ನೀತಿಕತೆ: ಎಲ್ಲರ ಬದುಕಿನಲ್ಲಿಯೂ ಒಂದು ಕತೆ ಇರುತ್ತದೆ

By | 22/10/2018

ಇಪ್ಪತ್ನಾಲ್ಕು ವರ್ಷ ವಯಸ್ಸಿನ ತರುಣ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಕಿಟಕಿಯಾಚೆ ನೋಡಿ ಆ ಯುವಕ `ಅಪ್ಪ, ನೋಡಲ್ಲಿ, ಮರಗಳು ಹಿಂದೆ ಓಡುತ್ತಿವೆ’ ಎಂದ. ತಂದೆ ನಕ್ಕರು. ಆ ತರುಣನ ಎದುರು ಕುಳಿತ ನವದಂಪತಿಗಳಿಗೆ ಇದು ಅಸಹನೀಯ ಅನಿಸಿತು. ಇಷ್ಟು ದೊಡ್ಡ ಯುವಕ ಪುಟ್ಟ ಮಕ್ಕಳಂತೆ ಇದ್ದಾನಲ್ಲ ಎಂದೆನಿಸಿತು. 

ಸ್ವಲ್ಪ ಹೊತ್ತಿನಲ್ಲಿ ಆ ತರುಣ `ಅಪ್ಪ, ಮೋಡಗಳೂ ನಮ್ಮೊಂದಿಗೆ ಸಾಗುತ್ತಿವೆ’ ಎಂದ. ಈಗ ನವದಂಪತಿಗಳಿಗೆ ತಡೆಯಲಾಗಲಿಲ್ಲ. ಆ ಯುವಕನ ತಂದೆಗೆ `ಇವನನ್ನು ಒಳ್ಳೆಯ ವೈದ್ಯರಿಗೆ ಯಾಕೆ ತೋರಿಸಬಾರದು?’ ಎಂದರು. 

ಅದಕ್ಕೆ ಹಿರಿಯ ವ್ಯಕ್ತಿ ನಕ್ಕು ಉತ್ತರಿಸಿದರು. `ನಾನು ವೈದ್ಯರಿಗೆ ತೋರಿಸಿದ್ದೆ. ನಾವೀಗ ಆಸ್ಪತ್ರೆಯಿಂದ ಬರುತ್ತಿದ್ದೇವೆ. ನನ್ನ ಮಗ ಹುಟ್ಟಿನಿಂದಲೇ ಅಂಧ. ಅವನಿಗೆ ಇವತ್ತು ಕಣ್ಣು ಬಂತು’ ಎಂದಾಗ ಪ್ರಶ್ನೆ ಕೇಳಿದವರು ತಲೆತಗ್ಗಿಸಿದರು.

ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಅವರ ಕತೆ ಹೊಂದಿರುತ್ತಾರೆ. ಅವರದ್ದೇ ಆದ ಸಾಮರ್ಥ್ಯ ಅಥವಾ ದೌರ್ಬಲ್ಯ ಹೊಂದಿರುತ್ತಾರೆ. ಹೀಗಾಗಿ, ಯಾವುದೆ ವ್ಯಕ್ತಿಯ ಕುರಿತು ಮೊದಲ ನೋಟಕ್ಕೆ ನಿರ್ಧರಿಸಬೇಡಿ.

Source: google

ಇನ್ನಷ್ಟುನೀತಿಕತೆ, ವ್ಯಕ್ತಿತ್ವ ವಿಕಸನ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿರಿ

One thought on “ನೀತಿಕತೆ: ಎಲ್ಲರ ಬದುಕಿನಲ್ಲಿಯೂ ಒಂದು ಕತೆ ಇರುತ್ತದೆ

  1. Pingback: Inspiration: ಸ್ಫೂರ್ತಿದಾಯಕ ಬದುಕಿಗೆ ಹತ್ತು ನೀತಿಕತೆಗಳು | ಕರ್ನಾಟಕ Best

Leave a Reply

Your email address will not be published. Required fields are marked *