ಕವಿತೆ ಬರೆಯಲಾಗದ ಬ್ರಹ್ಮ ನಿನ್ನ ಸೃಷ್ಟಿಸಿದ

ಕವಿತೆ
ಬರೆಯಲಾಗದ ಬ್ರಹ್ಮ
ನಿನ್ನ ಸೃಷ್ಟಿಸಿದ

ಒಂದೇ ಕವಿತೆಗೆ
ಹಲವು ಮುಖಗಳಿವೆಯಂತೆ!
ನಿನ್ನ ಹಾಗೆಯೇ<

ನಿನ್ನ ನೋಡಿದ ನಾನು
ಕವಿತೆಯ ಸೃಷ್ಟಿಸಲಾಗದೆ
ಒದ್ದಾಡಿದೆ…

ನೀನು ಸಿಕ್ಕ ಮೇಲೆ
ಕವಿತೆಯಲ್ಲಿ
ಮೈ ಮರೆತು ಬಿಟ್ಟೆ ನಾನು

ಕವಿತೆಯೇ
ಅಲ್ಲದ ಪದಗಳಿಗೆ
ಕವಿತೆ ಅಂದುಬಿಟ್ಟೆ

ಈಗ
ಮಾತನಾಡಲು ನೀನಿಲ್ಲ
ನಾನು ಮೌನಿಯಾಗಲೇ ಮತ್ತೆ..

ಈ ಕವಿತೆಯ
ಒಂದೊಂದು ಚರಣಗಳಿಗೂ
ಸಂಬಂಧವಿಲ್ಲ, ಈಗ

ಥೇಟ್ ನಮ್ಮ ಹಾಗೆಯೇ…

ಪ್ರೀತಿಯ ವ್ಯಾಲಿಡಿಟಿ
ಮುಗಿಸಿಬಿಟ್ಟ ಬ್ರಹ್ಮ
ಈಗ ನಿನ್ನ ಹೃದಯದಲ್ಲಿ ಕಲ್ಲನ್ನಿಟ್ಟಿದ್ದಾನೆ