ಕುಂದಾಪುರ ಶೈಲಿಯ ನೀರುದೋಸೆ ಹಾಗೂ ಚಿಕನ್ ಸುಕ್ಕಾ

By | 09/10/2018

ಕುಂದಾಪುರದಲ್ಲಿ ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ಮಾಡುವಂತಹ ನಾನ್ ವೆಜ್ ರೆಸಿಪಿ ಎಂದರೆ ಅದು ನೀರುದೋಸೆ ಹಾಗೂ ಚಿಕನ್ ಸುಕ್ಕಾ. ಹೆಚ್ಚಾಗಿ ಇದನ್ನು ಎಲ್ಲರೂ ತುಂಬಾ ಇಷ್ಟಪಡುತ್ತಾರೆ. ಯಾಕೆಂದರೆ ಇವೆರಡನ್ನು ಜೊತೆಯಾಗಿ ಸೇವಿಸಿದರೆ ಅದರ ಮಜಾನೆ ಬೇರೆ.

ನೀರುದೋಸೆ ಹಾಗೂ ಚಿಕನ್ ಸುಕ್ಕಾ ಮಾಡಲು ಬೇಕಾಗುವಂತಹ ಸಾಮಗ್ರಿಗಳು 

ನೀರುದೋಸೆ ಮಾಡಲು : ಅಕ್ಕಿ 2 ಕಪ್, ತೆಂಗಿನಕಾಯಿ ಸ್ವಲ್ಪ, ರುಚಿಗೆ ತಕಷ್ಟು ಉಪ್ಪು.
ಚಿಕನ್ ಸುಕ್ಕಾ ಮಾಡಲು ಬೇಕಾಗುವಂತಹ ಸಾಮಗ್ರಿಗಳು : ದನಿಯಾ -3 ಚಮಚ, ಮೆಣಸಿನಕಾಳು-1 1/2 ಚಮಚ, ಜೀರಿಗೆ-1ಚಮಚ, ಮೆಂತ್ಯಕಾಳು,ಸಾಸಿವೆ-1/4 ಚಮಚ, ಬ್ಯಾಡಗಿ ಮೆಣಸು-12, ಈರುಳ್ಳಿ-2, ಬೆಳ್ಳುಳ್ಳಿ-15 ಎಸಳು, ಟೊಮೊಮೊ-2, ಹಸಿಮೆಣಸಿನಕಾಯಿ-3, ತುಪ್ಪ(ಎಣ್ಣೆ)-1/2 ಕಪ್, ಗರಮಸಾಲ-2 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್-2ಚಮಚ, ಕರಿಬೇವು. ಅರಶಿನ-1/2 ಚಮಚ. ಚಿಕ್ಕನ-500ಗ್ರಾಂ, ಉಪ್ಪು, ತೆಂಗಿನತುರಿ-1ಕಪ್.

ಮಾಡುವ ವಿಧಾನ :
ಮೊದಲಿಗೆ ನೀರುದೋಸೆಯನ್ನು ರೆಡಿಮಾಡಿಕೊಳ್ಳಿ. ಅದಕ್ಕಾಗಿ ಅಕ್ಕಿಯನ್ನು ರಾತ್ರಿಯೇ ನೆನೆಸಿಡಬೇಕು. ಬೆಳಿಗ್ಗೆ ಅಕ್ಕಿ, ಕಾಯಿಗೆ ಸ್ವಲ್ಪ ನೀರು ಹಾಕಿಕೊಂಡು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಒಂದು ಪಾತ್ರೆಯಲ್ಲಿ ಆ ಹಿಟ್ಟನ್ನು ಹಾಕಿ ರುಚಿಗೆ ತಕಷ್ಟು ಉಪ್ಪು ಹಾಗೂ ನೀರನ್ನು ಸೇರಿಸಿ (ಹಿಟ್ಟು ಸ್ವಲ್ಪ ನೀರಾಗಿರಲಿ). ನಂತರ ತವಾ ಕಾಯಿಸಿಕೊಂಡು ಅದಕ್ಕೆ ಎಣ್ಣೆ ಹಚ್ಚಿ ಒಂದು ಸೌಟ್ ನಿಂದ ಹಿಟ್ಟನ್ನು ತೆಗೆದುಕೊಂಡು ತವಾ ಮೇಲೆ ತೆಳ್ಳುವಾಗಿ ಹ್ಯುಯಿರಿ. ಅದು ಬೆಂದ ನಂತರ ದೋಸೆಯನ್ನು ತೆಗೆದು ಪಾತ್ರೆಯಲ್ಲಿ ಎತ್ತಿಡಿ. ಹೀಗೆ ದೋಸೆ ರೆಡಿಯಾದ ನಂತರ ಚಿಕನ್ ಸುಕ್ಕ ರೆಡಿ ಮಾಡಿಕೊಳ್ಳಿ.

ಮೊದಲು ಸುಕ್ಕದ ಪುಡಿ ತಯಾರಿಸಿಕೊಳ್ಳಬೇಕು-ಬಾಣಲೆಯಲ್ಲಿ ದನಿಯಾ, ಮೆಣಸಿನಕಾಳು, , ಮೆಂತ್ಯಕಾಳು, ಸಾಸಿವೆ ಇವುಗಳನ್ನು ಬೇರೆ, ಬೇರೆಯಾಗಿ ಸಣ್ಣ ಉರಿಯಲ್ಲಿ ಹುರಿಯಿರಿ. ಬ್ಯಾಡಗಿ ಮೆಣಸು ಹಾಗು ಕರಿಬೇವನ್ನು ಸ್ವಲ್ಪ ಎಣ್ಣೆ ಹಾಕಿ ಬೇರೆ, ಬೇರೆಯಾಗಿ ಹುರಿಯಿರಿ. ನಂತರ ಇವುಗಳನ್ನುಜೊತೆಗೆ ಜೀರಿಗೆ ಸೇರಿಸಿ ಮಿಕ್ಸಿಯಲ್ಲಿ ಸಣ್ಣಗೆ ಪುಡಿಮಾಡಿ. ನಂತರ ಅದಕ್ಕೆ ಬೆಳ್ಳುಳ್ಳಿ ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಿ.
ಒಂದು ಬಾಣಲೆಯಲ್ಲಿ ತುಪ್ಪ(ಎಣ್ಣೆ) ಬಿಸಿ ಮಾಡಿ, ಅದು ಬಿಸಿಯಾದ ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ನಂತರ ಇದಕ್ಕೆ ಹಸಿಮೇಣಸಿನಕಾಯಿ, ಹೆಚ್ಚಿಟ್ಟ ಈರುಳ್ಳಿ ಹಾಕಿ ಕೆಂಪಾಗುವವರೆಗೂ ಹುರಿಯಿರಿ, ಆಮೇಲೆ ಟೊಮೊಮೊ ಹಾಕಿ 2 ನಿಮಿಷ ಹುರಿದು ಅದಕ್ಕೆ ಚಕ್ಕೆ, ಅರಶಿನ, ಉಪ್ಪು ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ 20ನಿಮಿಷ ಬೇಯಿಸಿ. ಬೆಂದ ನಂತರ ಅದಕ್ಕೆ ತೆಂಗಿನತುರಿ, ಸುಕ್ಕದ ಪುಡಿ ಹಾಕಿ, ಗರಂಮಸಾಲ ಹಾಕಿ ಮಿಕ್ಸ್ ಮಾಡಿ, ಉಪ್ಪು ಬೇಕಾದಲ್ಲಿ ಹಾಕಿಕೊಳ್ಳಬಹುದು ಮತ್ತೆ 5ನಿಮಿಷ ಬೇಯಿಸಿದಾಗ ಕುಂದಾಪುರ ಚಿಕನ್ ಸುಕ್ಕಾ ರೆಡಿ.

Leave a Reply

Your email address will not be published. Required fields are marked *