Tag Archives: jobs

ಉದ್ಯೋಗ ಸಂದರ್ಶನ: ನಿಮ್ಮ ಬಗ್ಗೆ ಹೇಳಲು ಗೊತ್ತೆ?

By | 24/01/2019

ಉದ್ಯೋಗ ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳಿಗೆ `ನಮ್ಮಲ್ಲಿ ಏನು ಪ್ರಶ್ನೆ ಕೇಳ್ತಾರಪ್ಪ?’ ಎಂಬ ಟೆನ್ಷನ್ ಇರುವುದು ಸಾಮಾನ್ಯ. ಯಾವ ಪ್ರಶ್ನೆ ಕೇಳುತ್ತಾರೆ ಎಂದು ಗೊತ್ತಿದ್ದರೆ ಒಂದಿಷ್ಟು ಹೊತ್ತು ಕನ್ನಡಿ ಮುಂದೆ ನಿಂತುಕೊಂಡು ಉತ್ತರ ಹೇಳಲು ಪ್ರ್ಯಾಕ್ಟೀಸ್ ಮಾಡಬಹುದಿತ್ತು ಎಂದುಕೊಳ್ಳುವವರು ಬಹಳಷ್ಟು ಜನರು ಇರುತ್ತಾರೆ. ಸಂದರ್ಶನದಲ್ಲಿ  ಇದೇ ರೀತಿಯ ಪ್ರಶ್ನೆ ಕೇಳುತ್ತಾರೆ ಎಂದು ಇದಮಿತ್ತಂ ಹೇಳುವುದು ಕಷ್ಟ. ಯಾಕೆಂದರೆ, ಪ್ರಶ್ನೆ ಕೇಳುವುದು ಆಯಾ ಸಂದರ್ಶಕರ ಮರ್ಜಿಗೆ ಬಿಟ್ಟ ವಿಷಯ. ಆದರೆ, ಅವರಲ್ಲಿಯೂ ಪ್ರಶ್ನೆ ಕೇಳಲು ಸಾಕಷ್ಟು ವಿಷಯಗಳು ಇರುವುದಿಲ್ಲ. ಬಹುತೇಕ ಪ್ರಶ್ನೆಗಳು ಈ ಹಿಂದೆ… Read More »

ಏರ್ ಟ್ರಾಫಿಕ್ ಕಂಟ್ರೋಲರ್: ಉದ್ಯೋಗ ಪಡೆಯುವುದು ಹೇಗೆ?

By | 10/06/2018

ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್ ಸಮರ್ಥವಾಗಿ ಆಗುವಂತೆ ನೋಡಿಕೊಳ್ಳುವ `ಏರ್ ಟ್ರಾಫಿಕ್ ಕಂಟ್ರೋಲರ್’ ಉದ್ಯೋಗ ಪಡೆಯುವುದು ಹೇಗೆ? ಇಲ್ಲಿದೆ ಹೆಚ್ಚಿನ ಮಾಹಿತಿ. ನಮ್ಮ ರಾಜ್ಯದಲ್ಲಿ ಬಹುತೇಕ ಪ್ರತಿಭಾವಂತರು ಯಾವೆಲ್ಲ ಉದ್ಯೋಗಗಳ ಲಭ್ಯತೆಯಿದೆ? ಏನು ಓದಿದರೆ ಯಾವ ಹುದ್ದೆ ಪಡೆಯಬಹುದು ಎಂಬ ಸಮರ್ಪಕ ಮಾಹಿತಿಯಿಲ್ಲದ ಕಾರಣದಿಂದಲೇ ಹಲವು ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಗೊತ್ತಿರದ ಅಥವಾ ಸಮರ್ಪಕ ಮಾಹಿತಿ ಇಲ್ಲದ ಉದ್ಯೋಗಗಳಲ್ಲಿ `ಏರ್ ಟ್ರಾಫಿಕ್ ಕಂಟ್ರೋಲರ್’ ಸಹ ಒಂದು. ಬನ್ನಿ, ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ. ರಸ್ತೆಯಲ್ಲಿ ವಾಹನಗಳನ್ನು ನಿಯಂತ್ರಿಸುವ… Read More »

ಫ್ರಿಲ್ಯಾನ್ಸರ್ ಆಗುವುದು ಹೇಗೆ? ಬಿಡುವಿನ ವೇಳೆಯಲ್ಲಿ ಕೈತುಂಬಾ ಗಳಿಸಿ

By | 08/06/2018

ಮನೆಯಲ್ಲಿದ್ದುಕೊಂಡು ಫ್ರಿಲ್ಯಾನ್ಸರ್ ಆಗಿ ಕೆಲಸ ಮಾಡುವವರಿಗೆ ಇಂದಿನ ಆನ್‍ಲೈನ್ ಜಗತ್ತು ಅಪಾರ ಅವಕಾಶ ನೀಡುತ್ತಿದೆ. ಫ್ರಿಲ್ಯಾನ್ಸರ್ ಆಗುವುದು ಹೇಗೆ? ಯಾವ ರೀತಿ ಸಿದ್ಧತೆ ನಡೆಸಬೇಕು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಸೇರಿದಂತೆ `ನಿಮಗೆ ನೀವೇ ಬಾಸ್ ಆಗಲು’ ಸಂಪೂರ್ಣ ಮಾರ್ಗದರ್ಶನ ಇಲ್ಲಿದೆ.

ಇಂಟರ್‍ನೆಟ್ ಗುರು: ಆನ್‍ಲೈನ್ ಟ್ಯೂಟರ್ ಆಗುವಿರಾ?

By | 13/05/2018

ಈಗಿನ ಇಂಟರ್‍ನೆಟ್ ಜಗತ್ತು ಹಲವು ವಿಭಿನ್ನ ಉದ್ಯೋಗಾವಕಾಶಗಳನ್ನು ಮನೆ ಬಾಗಿಲಿಗೆ ತಂದಿರಿಸಿದೆ. ಅಂತಹ ಹುದ್ದೆಗಳಲ್ಲಿ ಆನ್‍ಲೈನ್ ಟೀಚಿಂಗ್ ಸಹ ಪ್ರಮುಖವಾದದ್ದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.