Tag Archives: success story

ಸೂರ್ತಿದಾಯಕ: ವಾಲ್ಟ್ ಡಿಸ್ನಿ ಬದುಕಿನ ಕತೆ

By | 12/01/2019

ಅನಿಮೇಟರ್, ಕಾರ್ಟೂನಿಸ್ಟ್, ನಿರ್ದೇಶಕ, ಉದ್ಯಮಿಯಾಗಿ ವಾಲ್ಟ್ ಡಿಸ್ನಿ ಫೇಮಸ್. ಆತ 20ನೇ ಶತಮಾನದ ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಸುಮಾರು 22 ಅಕಾಡೆಮಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಈಗ ವಾಲ್ಟ್ ಡಿಸ್ನಿ ಕಂಪನಿಯು ಹಲವು ಬಿಲಿಯನ್ ಡಾಲರ್ ವಹಿವಾಟಿನ ಬೃಹತ್ ಕಂಪನಿಯಾಗಿದೆ. ಆದರೆ, ವಾಲ್ಟ್ ಡಿಸ್ನಿಗೆ ಯಶಸ್ಸು ಸಡನ್ ಆಗಿ ಬಂದಿರುವುದಲ್ಲ. ಆತನಿಗೆ ಹೆಜ್ಜೆಹೆಜ್ಜೆಗೂ ಸೋಲು, ಅಪಮಾನಗಳು ಎದುರಾಗುತ್ತಿದ್ದವು. ಸೇನೆಗೆ ಸೇರಬೇಕೆಂಬ ಉದ್ದೇಶದಿಂದ 1917ರಲ್ಲಿ ವಾಲ್ಟ್ ಡಿಸ್ನಿಯು ಶಾಲೆಯನ್ನು ಅರ್ಧಕ್ಕೆ ಬಿಟ್ಟರು. ಆದರೆ, ಸೇನೆಗೆ ಸೇರಲು ವಯಸ್ಸು ಆಗಿಲ್ಲವೆಂಬ ಕಾರಣ ನೀಡಿ ಆತನನ್ನು ಸೇರಿಸಲಿಲ್ಲ.… Read More »

Big Dreams: 20 ಕೋಟಿ ಸಿಕ್ಕರೆ ಏನು ಮಾಡ್ತಿರಿ?

By | 05/12/2018

ನಿಮಗೆ ಅಂದಾಜು 20 ಕೋಟಿ ರೂಪಾಯಿ ನೀಡಿದರೆ ಏನು ಮಾಡುವಿರಿ? ಇಂತಹ ಪ್ರಶ್ನೆ ನನ್ನಲ್ಲಿ ಕೇಳಿದರೆ “ಬೆಂಗಳೂರಿನಲ್ಲಿ ಒಂದು ಸೈಟ್ ಅಥವಾ ಅಪಾರ್ಟ್ ಮೆಂಟ್”(ಬಾಡಿಗೆ ಕೊಟ್ಟು ಸಾಕಾಗಿದೆ), ಊರಲ್ಲಿ ಒಂದು ಆಸ್ತಿ ಖರೀದಿ… ಒಂದು ಒಳ್ಳೆಯ ಕಾರು… ಹೀಗೆ ಒಂದಿಷ್ಟು ಕನಸುಗಳನ್ನು ಬಿಚ್ಚಿಡುತ್ತಿದ್ದೆ. ಬಹುತೇಕರಿಗೆ ಇದೇ ರೀತಿ ಕನಸು ಇರಬಹುದು. ಹಣ ಕೊಡ್ತಿನಿ ಎಂದು ಯಾರು ಪ್ರಶ್ನೆ ಕೇಳುತ್ತಾರೆ? ಇಂತಹ ಪ್ರಶ್ನೆಯನ್ನು ಯಾರಾದರೂ ಕೇಳುತ್ತಾರ? ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ನಿಜಕ್ಕೂ ಇಂತಹ ಪ್ರಶ್ನೆ ಕೇಳಲಾಗಿತ್ತು… ಸಾವಿರಾರು ಜನರು ಈ ಪ್ರಶ್ನೆಗೆ… Read More »

Moral Story: ಚಿಟ್ಟೆಮರಿ ಮತ್ತು ಪರೋಪಕಾರಿ ಹುಡುಗ

By | 17/11/2018

ಅವನು ತುಂಬಾ ಹೃದಯವಂತ. ಯಾರೇ ಕಷ್ಟದಲ್ಲಿದ್ದರೂ ಸಹಾಯ ಮಾಡುವ ಪರೋಪಕಾರಿ. ಒಂದಿನ ಹೂದೋಟಕ್ಕೆ ಹೋದಾಗ ಅಲ್ಲೊಂದು ಚಿಟ್ಟೆಯ ಗೂಡು ಕಂಡ. ರೇಷ್ಮೆ ಹುಳುಗಳ ಗೂಡು ರೀತಿ ಹುಳು ಚಿಟ್ಟೆಯಾಗುವ ಮುನ್ನ ಇಂತಹದೊಂದು ಗೂಡಿನಿಂದ ಹೊರಬರಬೇಕು. ಒಂದಿನ ಈ ಯುವಕ ಆ ಚಿಟ್ಟೆಯ ಗೂಡು ಕಂಡ. ಅದು ಕೊಂಚ ತೆರೆದಿರುವುದನ್ನು ನೋಡಿದ. ತುಂಬಾ ಗಂಟೆ ಅಲ್ಲೇ ಕುಳಿತ.  ಆ ಚಿಟ್ಟೆ ಹುಳು ಪಾಪ ಆ ಗೂಡಿನಿಂದ ತನ್ನ ದೇಹವನ್ನು ಹೊರಗೆ ಹಾಕಲು ತುಂಬಾ ಕಷ್ಟಪಡುತ್ತಿತ್ತು.  ಆ ಯುವಕ ಹೀಗೆ ನೋಡುತ್ತಲೇ ಇದ್ದ. ಪಾಪ… Read More »

Moral Story: ಕುಂಟ ನಾಯಿಮರಿಗೆ ಬೆಲೆ ಎಷ್ಟು?

By | 16/11/2018

ಒಬ್ಬ ಅಂಗಡಿಯವ ತನ್ನ ಅಂಗಡಿಯ ಹೊರಗೆ `ನಾಯಿಮರಿಗಳು ಮಾರಾಟಕ್ಕಿವೆ” ಎಂದು ಬೋರ್ಡ್ ಹಾಕಿದ. ಇಂತಹ ಬೋರ್ಡ್‍ಗಳು ಮಕ್ಕಳನ್ನು ಸೆಳೆಯುತ್ತವೆ ಎಂದು ಅವನಿಗೆ ಗೊತ್ತಿತ್ತು. ಅದೇರೀತಿ ಆಯಿತು. ಪುಟ್ಟ ಬಾಲಕನೊಬ್ಬ ಅಂಗಡಿಗೆ ಬಂದ. `ನಾಯಿಮರಿಯನ್ನು ಎಷ್ಟು ರೂಪಾಯಿಗೆ ಮಾರುವಿರಿ?’ ಎಂದು ಆ ಬಾಲಕ ಪ್ರಶ್ನಿಸಿದ.  `2 ಸಾವಿರ ರೂ.ನಿಂದ 5 ಸಾವಿರ ರೂ.’ ಎಂದು ಅಂಗಡಿ ಮಾಲಿಕ ಉತ್ತರಿಸಿದ.  ಆ ಬಾಲಕ ತನ್ನ ಕಿಸೆಗೆ ಕೈ ಹಾಕಿದ. ಅವನಲ್ಲಿ ಇನ್ನೂರು ರೂಪಾಯಿ ಮಾತ್ರವಿತ್ತು. `ನನ್ನಲ್ಲಿ ಈಗ ಇಷ್ಟೇ ಇದೆ, ನಾನೊಮ್ಮೆ ನಾಯಿ ಮರಿಗಳನ್ನು… Read More »

ಪುಸ್ತಕ ಪರಿಚಯ: ಸಾಫ್ಟ್ ಮನ ಮತ್ತು ಮಹತ್ವಾಕಾಂಕ್ಷೆ

By | 26/08/2018

ಕಾದಂಬರಿಯಾದರೆ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಒಂದೇ ಉಸಿರಿಗೆ ಓದಬಹುದು. ಪುಟ್ಟಪುಟ್ಟ ಲೇಖನಗಳಿಗರುವ ಪುಸ್ತಕಗಳನ್ನು ಒಂದೇ ಸಾರಿ ಓದಿ ಮುಗಿಸಬೇಕಿಲ್ಲ. ಒಂದೊಂದು ಲೇಖನ ಓದಿ ವಿರಮಿಸಿ ಮತ್ತೆ ಮುಂದಿನ ಲೇಖನ ಓದಬಹುದು. ನಾನು ಇತ್ತೀಚೆಗೆ ಒಂದೇ ಬಾರಿ ಎರಡು ಕನ್ನಡ ಪುಸ್ತಕಗಳನ್ನು ಖರೀದಿಸಿದೆ. ಸುಧಾಮೂರ್ತಿಯವರ “ಸಾಫ್ಟ್ ಮನ” ಮತ್ತು ಪರಶಿವಪ್ಪ ಅವರ “ಮಹತ್ವಾಕಾಂಕ್ಷೆ”. ಶೀರ್ಷಿಕೆ ಬೇರೆಬೇರೆಯಾಗಿ ಕಂಡರೂ ಎರಡೂ ಪುಸ್ತಕಗಳೂ ಬದುಕಿನ ಕತೆಗಳನ್ನೇ ಹೇಳಿ ಸ್ಫೂರ್ತಿ ತುಂಬುವಂತದ್ದು. ನಾನು ಈ ಎರಡು ಪುಸ್ತಕಗಳನ್ನೂ ಒಟ್ಟಿಗೆ ಓದಿದೆ! ಅಂದರೆ, ಸಾಫ್ಟ್ ಮನದ ಕೆಲವು… Read More »

ವಿಲಾಸ್ ನಾಯಕ್ ಸಂದರ್ಶನ: ಕಲೆ ಎಂಬ ಕರಿಯರ್

By | 10/06/2018

ಬಹುರಾಷ್ಟ್ರೀಯ ಕಂಪನಿಯ ಉದ್ಯೋಗ ಬಿಟ್ಟು ಕಲೆಯನ್ನೇ ಕರಿಯರ್ ಆಗಿ ಸ್ವೀಕರಿಸಿ ದೇಶ-ವಿದೇಶಗಳಲ್ಲಿ ಮಿಂಚುತ್ತಿದ್ದಾರೆ ಕರ್ನಾಟದ ಪ್ರತಿಭೆ ವಿಲಾಸ್ ನಾಯಕ್. ಕಲೆಯನ್ನು ಪೂರ್ಣಕಾಲಿಕ ಅಥವಾ ಅರೆಕಾಲಿಕ ಕರಿಯರ್ ಆಗಿ ಸ್ವೀಕರಿಸಲು ಬಯಸುವವರಿಗೆ ಸ್ಪೂರ್ತಿ ತುಂಬುವ ಟಿಪ್ಸ್‍ಗಳನ್ನು ವಿಕೆ ಮಿನಿ ವಿಶೇಷ ಸಂದರ್ಶನದಲ್ಲಿ ಅವರು ನೀಡಿದ್ದಾರೆ.  ಪ್ರವೀಣ ಚಂದ್ರ ಪುತ್ತೂರು ರಾಷ್ಟ್ರಮಟ್ಟದ ಅಥವಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಿಂತು ಚಕಚಕನೆ ಕೆಲವೇ ನಿಮಿಷದಲ್ಲಿ ಪೇಂಟಿಂಗ್ ಬಿಡಿಸಿ ಬೆರಗುಗೊಳಿಸುವ ವಿಲಾಸ್ ನಾಯಕ್ ಬಗ್ಗೆ ನಿಮಗೆ ಗೊತ್ತಿರಬಹುದು. ಈಗ ಅವರು ಜಾಗತಿಕ ಮಟ್ಟದಲ್ಲಿ ಅತ್ಯಧಿಕ ಬೇಡಿಕೆ ಪಡೆದಿರುವ ಸ್ಪೀಡ್… Read More »