ನೀವು ಇಂಟರ್‌ನೆಟ್‌ನಲ್ಲಿ ಚಂದಮಾಮ ಓದುತ್ತೀರಾ?

By | January 10, 2011

ಬೇತಾಳನ ಕಥೆಗಳು, ಪಂಚತಂತ್ರ ಕಥೆಗಳು, ಜನಪದ ಕಥೆಗಳು ಇತ್ಯಾದಿಗಳಿಂದ ಒಂದು ಕಾಲದಲ್ಲಿ ಎಲ್ಲರ ಮನೆಮಾತಾಗಿದ್ದ ಚಂದಮಾಮ ಇಂದು ಅಪರೂಪ. ಆದರೆ ಈಗಲೂ ಅದಕ್ಕೆ ಬೇಕಾದಷ್ಟು ಓದುಗರಿದ್ದಾರೆ. ನಾನಂತು ಚಿಕ್ಕದಿರುವುಗಾ ತಪ್ಪದೇ ಓದುತ್ತಿದ್ದೆ. ಇಲ್ಲೊಂದು ಜಾನಪದ ಕಥೆಯಿದೆ ಚಂದಮಾಮದಿಂದ ಕದ್ದದ್ದು. ಇಷ್ಟವಾದರೆ ಈ ಲಿಂಕ್‌ ಮೂಲಕ ಹೋಗಿ ಸಾಕಾಗುವಷ್ಟು ಓದಿ ಬನ್ನಿ.

http://www.chandamama.com/lang/KAN/index.htm

ವಿದೂಷಕನ ಸಮಸ್ಯೆ
ಲೇಖಕ: ಚಂದಮಾಮ | 3rd Jan, 2011

ಒಂದಾನೊಂದು ಕಾಲದಲ್ಲಿ ವಿನಯನೆಂಬ ರಾಜ ನೊಬ್ಬನಿದ್ದನು. ಅವನಿಗೇ ಚದುರಂಗವೆಂದರೆ ತುಂಬಾ ಪ್ರೀತಿ. ಆದರೆ ರಾಜನಾದುದರಿಂದ, ಅವನ ಸರಿಸಮಾನರಾಗಿ ಆಡಲು ಯಾರೂ ಮುಂದೆ ಬರುತ್ತಿರಲಿಲ್ಲ. ಆಸಾ್ಥನ ವಿದೂಷಕನಾದ ಮಾಧ ವನು ಮಾತ್ರ ರಾಜನೊಡನಿದ್ದ ಸಲುಗೇಯಿಂದ ರಾಜನೊಡನೆ ಚದುರಂಗವನಾ್ನಡುತ್ತಿದ್ದನು. ಸಮಯ ದೊರೆತಾಗಲೆಲಾ್ಲ ಇಬ್ಬರೂ ಚದು ರಂಗದ ಮಣೆಯ ಬಳಿಯೇ ಇರುತ್ತಿದ್ದರು. ರಾಜನು ಅಮೂಲ್ಯವಾದ ಮುತ್ತು, ಮಾಣಿಕ್ಯಗಳನ್ನು ಪಂದ್ಯಕೇ್ಕ ಒಡ್ಡುತ್ತಿದ್ದನು. ಆದರೆ ಮಾಧವನು ಮಾತಾ್ರ ಸಾಧಾರಣ ವಸ್ತುಗಳನ್ನು ಪಣವಾಗಿ ಇಡುತ್ತಿದ್ದನು. ವಿದೂಷ ಕನು ಚದುರಂಗ ದಾಟದಲ್ಲಿ ಅತ್ಯಂತ ಪ್ರವೀಣ ನೆನಿಸಿದ್ದನು. ರಾಜನೂ ಅವನೊಡನೆ ಆಡುತಾ್ತ ಅನೇಕ ಸೂಕ್ಷ್ಮಗಳನ್ನು ಕಲಿತುಕೊಂಡನು. ಆಟದಲ್ಲಿ ಮಗ್ನರಾದಾಗ ವಿದೂಷಕ, ರಾಜನೆಂಬ ತಾರತಮ್ಯಗಳನ್ನು ಮರೆತು, ಸಮಾನ ಸ್ಕಂಧರಂತೆ ಭಾವಿಸಿ, ಆಟದಲ್ಲೇ ಮುಳುಗಿರುತ್ತಿದ್ದರು.
ಒಂದು ದಿನ ಇಬ್ಬರೂ ಆಟದಲ್ಲಿ ಮಗ್ನರಾಗಿ ದಾ್ದಗ, ಅಣ್ಣನನ್ನು ಅರಸಿಕೊಂಡು ವಿದೂಷಕನ ತಂಗಿಯಾದ ಮೋಹಿನಿಯು ನೇರವಾಗಿ ಅರ ಮನೆಗೇ ಬಂದು ಬಿಟ್ಟಳು. ಹೆಸರಿಗೇ ತಕ್ಕಂತೆಯೇ ಅವಳು ಅತ್ಯಂತ ಸುಂದರಿಯಾಗಿದ್ದಳು. ಅವಳನ್ನು ನೋಡಿ ರಾಜನು ಮರುಳಾದನು. ಆ ಮಾರನೆಯ ದಿನ ಚದುರಂಗದ ಮಣೆಯ ಮುಂದೆ ಆಟಕೇ್ಕ ಕುಳಿತುಕೊಳ್ಳುತಾ್ತ, ‘‘ನಿಮ್ಮ ತಂಗಿಯನ್ನು ಪಣ ಕೊ್ಕಡ್ಡುವಿರಾ? ಆಟದಲ್ಲಿ ನಾನು ಗೇದ್ದರೆ, ಅವಳನ್ನು ನನ್ನ ರಾಣಿಯರಲ್ಲಿ ಒಬ್ಬಳಾಗಿ ಮಾಡಿ ಕೊಳ್ಳುತ್ತೇನೆ,’’ ಎಂದನು ರಾಜನು ವಿದೂಷಕ ನೊಡನೆ.
ವಿದೂಷಕನು ಆಶ್ಚರ್ಯದೊಡನೆ ತನ್ನಕಡೆಗೇ ನೋಡುತ್ತಿರುವುದನ್ನು ಗಮನಿಸಿದ ರಾಜನು, ‘‘ಒಂದು ವೇಳೆ ಆಟದಲ್ಲಿ ನೀವು ಗೇದ್ದು ನಾನು ಸೋತರೆ, ಪ್ರವಾಳನಗರವನ್ನೇ ನಿಮಗೇ ಕೊಡು ತ್ತೇನೆ,’’ ಎಂದನು. ವಿದೂಷಕನು ಸ್ವಲ್ಪ ಹೊತ್ತು ವೌನದಿಂದಿದ್ದು ಯೋಚಿಸಿ, ‘‘ಪ್ರಭೂ, ನಾವು ಒಡ್ಡುವ ಪಣಗಳು ಸಮಾನವಾದ ವುಗಳಲ್ಲ. ಅಲ್ಲದೆ ನನಗೇ ನಗರದ ಮೇಲೆ ವಾ್ಯಮೋಹ ವಿಲ್ಲ’’ ಎಂದನು.

‘‘ಮತ್ತೇನು ಬೇಕು ಕೇೀಳಿಕೊಳ್ಳಿ’’ ಎಂದನು ರಾಜನು.
‘‘ಇರುವುದನ್ನು ಹೇಳಿದರೆ ಪ್ರಭುಗಳು ಕೋಪಿಸಿಕೊಳ್ಳಬಾರದು,’’ ಎಂದನು ವಿದೂಷಕನು ವಿನಯವಾಗಿ
‘‘ಬೇಕೇನಿಸಿದುದನ್ನು ನಿರ್ಭಯದಿಂದ ಕೇೀಳಿಕೊಳ್ಳಿ. ಕೊಡುತ್ತೇನೆ,’’ ಎಂದನು ರಾಜನು.
‘‘ನಿಮ್ಮ ಸೋದರಿಯನ್ನು ನನ್ನ ತಂಗಿಗೇ ಸಮವಾಗಿ ಪಂದ್ಯಕ್ಕಿಡಬೇಕು’’ ಎಂದನು ವಿದೂಷಕನು.
ರಾಜನು ಒಂದು ಕ್ಷಣ ದಿಗಾ್ಭ್ರಂತಿಗೊಳಗಾದನು. ಆ ನಂತರ ಸಮಾಧಾನವಾಗಿ ಯೋಚಿಸಿದನು. ಅಷ್ಟರಲ್ಲೇ ವಿದೂಷಕನ ತಂಗಿಯನ್ನು ಮದುವೆಯಾಗುವುದಾಗಿ ತೀರ್ಮಾನಕೇ್ಕ ಬಂದಿದ್ದುದರಿಂದ ‘‘ಆಯತು, ಹಾಗೇೀ ಆಗಲಿ’’ ಎಂದು ತಲೆ ತಗ್ಗಿಸಿದನು ರಾಜನು.
ಆಟ ಆರಂಭವಾಯಿತು. ಇಬ್ಬರೂ ಏಕಾಗ್ರತೆಯಿಂದ ಆಡತೊಡಗಿದರು. ವಿದೂಷಕನ ಬಳಿಯೇ ಇಷ್ಟು ದಿನ ಕಲಿತುಕೊಂಡಿದ್ದ ಸೂಕ್ಷ್ಮಗಳೆಲ್ಲವನ್ನೂ ಉಪಯೋಗಿಸಿ, ರಾಜನು ಅತ್ಯಂತ ಎಚ್ಚರಿಕೇಯಿಂದ ಕಾಯಿಗಳನ್ನು ನಡೆಸ ತೊಡಗಿದನು. ವಿದೂಷಕನು ಸೋತುಹೋಗುವುದು ಖಂಡಿತ ಎಂಬ ಪರಿಸ್ಥಿತಿಯು ಏರ್ಪಟ್ಟುದದರಿಂದ ರಾಜನ ಮನಸ್ಸಿನಲ್ಲಿ ಬಗೇಬಗೇಯ ಯೋಚನೆಗಳು ತೇಲತೊಡಗಿದುವು. ತಾನು ಮೋಹಿನಿಯನ್ನು ಮದುವೆಯಾಗುವ ಮಹೋನ್ನತ ಘಳಿಗೇಯನ್ನು ನೆನೆಸಿ ಕೊಳ್ಳುತಾ್ತ ಆಟದಲ್ಲಿ ತಪ್ಪು ನಡೆಗಳನ್ನು ನಡೆಸಿದನು. ವಿದೂಷಕನು ಗೇದ್ದು ಬಿಟ್ಟನು. ರಾಜನು ತನ್ನ ಸೋಲನ್ನು ಒಪ್ಪಿಕೊಂಡನು.
ವಿದೂಷಕನು ಅತಾ್ಯನಂದ ಹೊಂದಿ, ‘‘ಪ್ರಭೂ! ತಾವು ತಮ್ಮ ಸೋದರಿಯನ್ನು ಮದುವೆ ಮಾಡಿಕೊಡಿ’’ ಎಂದನು ವಿನಯವಾಗಿ.
‘‘ಮದುವೆಯೇ?’’ ಎಂದನು ರಾಜನು ಅಚ್ಚರಿಗೊಂಡಂತೆ. ‘‘ನನಗಿರುವವಳು ಒಬ್ಬಳೇ ಸಹೋದರಿ. ಅವಳಿಗೀಗಾಗಲೇ ವೈಭವದಿಂದ ಮದುವೆಯಾಗಿ ಹೋಗಿದೆ. ನಿಮಗೇ ಬೇರೇನಾದರೂ ಬೇಕೇನಿಸಿದರೆ ಕೇೀಳಿಕೊಳ್ಳಿ, ಸಂತೋಷವಾಗಿ ಕೊಡುತ್ತೇನೆ,’’ ಎಂದನು.
‘‘ಅದು ನಾ್ಯಯವೆನಿಸುವುದಿಲ್ಲ ಅಲ್ಲವೇ ಪ್ರಭೂ, ತಾವು ಆಕೇಯನ್ನು ಪಣವಾಗಿ ಒಡ್ಡಿದ್ದಿರಲ್ಲವೇ?’’ ಪ್ರಭುಗಳು ಮಾತಿಗೇ ತಪ್ಪು ವುದಿಲ್ಲವೆಂದು ಭಾವಿಸುತ್ತೇನೆ,’’ ಎಂದನು ವಿದೂಷಕನು ಹಠದಿಂದ.
ರಾಜನು ವಿದೂಷಕನಿಗೇ ಹಠಹಿಡಿದಿದೆ ಎಂದು ಅರಿತುಕೊಂಡನು. ‘‘ಸರಿ, ನಾಳೆ ನನ್ನ ಸಹೋದರಿಯು ನಮ್ಮ ತಾಯಿಯನ್ನು ನೋಡಲು ಇಲ್ಲಿಗೇ ಬರುತಾ್ತಳೆ. ಅವಳನ್ನು ನಿಮ್ಮೊಡನೆ ಕಳುಹಿಸಬೇಕೇಂದರೆ ಬರದೇ ಹೋಗಬಹುದು. ಆದ್ದರಿಂದ ಅವಳನ್ನು ನೀವು ಕರೆದು ಕೊಂಡು ಹೋಗಲು ನಿಮಗೇ ಒಂದು ಅವಕಾಶವನ್ನು ಕಲ್ಪಿಸುತ್ತೇನೆ. ಆಪ್ರಕಾರ ಮಾಡಿ,’’ ಎನ್ನುತಾ್ತ ಕಿವಿಯಲ್ಲಿ ಏನೋ ಗುಟ್ಟು ಹೇಳಿದನು.
ರಾಜನ ತಂಗಿ ಸುನೀತಾ ದೇವಿಯು ತಾಯಿಯನ್ನು ನೋಡಲು ಅರಮನೆಗೇ ಬಂದಳು. ಮಾರನೆಯ ದಿನ ಸಾಯಂಕಾಲ ರಾಜನು ನದಿಯ ತೀರದಲ್ಲಿ ವಾಯು ಸೇವನೆಗೇ ಹೋಗಿ ಬರೋಣ ವೆಂದು ಆಕೇಯನ್ನು ಆಹಾ್ವನಿಸಿದನು. ಮುಂದೆ ರಾಜನೂ ಹಿಂದೆ ತಂಗಿಯೂ ಹೋಗುತ್ತಿರುವಾಗ, ಅವಳು ಹತ್ತಿರದಲ್ಲಿದ್ದ ಒಂದು ತಾವರೆಯ ಕೊಳವನ್ನು ನೋಡಿದಳು. ಕೊಳದಲ್ಲಿ ತಾವರೆಯ ಪುಷ್ಪಗಳು ಅರಳಿ ನಿಂತಿದ್ದುವು. ‘‘ಆಹಾ ಎಷ್ಟು ಸುಂದರ ದೃಶ್ಯ’’ ಎಂದು ರಾಜನು ಮುಂದಕೇ್ಕ ಹೋದನು.

ಸುನೀತಾದೇವಿಯ ಮನಸ್ಸಿನಲ್ಲಿ ಫಳಾರನೆ ಒಂದು ಯೋಚನೆಯು ಹೊಳೆಯಿತು. ‘‘ಅಣಾ್ಣ ನಿಮಗೇ ಕೇಲವು ತಾವರೆಯ ಹೂವನ್ನು ಕಿತ್ತು ಕೊಡುತ್ತೇನೆ’’ ಎಂದು ಕೊಳದ ದಂಡೆಯ ತುಟ್ಟತುದಿಗೇ ಹೋಗಿ, ಮುಂದಕೇ್ಕ ಬಗ್ಗಿ ಒಂದು ಹೂವನ್ನು ಕೀಳಲು ಹೋಗಿ ಕಾಲು ಜಾರಿ ಕೊಳದೊಳಕೇ್ಕ ಬಿದ್ದುಬಿಟ್ಟಳು. ಮೊದಲೇ ಹಾಕಿಕೊಂಡಿದ್ದ ಯೋಜನೆಯ ಪ್ರಕಾರ ರಾಜನು ಹಿಂದಿರುಗಿ ನೋಡದಂತೆಯೇ, ಏನೂ, ತಿಳಿಯದವನಂತೆ ಹೊರಟು ಹೋದನು.

ಸುನೀತಾದೇವಿಯು ಸುತ್ತಮುತ್ತಲೂ ಚನಾ್ನಗಿ ನೋಡಿದಳು. ಅಣ್ಣನು ಕಂಡುಬರಲಿಲ್ಲ. ತಾನು ಕೊಳದಲ್ಲಿ ಬಿದ್ದ ಸಂಗತಿಯು ತಿಳಿಯದೆ ಅಣ್ಣನು ಹೊರಟು ಹೋಗಿರಬೇಕೇಂದು ಕೊಂಡು ‘‘ಯಾರಾದರೂ ಬಂದು ಕಾಪಾಡಿ. ನೀರಿನಲ್ಲಿ ಮುಳುಗಿ ಹೋಗುತ್ತಿದ್ದೇನೆ. ಕಾಪಾಡೀಕಾಪಾಡೀ’’ ಎಂದು ಕೂಗಿಕೊಂಡಳು.

ಹತ್ತಿರದಲ್ಲಿಯೇ, ಯಾವಾಗ ಕೂಗುತಾ್ತಳೋ ಎಂದು ಕೊಂಡಿದ್ದ ವಿದೂಷಕನು ಒಂದೇ ನೆಗೇತಕೇ್ಕ ಬಂದು ಕುದುರೆಯ ಮೇಲಿಂದ ಕೇಳಕ್ಕಿಳಿದು ಸುನೀತಳನ್ನು ಸಮೀಪಿಸಿ ಕೈ ನೀಡಿದನು. ಯುವರಾಣಿಯು ಅವನ ಕೈ ಹಿಡಿದುಕೊಂಡು ದಡಕೇ್ಕ ಹತ್ತಿ ಬಂದಳು. ‘‘ಸುಂದರನಾರೀ ಮಣಿ ನೀನು ನನ್ನ ಕೈ ಹಿಡಿದುದರಿಂದ, ಇನ್ನು ಮುಂದೆ ನಿನ್ನನ್ನು ಬಿಡಲಾರೆನು. ನನೊ್ನಡನೆಯೇ ಬಂದು ನನ್ನನ್ನು ಮದುವೆಯಾಗಿ ನನ್ನ ಪತ್ನಿಯಾಗಿ ಬಾಳು,’’ ಎಂದನು ವಿದೂಷಕನು ಆನಂದದಿಂದ.

ಸುನೀತಾದೇವಿಯು ಒಂದು ಕ್ಷಣ ದಿಗಾ್ಬ್ರಂತಿ ಹೊಂದಿದವಳಾಗಿ, ‘‘ನಾನು ಯುವರಾಣಿ ಸುನೀತಾದೇವಿಯು.
ನನ್ನನ್ನು ಕಾಪಾಡಿದುದಕೇ್ಕ ಯಾವತ್ತೂ ಕೃತಜ್ಞಳಾಗಿದ್ದೀನಿ. ಆದರೆ ನಾನು ವಿವಾಹಿತಳು. ನಿನ್ನನ್ನು ಮತ್ತೆ ಹೇಗ ಮದುವೆಯಾಗ ಬಲ್ಲೆನು’’ ಎಂದಳು.

‘‘ಅವೆಲ್ಲವನ್ನೂ ನಂತರ ಮಾತಾಡಿಕೊಳ್ಳೀಣ, ಸದ್ಯಕೇ್ಕ ನಿನ್ನನ್ನು ಇಲ್ಲಿ ಒಂಟಿಯಾಗಿ ಬಿಟ್ಟು ಹೋಗಲಾರೆನು, ಬಾ. ಕುದುರೆಯನ್ನು ಹತ್ತು, ನಮ್ಮ ಮನೆಗೇ ಹೋಗೋಣ’’ ಎನ್ನುತಾ್ತ ವಿದೂಷಕನು ಕುದುರೆಯ ಮೇಲೆ ನೆಗೇದುಕುಳಿತು ಕೊಂಡನು.

ಸುನೀತಾದೇವಿಗೇ ಬೇರೆ ಯಾವ ಮಾರ್ಗವೂ ಕಾಣದಿದ್ದುದರಿಂದ ವೌನವಾಗಿ ಹೋಗಿ ಕುದುರೆಯನ್ನು ಹತ್ತಿ, ವಿದೂಷಕನ ಹಿಂದೆ ಕುಳಿತಳು. ಕುದುರೆಯು ಹೋಗಿ ನಗರದ ಒಂದು ಮೂಲೆ ಯಲ್ಲಿದ್ದ ಒಂದು ಚಿಕ್ಕ ಮನೆಯ ಮುಂದೆ ನಿಂತಿತು.

ಕುದುರೆಯಿಂದಿಳಿದು, ಮನೆಯೊಳಗೇ ಕಾಲಿಟ್ಟ, ವಿದೂಷಕನು, ಸುನೀತಾದೇವಿಗೇ ಚದುರಂಗವಾಡಿ ತಾನು ಅವಳನ್ನು ರಾಜರಿಂದ ಹೇಗೇ ಗೇದ್ದುಕೊಂಡ ನೆಂಬುದನ್ನು ವಿವರವಾಗಿ ತಿಳಿಯ ಪಡಿಸಿದನು.

ತನಗೇ ತಿಳಿಯದಂತೆ, ತನ್ನ ಒಪ್ಪಿಗೇಯನ್ನು ಪಡೆಯದೆಯೇ, ರಾಜನು ತನ್ನನ್ನು ಚದುರಂಗದಲ್ಲಿ ಪಣವಾಗಿಟ್ಟನೆಂದು ಸುನೀತಾದೇವಿಯು ಅರಿತುಕೊಂಡಳು. ಸಂಕಟ ಪಟ್ಟುಕೊಂಡಳು. ಆದರೂ ರಾಜನ ಗೌರವವನ್ನು ಉಳಿಸಬೇಕೇಂದುಕೊಂಡು, ‘‘ಆಗಲಿ, ನಾನಿಲ್ಲಿಯೇ ಇರುತ್ತೇನೆ. ಆದರೆ ನಮ್ಮ ಮದುವೆಯು ಮಾತ್ರ ಬರುವ ಹುಣ್ಣಿಮೆಗೇೀ’’ ಎಂದಳು. ವಿದೂಷಕನೂ ಅದಕೇ್ಕ ಒಪ್ಪಿಕೊಂಡನು.

ಸುನೀತಾದೇವಿಯು ಆಕ್ಷಣದಿಂದಲೇ ಅಲ್ಲಿಂದ ತಪ್ಪಿಸಿಕೊಳ್ಳುವುದು ಹೇಗೇಂದು ಗಾಢವಾಗಿ ಯೋಚಿಸ ತೊಡಗಿದಳು. ಹುಣ್ಣಿಮೆಗೇ ಇನ್ನೂ ಮೂರು ದಿನಗಳಿದ್ದುದರಿಂದ, ರಹಸ್ಯವಾಗಿ ಮನೆಯಿಂದ ಹೊರಬಿದ್ದಳು. ತೌರುಮನೆಗೂ ಹೋಗದೇ ನೇರವಾಗಿ ಪತಿಯ ಮನೆಯನ್ನು ಸೇರಿಕೊಂಡಳು. ಅವಳ ಗಂಡನಿಗೇ ಇತ್ತ ನಡೆದ ವಿದ್ಯಮಾನಗಳೇನೂ ತಿಳಿಯದು.

ಯುವರಾಣಿಯು ಕಾಣದೇ ಹೋದುದರಿಂದ ವಿದೂಷಕನು ಅವಸರವಸರವಾಗಿ ರಾಜನ ಬಳಿಗೇ ಹೋಗಿ ವಿಷಯವನ್ನು ಹೇಳಿದನು. ತನ್ನ ತಂಗಿಯು ಗಂಡನ ಮನೆಗೇ ಹೋಗಿರಬೇಕೇಂದು ಕೊಂಡೂ, ಅವಳನ್ನು ಮತ್ತೆ ಇಲ್ಲಿಗೇ ಕರೆಸುವುದು ಸಾಧ್ಯವಿಲ್ಲವೆಂದೂ ರಾಜನು ಹೇಳಿದನು. ಬೇಕಾದರೆ ವಿದೂಷಕನನ್ನೇ ಅಲ್ಲಿಗೇ ಹೋಗಿ ಮೊರೆ ಇಟ್ಟು ಕೊಳ್ಳಲು ಸಲಹೆ ಮಾಡಿದನು.
ವಿದೂಷಕನು ಯುವರಾಣಿಯ ಅತ್ತೆಯ ಮನೆಗೇ ಹೋದನು. ವಿಷಯವನ್ನು ತಿಳಿದುಕೊಂಡ ಸುನೀತಾದೇವಿಯ ಗಂಡನು ಕೋಪೋದ್ರಿಕ್ತನಾದನು. ಚದುರಂಗದಲ್ಲಿ ತನ್ನ ಭಾರ್ಯೆಯನ್ನು ಪಣವಾಗಿಟ್ಟುದುದಕೇ್ಕ ರಾಜನ ಮೇಲೆಯೂ, ವಿವಾಹಿತೆ ಎಂದು ತಿಳಿದೂ ಅವಳನ್ನು ಮದುವೆಯಾಗಲು ನೋಡುತ್ತಿರುವ ವಿದೂಷಕನ ಮೇಲೂ ಉರಿದುಬಿದ್ದನು. ‘‘ಚದುರಂಗದಲ್ಲಲ್ಲ, ತಾಕತ್ತಿದ್ದರೆ ಈಗ ನನೊ್ನಡನೆ ಕತ್ತಿಹಿಡಿದು ಯುದ್ಧ ಮಾಡಿ ಗೇದ್ದು ಸುನೀತಳನ್ನು ಕರೆದೊಯ್ಯಿ,’’ ಎಂದು ವಿದೂಷಕನಿಗೇ ಸವಾಲು ಹಾಕಿದನು. ವಿದೂಷಕನು ಮನಸ್ಸಿಲ್ಲದಿದ್ದರೂ ಅದಕೇ್ಕ ಒಪ್ಪಿಕೊಂಡನು.

ಮರುದಿನವೇ ಇಬ್ಬರೂ ಕತ್ತಿ ಯುದ್ಧಕೇ್ಕ ಸಿದ್ಧರಾದರು. ಆದರೆ ಯುದ್ಧವೇನೂ ಹೆಚ್ಚುಕಾಲ ನಡೆಯಲಿಲ್ಲ. ಯುವರಾಣಿಯ ಗಂಡನು ಕಾಲು ಮಡಚಿಕೊಂಡು ಕೇಳಗೇ ಬಿದ್ದುದರಿಂದ, ಅವನ ಕೈಯಲ್ಲಿದ್ದ ಕತ್ತಿಯು ಎರಡಾಗಿ ಮುರಿದು, ಮೊಂಡು ಕತ್ತಿಯು ಅವನ ಎದೆಯಲ್ಲಿ ಚುಚ್ಚಿಕೊಂಡುದರಿಂದ ಕೂಡಲೇ ಮರಣವನ್ನಪ್ಪಿದನು

ಗಂಡನ ಮರಣಕೇ್ಕ ಸುನೀತಾದೇವಿಯು ಜೋರಾಗಿ ಅತ್ತಳು. ಅವಳ ದುಃಖಕೇ್ಕ ಪಾರಾವಾರವಿಲ್ಲದಾಯಿತು. ದುಃಖವು ಶಮನವಾಗುವವರೆಗೂ ಏನೂ ಮಾತಾಡಬಾರದೆಂದು ವಿದೂಷಕನು ವೌನವಾಗಿದ್ದನು. ಸುನೀತಾದೇವಿಯು ಆಚಾರದ ಪ್ರಕಾರ ಗಂಡನ ಚಿತೆಯ ಸುತ್ತಲೂ ಏಳುಸಲ ಪ್ರದಕ್ಷಿಣೆ ಮಾಡಿ ಚಿತೆಗೇ ಬೆಂಕಿಯನ್ನು ಹೊತ್ತಿಸಿದಳು. ಉರಿಯು ವಾ್ಯಪಿಸಿದೊಡನೆಯೇ, ಪತಿಯ ವಿಯೋಗವನ್ನು ಸಹಿಸಲಾಗದೆ ಉರಿಯಲ್ಲಿ ಧುಮುಕಿ, ಗಂಡ ನೊಡನೆ ಸಹಗಮನವಾದಳು. ಈ ಅನಿರೀಕ್ಷಿತ ಘಟನೆಯನ್ನು ನೋಡಿ ವಿದೂಷಕನು ಖಿನ್ನನಾದನು. ಆ ನಂತರ ದುಃಖ ಭಾರದಿಂದ ಅಲ್ಲಿರಲಾಗದೆ ರಾಜ್ಯವನ್ನೇ ಬಿಟ್ಟು ಹೋದನು. ಒಂದು ಸ್ಥಳದಲ್ಲಿ ನಿಲ್ಲದೆ ಅಲೆಮಾರಿಯಂತಾದನು. ಸುನೀತಾದೇವಿಯ ನೆನಪು ಬಂದಾಗಲೆಲಾ್ಲ ತನ್ನಿಂದಲೇ ಅವಳಿಗೇ ಆ ದುರ್ಗತಿ ಯುಂಟಾಯಿತೆಂಬ ಪಶಾ್ಚತಾ್ತಪವು ಅವನನ್ನು ದಹಿಸತೊಡಗಿತು. ತನ್ನ ಗಂಡನ ಮೇಲೆ ಅವಳು ಪ್ರದಿರ್ಶಿಸಿದ ವಿಶಾ್ವಸವನ್ನು ನೆನೆಸಿಕೊಂಡಾಗಲೆಲಾ್ಲ ಅವಳ ಮೇಲೆ ಅವನಿಗೇ ಗೌರವವು ಹೆಚ್ಚತೊಡಗಿತು.

ಸುನೀತಾದೇವಿಯ ಗಂಡನನ್ನು ತಾನು ಕೊಲ್ಲಲಿಲ್ಲ. ಆಕಸ್ಮಿಕವಾಗಿ ಉಂಟಾದ ದೋಷದಿಂದ ಅವನು ಸತ್ತನು. ದ್ವಂದ್ವ ಯುದ್ಧದಲ್ಲಿ ಗೇದ್ದರೆ, ತನ್ನ ಪತ್ನಿಯನ್ನೇ ಒಪ್ಪಿಸುತ್ತೇನೆಂದ ವೀರನಿಗೇ ಇಂತಹ ದುರ್ಗತಿಯೊದಗಿದುದು ಮಹಾ ಅನಾ್ಯಯವೆಸಿತು. ಇಂತಹ ಬಗೇಬಗೇಯ ಯೋಚನೆಗಳಿಂದ ವಿದೂಷಕನು ಅನೇಕ ಪಾ್ರಂತ್ಯಗಳನ್ನು ತಿರುಗಿದನು. ಕೊನೆಗೇ ಒಂದು ಕುಗಾ್ರಮವನ್ನು ಸೇರಿದನು. ಅಲೊ್ಲಬ್ಬ ಫಕೀರನನ್ನು ನೋಡಿದನು. ಅವನ ಮಾತುಗಳು ವಿದೂಷಕನಿಗೇ ಸಾಂತ್ವನ ನೀಡಿದುವು. ಯೋಚನೆಯು ತೊಲಗಿ ಶಾಂತಿಲಭಿಸಿತು. ಮಾತು ಮಾತಿನ ಸಂದರ್ಭದಲ್ಲಿ ಅವನು ವಿದೂಷಕನೊಡನೆ ಸತ್ತವರನ್ನೂ ಬದುಕಿಸಬಹುದು ಎಂದು ಹೇಳಿದನು. ಸತ್ತು ಹೋದ ಸುನೀತಾದೇವಿಯನ್ನೂ, ಅವಳ ಗಂಡನನ್ನೂ ಬದುಕಿಸಿಕೊಳ್ಳುವ ಅವಕಾಶವಿರಬಹುದೆಂಬ ಆಸೆಯಿಂದ, ವಿದೂಷಕನು, ತನ್ನ ಕಥೆಯನ್ನು ಫಕೀರ ನೊಡನೆ ಹೇಳಿಕೊಂಡನು. ಸವಿಸಾ್ತರವಾಗಿ ಕೇೀಳಿದ ಫಕೀರನು ಸ್ವಲ್ಪ ಹೊತ್ತು ಗಾಢವಾಗಿ ಯೋಚಿಸಿ, ‘‘ಉತ್ತರ ದಿಕ್ಕಿನಲ್ಲಿ ಮೂರು ಯೋಜನ ದೂರ ಹೋದೆಯೆಂದರೆ, ಒಂದು ಬೆಟ್ಟವು ಬರುತ್ತದೆ. ಆ ಬೆಟ್ಟದ ಮಧ್ಯದಲ್ಲಿ ಒಂದು ಗಾ್ರಮ ವಿದೆ. ಆ ಕುಗಾ್ರಮದಲ್ಲಿ ಕೇಲವರಿಗೇ ಸತ್ತವರನ್ನು ಬದುಕಿಸುವ ಮೃತ ಸಂಜೀವಿನ ಮಂತ್ರವು ತಿಳಿದಿದೆಯೆಂದು ಕೇೀಳಿರುತ್ತೇನೆ. ಅಲ್ಲಿಗೇ ಹೋಗಿ, ಅವರಿಗೇ ಸೇವೆ ಮಾಡಿ ಅವರನ್ನು ಮೆಚ್ಚಿಸಿದುದೇ ಆದರೆ ಆ ಮಂತ್ರವನ್ನು ನಮಗೇ ಹೇಳಿಕೊಡುತಾ್ತರೆ,’’ ಎಂದನು.

ವಿದೂಷಕನು ಆ ಕ್ಷಣವೇ ಆ ಬೆಟ್ಟದ ಕಡೆಗೇ ಹೊರಟು ಕೇಲವೇ ದಿನಗಳಲ್ಲಿ ಆ ಪಾ್ರಂತ್ಯವನ್ನು ಮುಟ್ಟಿದನು. ಅಲ್ಲಿ ಒಂದು ಗಾ್ರಮದಲ್ಲಿ ಜನರು ಪಕ್ಷಿಗಳನ್ನು ಕೊಂದು, ತಿಂದು ಆ ನಂತರ ಹಾಗೇ ಸತ್ತ ಪಕ್ಷಿಗಳ ಗರಿಗಳನ್ನೂ ಚರ್ಮವನ್ನೂ ಒಂದು ಕಡೆ ಸೇರಿಸಿ ಏನೋ ಮಂತ್ರವನ್ನು ಹೇಳಿದಾಗ ಮರುಕ್ಷಣವೇ ಚರ್ಮಗಳಿಗೂ, ಗರಿಗಳಿಗೂ ಪಾ್ರಣ ಬಂದು ಪಕ್ಷಿಗಳಾಗಿ ಹಾರಿಹೋದುದನ್ನು ವಿದೂಷಕನು ನೋಡಿದನು

ಫಕೀರನು ಹೇಳಿದ ಗಾ್ರಮವು ಇದೇ ಎಂದು ಅರಿತುಕೊಂಡ ವಿದೂಷಕನು, ಆ ಗಾ್ರಮದಲ್ಲಿಯೇ ಉಳಿದುಕೊಂಡು, ಅನುನಯವಾಗಿ ಮಾತಾಡಿಕೊಂಡು, ಅವರ ಕಾರ್ಯಕಲಾಪಗಳಲ್ಲಿ ಭಾಗವಹಿಸಲಾರಂಭಿಸಿದನು. ಆ ಗಾ್ರಮಸ್ಥರು ಪಕ್ಷಿಗಳನ್ನು ಕೊಂದುತಿಂದು, ಆ ನಂತರ ಅವುಗಳಿಗೇ ಪಾ್ರಣ ದಾನ ಮಾಡುವುದನ್ನು ವಿದೂಷಕನು ಮತೊ್ತಮ್ಮೆ ಕಣಾ್ಣರೆ ನೋಡಿದನು. ಅದು ಹೇಗೇ ಸಾಧ್ಯವೆಂದು ಅವರನ್ನು ಆಶ್ಚರ್ಯದಿಂದ ಕೇೀಳಿದನು.

ಗಾ್ರಮಸ್ಥರು ಅವನನ್ನು ಒಬ್ಬಳು ಮುದುಕಿಯ ಬಳಿಗೇ ಕರೆದೊಯ್ದರು. ವಿದೂಷಕನ ಪರವಾಗಿ ಗಾ್ರಮಸ್ಥರ ಬೇಡಿಕೇಯನ್ನು ಕೇೀಳಿಸಿಕೊಂಡ ಮುದುಕಿಯು ಅವನಿಗೇ ಮೃತ ಸಂಜೀವಿನಿ ವಿದ್ಯೆಯನ್ನು ಕಲಿಸಿಕೊಡಲು ಒಪ್ಪಿಕೊಂಡಳು. ಅವಳು ಅವನನ್ನು ತನ್ನ ಗುಡಿಸಲಿನಲ್ಲಿದ್ದ ಒಂದು ಕತ್ತಲ ಮೂಲೆಗೇ ಕರೆದುಕೊಂಡು ಹೋದಳು. ಅವನು ಅವಳು ಹೇಳಿದ ಮಂತ್ರವನ್ನು ಆರುಸಲ ಪಠಿಸುವಂತೆ ಹೇಳಿದಳು.

ವಿದೂಷಕನು ಒಂದು ಕ್ಷಣಕೂಡಾ ತಡಮಾಡದೆ ತನ್ನ ರಾಜ್ಯಕೇ್ಕ ಪ್ರಯಾಣ ಮಾಡಿದನು. ರಾಜಧಾನಿಯನ್ನು ಸೇರಿ ಯುವರಾಣಿ ಸುನೀತಾದೇವಿಯು ಸಹಗಮನವಾಗಿದ್ದ ಸ್ಥಳವನ್ನು ತಲುಪಿದನು. ಅಲ್ಲಿದ್ದ ಭಸ್ಮರಾಶಿಯ ಮೇಲೆ ನೀರನ್ನು ಚಲ್ಲಿ ಕಣ್ಣು ಮುಚ್ಚಿಕೊಂಡು ಮೂರು ಸಲ ಮಂತ್ರವನ್ನು ಜಪಿಸಿದನು. ಕಣ್ಣು ಬಿಟಾ್ಟಗ ಸುನೀತಾದೇವಿಯು ಪಾ್ರಣದೊಡನೆ ಎದ್ದು ಬರುವುದನ್ನು ಕಂಡನು.

ವಿದೂಷಕನು ಮತ್ತೆ ಕಣ್ಣು ಮುಚ್ಚಿಕೊಂಡು ಮೂರು ಸಲ ಮಂತ್ರವನ್ನು ಜಪಿಸಿದೊಡನೆಯೇ ಸುನೀತಾದೇವಿಯ ಗಂಡನೂ ಸಜೀವನಾಗಿ ಎದ್ದು ಬಂದನು.
ವಿದೂಷಕನು ಪರಮಾನಂದವನ್ನು ಹೊಂದಿದನು, ಸುನೀತಾದೇವಿಯ ಗಂಡನು ವಿದೂಷಕನನ್ನು ಸಮೀಪಿಸಿ, ‘‘ಮಾಧವಾ. ಕತ್ತಿ ಯುದ್ಧದಲ್ಲಿ ನೀನು ಗೇದ್ದಿರುವೆ. ಆದ್ದರಿಂದ ಸುನೀತಳ ಮೇಲೆ ನಿನಗೇ ಹಕ್ಕಿದೆ’’ ಎಂದನು.

ಸುನೀತಳು ಬಾಯಿ ತೆರೆಯಲಿಲ್ಲ. ವೌನವಾಗಿದ್ದಳು. ಅವಳ ಕೈಹಿಡಿಯುವುದೇ? ಬೇಡವೇ? ಎಂಬ ದೊಡ್ಡ ಸಮಸ್ಯೆಯು ಎದುರಾಯಿತು ವಿದೂಷಕನಿಗೇ.
ಆ ಸಮಯಕೇ್ಕ ಸರಿಯಾಗಿ ಅತ್ತಕಡೆ ಬಂದ ಫಕೀರನು ಅವನ ಸಮಸ್ಯೆಯನ್ನು ತಿಳಿದು ‘‘ಮಾಧವಾ, ನೀನು ಅವಳಿಗೇ ಪಾ್ರಣದಾನ ಮಾಡಿದೆ. ಪಾ್ರಣದಾತನು ತಂದೆಯ ಸಮಾನನು. ತಂದೆಯಾಗಿ ನಿನ್ನ ಕರ್ತವ್ಯವನ್ನು ಮಾಡು’’ ಎಂದನು. ಆ ಕೂಡಲೇ ವಿದೂಷಕನು ಸುನೀತಾದೇವಿಯ ಕೈಯನ್ನು, ಅವಳ ಗಂಡನ ಕೈಯಲ್ಲಿಟ್ಟು ಒಂದು ಮಾತನ್ನೂ ಮಾತಾಡದಂತೆ ಅಲ್ಲಿಂದ ನಿರ್ಗಮಿಸಿದನು. ಆ ನಂತರ ವಿದೂಷಕನ ಸುಳಿವು ರಾಜ್ಯದಲ್ಲೆಲ್ಲೂ ಕಂಡು ಬರಲಿಲ್ಲ

http://www.chandamama.com/lang/story/12/15/11/308/KAN/1/stories.htm

ಸಮಯ ಸಿಕ್ಕಾಗ ಚಂದದ ಚಂದಮಾಮ ಓದೋದನ್ನು ಮಿಸ್‌ ಮಾಡಬೇಡಿ. ನನಗಂತೂ ಆನ್‌ಲೈನ್‌ ಚಂದಮಾಮ ಬೆಸ್ಟ್‌ ಫ್ರೆಂಡ್‌

One thought on “ನೀವು ಇಂಟರ್‌ನೆಟ್‌ನಲ್ಲಿ ಚಂದಮಾಮ ಓದುತ್ತೀರಾ?

Leave a Reply

This site uses Akismet to reduce spam. Learn how your comment data is processed.