ಗೋರಿ ಗೋರಿಗಳ ನಡುವೆ ಲಗೋರಿ

ಊಸರವಲ್ಲಿ ನನ್ನೂರು
ದಿನ ದಿನವೂ ಬಣ್ಣ ಬದಲಾಯಿಸುತ್ತಿದೆ

ಸೂರು ಏರುತ್ತಿದೆ, ನಿಟ್ಟುಸಿರು ಜೊತೆಗೆ
ತೇರು ಎಳೆಯೋರಿಲ್ಲ ಹಳೆ ರಥಗಳು ಜಾತ್ರೆಗೆ..
ಉಕ್ಕುತುಕ್ಕು ಹಿಡಿಯೋ ಮುನ್ನ ಕಾಯಿಸಿ ಬಡಿಯೋರಿಲ್ಲ
ಬೇವು, ಬೆಲ್ಲ, ಎಳ್ಳು ಎಲ್ಲ್ಲಾಅರ್ಥವಾಗೊದಿಲ್ವ

ಎಲೆಗರು ಆಸೆಯಿಂದ ಕೆಚ್ಚಲು ನೋಡುತ್ತಿಲ್ಲ
ಕಟ್ಟಿರುವೆ ಕಚ್ಚುತಿಲ್ಲ, ನೆಲಗಚ್ಚುತ್ತಿರುವ ಅರಿವಿಲ್ಲ
ಹಿಂಗಾರ, ಮುಂಗಾರ, ದಿನಕ್ಕೆ ಎಷ್ಟು ಕಾಲ ಹೇಳು ಕಾಲ
ಹೇಳು ಪ್ರೀತಿಗೂ ಬಂದಾವ ಬರಗಾಲ

ಮೈ ನೆರೆದಿದ್ದ ಹುಡುಗಿ, ಗುಳಿ ಕೆನ್ನೆ ಬೆಡಗಿ
ಬಾಣಂತಿ ಕಳೆದು ಹೋಗಿಹಳು ಸೊರಗಿ
ಚಿಲಿಪಿಳಿ ಹಕ್ಕಿ, ಕುಹೂ ಕುಹೂ ಕೊಳಲು.. ಎಲ್ಲಿ ಅಳಿಲು
ಹೇಳು ಊಸರವಲ್ಲಿ ನಿನಗೆ ಎಷ್ಟು ಬಣ್ಣ

kadu kadade ಇದ್ದರೂ ಬಣ್ಣ ಎಷ್ಟು ಬದಲಾದರೂ
ಬದಲಾಗಿಲ್ಲ ನನ್ನ ಒಲವಿನ ಹುಡುಗಿ
ಅದೇ ಉಬ್ಬು, ತಗ್ಗು ನಯ ನಾಜೂಕು
ಸಾಕೆನಗೆ ಕೊನೆಯವರೆಗೂ

ಗೋರಿ ಗೋರಿಗಳ ನಡುವೆ ಲಗೋರಿ !

Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಹಿರಿಯ ಉಪಸಂಪಾದಕ. ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ ಓದುವುದು, ಬರೆಯುವುದು ಇಷ್ಟದ ಕೆಲಸ. ನನ್ನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ಕಿಸಿ ಧನ್ಯವಾದ

Leave a Reply

This site uses Akismet to reduce spam. Learn how your comment data is processed.