ರೆಸಿಪಿ: ಮಂಗಳೂರು ಬನ್ಸ್ ತಯಾರಿಸುವುದು ಹೇಗೆ?

 • ರಶ್ಮಿ ಪ್ರವೀಣ್
 • ಕರಾವಳಿಗರಿಗೆ ಬನ್ಸ್ ಅಂದ್ರೆ ಇಷ್ಟ. ಕರಾವಳಿ ಬಿಟ್ಟು ಪರ ಊರಿಗೆ ಹೋದವರಿಗೆ ಬೆಂಗಳೂರಿನಂತಹ ನಗರಗಳಲ್ಲಿ ಬನ್ಸ್ ಕಂಡರಂತೂ ಬಾಯಲ್ಲಿ ನೀರೂರುವುದು ಸಹಜ. ಆದರೆ, ಬೆಂಗಳೂರಿನಂತಹ ನಗರಗಳಲ್ಲಿ ಮಾಡುವ ಬನ್ಸ್ ಗೂ ಮಂಗಳೂರಿನಲ್ಲಿ ಮಾಡುವ ಬನ್ಸ್ ಗೂ ರುಚಿಯಲ್ಲಿ ಅಜಗಜಾಂತರ ವ್ಯತ್ಯಾಸ ಇರುತ್ತದೆ.  ಮಂಗಳೂರು ಬನ್ಸ್ ಮಾಡುವುದು ಬಲು ಸುಲಭ. ನೀವೂ ಟ್ರೈ ಮಾಡಬಹುದು. ಬನ್ಸ್ ಮಾಡುವ ವಿಧಾನಬೇಕಾಗುವ ಸಾಮಾಗ್ರಿಗಳುಮೈದಾ ಹಿಟ್ಟು 4 ಕಪ್
 •  ಬಾಳೆಹಣ್ಣು 2 ಅಥವಾ 3 (ಚೆನ್ನಾಗಿ ಹಣ್ಣಾಗಿರಲಿ)
 •  ಸಕ್ಕರೆ ಅರ್ಧ ಕಪ್ (ಸಿಹಿ ಹೆಚ್ಚು ಬೇಕಿದ್ದರೆ ಎರಡ್ಮೂರು ಸ್ಪೂನ್ ಜಾಸ್ತಿ ಹಾಕಿ.
 •  ಒಂದು ಚಿಟಿಕೆ ಅಡುಗೆ ಸೋಡಾ.
 • ಉಪ್ಪು- ಒಂದುವರೆ ಚಮಚ.
 •  ಮೊಸರು ಅರ್ಧ ಕಪ್.

ಮೊದಲ ಹಂತ

 • ಪಾತ್ರೆಯೊಂದರಲ್ಲಿ ಬಾಳೆಹಣ್ಣನ್ನು ಚೆನ್ನಾಗಿ ಹಿಚುಕಿ. ಪೇಸ್ಟ್ ಆಗುವ ತನಕ
 • ಅದಕ್ಕೆ ಸಕ್ಕರೆ, ಅಡುಗೆ ಸೋಡಾ, ಮೊಸರು, ಉಪ್ಪು ಹಾಕಿ ಚೆನ್ನಾಗಿ ಹಿಸುಕಿ. ಸಕ್ಕರೆ ಇತ್ಯಾದಿಗಳು ಕರಗುವ ತನಕ.
 •  ಸ್ವಲ್ಪ ಸ್ವಲ್ಪವೇ ಮೈದಾ ಹಿಟ್ಟು ಹಾಕಿ ಮುದ್ದೆ ಮಾಡಿ. ಚಪಾತಿ ಹಿಟ್ಟಿನಂತೆ ಮುದ್ದೆ ಆಗುವ ತನಕ ಮೈದಾ ಹಿಟ್ಟು ಹಾಕಿ. ನಾಲ್ಕು ಕಪ್ ಸಾಕಾಗದೆ ಇದ್ದರೆ ಇನ್ನು ಸ್ವಲ್ಪ ಹಾಕಿ.
 • ಚಪಾತಿ ಹಿಟ್ಟಿನಂತೆ ರೆಡಿಯಾದ ನಂತರ ಬನ್ಸ್ ಮಾಡಲು ರೆಡಿಯಾಗಬೇಡಿ. ಇನ್ನೂ ಏಳೆಂಟು ಗಂಟೆ ಕಾಯಬೇಕು. ಬೆಳಗ್ಗೆ ಹಿಟ್ಟು ಮುದ್ದೆ ರೆಡಿಯಾದರೆ ಸಂಜೆಯ ತನಕ ಹಿಟ್ಟು ಇಟ್ಟುಬಿಡಿ. ರಾತ್ರಿ ಸಿದ್ಧಮಾಡಿದ್ದರೆ ಬೆಳಗ್ಗೆ ಬನ್ಸ್ ಮಾಡಬಹುದಾಗಿದೆ.
  ಎರಡನೇ ಹಂತ (ಎಂಟು ಗಂಟೆಯ ನಂತರ)
 • ಮುದ್ದೆಯನ್ನು ಚೆನ್ನಾಗಿ ಹಿಸುಕಿ.
 • ಪುಟ್ಟ ಪುಟ್ಟ ಉಂಡೆ ಮಾಡಿ ಚಪಾತಿಗಿಂತ ಕೊಂಚ ದಪ್ಪಗಾಗಿ ಪುಟ್ಟ ಪುಟ್ಟ ದೋಸೆಯಂತೆ ಲಟ್ಟಿಸಬೇಕು.

ಮೂರನೇ ಹಂತ

 • ಬಾಣಲೆಯಲ್ಲಿ ಎಣ್ಣೆ ಕುದಿಸಿ (ಬನ್ಸ್ ಮುಳುಗುವಷ್ಟು ಇರಲಿ)
 • ಲಟ್ಟಿಸಿಟ್ಟಿರುವುದನ್ನು ಒಂದೊಂದಾಗಿ ಕುದಿಯುವ ಎಣ್ಣೆಗೆ ಹಾಕಿ.
 • ಕುದಿಯುವ ಎಣ್ಣೆಯಲ್ಲಿ ಬನ್ಸ್ ಕೆಂಬಣ್ಣಕ್ಕೆ ಬರುವಷ್ಟು ಕಾಯಿಸಿ.
 • ಎಣ್ಣೆಯಿಂದ ಬನ್ಸ್ ಅನ್ನು ತೆಗೆಯಿರಿ.
  ಬನ್ಸ್ ರೆಡಿ 🙂