-ಶ್ರೀಲಕ್ಷ್ಮಿ ಹೊಸ್ಕೊಪ್ಪ
ಮನೆಯ ಸೋಪಾದ ಮೇಲಿರುವ, ಕಾರಿನಲ್ಲಿರುವ ಪುಟ್ಟ ಪುಟ್ಟ ದಿಂಬುಗಳಿಗೆ (ಪಿಲ್ಲೋ) ಚೆಂದದ ಹೊದಿಕೆ ಇದ್ದರೆ ಅದು ಇನ್ನಷ್ಟು ಅಂದವಾಗಿ ಕಾಣುತ್ತದೆ. ಅದಕ್ಕಾಗಿ ದುಬಾರಿ ಹಣ ಕೊಟ್ಟು ಕೊಂಡುಕೊಳ್ಳುವ ಬದಲು, ನಿಮ್ಮ ಹಳೆ ಟೀ-ಶರ್ಟ್ನ್ನು ಬಳಸಿ ಚೆಂದದ ಕವರ್ಗಳನ್ನು ತಯಾರಿಸಬಹುದು.
ಬೇಕಾಗುವ ಸಾಮಗ್ರಿ: ಹಳೆ ಟೀ-ಶರ್ಟ್, ಕತ್ತರಿ
ಮಾಡುವ ವಿಧಾನ:
- ಮೊದಲಿಗೆ ಹಳೆಯ ಟೀ-ಶರ್ಟ್ನ ಮಧ್ಯಭಾಗದಲ್ಲಿ ದಿಂಬನ್ನಿಟ್ಟು ಅಳತೆ ನೋಡಿ.
- ನಂತರ ದಿಂಬಿಗಿಂತ ದೊಡ್ಡದಾಗಿ (ನಾಲ್ಕು ಬದಿಯಲ್ಲೂ ಹೆಚ್ಚಿನ ಅಳತೆಯಲ್ಲಿ) ಟೀ-ಶರ್ಟ್ನ್ನು ಕತ್ತರಿಸಿ.
- ಕತ್ತರಿಸಿ ಟೀ-ಶರ್ಟ್ ಭಾಗದ ಮೇಲೆ ದಿಂಬನ್ನು ಇಟ್ಟುಕೊಂಡು, ದಿಂಬಿನ ಅಳತೆಗೆ ಟೀ-ಶರ್ಟ್ ಭಾಗದ ನಾಲ್ಕು ಅಂಚುಗಳನ್ನು ಪಟ್ಟಿ (ಸ್ಟ್ರೈಪ್) ರೀತಿಯಲ್ಲಿ ಕತ್ತರಿಸಿ.
- ತದನಂತರ ಮಧ್ಯದಲ್ಲಿ ದಿಂಬನ್ನಿಟ್ಟು ಟೀ-ಶರ್ಟ್ನ ಮೇಲಿನ ಹಾಗೂ ಕೆಳಗಿನ ಭಾಗದ ಅಂಚುಗಳನ್ನು ಒಂದನ್ನೊಂದು ಸೇರಿಸಿ ಕಟ್ಟಿ.
ಈಗ ಚೆಂದದ ಹೊದಿಕೆಯ ದಿಂಬು ತಯಾರಾಗುತ್ತದೆ. ಟೀ-ಶರ್ಟ್ ತುಂಬ ಸಿಂಪಲ್ ಆಗಿದೆ ಎನಿಸಿದರೆ ಮೊದಲೇ ಬೇರೆ ಬೇರೆ ಬಣ್ಣದ ದಾರದಲ್ಲಿ ಕಸೂತಿ ಮಾಡಿ ನಂತರ ಪಿಲ್ಲೋ ಕವರ್ ಮಾಡಿದರೂ ಚೆನ್ನಾಗಿಯೇ ಕಾಣುತ್ತದೆ.