ನಗುವ ಹೂವಿಗೆ..

ನಗುವ ಹೂವಿಗೆ

ದಿನಕ್ಕೊಂದಿಷ್ಟು ಮುಗುಳು ನಗು
ದಿನಕರನ ನೋಡಿ..
ಬಿರಿದಾಂಗೆ ಬಳ್ಳಿತುಂಬಾ ಮಲ್ಲಿಗೆ ಮೊಗ್ಗು
ಏನೆನ್ನಲಿ ಹುಡುಗಿ ನಿನ್ನ ನಗುವ ಬೆಡಗು

ಕಪ್ಪು ಸಮಾಜದ ನಡುವೆ
ಕಣ್ಣಾ ಮುಚ್ಚಾಲೆ ಆಟವೇ…
ಯಾರಿಗೂ ಕಾಣದಾಂಗೆ ಸ್ಫುರಿಸುವೆ
ಮುಗುಳ್ನಗೆಯ ಒಲವ ನೋಟ…

ನಿನ್ನೀ ನಗುವಲ್ಲಿ ನೂರು ಮಾತು
ನೂರೊಂದು ಮಧುರ ಕಾವ್ಯ..
ಭಾವ ನವಿರೇಳುತಿದೆ
ನಲಿದಾಡುತಿದೆ ನವಿಲಾಗಿ ಮನಸ್ಸು…

ಒಲವ ರಂಗವಲ್ಲಿ ಚೆಲುವ ರಾಗದಲ್ಲಿ
ಅನುರಾಗದ ಕಂಪು ಕಣಜ
ನಿನ್ನೀ ಮನ ಮೈಮಾಟದಲ್ಲಿ
ಮಳೆ ಬಿಲ್ಲ ಚೆಲುವು…

ನಿತ್ಯ ನಗುವ ಮಲ್ಲಿಗೆಯಾಗು
ಕನಸ ಮುದ್ದು ಬದುಕ ಹಾಳೆಗೆ
ಸಮಾಜದ ಉರಿಯ ನಾಲಗೆಗೆ ಸಿಗದಾಂಗೆ
ಅಕ್ಷಯ ನಗುವಿರಲಿ ನಾಳೆಗೆ..

ಇದನ್ನೂ ಓದಿ  ಹನಿ ಹನಿ