Moral Story: ಪರೀಕ್ಷೆ ತಪ್ಪಿಸಿದ ಹುಡುಗರು

By | 18/11/2018

ನಾಲ್ವರು ಕಾಲೇಜು ಹುಡುಗರಿದ್ದರು. ಅವರಿಗೆ ಮರುದಿನ ಪರೀಕ್ಷೆ ಇತ್ತು. ಆದರೆ, ಹಿಂದಿನ ದಿನ ಸ್ನೇಹಿತನ ಹುಟ್ಟುಹಬ್ಬವೆಂದು ಮಧ್ಯರಾತ್ರಿಯವರೆಗೆ ಪಾರ್ಟಿ ಮಾಡಿದರು. ಮರುದಿನ ಪರೀಕ್ಷೆಯ ವಿಷಯವೇ ಅವರಿಗೆ ಮರೆತು ಹೋಗಿತ್ತು. ಅವರು ಏನೂ ಅಧ್ಯಯನ ಮಾಡಿರಲಿಲ್ಲ.

ಮರುದಿನ ಪರೀಕ್ಷೆ. ಈ ಪರೀಕ್ಷೆ ತಪ್ಪಿಸಲು ಏನಾದರೂ ಐಡಿಯಾ ಮಾಡಬೇಕು ಎಂದುಕೊಂಡರು. ನಾವು ನಿನ್ನೆ ರಾತ್ರಿ ಒಂದು ಮದುವೆಗೆ ಹೋಗಿದಾಗ ಒಂದು ಘಟನೆ ನಡೆಯಿತು.  ಬರುವಾಗ ಕಾರಿನ ಒಂದು ಟೈರ್ ಸ್ಪೋಟಗೊಂಡು ರಸ್ತೆಯಲ್ಲಿಯೇ ರಾತ್ರಿಯಿಡಿ ಕಳೆಯಬೇಕಾಯಿತು ಎಂಬ ಸುಳ್ಳನ್ನು ಪ್ರಾಂಶುಪಾಲರ ಬಳಿ ಹೇಳಿದರು. ಇವರ ಮಾತುಗಳನ್ನು ಪ್ರಾಂಶುಪಾಲರು ಕೇಳಿಸಿಕೊಂಡರು. `ಪರವಾಗಿಲ್ಲ, ನಿಮಗೆ ನಾಲ್ವರಿಗೆ ಮೂರು ದಿನದ ನಂತರ ಪರೀಕ್ಷೆ ನಡೆಸುತ್ತೇನೆ, ಚೆನ್ನಾಗಿ ಓದಿಕೊಳ್ಳಿ’ ಎಂದರು. ಯುವಕರಿಗೆ ಖುಷಿಯೋ ಖುಷಿ. ಪರೀಕ್ಷೆಗೆ ಓದಲು ಮೂರು ದಿನ ದೊರಕಿದೆ. ಮೂರು ದಿನ ಎಷ್ಟು ಸಾಧ್ಯವೋ ಅಷ್ಟು ಓದಿ ಅಂದು ಪರೀಕ್ಷೆಗೆ ಬಂದರು. ಪರೀಕ್ಷೆ ಪ್ರಶ್ನೆ ಪತ್ರಿಕೆ ತೆರೆದು ನೋಡಿದಾಗ ಅವರಿಗೆ ಆಶ್ಚರ್ಯವಾಯಿತು. ಯಾಕೆಂದರೆ, ಅದರಲ್ಲಿದ್ದ ಪ್ರಶ್ನೆಗಳು ಈ ಮುಂದಿನಂತೆ ಇದ್ದವು. ಪ್ರಶ್ನೆ 1: ನಿಮ್ಮ ಹೆಸರು ——– (1 ಅಂಕ) ಪ್ರಶ್ನೆ 2: ಮೊನ್ನೆ ನಿಮ್ಮ ಕಾರಿನ ಯಾವ ಟೈರ್ ಸ್ಪೋಟಗೊಂಡಿತು (99 ಅಂಕ) ಆಯ್ಕೆಗಳು ಎ) ಮುಂದಿನ ಎಡ ಟೈರ್ ಬಿ) ಮುಂದಿನ ಬಲ ಟೈರ್ ಸಿ) ಹಿಂದಿನ ಎಡ ಟೈರ್ ಡಿ) ಹಿಂದಿನ ಬಲ ಟೈರ್.

ಈ ನಾಲ್ವರು ನಾಲ್ಕು ರೀತಿಯ ಉತ್ತರ ಬರೆದು ಪ್ರಾಂಶುಪಾಲರ ಕೈಗೆ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೇ.

2 thoughts on “Moral Story: ಪರೀಕ್ಷೆ ತಪ್ಪಿಸಿದ ಹುಡುಗರು

  1. Pingback: ಓದಲೇಬೇಕಾದ ನೀತಿಕತೆ: ವಜ್ರ ಮತ್ತು ರೈತ | Karnataka Best Moral Story

  2. Pingback: Inspiration: ಸ್ಫೂರ್ತಿದಾಯಕ ಬದುಕಿಗೆ ಹತ್ತು ನೀತಿಕತೆಗಳು | ಕರ್ನಾಟಕ Best

Leave a Reply

Your email address will not be published. Required fields are marked *