ನೀತಿಕತೆ: ಬಾವಿಗೆ ಬಿದ್ದ ಕತ್ತೆ, ಎದ್ದುಬಂದ ಕತೆ

By | 22/10/2018

ಒಬ್ಬ ವ್ಯಕ್ತಿಯು ಕತ್ತೆಯೊಂದನ್ನು ಸಾಕಿದ್ದ. ಅದು ಅವನ ಪ್ರೀತಿಯ ಕತ್ತೆಯಾಗಿತ್ತು. ಒಂದು ದಿನ ದಾರಿಯಲ್ಲಿ ಬರುತ್ತಿರುವಾಗ ಆ ಕತ್ತೆ ಪುಟ್ಟ ಬಾವಿಯೊಂದಕ್ಕೆ ಬಿದ್ದುಬಿಟ್ಟಿತು. ಎಷ್ಟೇ ಕಷ್ಟಪಟ್ಟರೂ ಆ ಕತ್ತೆಯನ್ನು ಅಲ್ಲಿಂದ ಹೊರತೆಗೆಯುವ ದಾರಿ ಅವನಿಗೆ ಹೊಳೆಯಲಿಲ್ಲ.

ಸುತ್ತಲೂ ಜನರು ಗುಂಪುಗೂಡಿದ್ದರು. ಇದನ್ನು ಇಲ್ಲೇ ಬಿಟ್ಟು ಹೋದರೆ ಪಾಪ ತುಂಬಾ ಕಷ್ಟಪಡುತ್ತದೆ. ಅದಕ್ಕಾಗಿ ಈ ಪುಟ್ಟ ಬಾವಿಗೆ ಮಣ್ಣು ತುಂಬಿ ಅದನ್ನು ಕೊಂದು ಬಿಡಿ ಎಂಬ ಅಭಿಪ್ರಾಯ ಬಂತು.

ತನ್ನ ಪ್ರೀತಿಯ ಕತ್ತೆಯನ್ನು ಸಾಯಿಸಲು ಅವನಿಗೆ ಮನಸ್ಸು ಬರಲಿಲ್ಲ.

ಆದರೆ, ಬಾವಿಯೊಳಗೆ ನರಳಿ ನರಳಿ ಕಷ್ಟಪಡುವುದಕ್ಕಿಂತ ಸಾಯಿಸೋಣ ಎಂದು ನಿರ್ಧರಿಸಿದ.

ಆ ಕತ್ತೆಯನ್ನು ಬಾವಿಗೆ ಮಣ್ಣುತುಂಬಿ ಸಮಾದಿ ಮಾಡಲು ಬಯಸಿದ.

ಅದಕ್ಕಾಗಿ ಅಲ್ಲೇ ಪಕ್ಕದಲ್ಲಿದ್ದ ಮಣ್ಣಿನ ರಾಶಿಯನ್ನು ಆ ಪುಟ್ಟ ಬಾವಿಗೆ ತುಂಬತೊಡಗಿದ. 

ಈತ ಮಣ್ಣು ತುಂಬಿದಂತೆಲ್ಲ ಆ ಕತ್ತೆ ಮಣ್ಣನ್ನು ಕೊಡವಿ ಮೇಲೆ ಏಳುತ್ತಿತ್ತು. ಆತ ಇದರ ಪರಿವೆ ಇಲ್ಲದೇ ಮತ್ತಷ್ಟು ಮಣ್ಣನ್ನು ತುಂಬುತ್ತಲೇ ಇದ್ದ.

ಆ ಪುಟ್ಟ ಬಾವಿಯ ಮುಕ್ಕಾಲು ಭಾ ಮಣ್ಣು ತುಂಬಿದಾಗ ಈ ಕತ್ತೆ ನೆಗೆದು ಮೇಲಕ್ಕೆ ಬಂತು. ತನ್ನ ಮೇಲೆ ಬಿದ್ದ ಮಣ್ಣನ್ನು ಕೊಡುವಿದ್ದರಿಂದಲೇ ಆ ಕತ್ತೆ ಬದುಕಲು ಸಾಧ್ಯವಾಯಿತು.

ಎಲ್ಲೋ ಓದಿದ  ಈ ಕತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.
  •  ಜೀವನದಲ್ಲಿ, ಉದ್ಯೋಗದಲ್ಲಿ, ಓದುವ ಸಮಯದಲ್ಲಿ ಈ ರೀತಿ ನಮ್ಮ ಮೇಲೆ ಮಣ್ಣು (ಸಮಸ್ಯೆಗಳು) ಬೀಳುತ್ತಲೇ ಇರುತ್ತದೆ. ನಾವು ಅದನ್ನು ಧೈರ್ಯದಿಂದ ಕೊಡವಿ ಎದ್ದೇಳುತ್ತ ಗುರಿ ತಲುಪಬೇಕು.
  • ಗುರಿ ಹತ್ತಿರದಲ್ಲಿದ್ದಾಗ ಕತ್ತೆ ನೆಗೆದಂತೆ ನಾವೂ ಗುರಿ ತಲುಪಲು ಪ್ರಯತ್ನ ಹೆಚ್ಚಿಸಬೇಕು. ಇನ್ನೂ ಮಣ್ಣು ಬೀಳಲಿ ಎಂದು ಕಾಯದೆ ಯಶಸ್ಸಿನತ್ತ ಜಿಗಿಯಬೇಕು.
  • .
Source: google

2 thoughts on “ನೀತಿಕತೆ: ಬಾವಿಗೆ ಬಿದ್ದ ಕತ್ತೆ, ಎದ್ದುಬಂದ ಕತೆ

  1. Pingback: ಓದಲೇಬೇಕಾದ ನೀತಿಕತೆ: ವಜ್ರ ಮತ್ತು ರೈತ | Karnataka Best Moral Story

  2. Pingback: Inspiration: ಸ್ಫೂರ್ತಿದಾಯಕ ಬದುಕಿಗೆ ಹತ್ತು ನೀತಿಕತೆಗಳು – ಕರ್ನಾಟಕ Best

Leave a Reply

Your email address will not be published. Required fields are marked *