಗೆಯ ಡೊಮೈನ್ ಗಳು ದೊರಕುತ್ತವೆ. ನಿಮಗೆ ಬೇಕಾದ್ದನ್ನು ಖರೀದಿಸಿ. ವಾಣಿಜ್ಯ ಉದ್ದೇಶಕ್ಕೆ ಆಗಿದ್ದರೆ .ಕಾಂ ಅನ್ನೇ ಖರೀದಿಸಿ.

#9 ದೊಡ್ಡದೊಡ್ಡ ಕಂಪನಿಗಳ ಹೆಸರನ್ನು ಹೋಲುವ ಡೊಮೈನ್ ಖರೀದಿಸಿ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸಬೇಡಿ. ಟ್ರೇಡ್ ಮಾರ್ಕ್ ಇರುವ ಡೊಮೈನ್ ಖರೀದಿಸಿದರೆ ಕಠಿಣ ಕಾನೂನು ತೊಂದರೆಗಳಿಗೆ ಈಡಾಗುವ ಅಪಾಯವಿದೆ.

#10 ಡೊಮೈನ್ ಹೆಸರಿನಲ್ಲಿ ಸಂಖ್ಯೆಗಳು ಇರುವುದು ಬೇಡ.

#11 ಸೋಷಿಯಲ್ ಮೀಡಿಯಾ ಸೈಟ್ ಗಳಲ್ಲಿ ಪುಟಗಳನ್ನು ರಚಿಸಿ ನೋಡಿ. ಅಲ್ಲೂ ಅದೇ ಹೆಸರಿನಲ್ಲಿ ಪುಟಗಳನ್ನು ರಚಿಸಲು ಸಾಧ್ಯವಾದರೆ ಮಾತ್ರ ಆ ಹೆಸರಿನ ಡೊಮೈನ್ ಖರೀದಿಸಿ.

#12 ಒಟ್ಟಾರೆ ತುಂಬಾ ಕ್ಲಿಷ್ಟವಾದ ಹೆಸರನ್ನು ಖರೀದಿಸಬೇಡಿ. ಇಂದು ನಿಮ್ಮ ವೆಬ್ ಸೈಟಿಗೆ ಭೇಟಿ ನೀಡಿದವರು ನಾಳೆ ನಿಮ್ಮ ವೆಬ್ ಸೈಟಿನ ಹೆಸರನ್ನು ನೆನಪಿಸಿಕೊಳ್ಳುವಂತೆ ಇರಲಿ.

Buy Domain and Hosting in Best Price at only https://serverhug.com/

ವೆಬ್ ಸೈಟ್ ಗೈಡ್ ನ ಮುಂದಿನ ಅಧ್ಯಾಯ ಓದಿ

ವರ್ಡ್ ಪ್ರೆಸ್ ಬ್ಲಾಗ್:  ಡೊಮೈನ್ ಮ್ಯಾಪಿಂಗ್ ಮಾಡುವುದು ಹೇಗೆ?

9 thoughts on “ವೆಬ್ ಸೈಟ್ ಗೈಡ್: ಡೊಮೈನ್ ಖರೀದಿ ಹೇಗೆ?

  1. Pingback: ಬ್ಲಾಗರ್ ಗೆ ವೆಬ್ ಸೈಟ್ ರೂಪ ನೀಡುವುದು ಹೇಗೆ? | KarnatakaBest.Com

  2. Pingback: 400 ರೂ.ಗೆ ಸ್ವಂತ ವೆಬ್ಸೈಟ್ ನಿರ್ಮಿಸುವುದು ಹೇಗೆ? | KarnatakaBest.Com

  3. Pingback: ಬ್ಲಾಗಿಂಗ್ ಗೈಡ್: ಬ್ಲಾಗ್ ಲೇಖನ ರಚನೆ ಹೇಗೆ? (8 ಟಿಪ್ಸ್) | ಕರ್ನಾಟಕ Best

  4. Pingback: 400 ರೂ.ಗೆ ಸ್ವಂತ ವೆಬ್ಸೈಟ್ ನಿರ್ಮಿಸುವುದು ಹೇಗೆ? | ಕರ್ನಾಟಕ Best

  5. Pingback: ಬ್ಲಾಗರ್ ಗೆ ವೆಬ್ ಸೈಟ್ ರೂಪ ನೀಡುವುದು ಹೇಗೆ? | ಕರ್ನಾಟಕ Best

  6. Pingback: ವರ್ಡ್ ಪ್ರೆಸ್ ಬ್ಲಾಗ್: ಡೊಮೈನ್ ಮ್ಯಾಪಿಂಗ್ ಮಾಡುವುದು ಹೇಗೆ? | ಕರ್ನಾಟಕ Best

  7. Pingback: ವೆಬ್ ಸೈಟ್ ಗೈಡ್: ವರ್ಡ್ ಪ್ರೆಸ್ ಸೆಟ್ಟಿಂಗ್ಸ್, ಸೆಟಪ್ ಗಳನ್ನು ಕಲಿಯಿರಿ | ಕರ್ನಾಟಕ Best

  8. Pingback: ಕನ್ನಡದಲ್ಲಿ ವೆಬ್‌ಸೈಟ್‌ ನಿರ್ಮಿಸುವವರಿಗೆ ಸಂಪೂರ್ಣ ಗೈಡ್ – ಕರ್ನಾಟಕ Best

  9. Pingback: ವೆಬ್ ಸೈಟ್ ಗೈಡ್: ಕರ್ನಾಟಕ ಬೆಸ್ಟ್ ಸಂಪೂರ್ಣ ಮಾರ್ಗದರ್ಶಿ – ಕರ್ನಾಟಕ Best

Leave a Reply

Your email address will not be published. Required fields are marked *