ಕವಿತೆ ಬರೆಯಲಾಗದ ಬ್ರಹ್ಮ ನಿನ್ನ ಸೃಷ್ಟಿಸಿದ

By | 19/02/2011

ಕವಿತೆ
ಬರೆಯಲಾಗದ ಬ್ರಹ್ಮ
ನಿನ್ನ ಸೃಷ್ಟಿಸಿದ

ಒಂದೇ ಕವಿತೆಗೆ
ಹಲವು ಮುಖಗಳಿವೆಯಂತೆ!
ನಿನ್ನ ಹಾಗೆಯೇ<

ನಿನ್ನ ನೋಡಿದ ನಾನು
ಕವಿತೆಯ ಸೃಷ್ಟಿಸಲಾಗದೆ
ಒದ್ದಾಡಿದೆ…

ನೀನು ಸಿಕ್ಕ ಮೇಲೆ
ಕವಿತೆಯಲ್ಲಿ
ಮೈ ಮರೆತು ಬಿಟ್ಟೆ ನಾನು

ಕವಿತೆಯೇ
ಅಲ್ಲದ ಪದಗಳಿಗೆ
ಕವಿತೆ ಅಂದುಬಿಟ್ಟೆ

ಈಗ
ಮಾತನಾಡಲು ನೀನಿಲ್ಲ
ನಾನು ಮೌನಿಯಾಗಲೇ ಮತ್ತೆ..

ಈ ಕವಿತೆಯ
ಒಂದೊಂದು ಚರಣಗಳಿಗೂ
ಸಂಬಂಧವಿಲ್ಲ, ಈಗ

ಥೇಟ್ ನಮ್ಮ ಹಾಗೆಯೇ…

ಪ್ರೀತಿಯ ವ್ಯಾಲಿಡಿಟಿ
ಮುಗಿಸಿಬಿಟ್ಟ ಬ್ರಹ್ಮ
ಈಗ ನಿನ್ನ ಹೃದಯದಲ್ಲಿ ಕಲ್ಲನ್ನಿಟ್ಟಿದ್ದಾನೆ

7 thoughts on “ಕವಿತೆ ಬರೆಯಲಾಗದ ಬ್ರಹ್ಮ ನಿನ್ನ ಸೃಷ್ಟಿಸಿದ

  1. lathashree

    ಒಂದೇ ಕವಿತೆಗೆ
    ಹಲವು ಮುಖಗಳಿವೆಯಂತೆ!
    ನಿನ್ನ ಹಾಗೆಯೇ

    Reply
  2. kv

    kavithe bhavapoornavagide… adre e kavithe thamma swantha anubhavada hage anistha ede

    Reply
  3. kv

    ಕೆಲವರು ಕ್ಷಣ ಕಾಲ ಜೊತೆಗಿದ್ದರೂ ಚಿರಕಾಲ ನೆನಪಲ್ಲುಳಿಯುತ್ತಾರೆ
    ಇನ್ನು ಕೆಲವರು ಚಿರಕಾಲ ಜೊತೆಯಲ್ಲಿದ್ದರೂ ಕ್ಷಣ ಕಾಲದ ನೆನಪಿಗೂ ಯೋಗ್ಯರಾಗಿರುವುದಿಲ್ಲ!!!
    this is the reality of life

    Reply
  4. chukkichandira

    ಪ್ರೀತಿಯಿಂದ ಪ್ರತಿಕ್ರಿಯೆ ನೀಡಿದ ರಂಜನ್, ಲತಾಶ್ರೀ, ran, ಆಸು ಹೆಗ್ಡೆ, ಕೆವಿ ಎಲ್ಲರಿಗೂ ಧನ್ಯವಾದಗಳು.ಓದಿ ಪ್ರತಿಕ್ರಿಯೆ ನೀಡದೆ ಪರಾರಿಯಾದವರಿಗೂ ಧನ್ಯವಾದಗಳು. ಕೆಲವರು ಕ್ಷಣ ಕಾಲ ಜೊತೆಗಿದ್ದರೂ ಚಿರಕಾಲ ನೆನಪಲ್ಲುಳಿಯುತ್ತಾರೆ ಎಂಬ ಕೆವಿ ಮಾತು ಇಷ್ಟವಾಯಿತು. ಆದರೆ ಸ್ವಂತ ಅನುಭವನಾ ಅನ್ನೋ ನಿಮ್ಮ ಕುಟುಕಿಗೆ ನನ್ನದ್ದು ಒಂದು ಕಿರುನಗೆ

    Reply

Leave a Reply

Your email address will not be published. Required fields are marked *