ಮಹೀಂದ್ರ ಮರಾಝೂ ವಿಮರ್ಶೆ- ಹೇಗಿದೆ ತಿಮಿಂಗಿಲ ವಿನ್ಯಾಸದ ಎಂಪಿವಿ ಕಾರು

mahindra marazzo review

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಹೊರತರುವ ವಾಹನಗಳೆಂದರೆ ದೇಶದ ಬಹುತೇಕರಿಗೆ ಅಚ್ಚುಮೆಚ್ಚು. ಸ್ಕಾರ್ಪಿಯೋ ಇತ್ಯಾದಿ ಬಹುಬೇಡಿಕೆಯ ವಾಹನಗಳನ್ನು ನೀಡಿರುವ ಮಹೀಂದ್ರ ಕಂಪನಿಯು ಇತ್ತೀಚೆಗೆ ಪರಿಚಯಿಸಿದ ಎಂಪಿವಿ ಹೆಸರು ಮರಾಝೂ. ಈಗಾಗಲೇ ರಸ್ತೆಯಲ್ಲಿರುವ ಮಾರುತಿ ಸುಜುಕಿ ಎರ್ಟಿಗಾ ಮತ್ತು ಟೊಯೊಟಾ ಇನ್ನೋವಾ ಕ್ರಿಸ್ಟಾಗೆ ಪೈಪೋಟಿ ನೀಡುವ ಕಾರಿದು.

ಮಹೀಂದ್ರ ಮರಾಝೂ ಎಂಪಿವಿಯ ಆರಂಭಿಕ ಎಕ್ಸ್ಶೋರೂಂ ದರ 9.99 ಲಕ್ಷ ರೂಪಾಯಿ. ಗರಿಷ್ಠ ದರ 13.40 ಲಕ್ಷ ರೂಪಾಯಿ. ಇದು ಎಕ್ಸ್ ಶೋರೂಂ ದರವಾಗಿದ್ದು, ಆನ್ ರೋಡ್ ದರ ಸಹಜವಾಗಿಯೇ ಹೆಚ್ಚಿರಲಿದೆ. ಮಹೀಂದ್ರಾ ಮರಾಝೂ ಎಂ2, ಎಂ4, ಎಂ6 ಮತ್ತು ಎಂ8 ಎಂಬ ಆವೃತ್ತಿಗಳಲ್ಲಿ ದೊರಕುತ್ತದೆ. ಈ ಆವೃತ್ತಿಗಳಿಗೆ ತಕ್ಕಂತೆ ಸುಮಾರು 1 ಲಕ್ಷ ರೂಪಾಯಿ ಆಸುಪಾಸಿನಲ್ಲಿ ದರ ವ್ಯತ್ಯಾಸವಿದೆ.

ಮರಾಝೂ ಎಂಪಿವಿಯು 7 ಸೀಟು ಮತ್ತು 8 ಸೀಟು ಆಯ್ಕೆಯಲ್ಲಿ ದೊರಕುತ್ತದೆ. ಇದರಲ್ಲಿ 1.5 ಲೀಟರ್ ನ ಡೀಸೆಲ್ ಎಂಜಿನ್ ಇದೆ. ಪೆಟ್ರೋಲ್ ಆಯ್ಕೆಯಲ್ಲಿ ಲಭ್ಯವಿಲ್ಲ. ಡೀಸೆಲ್ ಎಂಜಿನ್ ಗರಿಷ್ಠ ಪವರ್ ನಲ್ಲಿ 121 ಪಿಎಸ್ ಮತ್ತು 300 ಎನ್ ಎಂ ಟಾರ್ಕ್ ಒದಗಿಸುತ್ತದೆ. ಈ ಎಂಜಿನ್ ಜೊತೆಗೆ 6 ಹಂತಗಳ ಮ್ಯಾನುಯಲ್ ಗಿಯರ್ ಬಾಕ್ಸ್ ಇದೆ. ಈ ಗಿಯರ್ ಬಾಕ್ಸ್ ಮುಂಭಾಗದ ಚಕ್ರಗಳಿಗೆ ಸಂಪರ್ಕಿಸಿದೆ.

ತಿಮಿಂಗಿಲದಿಂದ ಸ್ಫೂರ್ತಿ ಪಡೆದು ನೂತನ ಕಾರನ್ನು ವಿನ್ಯಾಸ ಮಾಡಲಾಗಿದೆ. ಕಾರಿನೊಳಗೆ ಸಾಕಷ್ಟು ಮನರಂಜನೆ ಮತ್ತು ಅವಶ್ಯಕ ಸಾಧನಗಳಿವೆ. ಅಂದರೆ, 7.0 ಇಂಚಿನ ಟಚ್ ಸ್ಕ್ರೀನ್ ಇನ್ ಫೋಟೈನ್ ಮೆಂಟ್ ಸಿಸ್ಟಮ್, 4.2 ಇಂಚಿನ ಟಿಎಫ್ ಟಿ ಪರದೆ ಇದೆ. ಮೇಲ್ವಾವಣಿಗೆ ಜೋಡಿಸಿದ ಕೂಲಿಂಗ್ ಏರ್ ಕಂಡಿಷನಿಂಗ್ ವ್ಯವಸ್ಥೆಯನ್ನು ಎರಡನೇ ಮತ್ತು ಮೂರನೇ ಸೀಟಿನ ಸಾಲುಗಳ ಮೇಲ್ಭಾಗಕ್ಕೆ ಜೋಡಿಸಲಾಗಿದೆ.
ಇದರ ಜೊತೆ ಹಿಂದಿನ ಸೀಟಿನವರಿಗೂ ಮನರಂಜನಾ ವ್ಯವಸ್ಥೆ. ವಿದ್ಯುನ್ಮಾನವಾಗಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು ಇತ್ಯಾದಿಗಳಿವೆ.

 • ಎಂಜಿನ್: 4 ಸಿಲಿಂಡರ್
 • ಅಶ್ವಶಕ್ತಿ: 121 ಅಶ್ವಶಕ್ತಿಗೆ 90.2 ಕಿಲೋವ್ಯಾಟ್
 • ಟಾರ್ಕ್: 1750-2500 ಆವರ್ತನದಲ್ಲಿ 300 ಎನ್ ಎಂ ಟಾರ್ಕ್ ಪವರ್
 • ಎಂಜಿನ್: ಡಿ15 1.5 ಲೀಟರ್
 • ಎಮಿಷನ್: ಬಿಎಸ್ 4
 • ಕ್ಯೂಬಿಕ್ ಸಾಮರ್ಥ್ಯ: 1497 ಸಿಸಿ
 • ಗರಿಷ್ಠ ಪವರ್: 3500 ಆವರ್ತನಕ್ಕೆ 121 ಅಶ್ವಶಕ್ತಿ
 • ಗಿಯರ್ ಬಗೆ: 6 ಹಂತದ ಮ್ಯಾನುಯಲ್
 • ಚಾಲನಾ ಮಾದರಿ: ಫ್ರಂಟ್ ವೀಲ್ ಡ್ರೈವ್
 • ಸಸ್ಪೆನ್ಷನ್: ಮುಂಭಾಗದಲ್ಲಿ ಡಬಲ್ ವಿಶ್ ಬೋನ್, ಹಿಂಭಾಗದಲ್ಲಿ ಟ್ವಿಸ್ಟ್ ಬೀಮ್
 • ಇಂಧನ ಟ್ಯಾಂಕ್ ಸಾಮರ್ಥ್ಯ: 45 ಲೀಟರ್ ಗಳು
 • ಬ್ರೇಕ್ ಗಳು: ಮುಂಭಾಗ ಮತ್ತು ಹಿಂಭಾಗದ ಚಕ್ರಗಳಿಗೆ ಡಿಸ್ಕ್ ಬ್ರೇಕ್ ಗಳಿವೆ.

ಸೇಫ್ಟಿ ಫೀಚರ್ ಗಳು

• ಅವಳಿ ಏರ್ ಬ್ಯಾಗ್ ಗಳು (ಚಾಲಕ ಮತ್ತು ಸಹ ಪ್ರಯಾಣಿಕನಿಗೆ)
• ಪ್ಯಾಸೆಂಜರ್ ಏರ್ ಬ್ಯಾಗ್ ಆಫ್ ಸ್ವಿಚ್
• ಎಬಿಡಿ ಜೊತೆ ಎಬಿಎಸ್
• ಎಲ್ಲಾ ಚಕ್ರಗಳಿಗೂ ಡಿಸ್ಕ್ ಬ್ರೇಕ್ ಗಳು
• ಐಎಸ್ಒಎಫ್ಐಎಕ್ಸ್ ಮಕ್ಕಳ ಸೀಟು ಕೊಂಡಿ
• ಹಿಂಭಾಗದ ಡೋರ್ ಗಳಲ್ಲಿ ಚೈಲ್ಡ್ ಸೇಫ್ಟಿ ಲಾಕ್
• ಮುಂಭಾಗದ ಮತ್ತು ಹಿಂಭಾಗದ ಫಾಗ್ ಲ್ಯಾಂಪ್ ಗಳು ಎಂ6 ಮತ್ತು ಎಂ8 ಆವೃತ್ತಿಗಳಲ್ಲಿ ಮಾತ್ರ ಇವೆ.
• ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಎಂ6 ಮತ್ತು ಎಂ8 ಆವೃತ್ತಿಗಳಲ್ಲಿ ಮಾತ್ರ ಲಭ್ಯ
• ವೇಗದ ಸೂಚನೆಯನ್ನು ಗಮನಿಸಿಕೊಂಡು ಸ್ವಯಂಚಾಲಿತವಾಗಿ ಡೋರ್ ಲಾಕ್ ಆಗುವ ವ್ಯವಸ್ಥೆ ಎಲ್ಲಾ ಆವೃತ್ತಿಗಳಲ್ಲಿ ಲಭ್ಯವಿದೆ.
• ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ ಇದೆ.
• ಎಲ್ಲಾ ಆವೃತ್ತಿಗಳಲ್ಲಿಯೂ ಎಂಜಿನ್ ಮೊಬಿಲೈಜರ್ ಇದೆ.
• ಕಾರ್ ಥೆಪ್ಟ್ ಅಲಾರಂ ಎಂ6 ಮತ್ತು 8 ಆವೃತ್ತಿಗಳಲ್ಲಿ ಮಾತ್ರ ಇದೆ.
• ಎಲ್ಲಾ ಆವೃತ್ತಿಗಳಲ್ಲಿಯೂ ಚಾಲಕ ಸೀಟ್ ಬೆಲ್ಟ್ ಧರಿಸದೆ ಇದ್ದರೆ ನೆನಪಿಸುವ ರಿಮೈಂಡರ್ ಇದೆ.
• ಎಲ್ಲಾ ಆವೃತ್ತಿಗಳಲ್ಲಿಯೂ ಹೊಂದಾಣಿಕೆ ಮಾಡಬಹುದಾದ ಹೆಡ್ ರಿಸ್ಟ್ರೈಂಟ್ ಗಳಿವೆ.
• ತುರ್ತು ಕರೆ ವ್ಯವಸ್ಥೆಯು ಎಂ6 ಮತ್ತು ಎಂ 8 ಆವೃತ್ತಿಗಳಲ್ಲಿ ಮಾತ್ರ ಇದೆ.
• ಎಲ್ಲಾ ಆವೃತ್ತಿಗಳು ಅಧಿಕ ವೇಗದಲ್ಲಿ ಸಾಗಿದಾಗ ಎಚ್ಚರಿಕೆ ನೀಡುತ್ತದೆ. ಅಂದರೆ ಗಂಟೆಗೆ 80 ಕಿ.ಮೀ. ವೇಗದಲ್ಲಿ ಸಾಗಿದರೆ 3 ಸೆಕೆಂಡ್ ಕಾಲ ಕೀಂ ಕೀಂ ಎನ್ನುತ್ತದೆ.

ಮಹೀಂದ್ರ ಕಾರುಪ್ರಿಯರು ಮರಾಝೂ ಖರೀದಿಸಬಹುದು. ಟೂರಿಸ್ಟ್ ವಾಹನ ಖರೀದಿಸುವರಿಗೆ ಇದು ಸೂಕ್ತ. ನೀವು ದೊಡ್ಡ ಕುಟುಂಬ ಹೊಂದಿದ್ದು, ದೊಡ್ಡ ವಾಹನ ಹುಡುಕುತ್ತಿದ್ದರೂ ಇದನ್ನು ಆಯ್ಕೆ ಮಾಡಿಕೊಳ್ಳಬಹುದು.

ಮಹೀಂದ್ರ ಮರಾಝೂನ ಟಿವಿಎಸ್ ವಿಡಿಯೋ ಲಿಂಕ್ ಈ ಕೆಳಗೆ ಇದೆ, ನೋಡಿ.

ಮಹೀಂದ್ರ ಮರಾಝೂ ಅಫೀಶಿಯಲ್ ವೆಬ್ ಸೈಟ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಟಿವಿಎಸ್ ಜುಪೀಟರ್ ಟೆಸ್ಟ್ ರೈಡ್ ವಿಮರ್ಶೆ ಓದಲು ಇಲ್ಲಿ ಕ್ಲಿಕ್ ಮಾಡಿ.