ಮಳೆಯ ಕಾವ್ಯ

ಮಳೆ ಬರೆದಿದೆ ಕಾವ್ಯ
ಕವನ
ಕಂಬನಿಯಲಿ
ಪಲ್ಗುನಿ ದುರಂತದಲಿ

ಮಳೆ ಬರೆದಿದೆ ಕಾವ್ಯ
ರೈತನ ಮನದಲಿ
ಬನದಲ್ಲಿ
ಹೂವು ವನದಲಿ

ಮಳೆ ಬರೆದಿದೆ ಕಾವ್ಯ
ಕಡಲಿನಲ್ಲಿ
ಕನ್ನಿರಿನಲ್ಲಿ
ದೋಣಿ ದುರಂತದಲಿ

ಕಾವ್ಯ ಬರೆದದ್ದು
ಮಳೆಯೋ
ನಾವೋ
ಯೋಚನೆಗೆ ಬಿಟ್ಟದ್ದು