Tag Archives: seethura books

ಪುಸ್ತಕ ಪರಿಚಯ: ಸೇತುರಾಮ್ ಅವರ “ನಾವಲ್ಲ” ಕಥಾ ಸಂಕಲನ

By | 01/08/2018

ಇತ್ತೀಚೆಗೆ ನಾನು ಓದಿ ಮುಗಿಸಿದ ಪುಸ್ತಕ ಎಸ್.ಎನ್. ಸೇತುರಾಮ್ ರಚಿಸಿದ “ನಾವಲ್ಲ” ಎಂಬ ಕಥಾ ಸಂಕಲನ. ದೊಡ್ಡ ಪುಸ್ತಕವನ್ನು ಒಂದೆರಡೇ ದಿನದಲ್ಲಿ ಓದಿ ಮುಗಿಸುವ ನನಗೆ ಈ ಆರು ಕತೆಗಳ ಪುಸ್ತಕವನ್ನು ಓದಿ ಮುಗಿಸಲು ಭರ್ತಿ ಆರು ದಿನ ಬೇಕಾಯಿತು. ತಡವಾಗಿರುವುದಕ್ಕೆ ಕಾರಣ “ಇದರಲ್ಲಿರುವ ಒಂದೊಂದು ಕತೆಯೂ ಮನಸ್ಸಿನ ಮೇಲೆ ಬೀರುವ ಪರಿಣಾಮ, ಚಿಂತನೆಗೆ ಹಚ್ಚುವ ಪರಿ, ಮೂಡಿಸುವ ಭಾವ ಇತ್ಯಾದಿಗಳು”. ನಾನು ಓದಿದ ಅತ್ಯುತ್ತಮ ಕಥಸಂಕಲನವಿದು. ಸೇತುರಾಮ್ ನಾಟಕಗಳು ನನಗಿಷ್ಟ. ಅವರ “ಅತೀತ” ನಾಟಕವನ್ನು ರಂಗಶಂಕರದಲ್ಲಿ ನೋಡಿದ್ದೆ. ಕೆಲವೇ ಪಾತ್ರಗಳಾದರೂ… Read More »