ರಕ್ಷಾ ಬಂಧನದ ಸಡಗರ-ರಾಖಿ ಹಬ್ಬದ ಕುರಿತು ನಿಮಗೆಷ್ಟು ಗೊತ್ತು?

By | 23/08/2018
Raksha Bandhan 2018

ಮೊದಲಿಗೆ ಕರ್ನಾಟಕ ಬೆಸ್ಟ್ ಓದುಗರಿಗೆ ಶ್ರಾವಣ ಮಾಸದ ಪ್ರಮುಖ ಹಬ್ಬವಾದ ರಕ್ಷಾ ಬಂಧನದ ಶುಭಾಶಯ. ಆಗಸ್ಟ್ 26 ಭಾರತದ್ಯಾಂತ ರಕ್ಷಾ ಬಂಧನದ ಸಂಭ್ರಮ. ಇದೊಂದು ವಿಶೇಷ ಹಬ್ಬ. ಇದು ಸಹೋದರ-ಸಹೋದರಿಯರ ನಡುವೆ ಮಾತ್ರ ರಾಖಿ ಕಟ್ಟುವ ಹಬ್ಬವಲ್ಲ. ತನು, ಮನ, ಧನ, ಧರ್ಮ, ಸತಿತ್ವ, ಆಪತ್ತಿನಿಂದ, ಸಂಕಟಗಳಿಂದ ರಕ್ಷಣೆ ಸೇರಿದಂತೆ ಹತ್ತು ಹಲವು ರಕ್ಷಣೆಯ ಅಭಯ ನೀಡುವ ಹಬ್ಬವಾಗಿದೆ. happy raksha bandhan to all Karnataka Best Readers 🙂 

ರಕ್ಷಾ ಬಂಧನವನ್ನು ಯಾವಾಗ ಆಚರಿಸಲಾಗುತ್ತದೆ?

ಶ್ರಾವಣ ಮಾಸದ ಹುಣ್ಣಿಮೆಯಂದು ನೂಲು ಹುಣ್ಣಿಮೆ ಆಚರಿಸಲಾಗುತ್ತದೆ. ಯುಜುರ್ವೇದ ಉಪಕರ್ಮದಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ.

ಅಣ್ಣ ತಂಗಿಯ ಅನುಬಂಧದ ರಕ್ಷಾ ಬಂಧನ

ಕರ್ನಾಟಕ ಸೇರಿದಂತೆ ದೇಶಾದ್ಯಂತ ರಕ್ಷಾ ಬಂಧನವು ಅಣ್ಣ ತಂಗಿ ಅನುಬಂಧವನ್ನು ಸಾರುವ ಹಬ್ಬವಾಗಿ ಜನಪ್ರಿಯತೆ ಪಡೆದಿದೆ. ಸದಾ ಪ್ರೀತಿಸು ಎಂದು ಕಾಡುವ ಹುಡುಗರಿಂದ ಪಾರಾಗಲು ಹೆಣ್ಮಕ್ಕಳು ರಕ್ಷಾ ಬಂಧನ ಎಂಬ ಅಸ್ತ್ರವನ್ನು ಪ್ರಯೋಗಿಸುವುದುಂಟು. ಈ ಸಮಯದಲ್ಲಿ ಅಣ್ಣ ತಂಗಿಗೆ, ತಂಗಿ ಅಣ್ಣನಿಗೆ, ತಂಗಿ ಅಣ್ಣನಿಗೆ, ತಮ್ಮ ಅಕ್ಕನಿಗೆ ಉಡುಗೊರೆ ನೀಡುವ ಪರಿಪಾಟವೂ ಉಂಟು.

ರಕ್ಷಾ ಬಂಧನದ ಪೌರಣಿಕ ಹಿನ್ನೆಲೆ

ಇಂದ್ರನು ಯುದ್ಧದಲ್ಲಿ ರಾಕ್ಷಸರ ಜೊತೆ ಸೋಲುವ ಹಂತಕ್ಕೆ ಬಂದಿರುತ್ತಾನೆ. ಆಗ ಬೃಹಸ್ಮೃತಿಯ ಸಲಹೆಯ ಮೇರೆಗೆ ರೇಷ್ಮೆ ಧಾರವನ್ನು ಇಂದ್ರಾಣಿಯು ಇಂದ್ರನ ಕೈಗೆ ಕಟ್ಟುತ್ತಾಳೆ. ಇದರ ಪರಿಣಾಮವೋ ಎಂಬಂತೆ ಇಂದ್ರ ಯುದ್ಧದಲ್ಲಿ ಗೆಲ್ಲುತ್ತಾನೆ. ಇದೇ ಕಾರಣಕ್ಕೆ ರಕ್ಷಾ ಬಂಧನ ಎಂಬ ಹಬ್ಬ ಆಚರಿಸಲಾಗುತ್ತದೆ ಎಂದು ಕೆಲವರು ನಂಬುತ್ತಾರೆ.

ಪುರಾಣ ಕತೆಗಳ ಪ್ರಕಾರ ಶ್ರೀಕೃಷ್ಣ ಕಬ್ಬು ಕಡಿಯುತ್ತಿರುವ ಸಂದರ್ಭದಲ್ಲಿ ಕೈ ಬೆರಳಿಗೆ ಗಾಯವಾಗುತ್ತದೆ. ಆಗ ದ್ರೌಪದಿ ತನ್ನ ಸೀರೆಯನ್ನೆ ಹರಿದು, ಕೃಷ್ಣನ ಬೆರಳಿಗೆ ಸುತ್ತುತ್ತಾಳೆ. ದ್ರೌಪದಿಯ ಈ ಉಪಕಾರಕ್ಕೆ ಕೃಷ್ಣ ಸದಾ ಆಕೆಯ ರಕ್ಷಣೆ ಮಾಡುತ್ತೇನೆಂದು ಮಾತು ಕೊಡುತ್ತಾನೆ. ಹಾಗಾಗಿ ಈ ದಿನವನ್ನು ರಕ್ಷಾಬಂಧನದ ದಿನವೆಂದು ಆಚರಿಸಲಾಗುತ್ತದೆ ಎಂಬ ವಿವರವೂ ದೊರಕುತ್ತದೆ.

ಫ್ಯಾಷನ್ ಆಗಿದೆ ರಕ್ಷಾ ಬಂಧನ

ರಾಖಿ ಹಬ್ಬವೂ ಫ್ಯಾಷನ್ ಎಂಬಂತೆ ಕಾಣಿಸುತ್ತದೆ. ಬಗೆಬಗೆಯ ರಾಖಿಗಳು ಇಂದು ಮಾರುಕಟ್ಟೆಯಲ್ಲಿ ದೊರಕುತ್ತವೆ. ರಕ್ಷಾ ಬಂಧನದ ಸಮಯದಲ್ಲಿ ಅಂಗಡಿಗಳಲ್ಲಿ ಬಗೆಬಗೆಯ ರಾಖಿಗಳು, 1 ರೂಪಾಯಿಂದ ಸಾವಿರಾರು ರೂಪಾಯಿವರೆಗಿನ ರಾಖಿಗಳೂ ಸಿಗುತ್ತವೆ.

ಭಾವ ಪ್ರಧಾನ ಹಬ್ಬ ರಕ್ಷಾ ಬಂಧನ

ಮನುಷ್ಯ ಮನುಷ್ಯರ ನಡುವಿನ ಬಾಂಧವ್ಯ ಉತ್ತಮವಾಗಲಿ, ಜಗತ್ತಿನೆಲ್ಲೆಡೆ ಭಾತೃತ್ವ ಉತ್ತಮಗೊಳ್ಳಲಿ ಎಂಬ ವಿಶಾಲ ಅರ್ಥದಲ್ಲಿ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ.

ಇದು ಹಿಂದುಗಳಿಗೆ ಮಾತ್ರ ಸೀಮಿತವಾದ ಹಬ್ಬವಲ್ಲ

ರಕ್ಷಾ ಬಂಧನಕ್ಕೆ ಈಗ ಜಾತಿ ಧರ್ಮಗಳ ಗೋಡೆಯಿಲ್ಲ. ಮುಸ್ಲಿಂ ಹುಡುಗನೂ ಹಿಂದು ಸಹೋದರಿಗೆ ರಾಖಿ ಕಟ್ಟುತ್ತಾನೆ. ಹಿಂದು ಸಹೋದರಿಯೂ ಮುಸ್ಲಿಂ ಹುಡುಗನಿಗೆ ರಾಖಿ ಕಟ್ಟುತ್ತಾನೆ. ನಮ್ಮ ಕಾಲೇಜಿನಲ್ಲಂತೂ ಹಿಂದು ಮುಸ್ಲಿಂ ಕ್ರಿಸ್ತ ಧರ್ಮಿಯರೆಲ್ಲರೂ ರಾಖಿಯನ್ನು ಸಂತೋಷದಿಂದ ಕಟ್ಟುತ್ತಿದ್ದರು, ಕಟ್ಟಿಸಿಕೊಳ್ಳುತ್ತಿದ್ದರು.

ರಾಜರ ಕಾಲದ ರಕ್ಷಾ ಬಂಧನ ಕತೆಗಳು

ಯುದ್ಧದ ಸಮಯದಲ್ಲಿ ಆಪತ್ತು ಬಂದಾಗ ತಮ್ಮ ರಕ್ಷಣೆಗಾಗಿ ರಾಣಿಯರು ಬೇರೆ ರಾಜರಿಗೆ ರಕ್ಷಣೆ ಕೇಳಿ ರಕ್ಷಾ ಬಂಧನವು ಕಟ್ಟುತ್ತಿರುವ ಕುರಿತು ಇತಿಹಾಸದ ಕತೆಗಳು ಹೇಳುತ್ತವೆ. ಮಹಿಳೆಗೆ ಗಂಡಿನಿಂದ ರಕ್ಷಣೆಗಾಗಿ ಭಾತೃತ್ವದ ಅರ್ಥದಲ್ಲಿ ಈ ರಾಖಿಯನ್ನು ಕಟ್ಟಲಾಗುತ್ತಿತ್ತು.

ಎಲ್ಲರಿಗೂ ಕಟ್ಟಬಹುದು ರಕ್ಷಾ ಬಂಧನ

ರಾಖಿ ಕೇವಲ ಸಹೋದರ ಸಹೋದರಿಯರಿಗೆ ಸೀಮಿತವಲ್ಲ. ಅನ್ಯ ಪುರುಷರಿಗೆ, ಮಹಿಳೆಯರಿಗೆ, ಊರ ಹಿರಿಯರಿಗೆ, ಸಮಾಜದ ಮುಖಂಡರಿಗೆ ಎಲ್ಲರಿಗೂ ಕಟ್ಟಬಹುದು. ರಕ್ಷಾ ಬಂಧನದ ಶುಭಾಶಯಗಳು.

Leave a Reply

Your email address will not be published. Required fields are marked *