ಆರ್ತನಾದ

ಆರ್ತನಾದ
ಕಾಲದ ಚಕ್ರದಲ್ಲಿ
ಅತ್ತಇತ್ತ
ಉರುಳುರುತ
ಕರುಳ ಉರಿಸುವ
ನೋವಿನ ಕಾವಿನಿಂದ
ನರಳುತ್ತ
ಸಾವಿನತ್ತ
ಸಾಗಲು
ಸಿದ್ಧವಾಗಿ ನಿಂತಿಹ
ಮುದುಕಿ ನಾನು….
ಅರ್ಥವಿಲ್ಲದ
`ಅರ್ಥದ’
ಬೆನ್ನ ಹಿಂದೆ ಹಾರಿದ
ಹೊಟ್ಟೆ, ಬಟ್ಟೆ ಕಟ್ಟಿ
ಕೆತ್ತಿಹ
ಹೊನ್ನ ಶಿಲ್ಪ ತನುಜರೇ
ಕೇಳಿಸದೇ
ಯಮಪಾಶದಲ್ಲಿ
ಶೇಷವಾಗುತಿಹ
ಮಾತೆಯ
ಆರ್ತನಾದ
(ನಾನು ಪದವಿಯಲ್ಲಿರುವಾಗ ಬರೆದ ಕವಿತೆ)
ಇದನ್ನೂ ಓದಿ  ಬರೆದದ್ದೇ ಕವಿತೆ