ಸಣ್ಣಕತೆ: ಕನ್ನಡಿ ಹೇಳಿದ ಸತ್ಯ

By | 04/09/2018
kannada short story

ಸಣ್ಣಕತೆ: ಕನ್ನಡಿ ಹೇಳಿದ ಸತ್ಯ

ಐ ಲವ್ ಯು ಎಂದು ಪ್ರಪೋಸ್ ಮಾಡಿದ ಅವನಿಗೆ ಅವಳು ಕೋಪದಿಂದ “ನಿನ್ನ ಮುಸುಡಿ ಕನ್ನಡಿಯಲ್ಲಿ ನೋಡ್ಕೋ, ಥೂ” ಎಂದು ಬಯ್ದಳು. ಅವನು ಕನ್ನಡಿ ನೋಡಿದ. ಅವಳು ಕುರೂಪಿಯಾಗಿ ಕಂಡಳು.

***

ಹನಿಕಥೆ: ಕೂಗು

“ಗಂಡಸ್ರನ್ನ ಯಾವತ್ತೂ ನಂಬಬಾರದು” ಮತ್ತೊಮ್ಮೆ ಗೊಣಗಿಕೊಂಡಳು.ಪ್ರೀತಿಸಿ ಕೊನೆ ಕ್ಷಣದಲ್ಲಿ ಕೈಕೊಟ್ಟನಲ್ಲ, ಎಷ್ಟೊಂದು ನಂಬಿಬಿಟ್ಟೆ ಅವನನ್ನು….ಹಾಗಂತ ಅವಳು ಯೋಚಿಸುತ್ತಿರುವಾಗಲೇ “ಮಹೂರ್ತಕ್ಕೆ ಹೆಚ್ಚು ಸಮಯವಿಲ್ಲ. ಹುಡುಗಿನ ಕರೆತನ್ನಿ” ಎಂಬ ಪುರೋಹಿತರ ಧ್ವನಿ ಆಕೆಯನ್ನು ಎಚ್ಚರಿಸಿತು.

ಹಿರಿಯರನ್ನು ಅನುಸರಿಸಿಕೊಂಡು ಹೋಗಿ ಹಸೆ ಮೇಲೆ ಕುಳಿತು ಮೆಲ್ಲಗೆ ಗಂಡಿನ ಮುಖ ನೋಡಿದಳು. “ತುಂಬಾ ಮುಗ್ದನಂತೆ ಕಾಣುತ್ತಾನೆ, ಎಲ್ಲಾ ಮರೆತು ಇವನ್ನೊಂದಿಗೆ ಚೆನ್ನಾಗಿ ಬಾಳಬೇಕು” ಎಂದುಕೊಂಡಳು. ಆಗ “ಅಮ್ಮಾ” ಎಂದು ಯಾರೋ ಕರೆದಂತಾಯಿತು. ಸುತ್ತಮುತ್ತ ನೋಡಿದಳು. ಯಾವುದೇ ಮಗು ಇರಲಿಲ್ಲ.

ಮತ್ತೊಮ್ಮೆ ಮಗದೊಮ್ಮೆ ಅದೇ ಧ್ವನಿ “ಅಮ್ಮಾ.. ಅಮ್ಮಾ…”. ಇದೇನು ಭ್ರಾಂತಿ ಅಂದುಕೊಂಡವಳ ಹೊಟ್ಟೆಯೊಳಗೆ ಯಾರೋ ಒದ್ದಾಂತಾಯಿತು. ಅಮ್ಮಾ..

***

ಮುಗಿಯದ ಕಥೆ: ಶ್ರಾವಣಿ

ಮಿನಿಕಥೆ: ಮುತ್ತಿನ ಉಂಗುರ

ಅವನು ನಂಗೆ ಇಷ್ಟವಿಲ್ಲ ಕಣೇ…!!!

ತುಕ್ರ ಬೆಂಗಳೂರಿಗೆ ಹೋದದ್ದು..

ಹೊಸ ಮನೆ

ಹೀಗೊಂದು ಕತೆ

ಸೃಷ್ಟಿ

ಪ್ರಭಾ

 

 

Leave a Reply

Your email address will not be published. Required fields are marked *