ಗೆಳತಿ ಮುಂದೊಂದು ಜನ್ಮವಿದ್ದರೆ

ಮುಂದೊಂದು ಜನ್ಮವಿದ್ದರೆ
ನಮ್ಮೂರ ನದಿ ತೀರದಲ್ಲಿ
ಜೊತೆಯಾಗಿ ಆಡೋಣ ಗೆಳತಿ

ನನ್ನ ಅಂಗಿಗೆ ನಿನ್ನ ಶಾಲ ಕಟ್ಟಿ
ಬಿಡದಂತೆ ಕೈಹಿಡಿದು
ಜೊತೆಯಾಗಿ ನಡೆಯೋಣ ಗೆಳತಿ

ಮತ್ತೊಂದು ಜನ್ಮವಿದ್ದರೆ
ಹಾರಂಗಿ ತೀರದಲ್ಲಿ ಹೂವಾಗಿರೋಣ
ದಿನದ ಬದುಕು ಮುಗಿಸೋಣ ಗೆಳತಿ

ಮತ್ತೂ ಒಂದು ಜನ್ಮವಿದ್ದರೆ
ಪಯಶ್ವಿನಿ, ಕುಮಾರಧಾರ
ತೀರದಲ್ಲಿ ಪ್ರೀತಿ ಮನೆಕಟ್ಟೋಣ ಗೆಳತಿ

ಕಬಿನಿ, ಕಾಳಿ, ಕಾವೇರಿ
ತುಂಗಾ, ವೇದಾ, ಶರಾವತಿ, ಭದ್ರೆ
ಎಲ್ಲಾದರೂ ಸರಿ, ಜೊತೆಯಾಗಿರೋಣ

ಬಾ ಎಂದರೆ ನದಿ ಬಿಟ್ಟು ಬದುಕೋಣ
ಬೇಡವೆಂದರೆ ನದಿಯೊಳಗೆ ಬದುಕೋಣ
ನದಿತೀರದಲ್ಲೇ ಹುಟ್ಟಿಬರೋಣ ಗೆಳತಿ

ಪ್ರತಿಜನ್ಮ ಜನ್ಮದಲ್ಲೂ
ಜೊತೆಜೊತೆಯಾಗಿರೋಣ ಗೆಳತಿ
ಈ ಜನ್ಮಕ್ಕೆ ಕೊನೆಯಾಗಲಿ ಈ ಅಗಲಿಕೆ