Tag Archives: story

ಕತೆ; ‘ಕೃಷ್ಣಾರ್ಪಣ ಮಸ್ತು’

ಪವಿತ್ರಾ ಶೆಟ್ಟಿ ಅಮ್ಮ ಫೋನ್ ಮಾಡಿದ್ದಳು. ಚಿಕ್ಕಮ್ಮತ್ತೆ ಏನೇನೋ ಮಾತಾಡುತ್ತಿದ್ದಾರೆ. ಯಾಕೋ ಇತ್ತೀಚೆಗೆ ಅವರು ಈ ಲೋಕದಲ್ಲಿ ಇದ್ದವರ ಹಾಗೇ ಇಲ್ಲಪ್ಪ. ನೀ ಒಮ್ಮೆ ಬಂದು ಹೋಗು. ಎದೆಯೊಳಗೆ ಪುಕು ಪುಕು ಶುರುವಾಗಿ ಅದು ಹೊಟ್ಟೆಯೊಳಗೂ ಕಾಣಿಸಿಕೊಂಡು ಯಾಕೋ ಪಾಯಿಖಾನೆಗೆ ಓಡಿಯೇ ಬಿಡೋಣ ಅನ್ನಿಸಿ ಅಮ್ಮಾ.. ನಿನಗೆ ಆಮೇಲೆ ಫೋನ್ ಮಾಡುತ್ತೇನೆ ಎಂದು ಪೋನಿಟ್ಟೆ. ಹೆದರಿಕೆಯಾದಾಗಲೆಲ್ಲ ಹೊಟ್ಟೆಯೊಳಗೆ ಏನೇನೋ ತಳಮಳವಾಗಿ ನನಗೆ ಪಾಯಿಖಾನೆಗೆ ಹೋಗಬೇಕು ಅನ್ನಿಸುವುದು ಮೊದಲಿನಿಂದಲೂ ಇದ್ದ ಖಯಾಲಿ. ಅದು ಚಿಕ್ಕಮ್ಮತ್ತೆಯಿಂದಲೇ ಬಂದ ಉಡುಗೊರೆ. ಇನ್ನು ತಡ ಮಾಡುವುದು ಬೇಡ… Read More »

ಕಿರುಚಿತ್ರ: ಮರೆಯದೇ ನೋಡಿ ‘ಮಾಸದ ನೆನಪು’

‘ ನೆನಪು’ಈ ಹೆಸರು ಕೇಳುತ್ತಲೇ ಎಲ್ಲರ ಮನದಲ್ಲಿ ಇದರ ಕುರಿತು ಸಾಲು ಸಾಲು ಭಾವಗಳೇ ಹೊರಹೊಮ್ಮುತ್ತದೆ. ಇವುಗಳಿಗೆ ಯಾವತ್ತೂ ಸಾವಿಲ್ಲ. ಇವುಗಳಿಗೆ ಅಳಿಸುವ, ನಗಿಸುವ, ಛಲವುಕ್ಕಿಸುವ, ಎಲ್ಲವನ್ನೂ ಅವಡುಗಚ್ಚಿ ಸಹಿಸುವ ಶಕ್ತಿ ಕೂಡ ಇದೆ. ಇವುಗಳಲ್ಲಿ ಎಲ್ಲಕ್ಕಿಂತ ಅತಿಮಧುರವಾದ ನೆನಪೆಂದರೆ ಅದು ಬಾಲ್ಯದ ನೆನಪು. ಈ ಬಾಲ್ಯದ ನೆನಪುಗಳನ್ನೇ ಇಟ್ಟುಕೊಂಡು ಬೈಲ್ಮನಿ ಕ್ರಿಯೇಷನ್ಸ್ ನವರು ‘ಮಾಸದ ನೆನೆಪು’ ಎಂಬ ಕಿರುಚಿತ್ರವೊಂದನ್ನು ಹೊರತಂದಿದ್ದಾರೆ. ಪ್ರಾರಂಭದಲ್ಲಿ ಇದು ನಮ್ಮ ಬಾಲ್ಯದ ನೆನಪುಗಳನ್ನು ಒಂದಷ್ಟು ಕಣ್ಮುಂದೆ ತರಿಸಿ ನಗು ಮೂಡಿಸಿದರೆ ಕೊನೆಗೆ ಕಣ್ಣಂಚನ್ನು ಒದ್ದೆ ಮಾಡಿ… Read More »

ಕಥಾಲೋಕ: ಒಡಲೊಳಗಿನ ಕೆಂಡಸಂಪಿಗೆ…

ಪವಿತ್ರಾ ಶೆಟ್ಟಿ ಎಲ್ಲಾದರೂ ಬಿಟ್ಟು ಬಾ ಈ ಮಗೂನಾ ಶಂಕರಣ್ಣಾ ನೀ ಒಂಬ್ನೆ ಹೆಂಗೇ ಸಾಕ್ತಿಯಾ…? ಹುಟ್ಟಿದ್ದು ಬೇರೆ ಹೆಣ್ಣು ಕೂಸು, ಅವಳ ಪಾಪದ ಪಿಂಡಕ್ಕೆ ನೀ ಯಾಕೆ ಹೊಣೆಗಾರ ಆಗ್ತಿಯಾ…? ಅದರ ಮೂಸುಡಿಯಲ್ಲಿರೋ ಆ ಮಚ್ಚೆ ನೋಡಿದರೆ ಗೊತ್ತಾಗುದಿಲ್ವಾ ಅದು ನಿನ್ನ ರಕ್ತಕ್ಕೆ ಹುಟ್ಟಿದ್ದು ಅಲ್ಲಾ ಅಂತ! ಎಂದು ಬುಡ್ಡಮ್ಮಜ್ಜಿ ಮುದುರಿ ಹೋದ ವೀಳ್ಯದೆಲೆಯ ಮೇಲೆ ಸುಣ್ಣ ಸವರಿಕೊಳ್ತಾ ಅದರ ಮಧ್ಯೆ ಎರಡು ಅಡಿಕೆ ಹೋಳು, ತಲೆಕೂದಲಿನಂತಿರುವ ಹೊಗೆಸೊಪ್ಪನ್ನ ಸೇರಿಸಿ ಬಾಯಲ್ಲಿಟುಕೊಂಡು ಚೆನ್ನಾಗಿ ಜಗಿದು ಪಿಚಕ್ ಎಂದು ಉಗಿದುಬಿಟ್ಟಳು! ತುಸು… Read More »

ಸಣ್ಣ ಕತೆ:’ಸಿಂಗಾರಜ್ಜಿಯ ಮುತ್ತಿನ ಬುಗುಡಿ’

ಪವಿತ್ರ ಶೆಟ್ಟಿ ಹಾವು ಹರಿದಂತಿರುವ ರಸ್ತೆಯಲ್ಲಿ ಬಸಿರಿಯಂತೆ ತೇಕುತ್ತಾ ಬರುತ್ತಿದ್ದ ಬಸ್ ನೋಡಿ ಸಿಂಗಾರಜ್ಜಿ ತನ್ನ ರವಿಕೆಯೊಳಗೆ ಕೈ ಹಾಕಿ ಕರ್ಚಿಫಿನ ಗಂಟೊಂದನ್ನು ತೆಗೆದಿಟ್ಟುಕೊಂಡಳು. ಮುದುರಿ ಹೋಗಿದ್ದ ನೋಟುಗಳನ್ನು ಕರ್ಚಿಫಿನಿಂದ ಹೊರತೆಗೆದು ತನ್ನ ಚೂಪು ಕಣ್ಣಿನಲ್ಲಿಯೇ ಅದನ್ನು ಮೇಲೆ ಕೆಳಗೆ ನೋಡತೊಡಗಿದಳು. ಈಗಿನ ಕ್ಷಣಕ್ಕೊಂದು ಬಣ್ಣ ಬದಲಾಯಿಸುವ ಮನುಷ್ಯರ ಹಾಗೇ ಈ ನೋಟುಗಳು ಕೂಡ ತಮ್ಮ ರೂಪ ಬದಲಿಸಿಕೊಂಡು ಬಣ್ಣ ಬಣ್ಣದ್ದಾಗಿವೆ. ಐವತ್ತು, ಇನ್ನೂರು ರೂಪಾಯಿಗಳ ನೋಟೇ ಗೊತ್ತಾಗುತ್ತಿಲ್ಲ ಎಂದು ಕಣ್ಣಿಗೆ ಇನ್ನೂ ಹತ್ತಿರ ಹಿಡಿದುಕೊಂಡು ನೋಡತೊಡಗಿದಳು. ಯಾರಾ ಹತ್ತಿರವಾದರೂ ಕೇಳುವ… Read More »

ಸಣ್ಣಕತೆ: ಕನ್ನಡಿ ಹೇಳಿದ ಸತ್ಯ

By | 04/09/2018

ಸಣ್ಣಕತೆ: ಕನ್ನಡಿ ಹೇಳಿದ ಸತ್ಯ ಐ ಲವ್ ಯು ಎಂದು ಪ್ರಪೋಸ್ ಮಾಡಿದ ಅವನಿಗೆ ಅವಳು ಕೋಪದಿಂದ “ನಿನ್ನ ಮುಸುಡಿ ಕನ್ನಡಿಯಲ್ಲಿ ನೋಡ್ಕೋ, ಥೂ” ಎಂದು ಬಯ್ದಳು. ಅವನು ಕನ್ನಡಿ ನೋಡಿದ. ಅವಳು ಕುರೂಪಿಯಾಗಿ ಕಂಡಳು. *** ಹನಿಕಥೆ: ಕೂಗು “ಗಂಡಸ್ರನ್ನ ಯಾವತ್ತೂ ನಂಬಬಾರದು” ಮತ್ತೊಮ್ಮೆ ಗೊಣಗಿಕೊಂಡಳು.ಪ್ರೀತಿಸಿ ಕೊನೆ ಕ್ಷಣದಲ್ಲಿ ಕೈಕೊಟ್ಟನಲ್ಲ, ಎಷ್ಟೊಂದು ನಂಬಿಬಿಟ್ಟೆ ಅವನನ್ನು….ಹಾಗಂತ ಅವಳು ಯೋಚಿಸುತ್ತಿರುವಾಗಲೇ “ಮಹೂರ್ತಕ್ಕೆ ಹೆಚ್ಚು ಸಮಯವಿಲ್ಲ. ಹುಡುಗಿನ ಕರೆತನ್ನಿ” ಎಂಬ ಪುರೋಹಿತರ ಧ್ವನಿ ಆಕೆಯನ್ನು ಎಚ್ಚರಿಸಿತು. ಹಿರಿಯರನ್ನು ಅನುಸರಿಸಿಕೊಂಡು ಹೋಗಿ ಹಸೆ ಮೇಲೆ ಕುಳಿತು… Read More »

ಎರಡು ಸಾವಿರದ ಐವತ್ತು, ಜಗತ್ತು ಬದಲಾಗಿಬಿಡ್ತು

By | 15/07/2018

*  ಪ್ರವೀಣ ಚಂದ್ರ “ಸುತ್ತಲೂ ಕಾಡು. ನಡುವೆ ನಮ್ಮ ಮನೆ. ಮನೆ ಪಕ್ಕ ಜುಳುಜುಳು ಹರಿವ ಪುಟ್ಟ ನದಿ. ನೂರಾರು ಹಕ್ಕಿಗಳ ಗಾನ. ಎಲ್ಲೆಲ್ಲೂ ತಂಪು. ವಾಹ್, ಎಷ್ಟೊಂದು ಹಿತ’ ಕನಸಲ್ಲಿ ನನ್ನ ಸ್ವಗತವನ್ನು ನಿಲ್ಲಿಸುವಂತೆ ರೋಬೊ ಎಚ್ಚರಿಸಿತು. “ಗುಡ್ ಮಾರ್ನಿಂಗ್, ಶುಭೋದಯ, ಸಮಯ ಆರುಗಂಟೆ, ಎದ್ದೇಳಿ ಮಿಸ್ಟರ್ ಪ್ರವೀಣ್ ಚಂದ್ರ” ಎಂದಿತು. ಅದು ನಮ್ಮ ಮನೆ ಕೆಲಸಗಾರ ರೋಬೊ. “ಇವತ್ತು ಡೇಟ್ ಎಷ್ಟು?’ ಪಿಳಿಪಿಳಿ ಕಣ್ಣುಬಿಟ್ಟು ಕೇಳಿದೆ. ಅದಕ್ಕೆ ರೋಬೊ  “ಎರಡು ಸಾವಿರದ ಐವತ್ತು, ಅಕ್ಟೋಬರ್ ಇಪತ್ತು’ ಎಂದಿತ್ತು. ಸಮಯ… Read More »