ರುಚಿಕರವಾದ ಟೊಮೆಟೊ ದೋಸೆ ಮಾಡುವುದು ಹೇಗೆ ಗೊತ್ತಾ?

By | September 8, 2018
Mobile Apps Category (English)234x60

ದೋಸೆಗಳನ್ನು ತಿನ್ನಲು  ಹೆಚ್ಚಿನವರು ಇಷ್ಟಪಡುತ್ತಾರೆ. ಅದು ನಿಮ್ಮ ನಾಲಿಗೆಯ ರುಚಿಯನ್ನು ಸಹ ಹೆಚ್ಚಿಸುತ್ತದೆ. ಆದರೆ ಒಂದೇ ತರಹದ ದೋಸೆಗಳನ್ನು ತಿನ್ನತಿದ್ದರೆ ಬೇಜಾರಾಗಬಹುದು. ಆದ್ದರಿಂದ ದಿನಕ್ಕೊಂದು ವೆರೈಟಿ ದೋಸೆಗಳನ್ನು ಮಾಡಿ ತಿನ್ನಿ.

ದೋಸೆಯಲ್ಲಿ ಹಲವು ವೆರೈಟಿ ದೋಸೆಗಳಿರುತ್ತವೆ. ನೀರ್ ದೋಸೆ, ಬೆಣ್ಣೆ ದೋಸೆ, ರವಾ ದೋಸೆ ಹೀಗೆ ಹಲವು ಬಗೆಯ ದೋಸೆಗಳಿವೆ. ಸೊಪ್ಪುಗಳು ಹಾಗೂ ತರಕಾರಿಗಳನ್ನು ಬಳಸಿ ಕೂಡ ದೋಸೆಗಳನ್ನು  ಮಾಡಬಹುದು. ಅದರಲ್ಲಿ ಒಂದಾದ ಟೊಮೆಟೊ ದೋಸೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಹಾಗೆ ಸುಲಭವಾಗಿ ಕೂಡ ಮಾಡಬಹುದು.

ಇದಕ್ಕೆ ಬೇಕಾಗುವ ಸಾಮಾಗ್ರಿಗಳ ಲಿಸ್ಟ್ ಇಲ್ಲಿದೆ ನೋಡಿ

ಮೊದಲಿಗೆ ದೋಸೆ ಹಿಟ್ಟು 2 ಕಪ್ ತೆಗೆದುಕೊಳ್ಳಿ(ಈ ದೋಸೆ ಹಿಟ್ಟನ್ನು ರೆಡಿ ಮಾಡಲು 1 ಗ್ಲಾಸ್ ಅಕ್ಕಿ ಮತ್ತು 1/4 ಗ್ಲಾಸ್ ಉದ್ದಿನ ಬೇಳೆ, ಸ್ವಲ್ಪ ಅವಲಕ್ಕಿ, ಸ್ವಲ್ಪ ಕಡಲೆಬೇಳೆ ಬೇಕು) , ಹಸಿ ಮೆಣಸಿನಕಾಯಿ 3, ಟೊಮೆಟೊ  2 , ಜೀರಿಗೆ 1 ಚಮಚ, ಹಸಿ ಶುಂಠಿ ಸ್ವಲ್ಪ, ರುಚಿಗೆ ಬೇಕಾಗುವಷ್ಟು ಉಪ್ಪು, ಸ್ವಲ್ಪ  ಎಣ್ಣೆ,

ಈಗ ಟೊಮೆಟೊ ದೋಸೆ ಮಾಡೋದು ಹೇಗೆಂದು ತಿಳಿಯೋಣ

ಮೊದಲಿಗೆ ದೋಸೆ ಹಿಟ್ಟು ರೆಡಿ ಮಾಡಿಕೊಳ್ಳಿ. ಅದಕ್ಕೆ ಬೇಕಾದ ಅಕ್ಕಿ, ಅವಲಕ್ಕಿ, ಕಡಲೆಬೇಳೆ, ಉದ್ದಿನ ಬೇಳೆಯನ್ನು ತೆಗೆದುಕೊಂಡು  ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ ನಂತರ ಚೆನ್ನಾಗಿ ತೊಳೆದು ರುಬ್ಬಿ 8-9 ಗಂಟೆಗಳ ಕಾಲ ಹಾಗೇ ಇಡಿ (ರಾತ್ರಿ ರುಬ್ಬಿಟ್ಟರೆ ಬೆಳಗ್ಗೆ ದೋಸೆಗೆ ಹಿಟ್ಟು ರೆಡಿಯಾಗುವುದು).

ಬೆಳಗ್ಗೆ ದೋಸೆ ಮಾಡುವ ಅರ್ಧ ಗಂಟೆ ಮೊದಲು ಟೊಮೆಟೊ, ಹಸಿ ಮೆಣಸಿನಕಾಯಿ, ಶುಂಠಿ, ಜೀರಿಗೆ ಒಟ್ಟಿಗೆ ಸೇರಿಸಿ ನೀರು ಹಾಕದೆ ಮಿಕ್ಸಿಯಲ್ಲಿ ರುಬ್ಬಿ. ನಂತರ ಅದನ್ನು ದೋಸೆ ಹಿಟ್ಟಿಗೆ ಹಾಕಿ ಆಮೇಲೆ ಅದಕ್ಕೆ ರುಚಿಗೆ ತಕ್ಕ ಉಪ್ಪು ಮತ್ತು ಸ್ವಲ್ಪ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಗ್ಯಾಸ್ ಮೇಲೆ ತವಾ ಕಾಯಲು ಇಟ್ಟು, ಅದು ಕಾದ ಮೇಲೆ ಅದರ ಮೇಲೆ ದೋಸೆ ಹುಯ್ಯಿರಿ. ಸುತ್ತಲೂ ಎಣ್ಣೆ ಹಾಕಿ ಹದವಾದ ಉರಿಯಲ್ಲಿ ಬೇಯಿಸಿ. ಈಗ ಗರಿಗರಿಯಾದ ಮತ್ತು ಬಾಯಿಗೆ ರುಚಿಕರವಾದ ಟೊಮೆಟೊ ದೋಸೆ ಸವಿಯಲು ಸಿದ್ದ.

ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ. 

ನಮ್ಮ ಇಮೇಲ್ ವಿಳಾಸ: bpchand@gmail.com

Scroll To Top
Contact Us