Tag Archives: ಪ್ರೀತಿ

ಒಂದೇ ಕಡ್ಡಿಯಿಂದ ಮೂವರು ಸಿಗರೇಟು ಹೊತ್ತಿಸ್ಕೊಬಾರ್ದು!

By | 29/08/2012

ಏಕ್ ರೆಗ್ಯುಲರ್, ದೋ ಸ್ಮಾಲ್” ಧ್ವನಿ ಕೇಳಿದಾಕ್ಷಣ ಮುಖ ಮೇಲೆ ಎತ್ತದೆಯೇ ಮೂರು ಸಿಗರೇಟುಗಳನ್ನು ಮುಂದಿಟ್ಟ ಪಾನ್ ಅಂಗಡಿಯ ಹುಳುಕು ಹಲ್ಲಿನ ಹುಡುಗ. ಸ್ಮಂಜಿಗೆ ನೋವಾಗುತ್ತೋ ಎಂಬಂತೆ ಮೆಲ್ಲಗೆ ಸಿಗರೇಟ್ ಬಾಯಿಯೊಳಗಿಟ್ಟು ಅಂಗಡಿಯ ಹರಕು ಡಬ್ಬದ ಮೇಲೆ ಇಟ್ಟಿದ್ದ ಬೆಂಕಿಪೊಟ್ಟಣವನ್ನು ಜೀವನ್ ಕೈಗೆತ್ತಿಕೊಂಡಾಗ ಕಿರಣ್ ಕೂಡ ಸಿಗರೇಟ್ ಬಾಯಲ್ಲಿಟ್ಟುಕೊಂಡು ರೆಡಿಯಾದ. ತನ್ನ ಸಿಗರೇಟಿನ ಮುಂಭಾಗಕ್ಕೆ ಬೆಂಕಿಯಿಟ್ಟು ಕಿರಣ್ ಸಿಗರೇಟಿಗೂ ಜೀವನ್ ಬೆಂಕಿ ಕೊಟ್ಟಾಗ ಪಕ್ಕದಲ್ಲಿದ್ದ ಶ್ರಾವಣ್ ಕೂಡ ಬಾಯಲ್ಲಿ ಸಿಗರೇಟ್ ಇಟ್ಟು ಬೆಂಕಿ ಹತ್ತಿಸಿಕೊಳ್ಳಲು ನೋಡಿದ. ಅರ್ಧ ಉರಿದ ಕಡ್ಡಿಯಲ್ಲಿ ಜೋರಾಗಿ… Read More »

ಪುಟ್ಟಕಥೆ: ಪ್ರೇಮದ ಹಕ್ಕಿ

By | 17/04/2012

ಹೂದೋಟದಲ್ಲಿದ್ದೆ. ಯಾವುದೋ ರೆಕ್ಕೆ ಬಡಿತದ ಸದ್ದು ಕೇಳಿ ಮೇಲ್ನೋಡಿದೆ. ಮುದ್ದಾದ ಹಕ್ಕಿ ನನ್ನನ್ನೇ ನೋಡುತ್ತಿತ್ತು. ಯಾವೂರ ಹಕ್ಕಿಯಿದು? ಎಲ್ಲಿಂದ ಬಂತು? ಸಣ್ಣದಾಗಿದ್ದರೂ ಚೂಟಿಯಾಗಿದೆಯಲ್ವ ಎಂದೆನಿಸಿತು. ನಾನೂ ಹಕ್ಕಿಯತ್ತ ನೋಡಿ ಕಣ್ ಮಿಟುಕಿಸಿದೆ. ಅದು ಗರಿಗೆದರಿ ಸ್ಮೈಲ್ ಕೊಟ್ಟಿತು. ಪ್ರತಿದಿನ ಹೂದೋಟಕ್ಕೆ ಬರುತ್ತಿದ್ದೆ. ಆ ಹಕ್ಕಿ ನನಗೆ ಒಳ್ಳೆ ಕಂಪೆನಿ ಕೊಡುತ್ತಿತ್ತು. ಹೂದೋಟದಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿತ್ತು. ನನ್ನ ಕಣ್ಣುಗಳನ್ನೇ ನೋಡುತ್ತಿತ್ತು. ಹಕ್ಕಿ ಚೆನ್ನಾಗಿರಬೇಕು ಎಂದು ಹೂದೋಟವನ್ನು ಹೆಚ್ಚು ಜತನದಿಂದ ನೋಡಿಕೊಳ್ಳತೊಡಗಿದೆ. ಇತ್ತೀಚೆಗೆ ಹೂದೋಟದಲ್ಲಿ ಬಣ್ಣಬಣ್ಣದ ಹೂವುಗಳು ನಳನಳಿಸುತ್ತಿದ್ದವು. ಹಕ್ಕಿ ಕಾಲ್ಗುಣವಾಗಿರಬೇಕು. ದಿನಕಳೆದಂತೆ… Read More »

ಗೆಳತಿ ಮುಂದೊಂದು ಜನ್ಮವಿದ್ದರೆ

By | 17/10/2011

ಮುಂದೊಂದು ಜನ್ಮವಿದ್ದರೆ ನಮ್ಮೂರ ನದಿ ತೀರದಲ್ಲಿ ಜೊತೆಯಾಗಿ ಆಡೋಣ ಗೆಳತಿ ನನ್ನ ಅಂಗಿಗೆ ನಿನ್ನ ಶಾಲ ಕಟ್ಟಿ ಬಿಡದಂತೆ ಕೈಹಿಡಿದು ಜೊತೆಯಾಗಿ ನಡೆಯೋಣ ಗೆಳತಿ ಮತ್ತೊಂದು ಜನ್ಮವಿದ್ದರೆ ಹಾರಂಗಿ ತೀರದಲ್ಲಿ ಹೂವಾಗಿರೋಣ ದಿನದ ಬದುಕು ಮುಗಿಸೋಣ ಗೆಳತಿ ಮತ್ತೂ ಒಂದು ಜನ್ಮವಿದ್ದರೆ ಪಯಶ್ವಿನಿ, ಕುಮಾರಧಾರ ತೀರದಲ್ಲಿ ಪ್ರೀತಿ ಮನೆಕಟ್ಟೋಣ ಗೆಳತಿ ಕಬಿನಿ, ಕಾಳಿ, ಕಾವೇರಿ ತುಂಗಾ, ವೇದಾ, ಶರಾವತಿ, ಭದ್ರೆ ಎಲ್ಲಾದರೂ ಸರಿ, ಜೊತೆಯಾಗಿರೋಣ ಬಾ ಎಂದರೆ ನದಿ ಬಿಟ್ಟು ಬದುಕೋಣ ಬೇಡವೆಂದರೆ ನದಿಯೊಳಗೆ ಬದುಕೋಣ ನದಿತೀರದಲ್ಲೇ ಹುಟ್ಟಿಬರೋಣ ಗೆಳತಿ ಪ್ರತಿಜನ್ಮ… Read More »

ಕವಿತೆ ಬರೆಯಲಾಗದ ಬ್ರಹ್ಮ ನಿನ್ನ ಸೃಷ್ಟಿಸಿದ

By | 19/02/2011

ಕವಿತೆ ಬರೆಯಲಾಗದ ಬ್ರಹ್ಮ ನಿನ್ನ ಸೃಷ್ಟಿಸಿದ ಒಂದೇ ಕವಿತೆಗೆ ಹಲವು ಮುಖಗಳಿವೆಯಂತೆ! ನಿನ್ನ ಹಾಗೆಯೇ< ನಿನ್ನ ನೋಡಿದ ನಾನು ಕವಿತೆಯ ಸೃಷ್ಟಿಸಲಾಗದೆ ಒದ್ದಾಡಿದೆ… ನೀನು ಸಿಕ್ಕ ಮೇಲೆ ಕವಿತೆಯಲ್ಲಿ ಮೈ ಮರೆತು ಬಿಟ್ಟೆ ನಾನು ಕವಿತೆಯೇ ಅಲ್ಲದ ಪದಗಳಿಗೆ ಕವಿತೆ ಅಂದುಬಿಟ್ಟೆ ಈಗ ಮಾತನಾಡಲು ನೀನಿಲ್ಲ ನಾನು ಮೌನಿಯಾಗಲೇ ಮತ್ತೆ.. ಈ ಕವಿತೆಯ ಒಂದೊಂದು ಚರಣಗಳಿಗೂ ಸಂಬಂಧವಿಲ್ಲ, ಈಗ ಥೇಟ್ ನಮ್ಮ ಹಾಗೆಯೇ… ಪ್ರೀತಿಯ ವ್ಯಾಲಿಡಿಟಿ ಮುಗಿಸಿಬಿಟ್ಟ ಬ್ರಹ್ಮ ಈಗ ನಿನ್ನ ಹೃದಯದಲ್ಲಿ ಕಲ್ಲನ್ನಿಟ್ಟಿದ್ದಾನೆ