ನೀತಿಕತೆ: ದೊಡ್ಡ ಆನೆಯನ್ನು ಕಟ್ಟಿರುವ ಸಣ್ಣ ಹಗ್ಗ

ಈ ಕತೆಯನ್ನು ನೀವು ಕೇಳಿರಬಹುದು. ಒಬ್ಬ ವ್ಯಕ್ತಿ ನಡೆದಾಡಿಕೊಂಡು ಹೋಗುವಾಗ ಅಲ್ಲೊಂದು ಆನೆಯನ್ನು ಕಟ್ಟಿ ಹಾಕಲಾಗಿತ್ತು. ಆ ಆನೆಯನ್ನು ಕಟ್ಟಿದ್ದು ಸಣ್ಣ ದಾರದ ಮೂಲಕವಾಗಿತ್ತು. ಆನೆ ಕಾಲನ್ನು ಕೊಡವಿದರೂ ಆ ದಾರ ತುಂಡಾಗಬಹುದಿತ್ತು. ಯಾವುದೇ ಸಮಯದಲ್ಲಿ ಬೇಕಾದರೂ ಆನೆ ಆ ಹಗ್ಗ ತುಂಡರಿಸಿ ಇತರರಿಗೆ ಅಪಾಯ ಉಂಟುಮಾಡಬಹುದಿತ್ತು. 

ಈ ಕುರಿತು ಅಲ್ಲೇ ಇದ್ದ ಆನೆಯ ತರಬೇತುದಾರನಲ್ಲಿ ವಿಚಾರಿಸಿದ.

ಈ ಆನೆಯು ಹಗ್ಗ ತುಂಡರಿಸಲು ಪ್ರಯತ್ನಿಸುವುದಿಲ್ಲವೇ ಎಂದು ಪ್ರಶ್ನಿಸಿದ.

ಅದಕ್ಕೆ ಆ ಆನೆ ಕಾವಾಡಿಗ `ಇಲ್ಲ’ ಎಂದ.

`ಈ ಆನೆ ಪುಟ್ಟ ಮರಿಯಾಗಿದ್ದಾಗ ಇದರ ಕಾಲನ್ನು ಅತ್ಯಂತ ಗಟ್ಟಿಮುಟ್ಟಾದ ಸರಪಣಿಗಳಿಂದ ಕಟ್ಟಲಾಗುತ್ತಿತ್ತು. ಆ ಸಮಯದಲ್ಲಿ ಮರಿಆನೆಯು ಸರಪಣಿ ತುಂಡರಿಸಲು ಸಾಕಷ್ಟು ಪ್ರಯತ್ನಿಸುತ್ತಿತ್ತು. ಹಲವು ವರ್ಷಗಳ ಕಾಲ ಆನೆಯನ್ನು ಹೀಗೆಯೇ ಕಟ್ಟಲಾಗಿತ್ತು. ನಂತರ ತನ್ನ ಪ್ರಯತ್ನ ವ್ಯರ್ಥ ಎಂಬ ಅರಿವು ಆನೆಗಾಯಿತು.

ಸರಪಣಿ ಕಡಿದುಕೊಳ್ಳುವ ಪ್ರಯತ್ನವನ್ನು ನಂತರ ಮುಂದುವರೆಸಲಿಲ್ಲ. ಈಗ ಗಟ್ಟಿ ಇರದ ಹಗ್ಗ ಕಟ್ಟಿದರೂ ಆನೆ ಬಿಚ್ಚಿಕೊಳ್ಳುವ ಪ್ರಯತ್ನ ಮಾಡದು” ಎಂದು ಹೇಳಿದ.

ಕೆಲವೊಮ್ಮೆ ನಾವೂ ನಮ್ಮ ಬದುಕಿನಲ್ಲಿ ಇಂತಹದ್ದೇ ಮಿತಿಯನ್ನು ಹಾಕಿಕೊಳ್ಳುತ್ತೇವೆ. ನನ್ನಿಂದ ಇದು ಸಾಧ್ಯವಿಲ್ಲ ಎಂಬ ಭಾವ ಮೂಡುತ್ತದೆ. ಆದರೆ, ನಾವು ಆನೆಯಷ್ಟು ಸಾಮರ್ಥ್ಯ ಹೊಂದಿದ್ದರೂ ಮನಸ್ಥಿತಿಯಿಂದಾಗಿ ಸಾಧನೆಯತ್ತ ಮುಖ ಮಾಡುವುದಿಲ್ಲ. ಯಶಸ್ಸಿಗೆ ಇದು ಅತ್ಯಂತ ಪ್ರಮುಖ ಅಡ್ಡಿಯಾಗಿದೆ. ಇಂತಹ ಮನಸ್ಥಿತಿಯನ್ನು ಬದಲಾಯಿಸಿಕೊಂಡರೆ ಉತ್ತಮ.
Source: Google

Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಹಿರಿಯ ಉಪಸಂಪಾದಕ. ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ  ಓದುವುದು, ಬರೆಯುವುದು ಇಷ್ಟದ ಕೆಲಸ. ಹೆಚ್ಚಿನ ವಿವರಕ್ಕೆ ನನ್ನ ಬಗ್ಗೆ ಪುಟವನ್ನು ನೋಡಿ