Tag Archives: poem

ಕವಿತೆ: ಬಂದು ಬಿಡು ನೀನೊಮ್ಮೆ!

ಬಂದು ಬಿಡು ನೀನೊಮ್ಮೆ ನಾ ಕರೆಯುವ ಮೊದಲೇ ಒಲವ ಸೆಲೆ ಬತ್ತುವುದರೊಳಗೆ *** ಬಂದು ಬಿಡು ನೀನೊಮ್ಮೆ ನೆನಪುಗಳು ಕರಗುವ ಮೊದಲೇ ಕನಸುಗಳು ಕಮರುವುದರೊಳಗೆ *** ಬಂದು ಬಿಡು ನೀನೊಮ್ಮೆ ಮಾತು ಸಾಯುವ ಮೊದಲೇ ಮೌನ ಅಪ್ಪಿಕೊಳ್ಳುವುದರೊಳಗೆ *** ಬಂದು ಬಿಡು ನೀನೊಮ್ಮೆ ನಗು ಮಾಸುವ ಮೊದಲೇ ಅಳು ಕಾಡುವುದರೊಳಗೆ *** ಬಂದು ಬಿಡು ನೀನೊಮ್ಮೆ ಉಸಿರು ನಿಲ್ಲುವ ಮೊದಲೇ ದೇಹ ಮಣ್ಣಾಗುವುದರೊಳಗೆ

ಗೆಳತಿ ಮುಂದೊಂದು ಜನ್ಮವಿದ್ದರೆ

By | 17/10/2011

ಮುಂದೊಂದು ಜನ್ಮವಿದ್ದರೆ ನಮ್ಮೂರ ನದಿ ತೀರದಲ್ಲಿ ಜೊತೆಯಾಗಿ ಆಡೋಣ ಗೆಳತಿ ನನ್ನ ಅಂಗಿಗೆ ನಿನ್ನ ಶಾಲ ಕಟ್ಟಿ ಬಿಡದಂತೆ ಕೈಹಿಡಿದು ಜೊತೆಯಾಗಿ ನಡೆಯೋಣ ಗೆಳತಿ ಮತ್ತೊಂದು ಜನ್ಮವಿದ್ದರೆ ಹಾರಂಗಿ ತೀರದಲ್ಲಿ ಹೂವಾಗಿರೋಣ ದಿನದ ಬದುಕು ಮುಗಿಸೋಣ ಗೆಳತಿ ಮತ್ತೂ ಒಂದು ಜನ್ಮವಿದ್ದರೆ ಪಯಶ್ವಿನಿ, ಕುಮಾರಧಾರ ತೀರದಲ್ಲಿ ಪ್ರೀತಿ ಮನೆಕಟ್ಟೋಣ ಗೆಳತಿ ಕಬಿನಿ, ಕಾಳಿ, ಕಾವೇರಿ ತುಂಗಾ, ವೇದಾ, ಶರಾವತಿ, ಭದ್ರೆ ಎಲ್ಲಾದರೂ ಸರಿ, ಜೊತೆಯಾಗಿರೋಣ ಬಾ ಎಂದರೆ ನದಿ ಬಿಟ್ಟು ಬದುಕೋಣ ಬೇಡವೆಂದರೆ ನದಿಯೊಳಗೆ ಬದುಕೋಣ ನದಿತೀರದಲ್ಲೇ ಹುಟ್ಟಿಬರೋಣ ಗೆಳತಿ ಪ್ರತಿಜನ್ಮ… Read More »

ಕವಿತೆ ಬರೆಯಲಾಗದ ಬ್ರಹ್ಮ ನಿನ್ನ ಸೃಷ್ಟಿಸಿದ

By | 19/02/2011

ಕವಿತೆ ಬರೆಯಲಾಗದ ಬ್ರಹ್ಮ ನಿನ್ನ ಸೃಷ್ಟಿಸಿದ ಒಂದೇ ಕವಿತೆಗೆ ಹಲವು ಮುಖಗಳಿವೆಯಂತೆ! ನಿನ್ನ ಹಾಗೆಯೇ< ನಿನ್ನ ನೋಡಿದ ನಾನು ಕವಿತೆಯ ಸೃಷ್ಟಿಸಲಾಗದೆ ಒದ್ದಾಡಿದೆ… ನೀನು ಸಿಕ್ಕ ಮೇಲೆ ಕವಿತೆಯಲ್ಲಿ ಮೈ ಮರೆತು ಬಿಟ್ಟೆ ನಾನು ಕವಿತೆಯೇ ಅಲ್ಲದ ಪದಗಳಿಗೆ ಕವಿತೆ ಅಂದುಬಿಟ್ಟೆ ಈಗ ಮಾತನಾಡಲು ನೀನಿಲ್ಲ ನಾನು ಮೌನಿಯಾಗಲೇ ಮತ್ತೆ.. ಈ ಕವಿತೆಯ ಒಂದೊಂದು ಚರಣಗಳಿಗೂ ಸಂಬಂಧವಿಲ್ಲ, ಈಗ ಥೇಟ್ ನಮ್ಮ ಹಾಗೆಯೇ… ಪ್ರೀತಿಯ ವ್ಯಾಲಿಡಿಟಿ ಮುಗಿಸಿಬಿಟ್ಟ ಬ್ರಹ್ಮ ಈಗ ನಿನ್ನ ಹೃದಯದಲ್ಲಿ ಕಲ್ಲನ್ನಿಟ್ಟಿದ್ದಾನೆ