Tag Archives: karnataka best recipes

ಹಾಗಲಕಾಯಿ ಕಿಸ್ಮುರಿ ಸವಿದಿದ್ದೀರಾ…?

By | 23/08/2018

* ಪವಿತ್ರಾ ಹಾಗಲಕಾಯಿ ಎಂದರೆ ಮುಖ ಕಿವುಚುವವರೇ ಜಾಸ್ತಿ. ತಿನ್ನಲು ಕಾಯಿ ಆದರೂ ಇದಕ್ಕೆ ನಮ್ಮ ದೇಹಕ್ಕೆ ಮಾತ್ರ ಔಷಧಿ ಎಂದು ಹೇಳಬಹುದು. ಹಾಗಲಕಾಯಿ ಎಂದರೆ ಅದು ಮಧುಮೇಹಿಗಳಿಗೆ ಮಾತ್ರ ಸೇವಿಸಬಹುದು. ಉಳಿದವರು ತಿನ್ನಲು ಇದು ರುಚಿಕರವಲ್ಲ ಎಂದು ಕೆಲವರು ಅಂದುಕೊಳ್ಳುತ್ತಾರೆ. ಆದರೆ ಈ ಹಾಗಲಕಾಯಿಯಲ್ಲೂ ರುಚಿಕರವಾದ ಅಡುಗೆ ಮಾಡಬಹುದು. ಅಡುಗೆ ಮಾಡುವ ಕಲೆ ಗೊತ್ತಿದ್ದರೆ ಹಾಗಲಕಾಯಿಯಾದರೇನು? ಬೆಂಡೆಕಾಯಿಯಾದರೇನು. ಮಾಡುವ ಮನಸ್ಸು ಆರೋಗ್ಯದ ಕಾಳಜಿ ಇದ್ದರೆ ಹಾಗಲಕಾಯಿ ಕೂಡ ನಿಮ್ಮ ಅಚ್ಚುಮೆಚ್ಚಿನ ಖಾದ್ಯವಾಗುವುದರಲ್ಲಿ ಎರಡು ಮಾತಿಲ್ಲ. ಹಾಗಲಕಾಯಿ ಗೊಜ್ಜು ಸಾಮಾನ್ಯವಾಗಿ ನೀವು… Read More »

ಕಡಿಮೆ ಅವಧಿಯಲ್ಲಿ ಮಾಡಿ ರುಚಿಕರ ಅಕ್ಕಿರೊಟ್ಟಿ

By | 22/08/2018

ಅಕ್ಕಿರೊಟ್ಟಿ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತೆ ಅಲ್ವಾ?. ಆದರೆ ಮಾಡೋದಕ್ಕೆ ತುಂಬಾ ಕಷ್ಟವೆಂದು ಸುಮ್ಮನಾಗುತ್ತೇವೆ. ಹೆಚ್ಚಿನ ಜನರಿಗೆ ಈ ಅಕ್ಕಿ ರೊಟ್ಟಿ ಮಾಡುವುದೆಂದರೆ ಒಂದು ದೊಡ್ಡ ಯಜ್ಞ ಮಾಡಿದವರ ಹಾಗೇ ಮುಖ ಮಾಡುತ್ತಾರೆ. ಯಾಕೆಂದರೆ ಈ ಅಕ್ಕಿ ರೊಟ್ಟಿಯನ್ನು ಮಾಡುವುದಕ್ಕೆ ಬಹಳ ಸಮಯ ಬೇಕಾಗುತ್ತದೆ ಎಂದು ಇದರ ಉಸಾಬರಿಗೆ ಹೋಗುವುದಿಲ್ಲ. ಇನ್ನು ಈ ರೊಟ್ಟಿ ಹದ ತಪ್ಪಿ ದಪ್ಪಗಾದರೆ ಮತ್ತೆ ತಿನ್ನುವುದಕ್ಕೆ ಕಷ್ಟ. ಹಾಗಾಗಿ ತೆಳು ಮಾಡುವುದು ಒಂದು ಕಷ್ಟವಾದರೆ ಹೆಚ್ಚಿನ ಸಮಯ ಹಿಡುತ್ತದೆ ಎನ್ನುವುದು ಇನ್ನೊಂದು ಸಮಸ್ಯೆ. ಇದಕ್ಕೆಲ್ಲಾ… Read More »

ಸಿಹಿ ಪ್ರಿಯರಿಗೆ ಸವಿಯಾದ ಸೌದಿ ಅರೇಬಿಯಾ ಡೆಸಾರ್ಟ್ ರೆಸಿಪಿ

By | 22/08/2018

ಸಿಹಿ ತಿನಿಸು ಎಂದರೆ, ಯಾರಿಗೆ ಪ್ರಿಯವಲ್ಲ ಹೇಳಿ. ಕೆಲವರಿಗೆ  ಊಟವಾದ ನಂತರ ಏನಾದರೂ ಸಿಹಿ ತಿನ್ನಬೇಕು ಎಂಬ ಬಯಕೆ ಇರುತ್ತದೆ. ಇನ್ನು ಕೆಲವರಿಗೆ ಖಾರದ ಜತೆ ಏನಾದರೂ ಸಿಹಿ ಬೇಕೆ ಬೇಕು. ಅದರಲ್ಲೂ ಹಬ್ಬ ಹರಿದಿನಗಳ ದಿನದಲ್ಲಿ  ಅಥವಾ ಮಕ್ಕಳ ಹುಟ್ಟುಹಬ್ಬದ ದಿನದಲ್ಲಿ ತಾಯಂದಿರೂ ಏನಾದರು ಒಂದು ಸಿಹಿ ಖಾದ್ಯ ಮಾಡಬೇಕು ಅದರಲ್ಲೂ ಈಗಿನ ಮಕ್ಕಳ ಬಾಯಿ ರುಚಿಗಾಗಿ ವಿಭಿನ್ನವಾದದ್ದನ್ನು ಮಾಡಬೇಕು ಎಂಬ ಹಂಬಲ ತಾಯಂದಿರದ್ದಾಗಿರುತ್ತದೆ. ಹಾಗಾಗಿ ಸಮಯ ಸಿಕ್ಕಾಗ ನೀವು ಈ ರುಚಿಕರವಾದ ಸೌದಿ ಅರೇಬಿಯಾ ಡೆಸಾರ್ಟ್ ಅನ್ನು ಮಾಡಬಹುದು.… Read More »

ಪಟಾಫಟ್ ಮಾಡಿ, ಬಾಯಲ್ಲಿ ನೀರೂರಿಸುವ ಹುಣಸೆ ತೊಕ್ಕು

By | 20/08/2018

ಹುಣಸೆ ಹಣ್ಣಿನಿಂದ ಏನೇ ಅಡುಗೆ ಮಾಡಿದರೂ ಹುಳಿಹುಳಿಯಾಗಿಸವಿಸವಿಯಾಗಿ ಇರುತ್ತದೆ. ಕರ್ನಾಟಕದಲ್ಲಿ ಬಹುತೇಕರು ಹುಣಸೆ ಹಣ್ಣಿನ ತೊಕ್ಕು ಮಾಡುತ್ತಾರೆ. ಇದು ಅತ್ಯಂತ ಸರಳವಾಗಿ ಮಾಡಬಹುದಾದ ಅಡುಗೆ. ಹುಣಸೆ ತೊಕ್ಕು ಮಾಡಲು ಏನೇನು ಬೇಕು? ಮೊದಲಿಗೆ ಯಾವೆಲ್ಲ ಪದಾರ್ಥಗಳು ಬೇಕು ಎಂದು ನೋಡೋಣ. ಇದಕ್ಕೆ ಬೇಕಾಗುವ ಸಾಮಾಗ್ರಿಗಳು ಅತ್ಯಲ್ಪ. ಮೊದಲಿಗೆ ಕೊಂಚ ಹುಣಸೆಕಾಯಿ ತೆಗೆದುಕೊಳ್ಳಿ. ಹಸಿಮೆನಸಿನ ಕಾಯಿ ನಾಲ್ಕೈದು ಇರಲಿ. ಕೊಂಚ ಅರಸಿಣಪುಡಿ, ಚಿಟಿಕೆ ಇಂಗು ಸಿದ್ಧವಾಗಿಟ್ಟುಕೊಳ್ಳಿ. ಉಪ್ಪು ರುಚಿಗೆ ತಕ್ಕಷ್ಟು. ಮೊದಲು ಸ್ವಲ್ಪ ಉಪ್ಪು ಹಾಕಿ. ರುಚಿ ನೋಡಿಕೊಂಡು ಮತ್ತೆ ಉಪ್ಪು ಹಾಕಬಹುದು.… Read More »