ನನ್ನ ಹೃದಯವನ್ನು ನಿನ್ನ ಹೃದಯದಲ್ಲಿಟ್ಟುಕೋ

By | March 10, 2011

*********
ನೂರಾರು ನೆನಪುಗಳನ್ನು
ನೆನಪಿಸಲಾಗದು ನನಗೆ
ಅದಕ್ಕೆ
ಅವಳ ಹೆಸರನ್ನೊಮ್ಮೆ
ಜ್ಞಾಪಿಸಿಕೊಳ್ಳುತ್ತೇನೆ
ಸಾವಿರ ನೆನಪುಗಳು
ಮೆರವಣಿಗೆ ಹೊರಡುತ್ತವೆ…
*******
ನನ್ನ ಹೃದಯವನ್ನು
ನಿನ್ನ ಹೃದಯದಲ್ಲಿಟ್ಟುಕೋ
ಗೆಳತಿ..
ನನ್ನ ಯಾತನೆ
ನಿನಗರಿವಾದೀತು
*****
ಮುಂಜಾನೆ
ಅರಳಿದ ಹೂವುಗಳು
ಸಂಜೆ ನರಳುತ್ತವೆ…
ಸಂಜೆ ಅರಳಿದ ಹೂವುಗಳು
ಕತ್ತಲಲ್ಲಿ ನರಳುತ್ತವೆ
******
ದಿನಕೊಂದಿಷ್ಟು
ಮುಗುಳುನಗು
ದಿನಕರನ ನೋಡಿ
ಬಿರಿದ್ಹಾಂಗೆ ಮಲ್ಲಿಗೆ ಮೊಗ್ಗು
ಅವಳ ನಗು
*****
ಈ ಚಿಟ್ಟೆಯ ಸ್ನೇಹ
ಸಾಕೆನಿಸಿದರೆ ಹೇಳು ಹೂವೆ..
ನಾನು ಹೋಗುವೆ ಸೂರ್ಯನೆಡೆಗೆ
ರೆಕ್ಕೆ ಸುಟ್ಟ ಮೇಲೆ
ನಿನ್ನ ಬುಡ ಸೇರುವೆ

One thought on “ನನ್ನ ಹೃದಯವನ್ನು ನಿನ್ನ ಹೃದಯದಲ್ಲಿಟ್ಟುಕೋ

Leave a Reply

This site uses Akismet to reduce spam. Learn how your comment data is processed.