ಹ್ಯಾಕರ್‌ಗಳಿದ್ದಾರೆ ಎಚ್ಚರ

ಇಂದು ಇಮೇಲ್‌ ತೆರೆದವನಿಗೆ ಶಾಕ್‌ ಕಾದಿತ್ತು. ಯಾವುದೇ ಇಮೇಲ್‌ ತೆರಯುವ ಮುನ್ನ ಕೆಂಪು ಅಕ್ಷರಗಳಲ್ಲಿ ಎಚ್ಚರಿಕೆ ಎಂಬ ಅಲರ್ಟ್‌ ಕಾಣಿಸತೊಡಗಿತ್ತು. ನೀವು ಕೊನೆಯಬಾರಿ ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಲಾಗ್‌ಇನ್‌ ಆಗಿದ್ದಿರಿ ಎಂಬ ಸೂಚನೆಯಿತ್ತು. ಎಲ್ಲಿಯ ಅಮೆರಿಕ? ಎಲ್ಲಿಯ ಬೆಂಗಳೂರು?. ಆ ಅಲರ್ಟ್‌ ತೆರೆದು ನೋಡಿದವನಿಗೆ ಆಶ್ಚರ್ಯವಾಯಿತು. ಕಳೆದ ಎರಡು ದಿನಗಳಲ್ಲಿ ಎರಡು ಬಾರಿ ಯುಎಸ್‌ಎ ಮತ್ತು ಇಂಗ್ಲೆಂಡ್‌ನಿಂದ ನನ್ನ ಇಮೇಲ್‌ ಖಾತೆಗೆ ಯಾರೋ ಪ್ರವೇಶಿಸಿದ್ದರು. ಸದ್ಯ ನಾನು ಕನಸಿನಲ್ಲೂ ಅಮೆರಿಕ ಮತ್ತು ಇಂಗ್ಲೆಂಡ್‌ಗೆ ಹೋಗಿ ಬಂದ ನೆನಪಾಗಲಿಲ್ಲ.
ಹ್ಯಾಕಿಂಗ್‌ ವಿಷಯ ನನಗೆ ಹೊಸದೇನಲ್ಲ. ಅದರ ವಿರಾಟ್‌ ವಿರೂಪದ ಬಗ್ಗೆ ಅಲ್ಲಲ್ಲಿ ಸುದ್ದಿ ಕೇಳಿದ್ದೆ. ಆದರೆ ಅದು ನನ್ನ ಇಮೇಲ್‌ ಖಾತೆಗೆ ಪ್ರವೇಶಿಸಬಹುದೆಂಬ ಕಲ್ಪನೆ ನನಗಿರಲಿಲ್ಲ.
ಮೊದಲು ನನ್ನ ಸ್ನೇಹಿತರನ್ನು ಸಂಪರ್ಕಿಸಿ ನನ್ನ ಇಮೇಲ್‌ನಿಂದ ಯಾವುದಾದರೂ ಸಂಶಯಸ್ಪಾದ ಸಂದೇಶಗಳು ರವಾನೆಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡೆ. ಹ್ಯಾಕರ್‌ಗಳು ಪಾಸ್‌ವರ್ಡ್‌ ಕದ್ದು ಮೊದಲು ಮಾಡುವ ಕೆಲಸವೇ ಅದು. ನನ್ನ ಕಾಂಟ್ಯಾಕ್ಟ್‌ನಲ್ಲಿರುವ ಎಲ್ಲರಿಗೂ ಮೇಲ್‌ ಮಾಡಿ. ಕಷ್ಟದಲ್ಲಿದ್ದೇನೆ. ಈ ಅಕೌಂಟ್‌ಗೆ ಹಣ ಕಳುಹಿಸಿ ಇತ್ಯಾದಿ ಸಂದೇಶಗಳ ಮೂಲಕ ವಂಚನೆ ಮಾಡುತ್ತಾರೆ.
ಕಳೆದ ನಾಲ್ಕು ವರ್ಷಗಳಿಂದ ಪಾಸ್‌ವರ್ಡ್‌ ಬದಲಾಯಿಸದಿದ್ದದ್ದು  ನಾನು ಮಾಡಿದ ಮೊದಲ ತಪ್ಪು. ಇನ್ನು ಮುಂದೆ ಪ್ರತಿ ತಿಂಗಳಿಗೊಮ್ಮೆಯಾದರೂ ಪಾಸ್‌ವರ್ಡ್‌ ಬದಲಾಯಿಸಬೇಕೆಂದು ದೃಢ ನಿರ್ಧಾರ ಮಾಡಿದೆ.
ನಿಮ್ಮ ಪಾಸ್‌ವರ್ಡ್‌ ಎಷ್ಟು ಸೇಫ್‌
ಕಂಪ್ಯೂಟರ್‌, ಇಂಟರ್‌ನೆಟ್‌ನಲ್ಲಿ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಬಚ್ಚಿಡಲು ಪಾಸ್‌ವರ್ಡ್‌ ಅತ್ಯಂತ ಅಗತ್ಯ. ಇದೇ ಕಾರಣಕ್ಕಾಗಿ ಪಾಸ್‌ವರ್ಡ್‌ ಎಂಬುದು ನಮ್ಮ ಬದುಕಿನ ಭಾಗವಾಗಿ ಬಿಟ್ಟಿದೆ. ಕೆಲವು ಹ್ಯಾಕರ್ಸ್‌ ಗುಂಪಿನವರು ಇಂತಹ ಹ್ಯಾಕಿಂಗ್‌ ಕೆಲಸಕ್ಕೆ ಕೈಹಾಕುತ್ತಾರೆ ಎಂಬುದು ನನ್ನ ಸ್ನೇಹಿತನೊಬ್ಬನ ಅನಿಸಿಕೆ. ಇಂತಹ ಹ್ಯಾಕರ್ಸ್‌ ಗ್ರೂಪ್ಸ್‌, ಹ್ಯಾಕರ್ಸ್‌ ವೆಬ್‌ಸೈಟ್‌, ಹ್ಯಾಕರ್ಸ್‌ ಸಾಫ್ಟ್‌ವೇರ್‌ಗಳಿಂದ ಪ್ರತಿಮನೆಯೂ ವೆಬ್‌ ಅಪರಾಧಗಳ ತಾಣವಾಗುತ್ತಿರುವುದಂತು ಸತ್ಯ.
ಪಾಸ್‌ವರ್ಡ್‌ ಕದಿಯೋದು ಹೇಗೆ?
ಹೀಗಂತ ಹೆಡ್‌ಲೈನ್‌ ಕೊಟ್ಟರೂ ಮಾಹಿತಿ ಕೊಡಲು ನನಗೆ ಮನಸ್ಸು ಬರುತ್ತಿಲ್ಲ. ಹ್ಯಾಕರ್‌ಗಳಿಗೆ ಇಂಟರ್‌ನೆಟ್ಟೇ ಮೊದಲ ಪಾಠಶಾಲೆಯಾಗಿರುವುದರಿಂದ ಈ ಕುರಿತಾದ ಸಂಪೂರ್ಣ ಮಾಹಿತಿಗಳು, ಟ್ರಿಕ್‌ಗಳು ಅಲ್ಲಿ ದೊರಕುತ್ತವೆ. ಪಾಸ್‌ವರ್ಡ್‌ ಕದಿಯಲು ಬೇಕಾದಷ್ಟು ಸಾಫ್ಟ್‌ವೇರ್‌ಗಳು ಕೂಡ ಇವೆ. ಸ್ನಿಪರ್‌ಸ್ಪೈನಂತಹ ಹಲವು ಸ್ಪೈವೇರ್‌ ಸಾಫ್ಟ್‌ವೇರ್‌ಗಳ ಮೂಲಕ ಇಮೇಲ್‌ ಪಾಸ್‌ವರ್ಡ್‌ ಕದಿಯಬಹುದಾಗಿದೆ.
ಪಾಸ್‌ವರ್ಡ್‌ ಜೋಪಾನ
ಪಾಸ್‌ವರ್ಡ್‌ ಕದಿಯೋದು ಹೇಗೆ ಎನ್ನುವುದಕ್ಕಿಂತ ನಮ್ಮ ಪಾಸ್‌ವರ್ಡ್‌ಗಳನ್ನು ಸೇಫ್‌ ಆಗಿ ಉಳಿಸೋದು ಹೇಗೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.
* ಸ್ಟ್ರಾಂಗ್‌ ಪಾಸ್‌ವರ್ಡ್‌: ಅಂಕೆ, ಅಕ್ಷರ, ಸಿಂಬಲ್‌ ಮಿಶ್ರಿತ ಸ್ಟಾಂಗ್‌ಪಾಸ್‌ವರ್ಡ್‌ ರಚನೆ,
* ವೈಯಕ್ತಿಕ ಮಾಹಿತಿಯ ಪಾಸ್‌ವರ್ಡ್‌ ಬೇಡ: ಹುಟ್ಟಿದ ದಿನಾಂಕ, ಮಕ್ಕಳ ಹೆಸರು, ಮೊದಲ ಅಥವಾ ಕೊನೆಯ ಹೆಸರು ಬಳಕೆ ಬೇಡ. ಡಿಕ್ಶನರಿಯಲ್ಲಿ ಇಲ್ಲದ ಪದಗಳ ಬಳಕೆ ಉತ್ತಮ.
* ಯಾರಲ್ಲೂ ನಿಮ್ಮ ಪಾಸ್‌ವರ್ಡ್‌ ಹಂಚಿಕೊಳ್ಳಬೇಡಿ. ಗಂಡ/ಹೆಂಡತಿಯಾದರೂ ಸರಿ ಯಾರಿಗೂ ಪಾಸ್‌ವರ್ಡ್‌ ತಿಳಿಸಬೇಡಿ.
* ಇಮೇಲ್‌ ಪಾಸ್‌ವರ್ಡ್‌ನ್ನು ಬೇರೆ ವೆಬ್‌ಸೈಟ್‌ಗಳಿಗೆ ನೀಡಬೇಡಿ. ಅಂದರೆ ಕೆಲವು ಸೋಷಿಯಲ್‌ ನೆಟ್‌ವರ್ಕಿಂಗ್‌ ಇತ್ಯಾದಿಗಳಲ್ಲಿ ಖಾತೆ ತೆರೆಯಬೇಕಾದರೆ ಹೊಸ ಪಾಸ್‌ವರ್ಡ್‌ ಬಳಸಿರಿ.
* ಕೆಲವೊಂದು ವೆಬ್‌ಸೈಟ್‌ಗಳು ನಿಮ್ಮ ಇಮೇಲ್‌ ಪಾಸ್‌ವರ್ಡ್‌ ಕೇಳುತ್ತವೆ. ತಪ್ಪಿಯೂ ಕೊಡಬೇಡಿ.
* ಗೇಮ್‌, ಸಾಂಗ್ಸ್‌, ವಿಡಿಯೋ ಡೌನ್‌ಲೋಡ್‌ ಸಂದರ್ಭಗಳಲ್ಲೂ ಇಮೇಲ್‌ ಪಾಸ್‌ವರ್ಡ್‌ ನೀಡಬೇಡಿ
ಇನ್ನು ಮುಂದೆ ಪಾಸ್‌ವರ್ಡ್‌ ಜೋಪಾನವಾಗಿಸಲು ಇಂತಹ ಟಿಪ್ಸ್‌ಗಳನ್ನು ಪಾಲಿಸಬೇಕೆಂದಿದ್ದೇನೆ. ನಿಮಗೂ ಇಷ್ಟವಾದರೆ ಪಾಲಿಸಬಹುದು. ಇನ್ನಷ್ಟು ಟಿಪ್ಸ್‌ ಇದ್ದರೆ ತಿಳಿಸಬಹುದು.
ಥ್ಯಾಂಕ್ಸ್‌
ಪ್ರವೀಣ ಚಂದ್ರ ಪುತ್ತೂರು

NOTE: ನನ್ನ ಇಮೇಲ್‌ಗೆ ಬಂದ ಎಚ್ಚರಿಕೆಯಲ್ಲಿದ್ದ ಟೆಕ್ಸ್ಟ್‌ಗಳು ಈ ರೀತಿಯಾಗಿತ್ತು.

ಈ ಖಾತೆಯಲ್ಲಿನ ಚಟುವಟಿಕೆ

ಈ ವೈಶಿಷ್ಟ್ಯವು ಈ ಮೇಲ್ ಖಾತೆಯಲ್ಲಿನ ಕಡೆಯ ಚಟುವಟಿಕೆಯ ಬಗ್ಗೆ ಮತ್ತು ಯಾವುದೇ ಆನಂತರದ ಚಟುವಟಿಕೆಯ ಬಗ್ಗೆ ಮಾಹಿತಿ ನೀಡುತ್ತದೆ. ಇನ್ನಷ್ಟು ಕಲಿಯಿರಿ
ಈ ಖಾತೆಯು ಯಾವುದೇ ಇತರ ಸ್ಥಾನದಲ್ಲಿ ತೆರೆಯುವಂತೆ ತೋರುತ್ತಿಲ್ಲ. ಆದರೂ, ಅಲ್ಲಿ ಸೈನ್ ಔಟ್ ಮಾಡದಿರುವ ಅವಧಿಗಳು ಇರಬಹುದು.
ಇತ್ತೀಚಿನ ಚಟುವಟಿಕೆ:
ಕೆಳಗಿನ ಚಟುವಟಿಕೆಯು ನಿಮ್ಮದಂತೆ ಕಂಡುಬರದಿದ್ದರೆ, ನಿಮ್ಮ ಪಾಸ್‌ವರ್ಡ್ ಅನ್ನು ತಕ್ಷಣ ಬದಲಿಸಿ. Learn more
ಪ್ರವೇಶದ ಪ್ರಕಾರ [ ? ]
(ಬ್ರೌಸರ್, ಮೊಬೈಲ್, POP3, ಇತ್ಯಾದಿ.)
ಸ್ಥಾನ (IP ವಿಳಾಸ) [ ? ] ದಿನಾಂಕ/ಸಮಯ
(ನಿಮ್ಮ ಸಮಯ ವಲಯದಲ್ಲಿ ಪ್ರದರ್ಶಿಸಲಾಗಿದೆ)
ಅಜ್ಞಾತ ಬ್ರಿಟನ್/ಇಂಗ್ಲೆಂಡ್loosefoot.com:208.68.104.128 ಆಗಸ್ಟ್ ೧೮
ಅಜ್ಞಾತ ಅಮೇರಿಕಾ ಸಂಯುಕ್ತ ಸಂಸ್ಥಾನprivatedns.com:64.15.147.109 ಆಗಸ್ಟ್ ೨೩
ಬ್ರೌಸರ್ * ಭಾರತ (KA)218.248.35.227 ೦೧:೧೯ pm (0 ನಿಮಿಷಗಳ ಹಿಂದೆ)
IMAP 38.110.151.182 ೦೧:೧೫ pm (3 ನಿಮಿಷಗಳ ಹಿಂದೆ)
IMAP 38.110.147.33 ೦೧:೧೪ pm (4 ನಿಮಿಷಗಳ ಹಿಂದೆ)
ಬ್ರೌಸರ್ ಭಾರತ (KA)218.248.35.227 ೦೧:೧೧ pm (8 ನಿಮಿಷಗಳ ಹಿಂದೆ)
IMAP 38.110.151.184 ೦೧:೦೩ pm (16 ನಿಮಿಷಗಳ ಹಿಂದೆ)
IMAP 38.110.151.183 ೧೨:೫೧ pm (27 ನಿಮಿಷಗಳ ಹಿಂದೆ)
IMAP 38.110.147.26 ೧೧:೫೨ am (1 ಗಂಟೆಯ ಹಿಂದೆ)
IMAP 38.110.147.93 ೧೧:೩೯ am (1.5 ಗಂಟೆಗಳ ಹಿಂದೆ)
IMAP 38.110.147.95 ೧೧:೩೨ am (1.5 ಗಂಟೆಗಳ ಹಿಂದೆ)
IMAP 38.110.147.24 ೧೧:೩೨ am (1.5 ಗಂಟೆಗಳ ಹಿಂದೆ)
ಎಚ್ಚರಿಕೆ ಆದ್ಯತೆ: ಅಕ್ರಮ ಚಟುವಟಿಕೆಗಳಿಗೆ ಒಂದು ಎಚ್ಚರಿಕೆ ತೋರಿಸಿ. ಬದಲಿಸಿ

* ಪ್ರಸ್ತುತ ಸೆಶನ್ನಿನ ಚಟುವಟಿಕೆಯನ್ನು ಸೂಚಿಸುತ್ತದೆ.
ಈ ಕಂಪ್ಯೂಟರ್ 218.248.35.227. (ಭಾರತ (KA)) IP ವಿಳಾಸವನ್ನು ಬಳಸುತ್ತಿದೆ
Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಹಿರಿಯ ಉಪಸಂಪಾದಕ. ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ ಓದುವುದು, ಬರೆಯುವುದು ಇಷ್ಟದ ಕೆಲಸ. ನನ್ನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ಕಿಸಿ ಧನ್ಯವಾದ

7 thoughts on “ಹ್ಯಾಕರ್‌ಗಳಿದ್ದಾರೆ ಎಚ್ಚರ

 1. ಚಾಂದ್

  ಚೆಂದ ಮಾಡಿ ಬರೆದಿದ್ದಿ ಮಾರಾಯ.. ಈಗಲಾದರೂ ಎಲ್ಲರೂ ಪಟಪಟ ಅಂತ ಪಾಸ್ ವರ್ಡ್ ಬದಲಿಸುವುದು ಒಳಿತು ಅಲ್ಲವಾ?

  Reply
 2. ganesh

  “ಚೆಂದ ಇದೆ ಲೇಖನ ಎಲ್ಲರೂ ಪಾಲಿಸಬೇಕು…”

  Reply
 3. kv

  hm.. password kallara bagge chennagi barediddi… edde mahithi kortha…

  Reply
 4. Rajesh Rai

  – Please use only hindi,English And nepali Language16:22

  Reply

Leave a Reply

This site uses Akismet to reduce spam. Learn how your comment data is processed.