Tag Archives: website guide

ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಮುಂದೇನು? ಇಲ್ಲಿವೆ 80+ ಕರಿಯರ್ ಆಯ್ಕೆಗಳು

By | 16/07/2020

ಏನು ಓದಿದರೆ, ಯಾವ ಉದ್ಯೋಗ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಹುದು? ಈಗಿನ ಬೇಡಿಕೆಯ ಉದ್ಯೋಗಗಳು ಯಾವುವು? ಇತ್ಯಾದಿ ಶಿಕ್ಷಣ-ಕರಿಯರ್ ಮಾಹಿತಿಯನ್ನು ಯುವಜನತೆಗೆ ಒದಗಿಸುವ ಸಲುವಾಗಿ ಈ ಡಿಜಿಟಲ್‌ ಕೈಪಿಡಿಯನ್ನು ರಚಿಸಲಾಗಿದೆ. ವಿವಿಧ ಹುದ್ದೆಗಳು, ಶೈಕ್ಷಣಿಕ ಆಯ್ಕೆಗಳ ಕುರಿತು ಅಧ್ಯಯನ ನಡೆಸಿ ಮಾಹಿತಿ ನೀಡಲಾಗಿದೆ. ನಿಮ್ಮ ಕರಿಯರ್ ರೂಪಿಸಿಕೊಳ್ಳಲು ವೃತಿಪರ ಸಹಾಯದ ಅಗತ್ಯಬಿದ್ದರೆ ಇಂತಹ ಸೇವೆಯನ್ನು ಒದಗಿಸುವ ಯೋಗ್ಯ, ತಜ್ಞ ವ್ಯಕ್ತಿಗಳಿಂದ ಪಡೆಯಬೇಕು. ಭವಿಷ್ಯ ಬದಲಾಯಿಸಬಹುದು! ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮುಗಿಸಿದ ಪರಿಚಯದ ವಿದ್ಯಾರ್ಥಿಗಳು ಪ್ರತಿವರ್ಷ ಕರೆ ಮಾಡಿ “ಯಾವ ಕೋರ್ಸ್ ಮಾಡಬೇಕು”, “ಯಾವುದನ್ನು… Read More »

ಕೊರೊನಾ ಕಾಲದಲ್ಲಿ ಹಣ ಗಳಿಕೆಗೆ ಕೆಲವು ಅದ್ಭುತ ಉಪಾಯಗಳು!

By | 14/07/2020

ಕೋವಿಡ್‌-೧೯ ಸಂಕಷ್ಟದ ಸಮಯವಿದು. ದೊಡ್ಡ ಉದ್ಯಮಿಯೇ ಇರಲಿ, ಸಣ್ಣ ಉದ್ಯೋಗಿಯೇ ಇರಲಿ. ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಹಣಕಾಸು ಸಂಕಷ್ಟ ಉಂಟಾಗಿಯೇ ಇರುತ್ತದೆ. ಜಗತ್ತಿನ ಅರ್ಥವ್ಯವಸ್ಥೆಯೇ ಸ್ಥಗಿತಗೊಂಡ ಅನುಭವ ಎಲ್ಲರಿಗೂ ಆಗಬಹುದು. ಹೀಗಾಗಿ, ಈ ಕೊರೊನಾ ಸಂಕಷ್ಟದ ಕಾಲದಲ್ಲಿ ನೀವು ಸಕಾರಾತ್ಮಕವಾಗಿ ಯೋಚಿಸುವುದಾದರೆ, ಜೀವನದಲ್ಲಿ ಏನಾದರೂ ಸಾಧಿಸಲು ಬಯಸುವಿರಾದರೆ ಒಂದಿಷ್ಟು ಹಣ ಗಳಿಕೆಯ ಹಾದಿಗಳನ್ನು ಹೇಳುತ್ತಿದ್ದೇನೆ. ಇವುಗಳಲ್ಲಿ ನಿಮಗೆ ಯಾವುದಾದರೂ ನಿಮಗೆ ಸೂಕ್ತವೆನಿಸಿದರೆ ಹೆಚ್ಚು ಯೋಚಿಸದೆ ಮುಂದುವರೆಯಿರಿ. ಸ್ವಂತ ಕಂಪನಿ ಆರಂಭಿಸಿ ಹಣವೇ ಇಲ್ಲ. ಹೊಸ ಕಂಪನಿ ಆರಂಭಿಸಬೇಕೆ? ಎಂದು ನೀವು… Read More »

ವರ್ಡ್‌ಪ್ರೆಸ್‌ ವೆಬ್‌ಸೈಟ್‌ ಸಂಪೂರ್ಣ ಕ್ಲೀನ್‌ ಮಾಡಿ ರಿಸೆಟ್‌ ಮಾಡುವುದು ಹೇಗೆ?

By | 29/06/2020

ವರ್ಡ್‌ಪ್ರೆಸ್‌ ವೆಬ್‌ಸೈಟ್ ನಲ್ಲಿ ಏನೋ ಪ್ರಯೋಗ ಮಾಡಲು ಹೋಗುವಿರಿ. ಯಾವೆಲ್ಲ ಥೀಮ್‌, ಪ್ಲಗಿನ್‌ ಇನ್‌ಸ್ಟಾಲ್‌ ಮಾಡಿರುವಿರಿ. ಹಲವು ಪುಟಗಳು, ಸ್ಯಾಂಪಲ್‌ ಪೋಸ್ಟ್‌ಗಳನ್ನು ರಚಿಸುವಿರಿ. ಯಾಕೋ ಇದು ಸರಿಬರುತ್ತಿಲ್ಲ, ಮತ್ತೆ ಹೊಸದಾಗಿ ವರ್ಡ್‌ಪ್ರೆಸ್‌ ಇನ್‌ಸ್ಟಾಲ್‌ ಮಾಡಿದಂತೆ ನಿಮ್ಮ ವರ್ಡ್‌ಪ್ರೆಸ್‌ ವೆಬ್‌ಸೈಟ್‌ ಇರಬೇಕೆಂದು ಬಯಸುವಿರಿ. ಇದಕ್ಕಾಗಿ ಏನು ಮಾಡಬೇಕು ಎಂಬ ಸರಳ ಟಿಪ್ಸ್‌ ಅನ್ನು ಇವತ್ತು ವರ್ಡ್‌ಪ್ರೆಸ್‌ ಗೈಡ್‌ ಮೂಲಕ ಇಲ್ಲಿ ನೀಡುತ್ತಿದ್ದೇನೆ. ಇದರಿಂದ ಯಾರಿಗೆ ಅನುಕೂಲ? ವಿವಿಧ ಗ್ರಾಹಕರಿಗೆ ವರ್ಡ್‌ಪ್ರೆಸ್‌ ಸೈಟ್‌ಗಳನ್ನು ರಚಿಸಿಕೊಡುವವರು ಡೆಮೊ ವೆಬ್‌ಸೈಟ್‌ ನಿರ್ಮಿಸಿರಬಹುದು. ಮತ್ತೆ ಹೊಸ ಗ್ರಾಹಕರಿಗೆ ತಾಣ… Read More »

ಆನ್ಲೈನ್ ಪೋರ್ಟಲ್ ಆರಂಭಿಸುವಿರಾ? ಸವಾಲು ಮತ್ತು ಅವಕಾಶ ತಿಳಿದುಕೊಳ್ಳಿರಿ

By | 28/06/2020

ಮುದ್ರಣ ಮಾಧ್ಯಮಕ್ಕೆ ಭವಿಷ್ಯವಿಲ್ಲವೆಂಬ ಸುದ್ದಿ ಸುದ್ದಿಮನೆಯಿಂದ ಸುದ್ದಿಮನೆಯೊಳಗೆ ಬಂದು ಸಾಕಷ್ಟು ವರ್ಷಗಳು ಕಳೆದಿವೆ. ಆದರೂ, ಇನ್ನೂ ಹತ್ತಿಪ್ಪತ್ತು ವರ್ಷಗಳು ಏನಾಗಾದೂ ಎಂಬ ಸ್ವಯಂ ನಂಬಿಕೆಯಿಂದ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ಕೊರೊನಾ ಎಂಬುಂದು ಕಾಲಘಟ್ಟವನ್ನು ಸಾಕಷ್ಟು ಸರಿಸಿಬಿಟ್ಟಿದೆ. ಮುದ್ರಣ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುವ ದೊಡ್ಡಪಡೆಯೇ ಕೆಲಸ ಕಳೆದುಕೊಂಡಾಗಿದೆ. ಇದೇ ಸಮಯದಲ್ಲಿ ಡಿಜಿಟಲ್‌ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಕಳೆದ ಒಂದು ವರ್ಷದಿಂದ ಸಾಕಷ್ಟು ಆನ್‌ಲೈನ್‌ ಪೋರ್ಟಲ್‌ಗಳು ಹುಟ್ಟಿಕೊಂಡಿವೆ. ಆನ್‌ಲೈನ್‌ನಲ್ಲಿ ಹೊಸತು ಆರಂಭಿಸಲು ಹೆಚ್ಚು ಹಣ ಬೇಕಿಲ್ಲ. ಒಂದು… Read More »

ಗೂಗಲ್‌ ಆಡ್‌ಸೆನ್ಸ್‌ ಇದೀಗ ಕನ್ನಡ ಭಾಷೆಯಲ್ಲಿಯೂ ಲಭ್ಯ- ಕನ್ನಡ ಬ್ಲಾಗ್‌, ಸುದ್ದಿತಾಣಗಳಿಗೆ ಶುಭಸುದ್ದಿ

By | 03/06/2020

ಬಹುತೇಕ ಕನ್ನಡ ಆನ್‌ಲೈನ್‌ (ಬ್ಲಾಗ್‌, ಸ್ವಂತ ವೆಬ್ಸೈಟ್‌, ಸ್ವಂತ ಸುದ್ದಿ ಪೋರ್ಟಲ್)‌ ಬರಹಗಾರರಿಗೆ ಶುಭಸುದ್ದಿಯೊಂದಿದೆ. ಬಹುತೇಕರು ಕನ್ನಡಕ್ಕೆ ಆಡ್‌ಸೆನ್ಸ್‌ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದರು. ನಾನಂತೂ ಚಾತಕಪಕ್ಷಿಯಂತೆ ಕಾಯುತ್ತಿದ್ದೆ. ನನ್ನ ಇಂಗ್ಲಿಷ್‌ ವೆಬ್‌ ಸೈಟಿಗೆ ಪ್ರಾಯೋಗಿಕವಾಗಿ ಆಡ್‌ಸೆನ್ಸ್‌ ಅನುಮತಿ ಪಡೆದು ಅದನ್ನು ಆಫ್‌ ಮಾಡಿಟ್ಟಿದ್ದೆ. ಜೊತೆಗೆ ಆಡ್‌ಸೆನ್ಸ್‌ಗೆ ಸಂಬಂಧಪಟ್ಟ ಎಲ್ಲಾ ಸೆಟ್ಟಿಂಗ್‌ಗಳನ್ನು ಮಾಡಿ ಮುಗಿಸಿದ್ದೆ. ನೀವೀಗ ಕನ್ನಡ ಭಾಷೆಗೆ ಗೂಗಲ್‌ ಆಡ್‌ಸೆನ್ಸ್‌ ಬೆಂಬಲ ನೀಡುತ್ತದೆಯೇ ಎಂದು ಗೂಗಲ್‌ ತಾಣಕ್ಕೆ ಹೋದರೆ ಅಲ್ಲಿ ನೀಡಲಾದ ಪಟ್ಟಿಯಲ್ಲಿ (ಜೂನ್‌ ೩ರವರೆಗೆ- ಈ ಲೇಖನ ಬರೆಯುತ್ತಿರುವಾಗ)… Read More »

ವೆಬ್ ಸೈಟ್ ಗೈಡ್: ವರ್ಡ್ ಪ್ರೆಸ್ ಸೆಟ್ಟಿಂಗ್ಸ್, ಸೆಟಪ್ ಗಳನ್ನು ಕಲಿಯಿರಿ

By | 14/01/2019

ನಮಸ್ಕಾರ. ವರ್ಡ್ ಪ್ರೆಸ್ ವೆಬ್ ಸೈಟ್ ರಚನೆ ಕುರಿತು ಸರಣಿ ಲೇಖನಗಳನ್ನು ಓದುತ್ತಿದ್ದೀರಿ.  ಈ ಹಿಂದಿನ ವರ್ಡ್ ಪ್ರೆಸ್ ವೆಬ್ ಸೈಟ್ ಗೈಡ್ ಲೇಖನಗಳನ್ನು ಓದದೆ ಇರುವವರು ಎಲ್ಲಾ ಲೇಖನಗಳನ್ನು ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಓದಬಹುದು. ವರ್ಡ್ ಪ್ರೆಸ್ ಮೂಲಕ ಬ್ಲಾಗ್ ರಚನೆ, ಡೊಮೈನ್ ಖರೀದಿ, ಹೋಸ್ಟಿಂಗ್ ಖರೀದಿ, ಬ್ಲಾಗರ್ ಮೂಲಕ ವಿನ್ಯಾಸ ಸೇರಿದಂತೆ ಹಲವು ವಿಷಯಗಳನ್ನು ಕಲಿತಿದ್ದೀರಿ. ಯಾವುದೇ ಖರೀದಿ ಮಾಡದೆ ಆಫ್ ಲೈನ್ ಮೂಲಕ ಪೋರ್ಟೆಬಲ್ ವರ್ಡ್ ಪ್ರೆಸ್ ಮೂಲಕ ಕಂಪ್ಯೂಟರ್ ಡೆಸ್ಕ್ ಟಾಪ್ ನಲ್ಲಿಯೇ… Read More »